Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ದೇವಸ್ಥಾನದ ಊಟದಂತೆ ರುಚಿ ರುಚಿಯ ರಸಂ ಮನೆಯಲ್ಲೇ ಮಾಡಿ..!
ಊಟಕ್ಕೆ ರಸಂ ಇದ್ದರೆ ಆ ಊಟ ಪೂರ್ಣವಾದಂತೆ. ರಸಂ ಸ್ವಾದಿಷ್ಟಭರಿತವಾದ ಸುವಾಸನೆಯಿಂದ ಕೂಡಿರೋದ್ರಿಂದ ಊಟ ಎಷ್ಟು ಬೇಕಾದ್ರು ಸೇವಿಸಬಹುದು. ರಸಂ ಜೊತೆ ಊಟ ಮಾಡೋದು ಅಂದ್ರೆ ಸಲೀಸಾಗಿ ಊಟ ಹೊಟ್ಟೆಗೆ ಸೇರಿದ ಲೆಕ್ಕವೆ. ಆದ್ರೆ ಈಗಂತು ಮಾರುಕಟ್ಟೆಯಲ್ಲಿ ರೆಡಿ ರಸಂಗಳು ಸಿಗುತ್ತವೆ. ಅಷ್ಟೇ ಅಲ್ಲ ರಸಂ ಪೌಂಡರ್ ತಂದು ಅದಕ್ಕೆ ಮಸಾಲೆಯನ್ನು ಹಾಕಿ ರಸಂ ಮಾಡಿಬಿಡುತ್ತೇವೆ.
ಆದ್ರೆ ನಾವು ಈ ರೀತಿಯ ಶೈಲಿಯ ಬಿಟ್ಟು, ನೀವು ದೇವಸ್ಥಾನ ಇಲ್ಲವೆ ಮದುವೆ ಮನೆಯ ಊಟದಲ್ಲಿ ಸವಿಯುವಂತೆ ಮಾಡುವ ರಸಂ ಅನ್ನು ಮಾಡುವುದು ಹೇಗೆ ಎಂಬುದನ್ನು ತಿಳಿಸುತ್ತೇವೆ. ಹೌದು ಮದುವೆ ಇಲ್ಲವೆ, ದೇವಸ್ಥಾನದ ಊಟದಲ್ಲಿ ನೀಡುವ ರಸಂ ಅತ್ಯಂತ ರುಚಿಕರವಾಗಿಯೂ ಸುವಾಸನೆಯುಕ್ತವಾಗಿರುತ್ತದೆ. ಹಾಗಾದರೆ ಈ ರೀತಿ ರಸಂ ಮಾಡೋದು ಹೇಗೆ?

ದೇವಸ್ಥಾನದ ಶೈಲಿಯ ರಸಂ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು, ಈ ರಸಂ ಮಾಡುವ ಪಾಕವಿಧಾನವೇನು? ಇದನ್ನು ಮಾಡಲು ಎಷ್ಟು ಸಮಯ ಹಿಡಿಯುತ್ತದೆ ಎಂಬುದನ್ನು ನಾವಿಂದು ತಿಳಿಯೋಣ.
ರಸಂ ಮಾಡಲು ಬೇಕಾಗುವ ಪದಾರ್ಥಗಳು
- ಟೊಮೆಟೋ
- ಸಾಸಿವೆ-
- ಎಣ್ಣೆ
- ಒಣ ಮೆಣಸು
- ಅರಶಿನ
- ಇಂಗು
- ಕರಿಬೇವಿನ ಸೊಪ್ಪು
- ಹುಣಸೆ ಹುಳಿ
- ಉಪ್ಪು
- ಬೆಳ್ಳುಳ್ಳಿ
- ಹಸಿ ಮೆಣಸು
- ಜೀರಿಗೆ
- ಕಾಳು ಮೆಣಸು
- ಕೊತ್ತಂಬರಿ ಸೊಪ್ಪು
- ತೊಗರಿ ಬೇಳೆ (ರಸ)
ಈ ರಸಂ ಮಾಡುವ ಮೊದಲು ತೊಗರಿ ಬೇಳೆಯ ರಸವನ್ನು ಮಾಡಿಕೊಳ್ಳಬೇಕು. ತೊಗರಿ ಬೇಳೆಯನ್ನು ಸ್ವಲ್ಪ ನೀರಲ್ಲಿ ಹಾಕಿ ಅದನ್ನು ಕುಕ್ಕರ್ಗೆ ಹಾಕಿ ಬೇಯಿಸಬೇಕು. ಸುಮಾರು 3 ಸೀಟಿ ಹೊಡೆಸಿದರೆ ಸಾಕು.
ಈಗ ರಸಂ ಮಾಡುವುದು ಹೇಗೆ ಎಂದು ನೋಡೋಣ
ಮೊದಲು ಪಾತ್ರೆಯಲ್ಲಿ ಎಣ್ಣೆ ಹಾಕಿ ಎಣ್ಣೆ ಕಾದ ಬಳಿಕ ಅದಕ್ಕೆ ಸಾಸಿವೆ ಹಾಕಿ, ಬಳಿಕ ಟೊಮೆಟೋ ಕತ್ತರಿಸಿ ಹಾಕಿ, ನಂತರ ಒಣ ಮೆಣಸು, ಇಂಗು ಅರಶಿನ, ಕರಿಬೇವಿನ ಸೊಪ್ಪು ಹಾಕಿ ಚೆನ್ನಾಗಿ ಕಾಯಿಸಿ. 2 ನಿಮಿಷದ ಬಳಿಕ ಇದಕ್ಕೆ 3 ಸೀಟಿ ಹೊಡೆಸಿರುವ ತೊಗರಿ ಬೇಳೆ ರಸವನ್ನು ಹಾಕಿ.
ಬಳಿಕ ಅದಕ್ಕೆ ನಿಮಗೆ ಎಷ್ಟು ನೀರು ಬೇಕೋ ಅಷ್ಟು ಹಾಕಿ ಚೆನ್ನಾಗಿ ಕುದಿಯಲು ಬಿಡಿ. ಇನ್ನೊಂದೆಡೆ ಇದಕ್ಕೆ ಹಾಕಲು ಮಸಾಲೆಯನ್ನು ತಯಾರು ಮಾಡಿ. ಒಂದು ಸಣ್ಣ ಮಿಕ್ಸರ್ ಜಾರ್ನಲ್ಲಿ ಬೆಳ್ಳುಳ್ಳಿ, ಕಾಳು ಮೆಣಸು, ಹಸಿ ಮೆಣಸು, ಜೀರಿಗೆಯನ್ನು ಹಾಕಿ ತರಿತರಿಯಾಗಿ ರುಬ್ಬಿಕೊಳ್ಳಿ. ಒಲೆ ಮೇಲೆ ಸಾರು ಚೆನ್ನಾಗಿ ಕುದಿಯುವಾಗ ಈ ರುಬ್ಬಿಕೊಂಡಿರುವ ಮಸಾಲೆಯನ್ನು ಅದಕ್ಕೆ ಹಾಕಿ. ಬಳಿಕ ಹುಣಸೆ ಹುಳಿಯನ್ನು ಹಾಕಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. 5 ರಿಂದ 6 ನಿಮಿಷಗಳ ಕಾಲ ಚೆನ್ನಾಗಿ ಕುದಿಸಿ. ಇಷ್ಟೆ ನೀವು ದೇವಸ್ಥಾನದಲ್ಲಿ ಸವಿಯುವ ರಸಂನಂತೆ ಈ ರಸಂ ರೆಡಿಯಾಗಿರುತ್ತದೆ.
ಮನೆಯಲ್ಲಿ ರಸಂ ಪುಡಿ ಮಾಡೋದು ಹೇಗೆ
ಒಂದು ಬಾಣಲೆಯನ್ನು ಒಲೆಯ ಮೇಲೆ ಇಟ್ಟು ಅದು ಬಿಸಿಯಾದಾಗ ಬೇಳೆ, ಕೊತ್ತಂಬರಿ ಬೀಜ, ಜೀರಿಗೆ, ಮೆಣಸು, ಮೆಂತ್ಯ, ಹುಣಸೆ ಹುಳಿ ಮತ್ತು ಕಲ್ಲು ಉಪ್ಪನ್ನು ಒಂದರ ನಂತರ ಒಂದರಂತೆ ಸೇರಿಸಿ ಮತ್ತು ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಚೆನ್ನಾಗಿ ಫ್ರೈ ಮಾಡಿ.
ಗಮನಿಸಿ : ಇಂಗು ಉಂಡೆಯಾಗಿದ್ದರೆ ರುಬ್ಬಿ ನಂತರ ಹುರಿದುಕೊಳ್ಳಿ ಅಥವಾ ಪುಡಿಯಾಗಿದ್ದರೆ ನೇರವಾಗಿ ಹುರಿದುಕೊಳ್ಳಿ.
ಹುರಿದ ಎಲ್ಲಾ ಪದಾರ್ಥಗಳು ತಣ್ಣಗಾದ ನಂತರ, ಅವುಗಳನ್ನು ಮಿಕ್ಸಿಂಗ್ ಜಾರ್ಗೆ ಹಾಕಿ ಮತ್ತು ಅದಕ್ಕೆ ಅರಿಶಿನ ಪುಡಿಯನ್ನು ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ.
ಗಮನಿಸಿ: ಹುಣಸೆಹಣ್ಣು ಮಿಕ್ಸಿ ಜಾರ್ನಲ್ಲಿ ಸುಲಭವಾಗಿ ರುಬ್ಬುವುದಿಲ್ಲ ಆದ್ದರಿಂದ ಸಂಪೂರ್ಣವಾಗಿ ಪುಡಿಯಾಗುವವರೆಗೆ ಪದೇ ಪದೇ ರುಬ್ಬಿಕೊಳ್ಳಿ. ಕೊನೆಗೆ ಸಾಸಿವೆ ಮತ್ತು ಕರಿಬೇವಿನ ಸೊಪ್ಪನ್ನು ಹುರಿದು ಪುಡಿಗೆ ಸೇರಿಸಿ. ಕರಿಬೇವನ್ನು ಸೇರಿಸುವ ಮೊದಲು ನಿಮ್ಮ ಕೈಗಳಿಂದ ಪುಡಿಮಾಡಿ. ಇಷ್ಟು ಮೊಡಿದರೆ ನಿಮ್ಮ ಮುಂದೆ ರಸಂ ಪೌಡರ್ ಸಿದ್ದವಾಗಿರುತ್ತದೆ.
ಆದರೆ ಇದನ್ನು ಎಷ್ಟು ಜೋಪಾನವಾಗಿಡುತ್ತೀರೋ ಅಷ್ಟು ಸಮಯ ಬಳಕೆಗೆ ಬರುತ್ತದೆ. ಅಂದರೆ ಗಾಜಿನ ಡಬ್ಬ, ಇಲ್ಲವೆ ಪ್ಲಾಸ್ಟಿನ್ ಡಬ್ಬವನ್ನು ಚೆನ್ನಾಗಿ ತೊಳೆದು ಒಣಗಿಸಿ ಅದರಲ್ಲಿ ಹಾಕಿ ಗಾಳಿಯಾಡದಂತೆ ಗಟ್ಟಿಯಾಗಿ ಮುಚ್ಚಳ ಹಾಕಿಟ್ಟರೆ ಬಹಳ ಕಾಲ ಉಪಯೋಗಿಸಬಹುದು.



Click it and Unblock the Notifications
