Latest Updates
-
ಮಳೆಗಾಲದ ಕಿರಿಕಿರಿ ಬೇಡ: ದಂಪತಿಗಳಿಗಾಗಿ 5 ನಿಮಿಷದ ವರ್ಕ್ ಫ್ರಮ್ ಹೋಮ್ ಸೂತ್ರ -
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಭಾರಿ ಮಳೆ ಎಚ್ಚರಿಕೆ, ನಿಮ್ಮ ಮನೆ ಮತ್ತು ವಾಹನ ಸುರಕ್ಷತೆಗೆ ಈ ಟಿಪ್ಸ್ ಪಾಲಿಸಿ -
ಅಡುಗೆ ಮನೆಯ ಉಪ್ಪಿನಲ್ಲಿ ಅಯೋಡಿನ್ ಇದೆಯೇ? ಥೈರಾಯ್ಡ್ ಆರೋಗ್ಯಕ್ಕೆ ಈ ತಪ್ಪು ಮಾಡಬೇಡಿ! -
ಚೆನ್ನೈನಲ್ಲಿ ಭಾರಿ ಮಳೆ: ಶಾಲೆಗಳಿಗೆ ರಜೆ, ಸಂಚಾರ ಅಸ್ತವ್ಯಸ್ತ; ಹೊರಡುವ ಮುನ್ನ ಈ ಮಾಹಿತಿ ತಪ್ಪದೇ ಓದಿ! -
ದೆಹಲಿ ಮಾಲಿನ್ಯದ ನಡುವೆ ವಾಕಿಂಗ್ ಹೋಗ್ತಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಟಿಪ್ಸ್ ಫಾಲೋ ಮಾಡಿ -
ದಸರಾ ಟ್ರಾಫಿಕ್ ಜಾಮ್: ತಡವಾದರೂ ಸಂಬಂಧ ಹಾಳಾಗದಂತೆ ನಿಭಾಯಿಸಲು ಇಲ್ಲಿದೆ 90 ಸೆಕೆಂಡ್ಗಳ ಸ್ಕ್ರಿಪ್ಟ್ -
ವಿಜಯದಶಮಿ ಸಂಭ್ರಮ: ಕೊನೆ ನಿಮಿಷದಲ್ಲಿ ಮನೆಯನ್ನು ಆಕರ್ಷಕವಾಗಿಸಲು 5 ಸಿಂಪಲ್ ಎಕೋ-ಫ್ರೆಂಡ್ಲಿ ಐಡಿಯಾಗಳು -
ಮೂಳೆಗಳ ಆರೋಗ್ಯಕ್ಕೆ ಬಜೆಟ್ ಸ್ನೇಹಿ ಆಹಾರ: ಆಸ್ಟಿಯೋ ಪೋರೋಸಿಸ್ ತಡೆಯಲು ಇಂದೇ ಈ ಬದಲಾವಣೆ ಮಾಡಿ! -
ಮೈಸೂರು ದಸರಾ 2026: ಪಂಜಿನ ಕವಾಯತು ಮತ್ತು ಡ್ರೋನ್ ಶೋ ವೀಕ್ಷಿಸಲು ಇಲ್ಲಿದೆ ಕಂಪ್ಲೀಟ್ ಗೈಡ್! -
ದೇವಸ್ಥಾನದ ಉದ್ದದ ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ನೋವು ಮರೆಸುವ 7 ನಿಮಿಷದ ಮ್ಯಾಜಿಕ್ ಟಿಪ್ಸ್ ಇಲ್ಲಿದೆ!
ಒಂಚೂರು ಕಹಿ ಇಲ್ಲದಂತೆ ಹಾಗಲಕಾಯಿ ಗ್ರೇವಿ ಮಾಡಿ..! ರೆಸಿಪಿ ಇಲ್ಲಿದೆ
ನೀವು ಹಾಗಲಕಾಯಿ ಪಲ್ಯ ಅಥವಾ ಗ್ರೇವಿ ಮಾಡಿ ಸವಿದಿರಬಹುದು. ಸೇವಿಸಲು ಕಹಿಯಾಗಿರುತ್ತೆ ಅನ್ನೋ ಕಾರಣಕ್ಕೆ ಹಲವರು ಅದನ್ನು ಸೇವಿಸಲು ಬಯಸುವುದಿಲ್ಲ. ಆದರೆ ಬೇರೆ ಯಾವ ತರಕಾರಯಲ್ಲೂ ಇಲ್ಲದಷ್ಟು ಆರೋಗ್ಯಕರ ಅಂಶಗಳು ಈ ಹಾಗಲಕಾಯಿಯಲ್ಲಿ ಅಡಗಿದೆ. ಆದರೆ ಅದು ಕಹಿ ಎಂಬ ಕಾರಣದಿಂದ ಅದರ ಖಾದ್ಯದತ್ತ ಹೆಚ್ಚು ಆಕರ್ಷಿತರಾಗುವುದಿಲ್ಲ.
ಆದರೆ ನಾವಿಂದು ರುಚಿಯಾದ ಒಂಚೂರು ಕಹಿ ಇಲ್ಲದೆಯೇ ಹಾಗಲಕಾಯಿ ಗ್ರೇವಿಯನ್ನು ಮಾಡುವುದು ಹೇಗೆ ಎಂಬುದನ್ನು ನೋಡೋಣ. ಹೌದು ಹಾಗಲಕಾಯಿ ಗ್ರೇವಿಯನ್ನು ಒಂದಿಷ್ಟು ಕಹಿಯಿಲ್ಲದೆ ಮಾಡಬಹುದು. ಹಾಗಾದರೆ ಹಾಗಲಕಾಯಿ ಗ್ರೇವಿ ಮಾಡಲು ಏನೆಲ್ಲಾ ಪದಾರ್ಥಗಳು ಬೇಕು. ಅದರ ಕಾಪವಿಧಾನವೇನು ಎಂಬುದನ್ನು ನಾವಿಂದು ತಿಳಿಯೋಣ.

ಹಾಗಲಕಾಯಿ ಗ್ರೇವಿಗೆ ಅಗತ್ಯವಿರುವ ವಸ್ತುಗಳು:
- ಹಾಗಲಕಾಯಿ - 1
- ದೊಡ್ಡ ಈರುಳ್ಳಿ - 2
- ಟೊಮ್ಯಾಟೋ - 2
- ಹುಣಸೆಹಣ್ಣು - ಸ್ವಲ್ಪ
- ಬೆಳ್ಳುಳ್ಳಿ - 5 ಬಿಡಿಸಿಕೊಂಡಿರುವುದು
- ಅರಿಶಿನ ಪುಡಿ - 1/2 ಟೀಸ್ಪೂನ್
- ಮೆಣಸಿನ ಪುಡಿ - 1 tbsp
- ಕೊತ್ತಂಬರಿ ಪುಡಿ - 1 tbsp
- ತೆಂಗಿನ ಎಣ್ಣೆ - 3 ಟೀಸ್ಪೂನ್
- ಮೆಂತ್ಯ - 1/4 ಟೀಸ್ಪೂನ್
- ಜೀರಿಗೆ - 1/2 ಟೀಸ್ಪೂನ್
- ಸಾಸಿವೆ - 1 tbsp
- ಬೇಳೆ - 1/2 ಟೀಸ್ಪೂನ್
- ಬೆಲ್ಲ-ಸಣ್ಣ ತುಂಡು
- ಉಪ್ಪು - ಅಗತ್ಯವಿರುವಂತೆ
- ಕರಿಬೇವಿನ ಎಲೆಗಳು - ಸ್ವಲ್ಪ
ಹಾಗಲಕಾಯಿ ಗ್ರೇವಿ ಮಾಡುವ ಪಾಕವಿಧಾನ:
ಮೊದಲು ಬಾಣಲೆಯನ್ನು ಒಲೆಯಲ್ಲಿ ಇಟ್ಟು ತುಪ್ಪ ಇಲ್ಲವೆ ಎಣ್ಣೆ ಸವರಿ, ಅದು ಬಿಸಿಯಾದಾಗ ಕತ್ತರಿಸಿದ ಹಾಗಲಕಾಯಿಯನ್ನು ಹಾಕಿ ಹುರಿಯಿರಿ. ನಂತರ ಅದಕ್ಕೆ ಸ್ವಲ್ಪ ಉಪ್ಪು ಹಾಕಿ ಮಧ್ಯಮ ಉರಿಯಲ್ಲಿ ಚೆನ್ನಾಗಿ ಹುರಿಯಿರಿ. ಹಾಗಲಕಾಯಿ ಬಣ್ಣ ಬದಲಾದಾಗ ಮತ್ತು ಚೆನ್ನಾಗಿ ಹುರಿದ ನಂತರ, ಅದನ್ನು ತೆಗೆದುಕೊಂಡು ತಟ್ಟೆಯಲ್ಲಿ ಇರಿಸಿ.
ನಂತರ ಅದೇ ಬಾಣಲೆಯಲ್ಲಿ ಉಳಿದ ಬಿಸಿ ಎಣ್ಣೆಗೆ ಸಾಸಿವೆ, ಜೀರಿಗೆ, ಮೆಂತ್ಯ ಮತ್ತು ಉದ್ದಿನಬೇಳೆ ಸೇರಿಸಿ. ಎಲ್ಲವೂ ಹುರಿದ ನಂತರ ಬೆಳ್ಳುಳ್ಳಿ ಮತ್ತು ಸ್ವಲ್ಪ ಕರಿಬೇವಿನ ಎಲೆಗಳನ್ನು ಹಾಕಿ ಹುರಿಯಿರಿ. ನಂತರ ಅದಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿ ಮತ್ತು ಉಪ್ಪನ್ನು ಹಾಕಿ ಮಧ್ಯಮ ಉರಿಯಲ್ಲಿ ಚೆನ್ನಾಗಿ ಹುರಿಯಿರಿ.
ಅಷ್ಟರಲ್ಲಿ ಮಿಕ್ಸರ್ ಜಾರ್ ಗೆ ಟೊಮೆಟೊ ಹಾಕಿ ಪೇಸ್ಟ್ ನಂತೆ ರುಬ್ಬಿಕೊಳ್ಳಿ. ಈರುಳ್ಳಿ ಹುರಿದ ನಂತರ, ರುಬ್ಬಿದ ಟೊಮೆಟೊ ಪೇಸ್ಟ್ ಅನ್ನು ಸೇರಿಸಿ ಮತ್ತು ಸ್ವಲ್ಪ ನೀರಿನಿಂದ ಬೇಯಿಸಿ. ಅದು ಚೆನ್ನಾಗಿ ಕಾದ ನಂತರ ಎಣ್ಣೆ ಬೇರ್ಪಟ್ಟಾಗ ಅರಿಶಿನ ಪುಡಿ, ಮೆಣಸಿನ ಪುಡಿ ಮತ್ತು ಧನಿಯಾ ಪುಡಿ ಹಾಕಿ ಮಿಶ್ರಣ ಮಾಡಿ.
ಮಸಾಲೆಗಳ ಹಸಿರು ವಾಸನೆ ಹೋದ ನಂತರ, ಹುಣಸೆ ಹುಳಿ ನೀರನ್ನು ಮತ್ತು ಸ್ವಲ್ಪ ನೀರು ಸೇರಿಸಿ ಮತ್ತು ಕಡಿಮೆ ಉರಿಯಲ್ಲಿ ಬೇಯಿಸಿ. ಅದು ಸ್ವಲ್ಪ ದಪ್ಪವಾದ ನಂತರ, ಹುರಿದ ಹಾಗಲಕಾಯಿಯನ್ನು ಸೇರಿಸಿ ಮತ್ತು ಮಿಶ್ರಣ ಮಾಡಿ ಮತ್ತು ಅಗತ್ಯವಿದ್ದರೆ ನೀರು ಮತ್ತು ಸಣ್ಣ ಬೆಲ್ಲದ ಉಂಡೆ ಸೇರಿಸಿ. ಆದರೆ ಗ್ರೇವಿ ತುಂಬಾ ತೆಳುವಾಗದಂತೆ ನೋಡಿಕೊಳ್ಳಿ.
ಈಗ ಬಾಣಲೆಯನ್ನು ಅನ್ನು ಮುಚ್ಚಿ ಮತ್ತು 15 ನಿಮಿಷ ಬೇಯಿಸಿ. ಆಗಾಗ ಮುಚ್ಚಳ ತೆಗದು ಮಿಶ್ರಣ ಮಾಡುತ್ತಿರಿ. 15 ನಿಮಿಷಗಳ ನಂತರ ರುಚಿರುಚಿಯಾದ ಹಾಗಲಕಾಯಿ ಗ್ರೇವಿ ಸವಿಯಲು ಸಿದ್ದವಾಗುತ್ತದೆ. ಇದನ್ನು ದೋಸೆ, ಇಡ್ಲಿ ಸೇರಿದಂತೆ ಅನ್ನದ ಜೊತೆಯೂ ಸವಿಯಬಹುದು.



Click it and Unblock the Notifications
