Latest Updates
-
ಆಷಾಢ ಅಮಾವಾಸ್ಯೆ: ಉಪವಾಸದ ದಿನ ಸುಸ್ತಾಗದಂತೆ ಇರಲು ಈ 7 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮಳೆಗಾಲದ ಮದುವೆ: ನಿಮ್ಮ ಸಂಭ್ರಮಕ್ಕೆ ಅಡ್ಡಿಯಾಗದಂತೆ ಪ್ಲಾನ್ ಮಾಡುವುದು ಹೇಗೆ? -
ಮುಂಗಾರು ಮಳೆ: ನಿಮ್ಮ ಬಾಲ್ಕನಿ ಮತ್ತು ಎಸಿ ಸುರಕ್ಷಿತವೇ? ಈ 10 ನಿಮಿಷದ ಕೆಲಸ ಜೀವ ಉಳಿಸಬಹುದು! -
ಮಳೆಗಾಲದಲ್ಲಿ ಆರೋಗ್ಯದ ರಕ್ಷಣೆ: ಕೇವಲ 20 ರೂಪಾಯಿಯಲ್ಲಿ ಸಿಗುವ ಈ ಆಹಾರಗಳು ನಿಮ್ಮನ್ನು ರೋಗಗಳಿಂದ ಕಾಪಾಡುತ್ತವೆ! -
ಪುರಿ ರಥಯಾತ್ರೆ 2026: ಭಕ್ತರೇ ಎಚ್ಚರ! ಸುಗಮ ದರ್ಶನಕ್ಕೆ ಇಲ್ಲಿವೆ ಪ್ರಮುಖ ಟಿಪ್ಸ್ -
ಭಾರತ-ಇಂಗ್ಲೆಂಡ್ ಪಂದ್ಯ ವೀಕ್ಷಿಸುವಾಗ ಬೆನ್ನು ನೋವು ಕಾಡುತ್ತಿದೆಯೇ? ಈ 8 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್!
ಆರೋಗ್ಯದ ಕಣಜ ಈ ಅಳವಿ ಪಾಯಸ: ಕೈ ಕಾಲು ನೋವು ಮಾಯ, ಮಲಗಿದ ತಕ್ಷಣ ನಿದ್ರೆ ಬರೋದು ಫಿಕ್ಸ್..!
ಕೈ ಕಾಲು ನೋವು, ಮೂಳೆ ನೋವಿನಂತರ ಸಣ್ಣ ಪುಟ್ಟ ಸಮಸ್ಯೆಗಳನ್ನು ನೀವು ಕೂಡ ಅನುಭವಿಸಿರುತ್ತೀರಿ. ಹಾಗೆ ಇದರಿಂದ ಪರಹಾರ ಪಡೆಯಲು ಹಲವು ರೀತಿಯ ಉಪಾಯಗಳನ್ನು ಕೂಡ ಮಾಡಿರುತ್ತೀರಿ. ಆದ್ರೆ ನಾವಿಂದು ಮನೆಯಲ್ಲೇ ನಿಮಗೆ ಅದ್ಭುತ ಪರಿಹಾರ ಮಾಡಿಕೊಳ್ಳುವ ಕುರಿತು ಹೇಳಲಿದ್ದೇವೆ. ಅದ್ರಲ್ಲೂ ಅಳವಿ ಬೀಜ ನಿಮ್ಮ ಆರೋಗ್ಯದ ಕಣಜವಾಗಿರಲಿದೆ.
ಅಳವಿ ಬೀಜದಲ್ಲಿನ ಕಬ್ಬಿಣ, ಪೈಬರ್ , ಪೋಲೆಟ್ ವಿಟಮಿನ್ ಎ, ಸಿ, ಇ ಮತ್ತು ಪ್ರೊಟೀನ್ ಸಮೃದ್ಧವಾಗಿವೆ. ಇದು ನಿಮ್ಮ ಆರೋಗ್ಯದ ದೃಷ್ಟಿಯಿಂದ ಬಹಳ ಉತ್ತಮ ಅಂಶಗಳಾಗಿವೆ. ಹಾಗೆ ಇದು ನಿಮ್ಮ ಮೂಳೆಯ ಆರೋಗ್ಯಕ್ಕೆ ಬಹಳ ಉತ್ತಮವಾಗಿದೆ. ಆದ್ರೆ ಉತ್ತರ ಕರ್ನಾಟಕ ಭಾಗದಲ್ಲಿ ಈ ಅಳವಿ ಬೀಜದ ಪಾಯಸ ಬಹಳ ಫೇಮಸ್. ಹೀಗಾಗಿ ನಾವಿಂದು ಈ ಅಳವಿ ಬೀಜದ ಪಾಯಸ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ.

ಅದ್ರಲ್ಲೂ ವಿಶೇಷ ಸಮಯದಲ್ಲಿ ನೀವು ಈ ಅಳವಿ ಪಾಯಸ ಮಾಡಿ ಸವಿದು ನೋಡಿ. ಇದು ರುಚಿಗೂ ಸೈ ಹಾಗೆ ನಿಮ್ಮ ಆರೋಗ್ಯದ ದೃಷ್ಟಿಯಲ್ಲೂ ಬಹಳ ಉತ್ತಮವಾಗಿದೆ. ಕೈ ಕಾಲು ನೋವು, ಮೂಳೆ ನೋವಿನಂತಹ ಸಮಸ್ಯೆ ಇದ್ದರೆ ಈ ಅಳವಿ ಬೀಜದ ಪಾಯಸ ನಿಮಗೆ ನೆರವಾಗಲಿದೆ.
ಹಾಗಾದ್ರೆ ಅಳವಿ ಬೀಜದ ಪಾಯಸ ಮಾಡೋದು ಹೇಗೆ? ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಅಳವಿ ಬೀಜದ ಪಾಯಸ ಮಾಡಲು ಬೇಕಾಗುವ ವಸ್ತುಗಳು
- ಅಳವಿ ಬೀಜ
- ತುಪ್ಪ
- ಹಾಲು
- ಬೆಲ್ಲದ ಪುಡಿ
- ಡ್ರೈ ಫ್ರೂಟ್ಸ್
ಅಳವಿ ಬೀಜದ ಪಾಯಸ ಮಾಡುವ ವಿಧಾನವೇನು?
ಅಳವಿ ಬೀಜವನ್ನು ಒಂದು ಬೌಲ್‌ಗೆ ಹಾಕಿ ಅದಕ್ಕೆ ಸ್ವಲ್ಪ ನೀರು ಹಾಕಿಕೊಂಡು ನೆನೆಯಲು ಬಿಡಿ ಸುಮಾರು 10 ನಿಮಿಷ ನೆನೆಸಿದರೆ ಸಾಕಾಗುತ್ತದೆ. ಈಗ ಒಂದು ಪಾತ್ರೆಗೆ 2 ಕಪ್ ನೀರು ತೆಗೆದುಕೊಂಡು ಕಾಯಲು ಬಿಡಿ. ಈಗ ಕುದಿಬರುತ್ತಿರುವ ನೀರಿಗೆ ಈ ನೆನೆಸಿಟ್ಟ ಅಳವಿ ಬೀಜವನ್ನು ಹಾಕಿಕೊಂಡು ತಿರುಗಿಸಿಕೊಳ್ಳಿ.
ಹಾಗೆ ಅರ್ಧ ಕಪ್ ಬೆಲ್ಲದ ಪುಡಿ ಸಹ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಹಾಗೆ ಚೆನ್ನಾಗಿ ಕುದಿಬರಲು ಬಿಡಿ. ಇದರಲ್ಲಿನ ಒಮೆಗಾ ಹಾಗೂ ಫ್ಯಾಟ್ ಬಹಳ ಉತ್ತಮ. ಇದಕ್ಕೆ ಸ್ಪೂನ್ ತುಪ್ಪ ಸೇರಿಸಿಕೊಳ್ಳಿ. ನಂತರ ಕುದಿಬರಲು ಬಿಡಿ. ಆಗಾಗ ಮಿಕ್ಸ್ ಮಾಡುತ್ತಾ ಇರಿ. 2 ನಿಮಿಷ ಬಿಟ್ಟು ಒಲೆ ಆಫ್ ಮಾಡಿ ಸ್ವಲ್ಪ ತಣ್ಣಗಾಗಲು ಬಿಡಿ.
ಈಗ 1 ಕಪ್ ಹಾಲನ್ನು ಹಾಕಿಕೊಳ್ಳಿ. ಹಾಲು ಕಾಯಿಸಿಕೊಂಡು ಇದಕ್ಕೆ ಹಾಕುತ್ತಾ ಮಿಕ್ಸ್ ಮಾಡುತ್ತಾ ಇರಿ. ಮಿಕ್ಸ್ ಮಾಡುವುದನ್ನು ನಿಲ್ಲಿಸಬೇಡಿ. ಹಾಲು ಹಾಕಿದ ಬಳಿಕ ಮಿಶ್ರಣ ಮಾಡಿ. ಈಗ ನಿಮ್ಮ ಮುಂದೆ ಅಳವಿ ಪಾಯಸ ಸಿದ್ದವಾಗುತ್ತೆ, ಬೇಕಿದ್ದರೆ ಇದಕ್ಕೆ ನೀವು ಏಲಕ್ಕಿ ಪುಡಿ ಹಾಕಿಕೊಳ್ಳಬಹುದು. ಹಾಗೆ ತುಪ್ಪದಲ್ಲಿ ಕರಿದುಕೊಂಡಿರುವ ದ್ರಾಕ್ಷಿ ಗೋಡಂಬಿ ಸಹ ಹಾಕಿಕೊಂಡು ಸವಿಯಲು ನೀಡಬಹುದು.
ಇದು ನಿಮ್ಮ ಆರೋಗ್ಯದ ದೃಷ್ಟಿಯಿಂದ ಬಹಳ ಉತ್ತಮ. ಸೊಂಟ ನೋವಿಗೆ ಇದು ಹೇಳಿಮಾಡಿಸಿದ ಮನೆಮದ್ದು. ನೀವು ಸಹ ಇದನ್ನು ಮನೆಯಲ್ಲಿ ಮಾಡಿ ಸವಿದು ನೋಡಿ. ನಿಮ್ಮ ಆರೋಗ್ಯಕ್ಕೂ ಇದು ಬಹಳ ಉತ್ತಮವಾಗಿರಲಿದೆ. ಹಾಗೆ ನೋವುಗಳಿಂದ ಸುಲಭವಾಗಿ ಮುಕ್ತಿ ಪಡೆಯಬಹುದು. ಈ ಬೀಜದಲ್ಲಿನ ಪೈಬರ್ ಅಂಶವು ನಿಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸಲು ಕೂಡ ನೆರವಾಗಲಿದೆ.



Click it and Unblock the Notifications