Latest Updates
-
ಮುಂಬೈನಲ್ಲಿ 10% ನೀರು ಕಡಿತ: ನೀರಿನ ಅಭಾವ ಎದುರಿಸಲು ಮತ್ತು ಉಳಿತಾಯ ಮಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಹಬ್ಬದ ಸಿಹಿ ಖರೀದಿಸುವ ಮುನ್ನ ಎಚ್ಚರ! FSSAI ದಾಳಿ: ಕಳಪೆ ಖೋವಾ, ಪನ್ನೀರ್ ಪತ್ತೆ ಹೇಗೆ? -
ಭಾರತ vs ಪಾಕಿಸ್ತಾನ ಏಷ್ಯನ್ ಗೇಮ್ಸ್ ಫೈನಲ್: ಹೈ-ವೋಲ್ಟೇಜ್ ಕದನಕ್ಕೆ ಸಜ್ಜಾಗಿ, ಲೈವ್ ವೀಕ್ಷಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಮುಂಬೈನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಆರೋಗ್ಯಕ್ಕೆ ಕುತ್ತು! -
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ!
2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
ಮಜ್ಜಿಗೆ ಸಾರು ಬೇಸಿಗೆಯಲ್ಲಿ ಚೆನ್ನಾಗಿ ಇರುತ್ತದೆ, ಈ ಹುಳಿ ಮಿಶ್ರಿತ ಸಾರು ಅನ್ನದ ಜೊತೆ ತಿಂದರೆ ನಮಗೆ ಗೊತ್ತಿಲ್ಲದೆ ಸ್ವಲ್ಪ ಅನ್ನ ಅಧಿಕವೇ ತಿನ್ನುತ್ತೇವೆ, ಅಷ್ಟೊಂದು ರುಚಿಯಾಗಿರುತ್ತದೆ.

ಕಾಯಿ ಹಾಕದೆ ಮಾಡುವ ಸಾರು
ಬೇಕಾಗುವ ಸಾಮಗ್ರಿ
ಮೊಸರು 1/2 ಲೀಟರ್
ನೀರು 1/2 ಲೀಟರ್
ಸ್ವಲ್ಪ ಬೆಳ್ಳುಳ್ಳಿ
ಸ್ವಲ್ಪ ಕರಿಬೇವು
ಒಣ ಮೆಣಸು 3-4
ಹಸಿ ಮೆಣಸು 2'
ಜೀರಿಗೆ 1/ 2 ಚಮಚ
ಮೆಂತೆ 1/4 ಚಮಚ
ಸಾಸಿವೆ 1/2 ಚಮಚ
ಎಣ್ಣೆ 2 ಚಮಚ
ಅರಿಶಿಣ ಪುಡಿ
ಉಪ್ಪು
ಈರುಳ್ಳಿ
ನೀವು ಮಜ್ಜಿಗೆ ಸಾರನ್ನು 2 ರೀತಿಯಲ್ಲಿ ಮಾಡಬಹುದು, ತೆಂಗಿನ ಕಾಯಿ ಹಾಕಬಹುದು, ತೆಂಗಿನ ಕಾಯಿ ಹಾಕದೆಯೂ ಮಾಡಬಹುದು, ಈ ಎರಡೂ ರೆಸಿಪಿ ನೀಡಲಾಗಿದೆ ನೋಡಿ
ಪಾತ್ರೆಗೆ ಎಣ್ಣೆ ಹಾಕಿ ಬಿಡಿ, ನಂತರ ಸಾಸಿವೆ ಹಾಕಿ
ಸಾಸಿವೆ ಚಟ್‌ಪಟ್ ಶಬ್ದ ಮಾಡುವಾಗ ಜೀರಿಗೆ ಹಾಕಿ, ನಂತರ ಮೆಂತೆ ಹಾಕಿ, ಒಣ ಮೆಣಸು
ಮುರಿದು ಹಾಕಿ, ಕರಿಬೇವಿನ ಎಲೆ ಹಾಕಿ, ಬಳಿಕ ಹಸಿಮೆಣಸು, ಈರುಳ್ಳಿ , ಶುಂಠಿ ಹಾಕಿ
ಹಾಕಿ ಫ್ರೈ ಮಾಡಿ, ರುಚಿಗೆ ತಕ್ಕ ಉಪ್ಪು, ಸ್ವಲ್ಪ ಅರಿಶಿಣ ಪುಡಿ ಹಾಕಿ ಮಿಕ್ಸ್
ಮಾಡಿ 2 ನಿಮಿಷ ಬಿಟ್ಟು ಉರಿ ಆಫ್ ಮಾಡಿ.
ಈಗ ಮೊಸರಿಗೆ ನೀರು, 1 ಹಸಿ ಮೆಣಸು ಹಾಕಿ ಮಿಕ್ಸಿಯಲ್ಲಿ 2 ರೌಂಡ್
ತಿರುಗಿಸಿ.
ನಂತರ ಫ್ರೈ ಮಾಡಿಟ್ಟ ಈರುಳ್ಳಿ, ಮಸಾಲೆಯ ಉರಿ ಸ್ವಲ್ಪ ಕಡಿಮೆಯಾದಾಗ ಮಜ್ಜಿಗೆ
ಹಾಕಿ ಮಿಕ್ಸ್ ಮಾಡಿ.
ಇಷ್ಟು ಮಾಡಿದರೆ ಮಜ್ಜಿಗೆ ಸಾರು ರೆಡಿ. ಇದನ್ನು ಹಾಗೆಯೇ ಕುಡಿಯಲು ಕೂಡ ತುಂಬಾ ಚೆನ್ನಾಗಿರುತ್ತದೆ.
ತೆಂಗಿನಕಾಯಿ ಹಾಕಿ ಮಾಡುವ ಮಜ್ಜಿಗೆ ಸಾರು
ಮೊಸರು 1/2 ಲೀಟರ್
ನೀರು 1/2 ಲೀಟರ್
ಸ್ವಲ್ಪ ಬೆಳ್ಳುಳ್ಳಿ
ಸ್ವಲ್ಪ ಕರಿಬೇವು
ಒಣ ಮೆಣಸು 3-4
ಹಸಿ ಮೆಣಸು 2'
ಜೀರಿಗೆ 1/ 2 ಚಮಚ
ಮೆಂತೆ 1/4 ಚಮಚ
ಸಾಸಿವೆ 1/2 ಚಮಚ
ಎಣ್ಣೆ 2 ಚಮಚ
ಅರಿಶಿಣ ಪುಡಿ
ಉಪ್ಪು
ಈರುಳ್ಳಿ
ಈ ಸಾಮಗ್ರಿ ಜೊತೆಗೆ 1/2 ಕಪ್ ತೆಂಗಿನತುರಿ ಸೇರಿಸಿ.
ತೆಂಗಿನಕಾಯಿ ಹಾಕಿದ ಮಜ್ಜಿಗೆ ಸಾರು
ತೆಂಗಿನತುರಿಗೆ ನೀವು 1 ಹಸಿ ಮೆಣಸು, ಜೀರಿಗೆ, ಈರುಳ್ಳಿ ಸೇರಿಸಿ
ರುಬ್ಬಿಕೊಳ್ಳಿ
ಅದೇ ಸಮಯದಲ್ಲಿ ಸ್ವಲ್ಪ 1 ಲೋಟ ನೀರಿಗೆ 1 ಹಸಿ ಮೆಣಸು ಎರಡು ಭಾಗವಾಗಿ ಕತ್ತರಿಸಿ
ಹಾಕಿ ಬೇಯಿಸಿ, ಈಗ ಮೆಣಸು ಬೇಯುತ್ತಿರುವ ನೀರಿಗೆ ರುಬ್ಬಿದ ಕಾಯಿ ಪೇಸ್ಟ್ ಹಾಕಿ,
ಅರಿಶಿಣ ಉಪ್ಪು ಸೇರಿಸಿ ಕುದಿಸಿ.
ಇದೇ ಸಮಯದಲ್ಲಿ ಮೊಸರಿಗೆ ನೀರು ಹಾಕಿ ಒಂದೆರಡು ರೌಂಡ್ ರುಬ್ಬಿ
ಈಗ ಸಾರು ಕುದಿಯುವಾಗ ಉರಿ ಆಫ್ ಮಾಡಿ ಸ್ವಲ್ಪ ತಣ್ಣಗಾಗಲು ಬಿಡಿ, ಸ್ಬಲ್ಪವೇ
ಸ್ವಲ್ಪ ಬಿಸಿ ಇರುವಾಗ ರುಬ್ಬಿದ ಮಜ್ಜಿಗೆ ಹಾಕಿ,
'ನಂತರ ಒಗ್ಗರಣೆ ಪಾತ್ರೆಗೆ 2 ಚಮಚ ಎಣ್ಣೆ ಹಾಕಿ, ಅದಕ್ಕೆ ಸಾಸಿವೆ ಹಾಕಿ, ಸಾಸಿವೆ
ಚಟ್ ಪಟ್ ಶಬ್ದ ಮಾಡುವಾಗ ಸ್ವಲ್ಪ ಮೆಂತೆ, ಕರಿಮೇವು, ಒಣ ಮೆಣಸು ಹಾಕಿ ಒಗ್ಗರಣೆ
ಹಾಕಿದರೆ ಮಜ್ಜಿಗೆ ಸಾರು ರೆಡಿ.
ಸಲಹೆ
ಸಾರಿನ ಮಿಶ್ರಣ ಸ್ವಲ್ಪ ಆರಿದ ಮೇಲಷ್ಟೇ ಮಜ್ಜಿಗೆ ಹಾಕಬೇಕು, ಇಲ್ಲದಿದ್ದರೆ
ಮಜ್ಜಿಗೆ ಒಡೆದು ಹೋಗುವುದು, ಸಾರು ಚೆನ್ನಾಗಿ ಆಗಲ್ಲ.
ಬೇಸಿಗೆಗೆ ಹೇಳಿ ಮಾಡಿಸಿದ ಸಾರು ಇದಾಗಿದೆ. ಇದನ್ನು ಅನ್ನದ ಜೊತೆ ತಿನ್ನಬಹುದು, ಲೋಟದಲ್ಲಿ ಹಾಕಿ ಕುಡಿಯಲೂಬಹುದು.



Click it and Unblock the Notifications
