Latest Updates
-
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು?
ಬೇಸಿಗೆಯಲ್ಲಿ ಸಕತ್ ಚಿಲ್ ಈ ಮಸಾಲೆ-ಸೋಡಾ ನಿಂಬೆ ಶರಾಬತ್
ಬೇಸಿಗೆ ಎಂದ ಮೇಲೆ ಜ್ಯೂಸ್‌ಗಳಿಗೆ ಬೇಡಿಕೆ ಹೆಚ್ಚುತ್ತದೆ. ಈ ಸಮಯದಲ್ಲಿ ಊಟ, ತಿಂಡಿ ಬೇಕೆನಿಸುವುದಿಲ್ಲ, ಬದಲಿಗೆ ಆಗಾಗ ತಣ್ಣನೆಯ ಜ್ಯೂಸ್ ಅಥವಾ ಮಜ್ಜಿಗೆ ಕುಡಿಯಬೇಕೆನಿಸುವುದು. ಅದರಲ್ಲೂ ನಿಂಬೆ ಪಾನಕ, ಪುನರ್‌ಪುಳಿ ಮುಂತಾದ ಜ್ಯೂಸ್ ತುಂಬಾ ಹಿತ ಅನಿಸುವುದು. ನಿಮಗೆ ಇನ್ನು ಸ್ನ್ಯಾಕ್ಸ್ ಜೊತೆ ಸವಿಯಲು ರೆಸ್ಟೋರೆಂಟ್‌ಗಳಲ್ಲಿ ಸಿಗುವಂಥ ಸ್ನ್ಯಾಕ್ಸ್ ರೆಸಿಪಿ ನೀಡಿದ್ದೇವೆ.

ಲೈಮ್ ಸೋಡಾ ಬಳಸಿ ಮಾಡುವ ನಿಂಬೆ ಪಾನಕ ಈ ರೆಸಿಪಿ ನೀಡಿದ್ದೇವೆ. ನಿಂಬೆ ಪಾನಕವನ್ನು ಹಲವು ಬಗೆಯ ರುಚಿಯಲ್ಲಿ ಮಾಡಬಹುದು. ನೀವು ಸೋಡಾ ಮಿಕ್ಸ್ ಮಾಡಿ ಮಾಡುವ ಈ ಪಾನಕ ಟ್ರೈ ಮಾಡಿ ನೋಡಿ. ಬಾಯಾರಿಕೆ ತಣಿಸುವುದರ ಜೊತೆಗೆ ಬಾಯಿ ರುಚಿಯೂ ಹೆಚ್ಚಿಸುವುದು.
Recipe By: Reena TK
Recipe Type: Juice
Serves: 2
-
ಬೇಕಾಗುವ ಸಾಮಗ್ರಿ
700ml ಸ್ಪ್ರೈಟ್ ಅಥವಾ ಲೆಮನ್ ಸೋಡಾ
2 ನಿಂಬೆಹಣ್ಣು
2 ಹಸಿ ಮೆಣಸಿನಕಾಯಿ
ಚಿಟಿಕೆಯಷ್ಟು ಕಾಳು ಮೆಣಸಿನ ಪುಡಿ
ಅರ್ಧ ಚಮಚ ಜೀರಿಗೆ ಪುಡಿ
3 ನಿಂಬೆಯ ತುಂಡು
ಸ್ವಲ್ಪ ಪುದೀನಾ ಎಲೆ
ಸ್ವಲ್ಪ ಐಸ್ ಕ್ಯೂಬ್ಸ್
-
ಮಾಡುವ ವಿಧಾನ
* ಒಂದು ಬೌಲ್‌ಗೆ ಐಸ್‌ಕ್ಯೂಬ್ಸ್ ಹಾಕಿ, ನಂತರ ಹಸಿ ಮೆಣಸಿನಕಾಯಿ ಎರಡು ಭಾಗ ಮಾಡಿ ಹಾಕಿ, ಕಾಳು ಮೆನಸಿನ ಪುಡಿ, ಜೀರಿಗೆ ಪುಡಿ, ಚಾಟ್ ಮಸಾಲ ಹಾಕಿ, ಪುದೀನಾವನ್ನು ಕೈಯಲ್ಲಿಯೇ ಕಟ್ ಮಾಡಿ ಹಾಕಿ.
* ಸ್ವಲ್ಪ ನೀರು ಹಾಕಿ, ಬ್ಲ್ಯಾಕ್ ಸಾಲ್ಟ್ ಹಾಕಿ, ಈಗ ಸ್ಪ್ರೈಟ್ ಅಥವಾ ಲೆಮನ್ ಸೋಡಾ ಹಾಗೂ ನಿಂಬೆಯ ತುಂಡುಗಳನ್ನು ಹಾಕಿ ಗ್ಲಾಸ್‌ಗಳಿಗೆ ಸುರಿದು ಆಲೂ ಟಿಕ್ಕಿ ಜೊತೆ ಸರ್ವ್ ಮಾಡಿ.
* ಈ ನಿಂಬೆ ಶರಬತ್ ಜೊತೆ ಆಲೂ ಟಿಕ್ಕಿ ತಿನ್ನಲು ತುಂಬಾ ಮಜಾವಾಗಿರುತ್ತದೆ.
- ಬೇಸಿಗೆಗೆ ಸೂಕ್ತವಾದ ಪಾನಕ ಇದಾಗಿದೆ. ಇನ್ನು ನಾನ್ ವೆಜ್ ಅಥವಾ ಸ್ಪೆಷಲ್ ಅಡುಗೆ ಜೊತೆಯೂ ಇದನ್ನು ಸವಿಯಬಹುದು.
- ಸರ್ಬ್ - 2
- ಕೊಬ್ಬು - 0
- ಸಕ್ಕರೆ - 2 ಚಮಚ



Click it and Unblock the Notifications
