Latest Updates
-
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು!
ಮಾಮೂಲಿ ಚಿತ್ರಾನ್ನ ಅಲ್ಲ.. ಈ ರೀತಿ ಕ್ಯಾಪ್ಸಿಕಂ ಮಸಾಲ ಚಿತ್ರಾನ್ನ ಮಾಡಿ!!
ಎಲ್ಲರ ಮನೆಯಲ್ಲು ಬೆಳಗ್ಗೆ ತಿಂಡಿಗೆ ವಿಭಿನ್ನ ಹಾಗೂ ರುಚಿ ರುಚಿಯಾದ ಖಾದ್ಯವನ್ನು ಮಾಡಿ ಸವಿಯೋಕೆ ಇಷ್ಟಪಡುತ್ತಾರೆ. ಹಾಗೆ ರೈಸ್ ಬಳಸಿ ಮಾಡುವ ಖಾದ್ಯಗಳು ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಬಹುತೇಕರಿಗೆ ಪಲಾವ್, ಪುಳಿಯೋಗರೆ, ಚಿತ್ರಾನ್ನ ಅಂದರೆ ಇಷ್ಟವಾಗುತ್ತೆ. ಆದ್ರೆ ಮತ್ತೆ ಕೆಲವರಿಗೆ ರೈಸ್ನಿಂದ ಮಾಡಿದ ಯಾವುದೇ ಖಾದ್ಯವನ್ನ ಬೆಳಗ್ಗೆ ತಿಂಡಿಯ ರೂಪದಲ್ಲಿ ಸವಿಯೋಕೆ ಮನಸಾಗೋದಿಲ್ಲ.
ಹಾಗೆ ಮತ್ತೆ ಕೆಲವರಿಗೆ ಚಿತ್ರಾನ್ನ ಅಂದರೆ ಮೂಗು ಮುರಿಯುತ್ತಾರೆ. ನೀವು ಹಲವು ವಸ್ತುಗಳ ಹಾಕಿ ವಿಶೇಷವಾಗಿ ಮಾಡಿದ್ರೂ ಸಹ ಅವರಿಗೆ ಇಷ್ಟವಾಗೋದಿಲ್ಲ. ಆದ್ರೆ ಚಿತ್ರಾನ್ನ ನಿತ್ಯ ಮಾಡಿದ್ದಕ್ಕಿಂತಲೂ ಸ್ವಲ್ಪ ವಿಭಿನ್ನವಾಗಿ ಮಾಡಿದ್ರೆ ಎಲ್ಲರೂ ಇಷ್ಟಪಟ್ಟು ಸವಿಯೋದು ಖಚಿತ. ಅದ್ರಲ್ಲೂ ನಾವಿಂದು ಹೇಳುವಂತೆ ಮಸಾಲೆಗಳ ಹಾಕಿ ಮಾಡುವ ವಿಭಿನ್ನ ಚತ್ರಾನ್ನ ನಿಮ್ಮ ರುಚಿ ಹೆಚ್ಚಿಸಲಿದೆ.

ಈ ಚಿತ್ರಾನ್ನವನ್ನು ನೀವು ಹೋಟೆಲ್ಗಳಲ್ಲಿ ಸವಿದಿರಬಹುದು. ಈ ರುಚಿಯ ಚಿತ್ರಾನ್ನ ಅಂದಾಗ ಎಲ್ಲರಿಗೂ ಇಷ್ಟವಾಗುತ್ತೆ. ಆದ್ರೆ ಈ ರೀತಿ ವಿಶೇಷ ವಿತ್ರಾನ್ನ ಮಾಡುವ ಬಗೆ ಹೇಗೆ? ಯಾವೆಲ್ಲಾ ವಸ್ತುಗಳು, ಮಸಾಲೆಗಳನ್ನು ಹಾಕಿ ಮಾಡಿದ್ರೆ ಚಿತ್ರಾನ್ನದ ರುಚಿ ದುಪ್ಪಟ್ಟಾಗಲಿದೆ ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ.
ಕ್ಯಾಪ್ಸಿಕಂ ಚಿತ್ರಾನ್ನ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ? ಯಾವೆಲ್ಲಾ ಮಸಾಲೆಗಳನ್ನು ಬಳಸಬೇಕು ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ.
ಕ್ಯಾಪ್ಸಿಕಂ ಮಸಾಲೆ ಚಿತ್ರಾನ್ನ ಮಾಡಲು ಬೇಕಾಗುವ
ವಸ್ತುಗಳು
- ಅನ್ನ
- ಕ್ಯಾಪ್ಸಿಕಂ
- ತೆಂಗಿನಕಾಯಿ ತುರಿ
- ಜೀರಿಗೆ
- ಹಸಿ ಶುಂಠಿ
- ಹಸಿ ಮೆಣಸಿನಕಾಯಿ
- ಕರಿಬೇವಿನ ಸೊಪ್ಪು
- ಕೊತ್ತಂಬರಿ ಸೊಪ್ಪು
- ಕಡಲೆಕಾಯಿ ಬೀಜ
- ಸಾಸಿವೆ
- ಇಂಗು
- ಅರಿಶಿನದ ಪುಡಿ
- ಒಣ ಮೆಣಸಿನಕಾಯಿ
- ಕಡ್ಲೆಬೇಳೆ
- ಉದ್ದಿನಬೇಳೆ
- ನಿಂಬೆಹಣ್ಣಿನ ರಸ
- ಉಪ್ಪು
- ಎಣ್ಣೆ
ಕ್ಯಾಪ್ಸಿಕಂ ಮಸಾಲೆ ಚಿತ್ರಾನ್ನ ಮಾಡುವ ಸುಲಭ ವಿಧಾನ
ಮೊದಲು ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಹಸಿ ಮೆಣಸು, ಶುಂಠಿ, ಜೀರಿಗೆ, ಕರಿಬೇವು, ತೆಂಗಿನಕಾಯಿ ತುರಿ, ಕೊತ್ತಂಬರಿ ಸೊಪ್ಪು, ಸ್ವಲ್ಪ ನೀರು ಹಾಕಿ ರುಬ್ಬಿಕೊಳ್ಳಬೇಕು. ತರಿ ತರಿಯಾಗಿ ರುಬ್ಬಿಕೊಳ್ಳಿ.
ಈಗ ಗಟ್ಟಿ ಚಟ್ನಿಯಂತೆ ರುಬ್ಬಿದ ಮಸಾಲೆ ಎತ್ತಿಟ್ಟುಕೊಳ್ಳಿ. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಬಿಸಿ ಮಾಡಿ. ಸಾಸಿವೆ, ಇಂಗು, ಕಡಲೆ ಬೇಳೆ, ಉದ್ದಿನ ಬೇಳೆ ಹಾಕಿ 1 ನಿಮಿಷ ಫ್ರೈ ಮಾಡಿ. ಬಳಿಕ ಅರಶಿಣ, ಒಣ ಮೆಣಸು ಹಾಕಿ ಮಿಕ್ಸ್ ಮಾಡಿ. ಈ ಕತ್ತರಿಸಿಕೊಂಡ ಕ್ಯಾಪ್ಸಿಕಂ ಹಾಕಿ 3 ನಿಮಿಷ ಫ್ರೈ ಮಾಡಿ.
ಈಗ ಮಿಕ್ಸಿಯಲ್ಲಿ ರುಬ್ಬಿದ್ದ ಮಸಾಲೆಯನ್ನು ಇದಕ್ಕೆ ಹಾಕಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ 2 ನಿಮಿಷ ಫ್ರೈ ಮಾಡಿಕೊಳ್ಳಿ. ಈಗ ಮತ್ತೊಂದು ಒಲೆಯಲ್ಲಿ ಕಡಾಯಿ ಇಟ್ಟು ಎಣ್ಣೆ ಹಾಕಿ ಅದಕ್ಕೆ ಕಡಲೆ ಬೀಜ ಹಾಕಿ ಹುರಿದುಕೊಳ್ಳಿ. ಅಥವಾ ಮೊದಲೇ ಹುರಿದು ಇಟ್ಟಿದ್ದರೂ ಆಗಲಿದೆ.
ಈ ಹುರಿದ ಕಡಲೆಯನ್ನು ಒಲೆ ಮೇಲಿರುವ ಮಸಾಲೆಯ ಜೊತೆಗೆ ಹಾಕಿಕೊಂಡು ಮಿಕ್ಸ್ ಮಾಡಿ. ಈಗ ಮೊದಲೇ ಮಾಡಿದ್ದ ಅನ್ನವನ್ನು ಸಹ ಈ ಮಸಾಲೆಯೊಂದಿಗೆ ಹಾಕಿಕೊಂಡು ಮಿಕ್ಸ್ ಮಾಡಿ. ಹಾಗೆ ನಿಂಬೆ ರಸ ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ಇಷ್ಟಾದರೆ ಕ್ಯಾಪ್ಸಿಕಂ ಮಸಾಲ ಚಿತ್ರಾನ್ನ ಸಿದ್ದವಾಗುತ್ತೆ. ಈ ರುಚಿ ಒಮ್ಮೆ ಸವಿದರೆ ನಿತ್ಯ ಚಿತ್ರಾನ್ನ ಮಾಡಿ ಸವಿಯಲು ಮನಸಾಗೋದು ಖಚಿತ. ನೀವು ಕೂಡ ಮನೆಯಲ್ಲಿ ಮಾಡಿ ನೋಡಿ.



Click it and Unblock the Notifications
