Latest Updates
-
ದೆಹಲಿ ಮಾಲಿನ್ಯದ ನಡುವೆ ವಾಕಿಂಗ್ ಹೋಗ್ತಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಟಿಪ್ಸ್ ಫಾಲೋ ಮಾಡಿ -
ದಸರಾ ಟ್ರಾಫಿಕ್ ಜಾಮ್: ತಡವಾದರೂ ಸಂಬಂಧ ಹಾಳಾಗದಂತೆ ನಿಭಾಯಿಸಲು ಇಲ್ಲಿದೆ 90 ಸೆಕೆಂಡ್ಗಳ ಸ್ಕ್ರಿಪ್ಟ್ -
ವಿಜಯದಶಮಿ ಸಂಭ್ರಮ: ಕೊನೆ ನಿಮಿಷದಲ್ಲಿ ಮನೆಯನ್ನು ಆಕರ್ಷಕವಾಗಿಸಲು 5 ಸಿಂಪಲ್ ಎಕೋ-ಫ್ರೆಂಡ್ಲಿ ಐಡಿಯಾಗಳು -
ಮೂಳೆಗಳ ಆರೋಗ್ಯಕ್ಕೆ ಬಜೆಟ್ ಸ್ನೇಹಿ ಆಹಾರ: ಆಸ್ಟಿಯೋ ಪೋರೋಸಿಸ್ ತಡೆಯಲು ಇಂದೇ ಈ ಬದಲಾವಣೆ ಮಾಡಿ! -
ಮೈಸೂರು ದಸರಾ 2026: ಪಂಜಿನ ಕವಾಯತು ಮತ್ತು ಡ್ರೋನ್ ಶೋ ವೀಕ್ಷಿಸಲು ಇಲ್ಲಿದೆ ಕಂಪ್ಲೀಟ್ ಗೈಡ್! -
ದೇವಸ್ಥಾನದ ಉದ್ದದ ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ನೋವು ಮರೆಸುವ 7 ನಿಮಿಷದ ಮ್ಯಾಜಿಕ್ ಟಿಪ್ಸ್ ಇಲ್ಲಿದೆ! -
ವಿಜಯದಶಮಿ ಹಬ್ಬದ ಗಡಿಬಿಡಿ ಬೇಡ: ನೆಮ್ಮದಿಯಿಂದ ಹಬ್ಬ ಆಚರಿಸಲು ದಂಪತಿಗಳಿಗೆ ಇಲ್ಲಿದೆ ಸೀಕ್ರೆಟ್ ಪ್ಲಾನ್ -
ಬೆಂಗಳೂರು ಮಳೆ ಅಲರ್ಟ್: ನಿಮ್ಮ ಅಪಾರ್ಟ್ಮೆಂಟ್ ಮತ್ತು ಬೇಸ್ಮೆಂಟ್ ಸುರಕ್ಷತೆಗೆ ಇಂದೇ ಈ ಕ್ರಮಗಳನ್ನು ಕೈಗೊಳ್ಳಿ! -
ವಿಜಯದಶಮಿ ಹಬ್ಬದೂಟ: ಬ್ಲಡ್ ಶುಗರ್ ಏರಿಕೆಯಾಗದಂತೆ ಹೋಳಿಗೆ-ಪಾಯಸ ಸವಿಯುವುದು ಹೇಗೆ? -
ದಸರಾ ಸಂಭ್ರಮ: ರಾವಣ ದಹನ, ಟ್ರಾಫಿಕ್ ನಿರ್ಬಂಧ ಮತ್ತು ಮಳೆ ಎಚ್ಚರಿಕೆ - ಹೊರಡುವ ಮುನ್ನ ಇದನ್ನು ಓದಿ!
ಗೋಧಿ ಹಿಟ್ಟಿನಿಂದ ಮೃದುವಾದ ಇಡ್ಲಿ ಮಾಡುವುದು ಹೇಗೆ..? ಇಲ್ಲಿದೆ ನೋಡಿ ಸುಲಭದ ರೆಸಿಪಿ..!
ಇಡ್ಲಿ ದಕ್ಷಿಣ ಭಾರತದ ಜನಪ್ರಿಯ ತಿಂಡಿಯಾಗಿದೆ. ಇಡ್ಲಿ ಮತ್ತು ವಡೆ ಸೇವಿಸೋದು ಅಂದರೆ ಕೆಲವರಿಗೆ ಇನ್ನಿಲ್ಲದ ಪ್ರೀತಿ. ಮನೆಯಲ್ಲಿ ಇಡ್ಲಿ ಸಿಗದಿದ್ದರೆ ಹೋಟೆಲ್ಗಳ ಹುಡುಕಿ ಹೋಗಿ ಸೇವಿಸುವವರು ಇದ್ದಾರೆ. ಇಡ್ಲಿ ಸಾಂಬಾರ್, ಇಡ್ಲಿ ಚಟ್ನಿ ಸೇವನೆಗೆ ತುಂಬ ರುಚಿಕರವಾಗಿರುತ್ತದೆ.
ಸಾಮಾನ್ಯವಾಗಿ ಇಡ್ಲಿಯನ್ನ ಅಕ್ಕಿ ಹಿಟ್ಟಿನಲ್ಲಿ ಮಾಡುತ್ತಾರೆ. ಹಿಂದಿನ ದಿನವೇ ಹಿಟ್ಟು ತಯಾರಿ ಮಾಡಿಟ್ಟು ಮಾರನೆ ದಿನ ಮಾಡಿದರೆ ಮಲ್ಲಿಗೆಯಷ್ಟು ಮೃದುವಾದ ಇಡ್ಲಿ ಸವಿಯಲು ಸಿದ್ಧವಾಗುತ್ತದೆ. ಇಡ್ಲಿ ಸೇವನೆಗೆ ಎಷ್ಟು ಇಷ್ಟಪಡುತ್ತಾರೋ ಮಾಡುವವರಿಗೂ ಇದು ಪ್ರಿಯವೇ.

ಇಡ್ಲಿ ಮಾಡಲು ಹೆಚ್ಚಿನ ಶ್ರಮವೇನು ಬೇಕಾಗಿಲ್ಲ. ತುಂಬ ಸುಲಭವಾಗಿ ಮಾಡಬಹುದಾದ ತಿಂಡಿ ಇದಾಗಿದೆ. ಹೀಗಾಗಿ ಹಲವರ ಮನೆಯಲ್ಲಿ ನಿತ್ಯದ ತಿಂಡಿ ಇದಾಗಿರಲಿದೆ, ಜೊತೆಗೆ ಆರೋಗ್ಯದ ದೃಷ್ಟಿಯಿಂದಲೂ ಇಡ್ಲಿ ಅತ್ಯುತ್ತಮ ಆಹಾರವಾಗಿದೆ. ಎಣ್ಣೆರಹಿತ ತಿಂಡಿ ಇಷ್ಟಪಡುವವರಿಗೆ ಇಡ್ಲಿ ಹೇಳಿ ಮಾಡಿಸಿದ ತಿಂಡಿಯಾಗಿದೆ.
ಮೊದಲೇ ಹೇಳಿದಂತೆ ಸಾಮಾನ್ಯವಾಗಿ ಇಡ್ಲಿಯನ್ನು ಅಕ್ಕಿ ಹಿಟ್ಟಿನಿಂದ ಮಾಡಲಾಗುತ್ತದೆ. ಆದರೆ ನಿಮಗೆ ಗೊತ್ತಿದ್ಯಾ ಗೋಧಿ ಗಿಟ್ಟಿನ ಇಡ್ಲಿ ಅದಕ್ಕಿಂತ ಹೆಚ್ಚು ರುಚಿಕರ ಮತ್ತು ಮೃಧುವಾಗಿರುತ್ತದೆ. ಹೌದು ಗೋಧಿ ಹಿಟ್ಟಿನ ಮೂಲಕ ಇಡ್ಲಿ ಮಾಡುತ್ತಾರೆ. ಹಾಗಾದರೆ ಗೋಧಿ ಹಿಟ್ಟಿನ ಇಡ್ಲಿ ಮಾಡುವುದು ಹೇಗೆ? ಏನೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು ಎಂಬುದನ್ನು ನಾವಿಂದು ನೋಡೋಣ.
ಅಗತ್ಯವಿರುವ ವಸ್ತುಗಳು:
- ಗೋಧಿ ಹಿಟ್ಟು - 1 ಕಪ್
- ಬೇಳೆ - 1 ಚಮಚ
- ಕ್ಯಾರೆಟ್ - 1 (ನುಣ್ಣಗೆ ತುರಿದ)
- ಶುಂಠಿ - 1/2 ಚಮಚ (ಸಣ್ಣದಾಗಿ ಕೊಚ್ಚಿದ)
- ಹಸಿರು ಮೆಣಸಿನಕಾಯಿ - 2 (ಸಣ್ಣದಾಗಿ ಕೊಚ್ಚಿದ)
- ಮೊಸರು - 1/4 ಕಪ್
- ಅಡಿಗೆ ಸೋಡಾ - 1/4 ಚಮಚ
- ಸಾಸಿವೆ - 1 ಚಮಚ
- ಜೀರಿಗೆ - 1/2 ಚಮಚ
- ಕಡಲೆ - 1 ಚಮಚ
- ಕೊತ್ತಂಬರಿ ಸೊಪ್ಪು (ಸಣ್ಣದಾಗಿ ಹೆಚ್ಚಿದ)
- ಕರಿಬೇವಿನ ಎಲೆಗಳು (ಸಣ್ಣದಾಗಿ ಹೆಚ್ಚಿದ)
- ಉಪ್ಪು - ಅಗತ್ಯವಿರುವಂತೆ
- ನೀರು
ಮಾಡುವ ವಿಧಾನ:
ಮೊದಲು ಒಂದು ಬಾಣಲೆಯಲ್ಲಿ ಗೋಧಿ ಹಿಟ್ಟು ಹಾಕಿ ಚೆನ್ನಾಗಿ ಹುರಿಯಿರಿ. ಗೋಧಿ ಹಿಟ್ಟು ಚೆನ್ನಾಗಿ ಹುರಿದ ನಂತರ, ಅದನ್ನು ಬಾಣಲೆಯಲ್ಲಿ ಸುರಿಯಿರಿ ಮತ್ತು ತಣ್ಣಗಾಗಿಸಿ. ನಂತರ ಅದೇ ಬಾಣಲೆಯಲ್ಲಿ ಎಣ್ಣೆ ಹಾಕಿ ನಂತರ ಕಡಲೆ, ಸಾಸಿವೆ, ಜೀರಿಗೆ, ಕಡಲೆಬೇಳೆ, ಸಣ್ಣಗೆ ಹೆಚ್ಚಿದ ಶುಂಠಿ, ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಕರಿಬೇವಿನ ಸೊಪ್ಪು ಮತ್ತು ತುರಿದ ಕ್ಯಾರೆಟ್ ಹಾಕಿ ಚೆನ್ನಾಗಿ ಹುರಿಯಿರಿ.
ಎಲ್ಲವನ್ನೂ ಚೆನ್ನಾಗಿ ಹುರಿದ ನಂತರ, ಪ್ಲೇಟ್ಗೆ ಹಾಕಿಕೊಳ್ಳಿ ಮತ್ತು 5 ನಿಮಿಷಗಳ ಕಾಲ ತಣ್ಣಗಾಗಲು ಬಿಡಿ. ನಂತರ ಇಡ್ಲಿ ಹಿಟ್ಟಿಗೆ ಬೇಕಾದಷ್ಟು ಉಪ್ಪು ಮತ್ತು ಹುಳಿಯಾಗದ ಮೊಸರನ್ನು ಸುರಿಯಿರಿ ಮತ್ತು ಯಾವುದೇ ಉಂಡೆಗಳಿಲ್ಲದಂತೆ ಚೆನ್ನಾಗಿ ಮಿಶ್ರಣ ಮಾಡಿ.
ಅಂತಿಮವಾಗಿ ಕರಗಿದ ಹಿಟ್ಟಿಗೆ ಅಡಿಗೆ ಸೋಡಾ ಸೇರಿಸಿ ಮತ್ತು ಮಿಶ್ರಣ ಮಾಡಿ. ಇದಾದ ನಂತರ ತಯಾರಿಸಿದ ಮಸಾಲೆ ಮಿಶ್ರಣವನ್ನು ಹಿಟ್ಟಿಗೆ ಸೇರಿಸಿ ಚೆನ್ನಾಗಿ ಕಲಸಿದರೆ ಗೋಧಿ ಇಡ್ಲಿ ಹಿಟ್ಟು ರೆಡಿಯಾಗುತ್ತದೆ. ಮುಂದೆ ಇಡ್ಲಿ ಪಾತ್ರೆಯನ್ನು ಒಲೆಯ ಮೇಲೆ ಇಟ್ಟು ನೀರು ಹಾಕಿ ಕುದಿಸಿ ಇಡ್ಲಿ ತಟ್ಟೆಗೆ ಇಡ್ಲಿ ಬೇಯಲು ಎಂದಿನಂತೆ ಹಿಟ್ಟನ್ನು ಸುರಿಯಿರಿ ಮತ್ತು ಮಧ್ಯಮ ಉರಿಯಲ್ಲಿ 7 ರಿಂದ 8 ನಿಮಿಷ ಕುದಿಸಿದರೆ ನಿಮ್ಮ ಮುಂದೆ ಬಿಸಿ ಬಿಸಿಯಾದ ಗೋಧಿ ಹಿಟ್ಟಿನ ಇಡ್ಲಿ ರೆಡಿ.



Click it and Unblock the Notifications
