Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಮಕರ ಸಂಕ್ರಾಂತಿ: ಸಂಕ್ರಾಂತಿಗೆ ಸವಿಯಿರಿ ಎಳ್ಳು ಬೆಲ್ಲದ ಹೋಳಿಗೆ
ಜನವರಿ 15ಕ್ಕೆ ಮಕರ ಸಂಕ್ರಾಂತಿ, ಮಕರ ಸಂಕ್ರಾಂತಿ ಹಿಂದೂ ಧರ್ಮದಲ್ಲಿ ತುಂಬಾನೇ ಪ್ರಮುಖವಾದ ದಿನವಾಗಿದೆ, ಏಕೆಂದರೆ ಅಂದಿನಿಂದ ಉತ್ತರಾಯಣ ಕಾಲ ಪ್ರಾರಂಭ. ಉತ್ತರಾಯಣ ಸಮಯವನ್ನು ತುಂಬಾ ಶುಭ ಸಮಯ ಎಂದು ಪರಿಗಣಿಸಲಾಗಿದೆ, ಈ ಅವಧಿ ಶುಭ ಕಾರ್ಯಗಳನ್ನು ಮಾಡಲು ಒಳ್ಳೆಯ ಸಮಯ ಎಂದು ಹೇಳಲಾಗುವುದು.
ಮಕರ ಸಂಕ್ರಾಂತಿಗೆ ಎಳ್ಳು ಬೆಲ್ಲ ಸವಿದು ಹಬ್ಬವನ್ನು ಆಚರಿಸುತ್ತೇವೆ. ನೆಲಗಡಲೆ, ಎಳ್ಳು, ಬೆಲ್ಲ, ಕಬ್ಬು ಇವುಗಳನ್ನು ಇತರರಿಗೆ ಹಂಚಿ ಶುಭ ಕೋರುತ್ತೇವೆ, ಈ ದಿನ ಎಳ್ಳು- ಬೆಲ್ಲಕ್ಕೆ ತುಂಬಾನೇ ಪ್ರಾಮುಖ್ಯತೆ, ಎಳ್ಳು ಬೆಲ್ಲ ಬಳಸಿ ಹೋಳಿಗೆ ಮಾಡುವ ರೆಸಿಪಿ ಇಲ್ಲಿ ನೀಡಲಾಗಿದೆ:

ಬೇಕಾಗುವ ಸಾಮಗ್ರಿ
1 ಕಪ್ ಗೋಧಿ ಹಿಟ್ಟು
ಸ್ವಲ್ಪ ಉಪ್ಪು
1 ಚಮಚ ಎಣ್ಣೆ
1/4 ಕಪ್ ಕಪ್ಪು ಎಳ್ಳು
ಬೆಲ್ಲದ ಪುಡಿ
ತುಪ್ಪ
ಮಾಡುವ ವಿಧಾನ
* ಗೋಧಿ ಹಿಟ್ಟು ತೆಗೆದು ಅದಕ್ಕಿ ಚಿಟಿಕೆಯಷ್ಟು ಉಪ್ಪು ಹಾಕಿ ಅದಕ್ಕೆ ಸ್ವಲ್ಪ
ನೀರು ಹಾಕಿ ಚೆನ್ನಾಗಿ ಕಲಿಸಿ. ಹಿಟ್ಟು ಅಂಟು ಅಂಟಾಗಿ ಇರಬಾರದು, ನಂತರ ಪ್ಯಾನ್
ಸ್ವಲ್ಪ ಎಣ್ಣೆ ಹಾಕಿ ಅದರಲ್ಲಿ ಹಿಟ್ಟನ್ನು ಹಾಕಿ ಅದನ್ನು ಒಂದು ಬದಿಯಲ್ಲಿ
ಇಡಿ.
* ಈಗ ಮತ್ತೊಂದು ಪ್ಯಾನ್‌ಗೆ ಎಳ್ಳು ಹಾಕಿ ಹುರಿಯಿರಿ, ನಂತರ ತಣ್ಣಗಾಗಲು ಒಂದು
ತಟ್ಟೆಯಲ್ಲಿ ಹಾಕಿಡಿ.
* ನಂತರ ಬೆಲ್ಲದ ಪುಡಿ ಹಾಗೂ ರೋಸ್ಟ್ ಮಾಡಿ ಎಳ್ಳು ಅನ್ನು ಚೆನ್ನಾಗಿ ಪುಡಿ
ಮಾಡಿ. ಮಿಕ್ಸಿಯನ್ನು ತುಂಬಾ ಸ್ಪೀಡ್‌ನಲ್ಲಿ ತಿರುಗಿಸಬೇಡಿ, ಲಾಸ್ಟ್ ಸ್ಪೀಡ್
ಮೋಡ್‌ನಲ್ಲಿಟ್ಟರೆ ಮಿಶ್ರಣ ಅಂಟು ಅಂಟಾಗಬಹುದು
* ಈಗ ಕಲೆಸಿಟ್ಟ ಗೋಧಿ ಹಿಟ್ಟಿನಿಂದ ಚಿಕ್ಕ ಉಂಡೆ ಮಾಡಿ ಅದರೊಳಗಡೆ ಈ ಪುಡಿ ಹಾಕಿ
ನಂತರ ಚಪಾತಿಗೆ ತಟ್ಟುವ ರೀತಿಯಲ್ಲಿ ತಟ್ಟಿ ತವಾಗೆ ಹಾಕಿ ಅದರ ಮೇಲೆ ತುಪ್ಪ
ಸವರುತ್ತಾ ಬೇಯಿಸಿ, ನಂತರ ತುಪ್ಪದ ಜೊತೆ ಸವಿಯಲು ನೀಡಿ. ಬೆಲ್ಲದ ಮಿಶ್ರಣಕ್ಕೆ
ತೆಂಗಿನ ತುರಿ, ಏಲಕ್ಕಿ, ಡ್ರೈ ಫ್ರೂಟ್ಸ್ ಕೂಡ ಸೇರಿಸಬಹುದು.
ಇತರ ಸಲಹೆ
ಬೆಲ್ಲವನ್ನು ಮಿಕ್ಸಿಯಲ್ಲಿ ರುಬ್ಬದೆ ಕಲ್ಲಿಂದನಿಂದಲೇ ಜಜ್ಜಿ, ಅದನ್ನು ಎಳ್ಳು
ಪುಡಿ ಜೊತೆ ಸೇರಿಸಿ ಮಿಕ್ಸ್ ಮಾಡಬಹುದು.
ಮಕರ ಸಂಕ್ರಾಂತಿಗೆ ಎಳ್ಳು- ಬೆಲ್ಲ ತಿನ್ನುವುದರಿಂದ ದೊರೆಯುವ
ಪ್ರಯೋಜನಗಳು:
* ಮಕರ ಸಂಕ್ರಾಂತಿ ಬರುವುದು ಜನವರಿ ತಿಂಗಳಿನಲ್ಲಿ, ಚಳಿಗಾಲದ ಸಮಯ. ಚಳಿಗಾಲದಲ್ಲಿ
ಎಳ್ಳು ಬೆಲ್ಲ ತಿನ್ನುವುದರಿಂದ ಮೈ ಬೆಚ್ಚಗಿಡಲು ಸಹಾಯ ಮಾಡುತ್ತದೆ. ಅಲ್ಲದೆ
ಎಳ್ಳು ಬೆಲ್ಲ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ, ಆದ್ದರಿಂದ
ಎಳ್ಳುಬೆಲ್ಲವನ್ನು ಮಕರ ಸಂಕ್ರಾಂತಿಗೆ ಸವಿಯುತ್ತಾರೆ.
ದೇಹವನ್ನು ಡಿಟಾಕ್ಸ್ ಮಾಡುತ್ತದೆ ಅಂದರೆ
ಶುದ್ಧೀಕರಿಸುತ್ತದೆ
ದೇಹದಲ್ಲಿರುವ ರಾಸಾಯನಿಕಗಳನ್ನು ಹೊರ ಹಾಕುವ ಗುಣ ಈ ಎಳ್ಳು- ಬೆಲ್ಲದಲ್ಲಿದೆ, ಇದು
ಲಿವರ್‌ನ ಶುದ್ಧ ಮಾಡುತ್ತದೆ, ಚಯಪಚಯ ಕ್ರಿಯೆಗೆ ತುಂಬಾನೇ ಒಳ್ಳೆಯದು,
ಚಳಿಗಾಲದಲ್ಲಿ ರಕ್ತಸಂಚಾರ ಸರಾಗವಾಗಿ ನಡೆಯಲು ಈ ಎಳ್ಳು ಬೆಲ್ಲ ಸಹಕಾರಿ.



Click it and Unblock the Notifications
