Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಬೆಳಗ್ಗೆ ತಿಂಡಿಗೆ 5 ನಿಮಿಷದಲ್ಲಿ ಫಟಾಫಟ್ ದೋಸೆ ಮಾಡಿ..! ಇದು ಇನ್ಸ್ಟಂಟ್ ರೆಸಿಪಿ
ಬೆಳಗ್ಗೆ ತಿಂಡಿ ಮಾಡೋದು ಅಂದ್ರೆ ಎಲ್ಲರಿಗೂ ಬಹುದೊಡ್ಡ ಸವಾಲು, ನಿತ್ಯ ಏನು ಮಾಡ್ಬೇಕು ಅನ್ನೋದೆ ತಲೆನೋವು. ಬೆಳಗ್ಗೆ ಕಡಿಮೆ ಸಮಯದಲ್ಲಿ ಯಾವ ತಿಂಡಿ ಮಾಡಬೇಕು ಎಂದು ಯೋಚಿಸುವಾಗಲೇ ಸಮಯ ಕಳೆದುಹೋಗುತ್ತದೆ. ಅಲ್ಲದೆ ಬೇರೆ ಕೆಲಸಕ್ಕೂ ಸಮಯ ಸಿಗದೆ ಗಡಿಬಿಡಿಯಾಗುತ್ತದೆ.
ಆದರೆ ನಾವಿಂದು ಬೆಳಗ್ಗೆ ಗಡಿಬಿಡಿಯಲ್ಲಿಯೂ ರುಚಿಯಾಗಿ ಮಾಡಬಹುದಾದ ರೆಸಿಪಿ ನಿಮ್ಮ ಮುಂದೆ ತಂದಿದ್ದೇವೆ. ಕೆಲವೇ ವಸ್ತುಗಳ ಬಳಸಿ ಫಟಾಫಟ್ ಎಂದು ಕೇವಲ 5 ನಿಮಿಷದಲ್ಲಿ ಈ ದೋಸೆ ಮಾಡಬಹುದು. ಹೌದು ಗೋಧಿ ಹಿಟ್ಟಿನಿಂದ ಮಾಡಬಹುದಾದ ಈ ದೋಸೆ ಅತ್ಯಂತ ರುಚಿಕರ ಹಾಗೂ ಮಾಡಲು ಬಹಳ ಸುಲಭವಾಗಿದೆ. ಬೆಳಗ್ಗೆ ತಿಂಡಿ ಮಾಡಲು ಸಮಯವೇ ಇಲ್ಲ ಎಂಬ ಗೊಂದಲದಲ್ಲಿಯೂ ನೀವು 5 ನಿಮಿಷದಲ್ಲಿ ಈ ದೋಸೆ ಮಾಡಬಹುದು.

ಹಾಗಾದರೆ ಈ ಫಟಾಫಟ್ ದೋಸೆ ಮಾಡಲು ಯಾವೆಲ್ಲಾ ಪದಾರ್ಥ ಬೇಕು? ಗೋಧಿ ದೋಸೆ ಮಾಡುವುದು ಹೇಗೆ? ಅದರ ಪಾಕವಿಧಾನವೇನು ಎಂಬುದನ್ನು ನಾವಿಂದು ತಿಳಿಯೋಣ
- ಗೋಧಿ ಹಿಟ್ಟು-2 ಕಪ್
- ಚಿರೋಟಿ ರವೆ-1/4 ಕಪ್
- ಜೀರಿಗೆ
- ಕರಿಬೇವು
- ಕೊತ್ತಂಬರಿ ಸೊಪ್ಪು
- ಈರುಳ್ಳಿ (ಬೇಕಿದ್ದರೆ ಮಾತ್ರ)
- ಉಪ್ಪು
- ಹಸಿ ಮೆಣಸು
ಗೋಧಿ ದೋಸೆ ಮಾಡುವ ಪಾಕ ವಿಧಾನ
ಒಂದು ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ ಗೋಧಿ ಹಿಟ್ಟು ಸೇರಿ ಮೇಲೆ ಹೇಳಲಾಗಿರುವ ಎಲ್ಲಾ ವಸ್ತುಗಳನ್ನು ಹಿಟ್ಟಿನ ಜೊತೆ ಹಾಕಿ ಚೆನ್ನಾಗಿ ಕಲಸಿ. ಈ ವೇಳೆ ನೀರು ಹಾಕುವಾಗ ಮಾತ್ರ ಎಚ್ಚರವಹಿಸಿ. ಹಿಟ್ಟು ಹೆಚ್ಚು ನೀರಾಗದಂತೆ ಅಥವಾ ದಪ್ಪವೂ ಆಗದಂತೆ ಚೆನ್ನಾಗಿ ಮಿಶ್ರಣ ಮಾಡಿ.
ಇದಾದ ಬಳಿಕ ಒಲೆಯಲ್ಲಿ ಮಧ್ಯಮ ಉರಿ ಇಟ್ಟು ಕಾವಲಿಗೆ ಎಣ್ಣೆ ಹಚ್ಚಿ. ಎಣ್ಣೆ ಬಿಸಿಯಾದ ಬಳಿಕ ಈ ಹಿಟ್ಟನ್ನು ಹಾಕಿ. ತುಂಬಾನೆ ದಪ್ಪ ಇರದಂತೆ ಈ ದೋಸೆ ಮಾಡಿ. ಒಂದು ಬದಿಯ ದೋಸೆ ಹೆಚ್ಚು ಕ್ರಿಸ್ಪಿಯಾಗಿಯೂ ಮತ್ತೊಂದು ಕಡೆ ಮೆದುವಾಗಿಯೂ ಕಾಯಿಸಿ. ಈಗ ನಿಮ್ಮ ಮುಂದೆ ಅತ್ಯಂತ ಮೆತ್ತನೆಯ ಗೋಧಿ ದೋಸೆ ಸವಿಯಲು ಸಿದ್ಧವಾಗಿದೆ.
ಈ ದೋಸೆಯನ್ನು ಕೇವಲ 5 ನಿಮಿಷದಲ್ಲಿ ಮಾಡಬಹುದು. ಹೆಚ್ಚು ರುಚಿಕರವಾಗಿ ಆರೋಗ್ಯಕ್ಕೂ ಇದು ಉತ್ತಮ ದೋಸೆಯಾಗಿದೆ. ಈ ದೋಸೆ ಜೊತೆ ಕಡಲೆ ಚಟ್ನಿ ಇಲ್ಲವೆ ಕಾಯಿ ಚಟ್ನಿ ಇದ್ದರೆ ಒಂದಿಷ್ಟು ದೋಸೆ ಹೆಚ್ಚು ಸೇವಿಸಬಹುದು.
ಚಟ್ನಿ ತಯಾರಿಯ ವಿಧಾನ
- ಬಾಣಲೆಗೆ ಒಂದು ಚಮಚ ಎಣ್ಣೆ ಹಾಕಿ ಬಿಸಿ ಮಾಡಿ ಬೆಳ್ಳುಳ್ಳಿ, ಒಣ ಮೆಣಸು ಹಾಕಿ ಸ್ವಲ್ಪ ಎಣ್ಣೆ ಹಾಕಿ ಫ್ರೈ ಮಾಡಿ, ಒಣ ಮೆಣಸು ರೋಸ್ಟ್ ಆಗಬೇಕು.
- ನಂತರ ತೆಂಗಿನತುರಿ ಸೇರಿಸಿ ರೋಸ್ಟ್ ಮಾಡಿ, ತೆಂಗಿನ ತುರಿ, ಹುಣಸೆ ಹಣ್ಣು ಸ್ವಲ್ಪ ಕೆಂಪು ಬಣ್ಣಕ್ಕೆ ತಿರುಗುವಾಗ ಸ್ಟೌವ್ನಿಂದ ತೆಗೆಯಿರಿ
- ಹುರಿದ ಮಸಾಲೆ ತಣ್ಣಗಾಗಲು ಪ್ಲೇಟ್ಗೆ ಹಾಕಿ.
- ನಂತರ ಮಿಕ್ಸಿ ಬ್ಲೆಂಡರ್ಗೆ ಹಾಕಿ ರುಚಿಗೆ ತಕ್ಕ ಉಪ್ಪು ಸೇರಿಸಿ ಗಟ್ಟಿಯಾಗಿ ಅಥವಾ ಸ್ವಲ್ಪ ನೀರು ನೀರಾಗಿ ನಿಮಗೆ ಹೇಗೆ ಬೇಕೋ ಹಾಗೆ ರುಬ್ಬಿ, ನಂತರ ಒಗ್ಗರಣೆ ಹಾಕಿದರೆ ಇಡ್ಲಿ, ದೋಸೆ ಜೊತೆ ಸವಿಯಲು ಸೂಪರ್ ಬೆಳ್ಳುಳ್ಳಿ ಕಾಯಿ ಚಟ್ನಿ ರೆಸಿಪಿ
- ಸಲಹೆ: ಇಟ್ಲಿಗೆ ಚಟ್ನಿ ರುಬ್ಬುವಾಗ ಚಟ್ನಿ ಸ್ವಲ್ಪ -ಸ್ವಲ್ಪ ನೀರಾಗಿದ್ದರೆ ಚೆನ್ನ



Click it and Unblock the Notifications
