Latest Updates
-
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್ -
ಮುಂಬೈನಲ್ಲಿ ಭಾರೀ ಮಳೆ: ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ, ಪೋಷಕರು ಗಮನಿಸಿ! -
ಕರಾವಳಿ ರೆಡ್ ಅಲರ್ಟ್: ಮನೆಯಲ್ಲೇ ಸುರಕ್ಷಿತವಾಗಿ ಫಿಟ್ ಆಗಿರಲು ಈ 12 ನಿಮಿಷಗಳ ವರ್ಕೌಟ್ ಟ್ರೈ ಮಾಡಿ!
ಪ್ರೇಮಿಗಳ ದಿನಕ್ಕೆ ಹಾರ್ಟ್ ಶೇಪ್ ಬಿಸ್ಕೇಟ್ ಮನೆಯಲ್ಲೇ ಮಾಡಿ..! ಹೇಗೆ ನೋಡಿ..!
ವ್ಯಾಲೆಂಟೈನ್ಸ್ ಡೇ ಬಹುತೇಕ ಹತ್ತಿರಬಂದಿದೆ. ವ್ಯಾಲೆಟೈನ್ ವಾರದಲ್ಲಿ ಪ್ರೇಮಿಗಳು ಹಲವು ದಿನಗಳ ಆಚರಣೆ ಮಾಡಿದ್ದಾರೆ. ಪ್ರತಿ ವರ್ಷ ಫೆಬ್ರವರಿ 14 ರಂದು ಆಚರಿಸಲಾಗುವ ಈ ದಿನದಂದು ಜನರು ತಮ್ಮ ಪ್ರೀತಿಪಾತ್ರರ ಬಗ್ಗೆ ತಮ್ಮ ಭಾವನೆಗಳನ್ನು ವಿಭಿನ್ನ ರೀತಿಯಲ್ಲಿ ವ್ಯಕ್ತಪಡಿಸುತ್ತಾರೆ. ಇದು ವಿಶೇಷ ಉಡುಗೊರೆಯಾಗಿರಬಹುದು, ಡಿನ್ನರ್ ಪಾರ್ಟಿ ನೀಡುವುದು. ಅಥವಾ ನೀವು ಗಿಫ್ಟ್ ನೀಡಬಹುದು.
ಇದಕ್ಕೆಲ್ಲಕ್ಕಿಂತಲೂ ವಿಭಿನ್ನವಾಗಿ ಯೋಚಿಸುವವರಿಗಾಗಿ ನಾವು ಮನೆಯಲ್ಲೇ ಮಾಡಬಹುದಾದ ಹಾರ್ಟ್ ಶೇಟ್ ಬಿಸ್ಕೇಟ್ ಅನ್ನು ನಿಮ್ಮ ಪ್ರೀತಿ ಪಾತ್ರರಿಗೆ ನೀಡಿ. ಹೌದು ಗೆಳತಿ ಅಥವಾ ಗೆಳೆಯನನ್ನು ಹೋಟೆಲ್ಗೆ ಕರೆದೊಯ್ದು ಪಾರ್ಟಿ ನೀಡುವ ಬದಲು ಮನೆಯಲ್ಲೇ ಹಾರ್ಟ್ ಶೇಪ್ ಬಿಸ್ಕೇಟ್ ಮಾಡಿ ನೀಡಿ. ನಿಮ್ಮ ಪ್ರೀತಿಯನ್ನೂ ಹೀಗೂ ವ್ಯಕ್ತಪಡಿಸಿ.

ಈ ಹೃದಯದ ಆಕಾರದ ಬಿಸ್ಕೇಟ್ ನೋಡಲು ಎಷ್ಟು ಸುಂದರವಾಗಿದೆಯೋ ಬಾಯಿಗೂ ಸಹ ಅಷ್ಟೇ ರುಚಿ ಹುಟ್ಟಿಸುತ್ತದೆ. ಹಾಗಾದರೆ ನಾವಿಂದು ಹಾರ್ಟ್ ಶೇಪ್ ಬಿಸ್ಕೇಟ್ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.
ಬೇಕಾಗುವ ಪದಾರ್ಥಗಳು
1. ಬೆಣ್ಣೆ
ಬೆಣ್ಣೆಯು ಕುಕೀಗಳ ರುಚಿ ಮತ್ತಷ್ಟು ಶ್ರೀಮಂತವಾಗಿಸಲು ಸಹಾಯ ಮಾಡುತ್ತದೆ ಮತ್ತು ಅವುಗಳಿಗೆ ಬಾಯಿಯಲ್ಲಿ ಕರಗುವ ವಿನ್ಯಾಸವನ್ನು ನೀಡುತ್ತದೆ. ಈ ಉದ್ದೇಶಕ್ಕಾಗಿ ನೀವು ಸಾಮಾನ್ಯ ಉಪ್ಪುಸಹಿತ ಬೆಣ್ಣೆಯನ್ನು ಬಳಸಬಹುದು. ಉಳಿದ ಪಾಕವಿಧಾನವನ್ನು ಮುಂದುವರಿಸುವ ಮೊದಲು ಇದನ್ನು ಬಟ್ಟಲಿನಲ್ಲಿ ಸಕ್ಕರೆಯೊಂದಿಗೆ ಚೆನ್ನಾಗಿ ಬೆರೆಸಬೇಕು.
2. ಸಕ್ಕರೆ
ಸಕ್ಕರೆಯು ಈ ಬಿಸ್ಕೇಟ್ಗಳಿಗೆ ಅವುಗಳ ಸಿಹಿ ಸುವಾಸನೆಯನ್ನು ನೀಡುತ್ತದೆ. ಉತ್ತಮ ಫಲಿತಾಂಶಗಳಿಗಾಗಿ, ಸಾಮಾನ್ಯ ಹರಳಾಗಿಸಿದ ಸಕ್ಕರೆ ಅಥವಾ ಐಸಿಂಗ್ ಸಕ್ಕರೆಯನ್ನು ಬಳಸುವುದು ಉತ್ತಮ. ಬೆಣ್ಣೆಯೊಂದಿಗೆ ಚೆನ್ನಾಗಿ ಬೆರೆಸಿದಾಗ ಎರಡೂ ಚೆನ್ನಾಗಿ ಕೆಲಸ ಮಾಡುತ್ತದೆ.
3. ಮೊಟ್ಟೆ
ಬೆಣ್ಣೆ ಮತ್ತು ಸಕ್ಕರೆಯನ್ನು ಬೆರೆಸಿದ ನಂತರ, ನೀವು ಸೇರಿಸಬೇಕಾದ ಮುಂದಿನ ವಸ್ತು ಎಂದರೆ ಮೊಟ್ಟೆಗಳು. ನೀವು ಮೊಟ್ಟೆಯ ಹಳದಿ ಲೋಳೆಯನ್ನು ಸೇರಿಸಬೇಕಾಗಿದೆ, ಬಿಳಿಯ ಅಂಶವನ್ನು ಮೊಟ್ಟಯಿಂದ ಬೇರ್ಪಡಿಸಿ ಉಳಿದ ಹಳದಿ ಅಂಶವನ್ನು ಮಾತ್ರ ಇದಕ್ಕೆ ಬಳಸಬೇಕು. ಇದು ಬಿಸ್ಕೇಟ್ ರುಚಿ ಮಾತ್ರವಲ್ಲ ಅದು ಹೃದಯದ ರೀತಿ ಶೇಪ್ ಬರಲು ಸಹ ಕಾರಣವಾಗಲಿದೆ.
4. ಮೈದಾ ಹಿಟ್ಟು
ಎಲ್ಲಾ ಪದಾರ್ಥಗಳನ್ನು ಮಿಶ್ರಣಗಳ ಮಾಡಿದ ನಂತರ, ಎಲ್ಲಾ ಮೈದಾ ಹಿಟ್ಟನ್ನು ಸಣ್ಣ ಪ್ರಮಾಣದಲ್ಲಿ ಸೇರಿಸಲು ಪ್ರಾರಂಭಿಸಿ. ಹಿಟ್ಟಿನಲ್ಲಿ ಅದನ್ನು ಸೇರಿಸಲು ಒಂದು ಜರಡಿ ಬಳಸಿ, ಇದು ನಿಮ್ಮ ಮಿಶ್ರಣದಲ್ಲಿ ಹಿಟ್ಟು ಗಂಟಾಗದಂತೆ ನೋಡಿಕೊಳ್ಳಿ, ಹೀಗಾಗಿ ಚೆನ್ನಾಗಿ ಮಿಶ್ರಣ ಮಾಡಿ.
5. ಸ್ಟ್ರಾಬೆರಿ ಜಾಮ್
ಈ ಮಿಶ್ರಣ ಮಾಡಿರುವ ಹಿಟ್ಟನ್ನು ವೃತ್ತಾಕಾರವಾಗಿ ತಟ್ಟೆಗೆ ಹಾಕಿಕೊಳ್ಳಿ. ಬಳಿಕ ನಿಮ್ಮ ಹೆಬ್ಬೆರಳನ್ನು 40 ಡಿಗ್ರಿ ಆಕಾರದಲ್ಲಿ ಎರಡು ಬಾರಿ ಬಿಸ್ಕೇಟ್ ಮೇಲೆ ಅಚ್ಚು ಒತ್ತಿ ಇದು ಹೃದಯದ ಆಕಾರದಂತೆ ಕಾಣುತ್ತದೆ. ಈ ಹೃದಯದ ಆಕಾರದ ಒಳಗೆ ಸ್ಟ್ರಾಬೆರಿ ಜಾಮ್ ಅನ್ನು ಹಾಕಿ. ಇದು ಕೆಂಪು ಬಣ್ಣದ ಹಾರ್ಟ್ ಶೇಪ್ ಆಗಿ ಹೊರಹೊಮ್ಮುತ್ತದೆ. ಇಷ್ಟೇ ಇದನ್ನು ನಿಮ್ಮ ಪ್ರೀತಿ ಪಾತ್ರರ ಮುಂದೆ ರುಚಿ ನೋಡಲು ಕೊಡಿ.



Click it and Unblock the Notifications