For Quick Alerts
ALLOW NOTIFICATIONS  
For Daily Alerts

ಬೇಸಿಗೆಯಲ್ಲಿ ಸಕತ್ ಚಿಲ್ ಈ ಮಸಾಲೆ-ಸೋಡಾ ನಿಂಬೆ ಶರಾಬತ್

Posted By:
|

ಬೇಸಿಗೆ ಎಂದ ಮೇಲೆ ಜ್ಯೂಸ್‌ಗಳಿಗೆ ಬೇಡಿಕೆ ಹೆಚ್ಚುತ್ತದೆ. ಈ ಸಮಯದಲ್ಲಿ ಊಟ, ತಿಂಡಿ ಬೇಕೆನಿಸುವುದಿಲ್ಲ, ಬದಲಿಗೆ ಆಗಾಗ ತಣ್ಣನೆಯ ಜ್ಯೂಸ್‌ ಅಥವಾ ಮಜ್ಜಿಗೆ ಕುಡಿಯಬೇಕೆನಿಸುವುದು. ಅದರಲ್ಲೂ ನಿಂಬೆ ಪಾನಕ, ಪುನರ್‌ಪುಳಿ ಮುಂತಾದ ಜ್ಯೂಸ್‌ ತುಂಬಾ ಹಿತ ಅನಿಸುವುದು. ನಿಮಗೆ ಇನ್ನು ಸ್ನ್ಯಾಕ್ಸ್ ಜೊತೆ ಸವಿಯಲು ರೆಸ್ಟೋರೆಂಟ್‌ಗಳಲ್ಲಿ ಸಿಗುವಂಥ ಸ್ನ್ಯಾಕ್ಸ್ ರೆಸಿಪಿ ನೀಡಿದ್ದೇವೆ.

Masala Lemon Juice Recipe

ಲೈಮ್‌ ಸೋಡಾ ಬಳಸಿ ಮಾಡುವ ನಿಂಬೆ ಪಾನಕ ಈ ರೆಸಿಪಿ ನೀಡಿದ್ದೇವೆ. ನಿಂಬೆ ಪಾನಕವನ್ನು ಹಲವು ಬಗೆಯ ರುಚಿಯಲ್ಲಿ ಮಾಡಬಹುದು. ನೀವು ಸೋಡಾ ಮಿಕ್ಸ್ ಮಾಡಿ ಮಾಡುವ ಈ ಪಾನಕ ಟ್ರೈ ಮಾಡಿ ನೋಡಿ. ಬಾಯಾರಿಕೆ ತಣಿಸುವುದರ ಜೊತೆಗೆ ಬಾಯಿ ರುಚಿಯೂ ಹೆಚ್ಚಿಸುವುದು.

Lime Soda With Lemon Juice Recipe, ಮಸಾಲೆ, ಸೋಡಾ ನಿಂಬೆ ಶರಾಬತ್ ರೆಸಿಪಿ
Lime Soda With Lemon Juice Recipe, ಮಸಾಲೆ, ಸೋಡಾ ನಿಂಬೆ ಶರಾಬತ್ ರೆಸಿಪಿ
Prep Time
10 Mins
Cook Time
5M
Total Time
15 Mins

Recipe By: Reena TK

Recipe Type: Juice

Serves: 2

Ingredients
  • ಬೇಕಾಗುವ ಸಾಮಗ್ರಿ

    700ml ಸ್ಪ್ರೈಟ್ ಅಥವಾ ಲೆಮನ್ ಸೋಡಾ

    2 ನಿಂಬೆಹಣ್ಣು

    2 ಹಸಿ ಮೆಣಸಿನಕಾಯಿ

    ಚಿಟಿಕೆಯಷ್ಟು ಕಾಳು ಮೆಣಸಿನ ಪುಡಿ

    ಅರ್ಧ ಚಮಚ ಜೀರಿಗೆ ಪುಡಿ

    3 ನಿಂಬೆಯ ತುಂಡು

    ಸ್ವಲ್ಪ ಪುದೀನಾ ಎಲೆ

    ಸ್ವಲ್ಪ ಐಸ್‌ ಕ್ಯೂಬ್ಸ್

Red Rice Kanda Poha
How to Prepare
  • ಮಾಡುವ ವಿಧಾನ

    * ಒಂದು ಬೌಲ್‌ಗೆ ಐಸ್‌ಕ್ಯೂಬ್ಸ್ ಹಾಕಿ, ನಂತರ ಹಸಿ ಮೆಣಸಿನಕಾಯಿ ಎರಡು ಭಾಗ ಮಾಡಿ ಹಾಕಿ, ಕಾಳು ಮೆನಸಿನ ಪುಡಿ, ಜೀರಿಗೆ ಪುಡಿ, ಚಾಟ್‌ ಮಸಾಲ ಹಾಕಿ, ಪುದೀನಾವನ್ನು ಕೈಯಲ್ಲಿಯೇ ಕಟ್ ಮಾಡಿ ಹಾಕಿ.

    * ಸ್ವಲ್ಪ ನೀರು ಹಾಕಿ, ಬ್ಲ್ಯಾಕ್‌ ಸಾಲ್ಟ್‌ ಹಾಕಿ, ಈಗ ಸ್ಪ್ರೈಟ್ ಅಥವಾ ಲೆಮನ್ ಸೋಡಾ ಹಾಗೂ ನಿಂಬೆಯ ತುಂಡುಗಳನ್ನು ಹಾಕಿ ಗ್ಲಾಸ್‌ಗಳಿಗೆ ಸುರಿದು ಆಲೂ ಟಿಕ್ಕಿ ಜೊತೆ ಸರ್ವ್‌ ಮಾಡಿ.

    * ಈ ನಿಂಬೆ ಶರಬತ್‌ ಜೊತೆ ಆಲೂ ಟಿಕ್ಕಿ ತಿನ್ನಲು ತುಂಬಾ ಮಜಾವಾಗಿರುತ್ತದೆ.

Instructions
  • ಬೇಸಿಗೆಗೆ ಸೂಕ್ತವಾದ ಪಾನಕ ಇದಾಗಿದೆ. ಇನ್ನು ನಾನ್‌ ವೆಜ್‌ ಅಥವಾ ಸ್ಪೆಷಲ್ ಅಡುಗೆ ಜೊತೆಯೂ ಇದನ್ನು ಸವಿಯಬಹುದು.
Nutritional Information
  • ಸರ್ಬ್‌ - 2
  • ಕೊಬ್ಬು - 0
  • ಸಕ್ಕರೆ - 2 ಚಮಚ
[ 3.5 of 5 - 105 Users]
X
Desktop Bottom Promotion