Latest Updates
-
ಆರ್ಬಿಐ ರೆಪೋ ದರ ನಿರ್ಧಾರ: ನಿಮ್ಮ ಇಎಂಐ ಮೇಲೆ ಬರೆ ಬೀಳುತ್ತಾ? ಇಲ್ಲಿದೆ ಲೆಕ್ಕಾಚಾರ -
ದೆಹಲಿ-ಎನ್ಸಿಆರ್ ಭೂಕಂಪನ: ಆತಂಕ ಬೇಡ, ಸುರಕ್ಷಿತವಾಗಿರಲು ಈ ತಕ್ಷಣದ ಕ್ರಮಗಳನ್ನು ಪಾಲಿಸಿ -
IND vs WI T20 ಮ್ಯಾಚ್ ನೋಡುವಾಗ ಸಂಗಾತಿಯೊಂದಿಗೆ ಜಗಳವಾಡ್ತೀರಾ? ಈ ಸಿಂಪಲ್ ಪ್ಲಾನ್ ಟ್ರೈ ಮಾಡಿ! -
ಇಂದೇ ಎಚ್ಚರ! ದೆಹಲಿ-ಎನ್ಸಿಆರ್ನಲ್ಲಿ ಭಾರಿ ಮಳೆ, ಸಿಡಿಲು: ನಿಮ್ಮ ಸುರಕ್ಷತೆಗಾಗಿ ಈ 30 ನಿಮಿಷಗಳ ಚೆಕ್ಲಿಸ್ಟ್ ಪಾಲಿಸಿ -
ಎವರೆಸ್ಟ್ ಜೀರಿಗೆ ಪುಡಿ ಬಳಸುತ್ತಿದ್ದೀರಾ? ತಕ್ಷಣ ಈ ಬ್ಯಾಚ್ ನಂಬರ್ ಚೆಕ್ ಮಾಡಿ, ಇಲ್ಲದಿದ್ದರೆ ಅಪಾಯ! -
ಹುಟ್ಟುಹಬ್ಬದ ದಿನವೇ ಫ್ಯಾನ್ಸ್ಗೆ ಭರ್ಜರಿ ಗಿಫ್ಟ್ ಕೊಟ್ಟ ಧ್ರುವ ಸರ್ಜಾ: ಹೊಸ ಸಿನಿಮಾ 'ಕೆಮಿಸ್ಟ್ರಿ' ಅನೌನ್ಸ್! -
ಚೆನ್ನೈ-ಕೊಯಮತ್ತೂರಿನಲ್ಲಿ ಭಾರಿ ಮಳೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಮಾಡಿ ಈ ಸಿಂಪಲ್ ವರ್ಕ್ಔಟ್! -
ಬೆಂಗಳೂರು ಮಳೆ: ಟ್ರಾಫಿಕ್ ಜಾಮ್ ತಪ್ಪಿಸಿ ಸುರಕ್ಷಿತವಾಗಿ ಮನೆ ತಲುಪಲು ಇಲ್ಲಿದೆ ಸ್ಮಾರ್ಟ್ ಟ್ರಾವೆಲ್ ಪ್ಲಾನ್! -
ಡೆಂಗ್ಯೂ ಭೀತಿ: ನಿಮ್ಮ ಬಾಲ್ಕನಿಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಲು 10 ನಿಮಿಷದ ಸಿಂಪಲ್ ಟಿಪ್ಸ್! -
ಮುಂಬೈನಲ್ಲಿ ತೀವ್ರ ಬಿಸಿಲು: IMD ಯಿಂದ ಹಳದಿ ಎಚ್ಚರಿಕೆ; ಆರೋಗ್ಯ ಕಾಪಾಡಿಕೊಳ್ಳಲು ಈ ಮುನ್ನೆಚ್ಚರಿಕೆ ಅಗತ್ಯ!
ಈ ವರ್ಷ ಸ್ವಿಗ್ಗಿಯಲ್ಲಿ ಟಾಪ್ ಆರ್ಡರ್ ಮಾಡಿದ ಫುಡ್‌ಗಳಿವು, ಬಿರಿಯಾನಿಗೆ ಡಿಮ್ಯಾಂಡೆಪ್ಪೋ ಡಿಮ್ಯಾಂಡ್
2022ರ ಕೊನೆಯ ತಿಂಗಳಿನಲ್ಲಿದ್ದೇವೆ, ಇನ್ನೇನು ಕೆಲವೇ ದಿನಗಳಲ್ಲಿ ಈ ವರ್ಷ ಮುಗಿದೇ ಹೋಗಲಿದೆ, 2023ರ ಹೊಸ ಅಧ್ಯಾಯ ನಮ್ಮೆಲ್ಲರ ಬದುಕಿನಲ್ಲಿ ತೆರೆದುಕೊಳ್ಳಲಿದೆ.

ಡಿಸೆಂಬರ್ ತಿಂಗಳಿನಲ್ಲಿ ಈ ವರ್ಷ ಏನೆಲ್ಲಾ ನಡೆಯಿತು, ಜನ ಯಾವ ವಿಷಯಗಳ ಕಡೆ ಹೆಚ್ಚು ಆಸಕ್ತಿ ತೋರಿಸಿದರು ಎಂಬುವುದನ್ನು ಮೆಲುಕುವ ಹಾಕುವ ಪ್ರಯತ್ನದಲ್ಲಿ ಪ್ರಸಿದ್ಧ ಫುಡ್‌ಡೆಲಿವರಿ ಸಂಸ್ಥೆ ಸ್ವಿಗ್ಗಿ ಈ ವರ್ಷ ಸ್ವಿಗ್ಗಿಯಲ್ಲಿ ಜನ ಯಾವ ಆಹಾರಗಳನ್ನು ಅತೀ ಹೆಚ್ಚಾಗಿ ಆರ್ಡರ್ ಮಾಡಿದ್ದಾರೆ ಎಂಬ ಲಿಸ್ಟ್ ಬಿಡುಗಡೆ ಮಾಡಿದರೆ, ಈ ಆಹಾರಗಳನ್ನು ನೀವೂ ಕೂಡ ಆರ್ಡರ್ ಮಾಡಿರುತ್ತೀರಾ ಅಲ್ವಾ?

ಬಿರಿಯಾನಿ
ಸ್ವಿಗ್ಗಿಯಲ್ಲಿ ಜನ ಅತೀ ಹೆಚ್ಚು ಬೇಡಿಕೆಯಿಡುವುದು ಬಿರಿಯಾನಿಗೆ. ಕಳೆದ 7
ವರ್ಷಗಳಿಂದ ಬಿರಿಯಾನಿ ಅಗ್ರ ಸ್ಥಾನದಲ್ಲಿದೆ. ಜನರಿಗೆ ಬಿರಿಯಾನಿ ಮೇಲೆ ಪ್ರೀತಿ
ಎಷ್ಟಿದೆ ಎಂಬುವುದಕ್ಕೆ ಇದೇ ಸಾಕ್ಷಿ. ಸ್ವಿಗ್ಗಿಯಲ್ಲಿ ಒಂದು ನಿಮಿಷಕ್ಕೆ ಸುಮಾರು
137 ಬಿರಿಯಾನಿಗೆ ಆರ್ಡರ್ ಬರುತ್ತದೆಯಂತೆ ಅಂದರೆ ಪ್ರತಿ ಸೆಕೆಂಡ್‌ಗೆ 2.28
ಬಿರಿಯಾನಿಗೆ ಆರ್ಡರ್ ಬರುತ್ತಿದೆ.
ಬಿರಿಯಾನಿಗೆ ಫೇಮಸ್ ಆದವರಿಗೆ ಈ ನ್ಯೂಸ್ ತುಂಬಾನೇ ಖುಷಿ ಕೊಡಬಹುದು. ಈ ವರ್ಷ ಭಾರತೀಯರು ಹೊಸ ಆಹಾರಗಳನ್ನು ಇಷ್ಟಪಟ್ಟಿದ್ದಾರೆ. ಇಟಾಲಿಯನ್, ಕೊರಿಯನ್ ಆಹಾರಗಳಾದ ರವೊಯಿಲಿ, ಬಿಬಿಂಬಾಪ್ ಈ ಫುಡ್‌ಗಳಿಗೂ ಒಳ್ಳೆಯ ಬೇಡಿಕೆ ಇತ್ತು.

ಈ ವರ್ಷ ಸ್ವಿಗ್ಗಿಯಲ್ಲಿ ಆರ್ಡರ್ ಮಾಡಿದ ಆಹಾರಗಳಲ್ಲಿ ಟಾಪ್
ಲಿಸ್ಟ್‌ನಲ್ಲಿರುವ ಆಹಾರಗಳು
* ಚಿಕನ್ ಬಿರಿಯಾನಿ
* ಮಸಾಲೆ ದೋಸೆ
* ಚಿಕನ್ ಫ್ರೈಡ್ ರೈಸ್
* ಪನ್ನೀರ್ ಬಟರ್ ಮಸಾಲ
* ಬಟರ್ ನಾನ್
* ವೆಜ್ ಫ್ರೈಡ್ ರೈಸ್, ವೆಜ್ ಬಿರಿಯಾನಿ, ತಂದೂರಿ ಚಿಕನ್
ಈ ವಿದೇಶಿ ಆಹಾರಗಳಿಗೂ ನಮ್ಮಲ್ಲಿ ತುಂಬಾ ಬೇಡಿಕೆ ಇದೆ ಎಂದು
ಸ್ವಿಗ್ಗಿ ಆರ್ಡರ್ ಲಿಸ್ಟ್ ನೋಡುವಾಗ ತಿಳಿಯುತ್ತದೆ
* ಇಟಾಲಿಯನ್ ಪಾಸ್ತಾ
* ಪಿಜ್ಜಾ
* ಮೆಕ್ಸಿಕಾನ್ ಬೌಲ್
* ಸ್ಪೈಸಿ ರೇಮೆನ್
* ಸುಷಿ
ಸ್ವಿಗ್ಗಿಯಲ್ಲಿ ಟಾಪ್ ಆರ್ಡರ್ ಮಾಡಿದ ಸ್ನ್ಯಾಕ್ಸ್
* ಸಮೋಸಾ
* ಪಾಪ್‌ಕಾರ್ನ್
* ಪಾವ್ ಬಜ್ಜಿ
* ಫ್ರೆಂಚ್ ಫ್ರೈಸ್
* ಗಾರ್ಲಿಕ್ ಬ್ರೆಡ್‌ಸ್ಟಿಕ್
* ಟ್ಯಾಕೋ
* ಕ್ಲಾಸಿಕ್ ಸ್ಟಫ್ಡ್ ಗಾರ್ಲಿಕ್ ಬ್ರೆಡ್, ಮಿಂಗೆಲ್‌ಸ ಬಕೆಟ್

ಈ ಡೆಸರ್ಟ್‌ಗಳು ಟಾಪ್ ಆರ್ಡರ್ ಲಿಸ್ಟ್‌ನಲ್ಲಿವೆ
* ಗುಲಾಬ್ ಜಾಮೂನು
* ರಸಮಲೈ
* ಚಾಕೋಲವಾ ಕೇಕ್
* ರಸಗುಲ್ಲಾ
* ಚಾಕೋಚಿಪ್ಸ್ ಐಸ್ ಕ್ರೀಮ್
* ಆಲ್ಫೋನೋ ಮ್ಯಾಂಗೋ ಐಸ್‌ಕ್ರೀಮ್
* ಕಾಜು ಕಟಿಲ್
* ಟೆಂಡರ್ ಕೋಕೋನೆಟ್ ಐಸ್ ಕ್ರೀಮ್
* ಡೆತ್ ಬೈ ಚಾಕೋಲೆಟ್
* ಹಾಟ್ ಚಾಕೋಲೆಟ್ ಫಡ್ಜ್
ಈ ಶೈಲಿಯ ಆಹಾರಗಳಿಗೆ ಬೇಡಿಕೆ
* ನಾರ್ಥ್ ಇಂಡಿಯನ್
* ಚೈನೀಸ್
* ಪ್ಯಾನ್ ಏಷ್ಯಿಯನ್
* ಡೆಸರ್ಟ್
* ಐಸ್ ಕ್ರೀಮ್
* ಬರ್ಗರ್
* ಅಮೆರಿಕನ್
* ಸೌತ್ ಇಂಡಿಯನ್



Click it and Unblock the Notifications
