Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಈರುಳ್ಳಿ ಹಾಕದೆ 3 ಪದಾರ್ಥ ಹಾಕಿ 5 ನಿಮಿಷದಲ್ಲಿ ಚಟ್ನಿ ಮಾಡಬಹುದು.! ಇಲ್ಲಿದೆ ರೆಸಿಪಿ
ನಿಮ್ಮ ಮನೆಯಲ್ಲಿ ಬೆಳಗ್ಗೆ ಇಡ್ಲಿ, ದೋಸೆ, ಕಡಬು, ರೊಟ್ಟಿ, ಚಪಾತಿ ಹೀಗೆ ನಾನಾ ರೀತಿಯ ತಿಂಡಿ ಮಾಡಿರುತ್ತೀರಿ. ಈ ರೀತಿ ದಿನಕ್ಕೊಂದು ತಿಂಡಿ ಮಾಡುವುದು ಎಷ್ಟು ಕಷ್ಟವೋ ಅದೇ ರೀತಿ ದಿನಕ್ಕೊಂದು ಚಟ್ನಿ, ಪಲ್ಯ, ಸಾಂಬಾರ್ ಮಾಡುವುದು ಸಹ ಅಷ್ಟೇ ಕಷ್ಟ. ಹೀಗಾಗಿ ಬೆಳಗ್ಗೆಯ ತಿಂಡಿ ಜೊತೆ ಏನು ಮಾಡಬೇಕು ಅನ್ನೋದೆ ಹಲವರ ಗೊಂದಲಕ್ಕೆ ಕಾರಣವಾಗಿರುತ್ತದೆ.
ಹಾಗಾದರೆ ನಾವಿಂದು ಬೆಳಗ್ಗೆಯ ತಿಂಡಿಗೆ ಮಸಾಲ ಖಾರ ಚಟ್ನಿ ಮಾಡುವುದು ಹೇಗೆ ಎಂಬುದನ್ನು ನೋಡೋಣ. ಇದು ಬರಿ ಚಟ್ನಿಯಲ್ಲ ವಿಶೇಷ ಅಂದ್ರೆ ಈರುಳ್ಳಿ ಬಳಸದೆಯೇ ಈ ಚಟ್ನಿ ಮಾಡುವುದು ಹೇಗೆ ಎಂಬುದನ್ನು ತಿಳಿಸಿಕೊಡಲಿದ್ದೇವೆ.

ನಿಮ್ಮ ಮನೆಯವರು ಯಾವಾಗಲೂ ಇಡ್ಲಿ, ದೋಸೆಯನ್ನು ಸ್ವಲ್ಪ ಹುಳಿ ಮತ್ತು ಮಸಾಲೆಯುಕ್ತ ಚಟ್ನಿಯೊಂದಿಗೆ ತಿನ್ನಲು ಬಯಸುತ್ತಾರೆಯೇ? ನಂತರ ಮಸಾಲೆ ಚಟ್ನಿ ಮಾಡಿ. ಈರುಳ್ಳಿ ಇಲ್ಲದ ಮಸಾಲೆ ಚಟ್ನಿ ಕೂಡ ಮಾಡಿ. ಈ ಮಸಾಲೆ ಚಟ್ನಿಗೆ 3 ಪದಾರ್ಥಗಳು ಇದ್ದರೆ ಸಾಕಾಗುತ್ತದೆ.
ಹಾಗಾದ್ರೆ ಈ ಚಟ್ನಿ ಮಾಡುವುದು ಹೇಗೆ? ಇದರ ಪಾಕವಿಧಾನವೇನು ಎಂಬುದನ್ನು ಈ ಕೆಳಗೆ ವಿವರಿಸಲಾಗಿದೆ.
ಈ ಚಟ್ನಿ ಮಾಡಲು ಅಗತ್ಯವಿರುವ ವಸ್ತುಗಳು:
- ಟೊಮ್ಯಾಟೊ - 4
- ಬೆಳ್ಳುಳ್ಳಿ-1
- ಒಣ ಮೆಣಸು - 13
- ಹುಣಸೆಹಣ್ಣು - ಸಣ್ಣ ತುಂಡು
- ಉಪ್ಪು - ರುಚಿಗೆ ತಕ್ಕಂತೆ
ಮಸಾಲೆ ಮಾಡಿಕೊಲ್ಳಲು ಅಗತ್ಯವಿರುವ ವಸ್ತುಗಳು
- ತುಪ್ಪ - 2 ಟೇಬಲ್ ಸ್ಪೂನ್
- ಸಾಸಿವೆ - 1 ಟೇಬಲ್ ಸ್ಪೂನ್
- ಉದ್ದು - 1/2 ಟೀಸ್ಪೂನ್
- ಇಂಗು ಪುಡಿ - ಸ್ವಲ್ಪ
- ಕರಿಬೇವಿನ ಎಲೆಗಳು
ಪಾಕವಿಧಾನ
ಮೊದಲು ಟೊಮೆಟೊವನ್ನು ಕತ್ತರಿಸಿಕೊಳ್ಳಿ. ನಂತರ ಮಿಕ್ಸರ್ ಜಾರ್ ನಲ್ಲಿ ಟೊಮೆಟೊ, ಒಣ ಮೆಣಸು, ಬೆಳ್ಳುಳ್ಳಿ, ಹುಣಸೆಹಣ್ಣು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ನೀರು ಹಾಕದೆ ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬುವಾಗ ನೀರು ಹಾಕದೆ ತರಿತರಿಯಾಗಿ ರುಬ್ಬಿಕೊಂಡರೆ ಉತ್ತಮ. ಚಟ್ನಿಯನ್ನು ರುಬ್ಬಿದ ನಂತರ ಅದನ್ನು ಒಂದು ಪಾತ್ರೆಗೆ ಹಾಕಿಕೊಳ್ಳಿ.
ನಂತರ ಒಲೆಯ ಮೇಲೆ ಬಾಣಲೆ ಇಟ್ಟು ಅದರಲ್ಲಿ 2 ಟೇಬಲ್ ಸ್ಪೂನ್ ತುಪ್ಪ ಹಾಕಿ ಬಿಸಿ ಮಾಡಿ, ನಂತರ 1 ಚಮಚ ಸಾಸಿವೆ ಮತ್ತು 1/2 ಚಮಚ ಉದ್ದಿನಬೇಳೆ ಹಾಕಿ ಚೆನ್ನಾಗಿ ಫ್ರೈ ಮಾಡಿ.
ನಂತರ ಅದಕ್ಕೆ ಮೆಂತ್ಯ ಪುಡಿ ಮತ್ತು ಕರಿಬೇವಿನ ಸೊಪ್ಪನ್ನು ಹಾಕಿ ಒಗ್ಗರಣೆ ಮಾಡಿ. ಅಂತಿಮವಾಗಿ ನೀವು ರುಬ್ಬಿಕೊಂಡಿದ್ದ ಮಸಾಲೆ ಮಿಶ್ರಣವನ್ನು ಅದಕ್ಕೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ, ಒಂದೆರಡು ನಿಮಿಷ ಕಾಯಿಸಿದರೆ ರುಚಿ ರುಚಿಯ ಮಸಾಲೆ ಖಾರದ ಚಟ್ನಿ ರೆಡಿ. ಇಲ್ಲಿ ಈ ಚಟ್ನಿಗೆ ಈರುಳ್ಳಿಯ ಅಗತ್ಯವೇ ಇಲ್ಲ.
ಈ ಚಟ್ನಿಯನ್ನು ಎಲ್ಲಾ ತಿಂಡಿಯ ಜೊತೆಗೂ ಸವಿಯಬಹುದು. ಮುಖ್ಯವಾಗಿ ಇಡ್ಲಿ, ದೋಸೆಗೆ ಹೇಳಿ ಮಾಡಿಸಿದ ಚಟ್ನಿ ಇದಾಗಿದೆ.
ಟೊಮೆಟೋ ಚಟ್ನಿ ಮಾಡೋದು ಹೇಗೆ
- ಸಾಮಾಗ್ರಿಗಳು
- ಟೊಮೇಟೊ - 1/2 ಕೆ.ಜಿ
- ಈರುಳ್ಳಿ - 2
- ಬೆಳ್ಳುಳ್ಳಿ - 10 ಎಸಳು
- ಒಣಮೆಣಸಿನಕಾಯಿ - 2- 3 (ಸಣ್ಣದಾಗಿ ಕತ್ತರಿಸಲಾಗಿರುವ)
- ಹುಣಸೆಹಣ್ಣು - ಸಣ್ಣ ತುಂಡು
- ಉಪ್ಪು -ರುಚಿಗೆ ತಕ್ಕಷ್ಟು
- ಕೊತ್ತಂಬರಿ ಸೊಪ್ಪು - ಸ್ವಲ್ಪ (ಸಣ್ಣದಾಗಿ ಕತ್ತರಿಸಲಾಗಿರುವ)
- ಕರಿಬೇವಿನ ಸೊಪ್ಪು- 4-5 ಎಸಳು
ಒಗ್ಗರಣೆಗೆ
- ಸಾಸಿವೆ - ಅರ್ಧ ಚಮಚ
- ಜೀರಿಗೆ - ಅರ್ಧ ಚಮಚ
- ಇಂಗು - ಚಿಟಿಕೆಯಷ್ಟು
ಮೊದಲಿಗೆ ಬಾಣಲೆಯನ್ನು ಒಲೆ ಮೇಲಿಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ ಈರುಳ್ಳಿ
ಬೆಳ್ಳುಳ್ಳಿ ಟೊಮೇಟೋ ಮತ್ತು ಒಣಮೆಸಿನಕಾಯಿಯನ್ನು ಚೆನ್ನಾಗಿ ಹುರಿದುಕೊಳ್ಳಿ
ಚೆನ್ನಾಗಿ ಹುರಿದುಕೊಂಡ ನಂತರ ಕೊತ್ತಂಬರಿ ಸೊಪ್ಪು, ಕರಿಬೇವಿನೆಸಳು, ಹುಣಸೆಹಣ್ಣು
ಮತ್ತು ಉಪ್ಪು ಸೇರಿಸಿ ಮಿಕ್ಸಿಗೆ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ
ಇನ್ನು ಸಾಸಿವೆ, ಇಂಗು, ಜೀರಿಗೆಯ ಒಗ್ಗರಣೆಯನ್ನು ರೆಡಿ ಮಾಡಿ ಈ ಚಟ್ನಿಗೆ
ಸೇರಿಸಿ. ನಂತರ ಈ ಟೊಮೇಟೊ ಚಟ್ನಿಯನ್ನು ಚೆನ್ನಾಗಿ ಕುದಿಸಿಕೊಳ್ಳಿ. ಈ ಮಿಶ್ರಣ
ಗಟ್ಟಿಯಾಗುವವರೆಗೆ ಬೇಯಿಸಿಕೊಳ್ಳಿ.



Click it and Unblock the Notifications
