Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಚಿಂತೆ ಬೇಡ.. ಲಂಚ್‌ಗೆ ಏನಪ್ಪಾ ಮಾಡೋದು? ತೆಂಗಿನ ಹಾಲು ಬಳಸಿ ಪಲಾವ್ ಮಾಡಿ.. ಬಿರಿಯಾನಿಗಿಂತ ಸೂಪರ್ ರುಚಿ
ಮಧ್ಯಾಹ್ನದ ಊಟಕ್ಕೆ (ಲಂಚ್‌ಗೆ) ಏನಪ್ಪಾ ಮಾಡೋದು ಅಂತ ಚಿಂತೆಯೇ? 10 ನಿಮಿಷದಲ್ಲಿ ಮಾಡಿ ಈ ಸಖತ್ ರೆಸಿಪಿ. ಇದನ್ನು ತಿಂದ ಮೇಲೆ ಬಿರಿಯಾನಿ ರುಚಿಯೂ ಮರೆತುಹೋಗುತ್ತೆ.. ಅಷ್ಟು ಸಾಫ್ಟ್ ಮತ್ತು ಟೇಸ್ಟಿ ಈ ಪಲಾವ್. ಹೌದು, ಮಧ್ಯಾಹ್ನದ ಊಟದಲ್ಲಿ ಹೊಸತನವನ್ನು ಬಯಸುವವರಿಗೆ ತೆಂಗಿನ ಹಾಲಿನ ಪಲಾವ್ (Coconut Milk Pulao) ಒಂದು ಅದ್ಭುತ ಆಯ್ಕೆ.
ಪ್ರತಿದಿನದ ಅದೇ ಸಾಂಬಾರ್, ಪಲ್ಯದಿಂದ ಬೇಸರಗೊಂಡಿದ್ದರೆ ಅಥವಾ ವಿಶೇಷ ಸಂದರ್ಭಗಳಲ್ಲಿ ಮನೆಯವರನ್ನು ಆಹ್ಲಾದಗೊಳಿಸಲು ಬಯಸಿದರೆ, ತೆಂಗಿನ ಹಾಲಿನ ಪಲಾವ್ ಪರಿಪೂರ್ಣ. ತೆಂಗಿನ ಹಾಲಿನ ನೈಸರ್ಗಿಕ ಸಿಹಿ ಮತ್ತು ಆಯ್ಕೆ ಮಾಡಿದ ಮಸಾಲೆಗಳ ಸುವಾಸನೆ ಮೇಳೈಸಿದ ಈ ಪುಲಾವ್ ಕೇವಲ ಸ್ವಾದಿಷ್ಟವಷ್ಟೇ ಅಲ್ಲ, ಆರೋಗ್ಯಕರವೂ ಹೌದು. ಈ ವಿಶಿಷ್ಟ ಪುಲಾವ್ ತಯಾರಿಸುವ ವಿಧಾನವನ್ನು (Coconut Milk Pulao Recipe) ಈ ಲೇಖನದಲ್ಲಿ ತಿಳಿಸಲಾಗಿದೆ.
ಅತಿಥಿ ಸತ್ಕಾರಕ್ಕೆ ಅತ್ಯುತ್ತಮ ಆಯ್ಕೆ
ನಾವು ಸಾಮಾನ್ಯವಾಗಿ ತೆಂಗಿನಕಾಯಿಯಿಂದ ತಯಾರಿಸಿದ ಚಟ್ನಿ, ಲಡ್ಡು ಅಥವಾ ಪಾಯಸವನ್ನು ಸವಿದಿರುತ್ತೇವೆ. ಆದರೆ, ಅಕ್ಕಿ ಖಾದ್ಯಗಳಿಗಾಗಿ ತೆಂಗಿನ ಹಾಲನ್ನು ಬಳಸುವುದು ಒಂದು ವಿಭಿನ್ನ ಅನುಭವ. ತೆಂಗಿನ ಹಾಲಿನಿಂದ ಮಾಡಿದ ಪುಲಾವ್ ವಿಶಿಷ್ಟ ರುಚಿಯನ್ನು ನೀಡುತ್ತದೆ. ಇದು ದಕ್ಷಿಣ ಭಾರತದ ಕರಾವಳಿ ತೀರದ ಪ್ರದೇಶಗಳಲ್ಲಿ ಅತ್ಯಂತ ಜನಪ್ರಿಯ. ನೀರಿನ ಬದಲಿಗೆ ತೆಂಗಿನ ಹಾಲನ್ನು ಬಳಸುವುದರಿಂದ ಅನ್ನಕ್ಕೆ ಹೆಚ್ಚು ಮೃದುತ್ವ ಮತ್ತು ಅದ್ಭುತವಾದ ನೈಸರ್ಗಿಕ ಘಮ ಬರುತ್ತದೆ. ಅತಿಥಿ ಸತ್ಕಾರಕ್ಕೆ ಇದು ಅತ್ಯುತ್ತಮ ಆಯ್ಕೆ.
ಈ ಪಲಾವ್ ತಯಾರಿಸಲು ಬೇಕಾಗುವ ಪದಾರ್ಥಗಳು
• ಬಾಸ್ಮತಿ ಅಕ್ಕಿ
• ತೆಂಗಿನ ಹಾಲು
• ಗೋಡಂಬಿ
• ಒಣ ದ್ರಾಕ್ಷಿ
• ತುಪ್ಪ
• ಪಲಾವ್ ಎಲೆ
• ಚಕ್ಕೆ
• ಲವಂಗ
• ಏಲಕ್ಕಿ
• ಜೀರಿಗೆ
• ಸಕ್ಕರೆ
• ಕೊತ್ತಂಬರಿ ಸೊಪ್ಪು
• ಉಪ್ಪು
ಈ ಪಲಾವ್ ತಯಾರಿಸುವ ವಿಧಾನ
- ಮೊದಲಿಗೆ, ಎರಡು ಕಪ್ ಬಾಸ್ಮತಿ ಅಕ್ಕಿಯನ್ನು ತೊಳೆಯಿರಿ. ಇದನ್ನು ಸುಮಾರು ಹದಿನೈದು ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿಡಿ.
- ನಂತರ ನೀರನ್ನು ಸಂಪೂರ್ಣವಾಗಿ ಸೋಸಿ ಅಕ್ಕಿಯನ್ನು ಪಕ್ಕಕ್ಕೆ ತೆಗೆದಿಟ್ಟುಕೊಳ್ಳಿ. ಇದು ಅನ್ನ ಮೃದುವಾಗಿ ಬೇಯಲು ಸಹಾಯ ಮಾಡುತ್ತದೆ.
- ದಪ್ಪ ತಳದ ಪಾತ್ರೆ ಅಥವಾ ಕುಕ್ಕರ್‌ಗೆ ಮೂರು ಚಮಚ ತುಪ್ಪ ಹಾಕಿ ಬಿಸಿ ಮಾಡಿ.
- ತುಪ್ಪ ಕಾದ ನಂತರ, ಗೋಡಂಬಿ ಮತ್ತು ಒಣ ದ್ರಾಕ್ಷಿಯನ್ನು ಹಾಕಿ ಚಿನ್ನದ ಕಂದು ಬಣ್ಣ ಬರುವವರೆಗೆ ಹುರಿಯಿರಿ. ಹುರಿದ ಪದಾರ್ಥಗಳನ್ನು ಒಂದು ತಟ್ಟೆಗೆ ತೆಗೆದಿಟ್ಟುಕೊಳ್ಳಿ.
- ಅದೇ ಪಾತ್ರೆಯಲ್ಲಿ ಉಳಿದಿರುವ ತುಪ್ಪಕ್ಕೆ ಜೀರಿಗೆ, ಲವಂಗ, ಏಲಕ್ಕಿ, ಪಲಾವ್ ಎಲೆ ಮತ್ತು ಚಕ್ಕೆಯನ್ನು ಸೇರಿಸಿ ಒಗ್ಗರಣೆ ಮಾಡಿ.
- ಈಗ ಪಾತ್ರೆಗೆ ತೆಂಗಿನ ಹಾಲನ್ನು ಸೇರಿಸಿ, ಉರಿಯನ್ನು ಮಧ್ಯಮಕ್ಕೆ ಇರಿಸಿ. ಹಾಲು ಕುದಿಯಲು ಪ್ರಾರಂಭಿಸಿದಾಗ, ಅದಕ್ಕೆ ನೆನೆಸಿಟ್ಟ ಬಾಸ್ಮತಿ ಅಕ್ಕಿಯನ್ನು ಹಾಕಿ ನಿಧಾನವಾಗಿ ಮಿಕ್ಸ್ ಮಾಡಿ.
- ಅಕ್ಕಿ ಸೇರಿಸಿದ ನಂತರ ರುಚಿಗೆ ತಕ್ಕಷ್ಟು ಉಪ್ಪು ಮತ್ತು ರುಚಿಯನ್ನು ಸಮತೋಲನಗೊಳಿಸಲು ಒಂದು ಚಮಚ ಸಕ್ಕರೆ ಹಾಕಿ. ಪಾತ್ರೆಯ ಮುಚ್ಚಳವನ್ನು ಮುಚ್ಚಿ, ಕಡಿಮೆ ಉರಿಯಲ್ಲಿ ಪಲಾವನ್ನು ಬೇಯಿಸಿ.
- ಮದ್ಯದಲ್ಲಿ ಒಮ್ಮೆ ಅಕ್ಕಿ ಮುರಿಯದಂತೆ ಮೃದುವಾಗಿ ಕಲಕಿ. ಅಕ್ಕಿಯು ತೆಂಗಿನ ಹಾಲನ್ನು ಸಂಪೂರ್ಣವಾಗಿ ಹೀರಿಕೊಂಡು ಮೃದುವಾಗುವವರೆಗೆ ಬೇಯಿಸಿ.
- ಅನ್ನ ಸಂಪೂರ್ಣವಾಗಿ ಬೆಂದ ನಂತರ, ಗ್ಯಾಸ್ ಆಫ್ ಮಾಡಿ. ಇದರ ಮೇಲೆ ನೀವು ಮೊದಲೇ ಹುರಿದಿಟ್ಟ ಗೋಡಂಬಿ, ಒಣ ದ್ರಾಕ್ಷಿ ಮತ್ತು ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಹರಡಿ.
- ಇಷ್ಟವಿದ್ದರೆ, ತಾಜಾ ತೆಂಗಿನ ತುರಿಯನ್ನು ಕೂಡ ಸೇರಿಸಬಹುದು. ಎಲ್ಲವನ್ನೂ ಮಿಶ್ರಣ ಮಾಡಿದರೆ ಘಮಘಮಿಸುವ ತೆಂಗಿನ ಹಾಲಿನ ಪುಲಾವ್ ಸಿದ್ಧ.
- ಬಿಸಿ ಬಿಸಿಯಾದ ತೆಂಗಿನ ಹಾಲಿನ ಪಲಾವನ್ನು ವೆಜ್ ಕುರ್ಮಾ, ಆಲೂಗಡ್ಡೆ ಗ್ರೇವಿ, ಅಥವಾ ಸರಳ ಈರುಳ್ಳಿ ರೈತಾದೊಂದಿಗೆ ಸವಿಯಬಹುದು.



Click it and Unblock the Notifications

