Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಬೇಸರವಿಲ್ಲದ ಬ್ರೇಕ್‌ಫಾಸ್ಟ್! 5 ನಿಮಿಷದಲ್ಲಿ ಕ್ರಿಸ್ಪಿಯಾದ ರೈಸ್ ಫ್ಲೋರ್ ದೋಸೆ.. ಮಾಡೋದು ತುಂಬಾ ಈಸಿ
ಬೆಳಗ್ಗಿನ ಟಿಫನ್‌ಗೆ ಅಕ್ಕಿ ಹಿಟ್ಟು ದೋಸೆ ಸೂಕ್ತ. ಕೇವಲ 5 ನಿಮಿಷಗಳಲ್ಲಿ ಟೀಸ್ಟಿ ರೈಸ್ ಫ್ಲೋರ್ ದೋಸೆ (Rice Flour Dosa) ಮಾಡಬಹುದು. ಹೌದು, ಅಕ್ಕಿ ಹಿಟ್ಟಿನಿಂದ ಗರಿಗರಿಯಾದ ದೋಸೆ ಮಾಡುವುದು ಬಹಳ ಸುಲಭ. ಇದಕ್ಕೆ ಬೇಕಾಗುವ ಸಾಮಗ್ರಿಗಳು ಕಡಿಮೆ ಮತ್ತು ಮಾಡುವ ವಿಧಾನವೂ (Rice Flour Dosa Recipe) ಸರಳ. ಈ ದೋಸೆಯನ್ನು ಬೆಳಗಿನ ಉಪಹಾರಕ್ಕೆ ಅಥವಾ ರಾತ್ರಿಯ ಊಟಕ್ಕೂ ಮಾಡಬಹುದು.
ನಿಮಗೂ ಸಹ ದೋಸೆ ತಿನ್ನಲು ಇಷ್ಟ. ಆದರೆ, ಈ ರೆಸಿಪಿಯನ್ನು ಎಂದಿಗೂ ಪ್ರಯತ್ನಿಸಿಲ್ಲ ಬಿಡಿ. ಏಕೆಂದರೆ, ಇದನ್ನು ತಯಾರಿಸಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಎಂಬ ಭಾವನೆ. ನಾವಿಂದು ನಿಮಗೆ ಅಕ್ಕಿ ಹಿಟ್ಟಿನ ದೋಸೆಯ ಮಾಡುವ ವಿಧಾನವನ್ನು ತಿಳಿಸಲಿದ್ದೇವೆ. ಅದು ಕೆಲವೇ ನಿಮಿಷಗಳಲ್ಲಿ ಸಿದ್ಧವಾಗುತ್ತದೆ. ಇದು ತಿನ್ನಲು ತುಂಬಾ ರುಚಿಕರ. ಬಿಸಿ ಬಿಸಿಯಾದ ಅಕ್ಕಿ ಹಿಟ್ಟಿನ ದೋಸೆಯನ್ನು ಚಟ್ನಿ ಅಥವಾ ಸಾಂಬಾರ್‌ನೊಂದಿಗೆ ಸವಿಯಲು ಬಲು ರುಚಿಯಾಗಿರುತ್ತದೆ. ಬನ್ನಿ, ಈ ಹೊಸ ರೆಸಿಪಿ ಮಾಡುವ ವಿಧಾನ ತಿಳಿಯೋಣ.

ಅಕ್ಕಿ ಹಿಟ್ಟಿನ ದೋಸೆ ಮಾಡಲು ಬೇಕಾಗುವ ಸಾಮಗ್ರಿಗಳು
• ಅಕ್ಕಿ ಹಿಟ್ಟು - 1 ಕಪ್
• ರವೆ - 2 ಸ್ಪೂನ್
• ಮೊಸರು - 2 ಸ್ಪೂನ್
• ಹಸಿ ಮೆಣಸಿನಕಾಯಿ - 1 (ಸಣ್ಣಗೆ ಹೆಚ್ಚಿದ)
• ಶುಂಠಿ - ಅರ್ಧ ಸ್ಪೂನ್ (ತುರಿದ)
• ಕೊತ್ತಂಬರಿ ಸೊಪ್ಪು - ಕತ್ತರಿಸಿದ 1 ರಿಂದ 2 ಸ್ಪೂನ್
• ಉಪ್ಪು - ರುಚಿಗೆ ತಕ್ಕಷ್ಟು
• ಜೀರಿಗೆ - 1/2 ಸ್ಪೂನ್
• ನೀರು - 2 ಕಪ್
• ಎಣ್ಣೆ - ದೋಸೆ ಕರಿಯಲು
ಅಕ್ಕಿ ಹಿಟ್ಟಿನ ದೋಸೆ ತಯಾರಿಸುವ ವಿಧಾನ
ಮೊದಲು, ಒಂದು ದೊಡ್ಡ ಬಟ್ಟಲು ತೆಗೆದುಕೊಳ್ಳೋಣ. ಅದರಲ್ಲಿ ಅಕ್ಕಿ ಹಿಟ್ಟು, ರವೆ, ಅಗತ್ಯವಿದ್ದರೆ ಮೊಸರು, ಹಸಿ ಮೆಣಸಿನಕಾಯಿ, ಶುಂಠಿ, ಕೊತ್ತಂಬರಿ ಸೊಪ್ಪು ಮತ್ತು ಉಪ್ಪು ಹಾಕೋಣ. ಈಗ ನೀರನ್ನು ಸೇರಿಸಿ ಹಿಟ್ಟು (ಬ್ಯಾಟರ್) ತಯಾರಿಸಿಕೊಳ್ಳಿ. ಈಗ ನಿಧಾನವಾಗಿ ನೀರನ್ನು ಹಾಕಿ ತೆಳುವಾದ ಹಿಟ್ಟು ತಯಾರಿಸಿಕೊಳ್ಳೋಣ. ಹಿಟ್ಟು ತುಂಬಾ ದಪ್ಪವಾಗಿರಬಾರದು. ಅದು ನೀರಿನಂತೆ ತುಂಬಾ ತೆಳುವಾಗಿರಬೇಕು. ಅಂದರೆ, ನೀರ್ ದೋಸೆಯ ಹಿಟ್ಟಿನಂತೆ ಇರಲಿ. ಈಗ ಗ್ಯಾಸ್ ಆನ್ ಮಾಡಿ. ನಾನ್ ಸ್ಟಿಕ್ ಪ್ಯಾನ್ (ತವಾ ಬಿಸಿ ಮಾಡಿ) ಬಿಸಿ ಮಾಡಿ. ಅದು ತುಂಬಾ ಬಿಸಿಯಾಗಿದ್ದರೆ, ಸ್ವಲ್ಪ ತಣ್ಣಗಾಗಲು ಬಿಡಿ. ಇಲ್ಲದಿದ್ದರೆ ಹಿಟ್ಟು ಸರಿಯಾಗಿ ಹರಡುವುದಿಲ್ಲ.

ಬಳಿಕ, ಒಂದು ಲೋಟದಲ್ಲಿ ಹಿಟ್ಟು ತುಂಬಿಸಿ, ಅದನ್ನು ತವಾ ಮೇಲೆ ಮೇಲಿಂದ ಸುರಿಯಿರಿ. ಹಿಟ್ಟು ತನ್ನಿಂದ ತಾನೇ ಸುತ್ತಲೂ ಹರಡುತ್ತದೆ. ನೀವು ಇದನ್ನು ವೃತ್ತಾಕಾರದಲ್ಲಿ ಹರಡುವಂತೆ ಸ್ವಲ್ಪ ಅಲ್ಲಾಡಿಸಬೇಕು. ಈಗ ಎಣ್ಣೆ ಹಾಕಿ ಕರಿಯಿರಿ. ದೋಸೆಯ ಅಂಚುಗಳಿಗೆ ಸ್ವಲ್ಪ ಎಣ್ಣೆ ಹಾಕಿ ಮಧ್ಯಮ ಉರಿಯಲ್ಲಿ ಅದು ಗರಿಗರಿಯಾಗುವವರೆಗೆ ಮತ್ತು ಕೆಳಗಿನಿಂದ ತಿಳಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ. ಬಳಿಕ ಹೊರಗೆ ತೆಗೆದು ಪಾತ್ರೆಗೆ ಹಾಕಿ. ಈ ಬಿಸಿ ದೋಸೆಯನ್ನು ತೆಂಗಿನಕಾಯಿ ಚಟ್ನಿ, ಟೊಮೆಟೊ ಚಟ್ನಿ ಅಥವಾ ಸಾಂಬಾರ್ ಜೊತೆ ಸವಿಯಬಹುದು.
ಈ ರೀತಿಯೂ ದೋಸೆ ಮಾಡಬಹುದು
ಮೊದಲಿಗೆ ಒಂದು ಪಾತ್ರೆಯಲ್ಲಿ ಅಕ್ಕಿ ಹಿಟ್ಟು, ಜೀರಿಗೆ ಮತ್ತು ಉಪ್ಪನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ನೀರು ಸೇರಿಸಿ ಗಂಟಿಲ್ಲದಂತೆ ಕಲಸಿ, ತೆಳುವಾದ ಹಿಟ್ಟನ್ನು ತಯಾರಿಸಿ. ದೋಸೆ ಮಾಡುವ ತವಾವನ್ನು ಬಿಸಿ ಮಾಡಿ, ಸ್ವಲ್ಪ ಎಣ್ಣೆ ಹಾಕಿ. ತವಾ ಬಿಸಿಯಾದ ಬಳಿಕ, ಹಿಟ್ಟನ್ನು ತೆಳುವಾಗಿ ಹರಡಿ. ದೋಸೆಯ ಅಂಚುಗಳನ್ನು ಸಡಿಲಗೊಳಿಸಿ, ಅದು ಗೋಲ್ಡನ್ ಬ್ರೌನ್ ಬಣ್ಣಕ್ಕೆ ತಿರುಗುವವರೆಗೆ ಕರಿಯಿರಿ. ಬಿಸಿ ಬಿಸಿಯಾದ ದೋಸೆಯನ್ನು ಚಟ್ನಿ ಅಥವಾ ಸಾಂಬಾರ್‌ನೊಂದಿಗೆ ಬಡಿಸಿ.



Click it and Unblock the Notifications
