Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಈಸ್ಟರ್ ರೆಸಿಪಿ: ಚೀಸ್ ಜೊತೆ ಈ ಚಿಕನ್ ಸವಿದರೆ ಆಹಾ.. ಎಂಥ ರುಚಿ
ಜೀರಿಗೆ, ನಿಂಬೆ ಫ್ಲೇವರ್‌ನ ರೋಸ್ಟಡ್ ಚಿಕನ್ ಚೀಸ್ ಜೊತೆ ಸವಿದರೆ ಆಹಾ.. ಎಂಥ ರುಚಿ, ಇದನ್ನು ಮಾಡುವ ವಿಧಾನ ತುಂಬಾ ಸರಳವಾಗಿದೆ. ಇದನ್ನು ಮಾಡಲು ಮೈಕ್ರೋವೇವ್ ಇದ್ದರೆ ಸಾಕು, ಇಲ್ಲಾಂದರೆ ಗ್ಯಾಸ್ ಅಥವಾ ಬೆಂಕಿಯಲ್ಲಿ ಸುಟ್ಟು ಕೂಡ ಮಾಡಬಹುದು. ಅವುಗಳ ರುಚಿ ಮೈಕ್ರೋವೇವ್‌ಗಿಂತ ಸ್ವಲ್ಪ ಭಿನ್ನ ಅನಿಸಿದರೂ ಹಾಗೆ ಮಾಡಿದ ಚಿಕನ್ ರೋಸ್ಟ್ ಕೂಡ ಸವಿಯಲು ತುಂಬಾ ರುಚಿಯಾಗಿರುತ್ತದೆ.

ಈ ಈಸ್ಟರ್‌ಗೆ ಲಾಕ್‌ಡೌನ್ ಆದ ಕಾರಣ ಎಲ್ಲಿಯೂ ಹೋಗುವಂತಿಲ್ಲ, ಹಾಗಂತ ಈಸ್ಟರ್ ಖುಷಿ ಕಡಿಮೆ ಮಾಡಿಕೊಳ್ಳಬೇಕಾಗಿಲ್ಲ. ಲಾಕ್‌ಡೌನ್ ಆದರೂ ಚಿಕನ್ ದೊರೆಯುತ್ತಿದೆ. ಮನೆಯಲ್ಲಿ 3-4 ಜನರಿದ್ದರೆ ಇದನ್ನು ಮಾಡಿ ಸವಿಯಬಹುದು.
ಇದನ್ನು ಚೀಸ್ ಜೊತೆ ತಿನ್ನುತ್ತಿದ್ದರೆ ಇನ್ನೂ ಬೇಕು ಅಷ್ಟರಮಟ್ಟಿಗೆ ರುಚಿಯಾಗಿರುತ್ತದೆ. ಇಲ್ಲಿ ನಾವು ಇದನ್ನು ಮಾಡುವ ವಿಧಾನ ಬಗ್ಗೆ ಹೇಳಿದ್ದೇವೆ. ಸಾಮಗ್ರಿ ಕೂಡ ಮನೆಯಲ್ಲಿಯೇ ನಾವು ಸಾಮಾನ್ಯವಾಗಿ ಬಳಸುವ ಸಾಮಗ್ರಿಗಳೇ ಸಾಕು. ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:
Recipe By: Reena TK
Recipe Type: Nonveg
Serves: 4
-
ಬೇಕಾಗುವ ಸಾಮಗ್ರಿ
ಚಿಕನ್ 1 ಕೆಜಿ
ಆಲೂಗಡ್ಡೆ 2 (ಸಿಪ್ಪೆ ಸುಲಿದು ಸ್ವಲ್ಪ ಸ್ವಲ್ಪ ದೊಡ್ಡ ಪೀಸ್‌ಗಳಾಗಿ ಉದ್ದುದ್ದವಾಗಿ ಕತ್ತರಿಸಿ)
ಜೀರಿಗೆ ಪುಡಿ 2 ಚಮಚ
ಬೆಳ್ಳುಳ್ಳಿ ಪೇಸ್ಟ್ 1 ಚಮಚ
ಈರುಳ್ಳಿ ಪುಡಿ 1 /ಪೇಸ್ಟ್ ಆದರೆ 3 ಚಮಚ
ರುಚಿಗೆ ತಕ್ಕ ಉಪ್ಪು
ಒಣಮೆಣಸಿನ ಬೀಜ 1 ಚಮಚ
ಕಾಳುಮೆಣಸಿನ ಪುಡಿ 1/2 ಚಮಚ
ಖಾರದ ಪುಡಿ 1 ಚಮಚ
ಎಣ್ಣೆ 2 ಚಮಚ(ಆಲೀವ್ ಎಣ್ಣೆ ಇದ್ದರೆ ಅದೇ ಬಳಸಿ)
-
ಮಾಡುವ ವಿಧಾನ
* ಚಿಕನ್‌ನ ಬ್ರೆಸ್ಟ್ ಭಾಗದಿಂದ ಅದರ ಹಿಂಭಾಗ ಮೂಳೆ ಕತ್ತರಿಸಿ ತೆಗೆಯಿರಿ.
* ಈಗ ಚಿಕನ್‌ಗೆ 1 ಚಮಚ ಆಲೀವ್ ಎಣ್ಣೆ ಹಾಕಿ ಸವರಿ.
* ಒಂದು ಬೌಲ್‌ಗೆ ಜೀರಿಗೆ ಪುಡಿ, ಮೆಣಸಿನ ಬೀಜ, ಉಪ್ಪು, ಆನಿಯನ್ ಪೌಡರ್, ಗಾರ್ಲಿಕ್ ಪೌಡರ್, ಖಾರದ ಪುಡಿ, ಕಾಳು ಮೆಣಸಿನ ಪುಡಿ ಹಾಕಿ ಮಿಶ್ರ ಮಾಡಿ.
ಇದನ್ನು ಚಿಕನ್ ಮೇಲೆ ಸವರಿ. ನಂತರ ಅದರ ನಿಂಬೆ ರಸ ಹಿಂಡಿ ಚಿಕನ್ ಅನ್ನು ಒಂದು ಗಂಟೆ ಇಡಿ. ಇದನ್ನು ಫ್ರಿಡ್ಜ್‌ನಲ್ಲಿಡಿ, ಚಿಕನ್ ಮಸಾಲೆಯನ್ನು ಚೆನ್ನಾಗಿ ಹೀರಿಕೊಳ್ಳುತ್ತದೆ.
* ಈಗ ಓವನ್ ಅನ್ನು 345 ಡಿಗ್ರಿಗೆ ಬಿಸಿ ಮಾಡಿ. ನಂತರ ಚಿಕನ್ ಅನ್ನು ಒಂದು ಗಂಟೆ ಬೇಯಿಸಿ. ಆಗಾಗ ಚಿಕನ್ ಎಲ್ಲಾ ಭಾಗ ಸರಿಯಾಗಿ ಬೇಯುವಂತೆ ತಿರುಗಿಸಿ ಇಡುತ್ತಾ ಬೇಯಿಸಿ.
* ಇದೇ ಸಮಯದಲ್ಲಿ ಆಲೂಗಡ್ಡೆ ಆಲೀವ್ ಎಣ್ಣೆ ಹಾಗೂ ಉಪ್ಪು ಸವರಿ ಚಿಕನ್ 50 ನಿಮಿಷ ಬೆಂದ ಮೇಲೆ ಅದರ ಪಕ್ಕ ಇಟ್ಟು ಬೇಯಿಸಿ. ಆಲೂಗಡ್ಡೆ ಸ್ವಲ್ಪ ಸುಟ್ಟ ಬಣ್ಣಕ್ಕೆ ತಿರುಗಿದ ಮೇಲೆ, ಚಿಕನ್, ಆಲೂಗಡ್ಡೆ ತೆಗೆಯಿರಿ.
* ಇದೀಗ ತೆಗೆದ ಚಿಕನ್ ಅನ್ನು ತೆಗೆದು ಸಮವಾಗಿ ಕತ್ತರಿಸಿ ಅದನ್ನು ಆಲೂಗಡ್ಡೆ ಜೊತೆ ಅಲಂಕರಿಸಿ, ಚೀಸ್‌ನಲ್ಲಿ ಡಿಪ್ ಮಾಡಿ ಅವಿದರೆ ಆಹಾ... ಎಂಥ ರುಚಿ.
- ಈ ಚಿಕನ್ ರೆಸಿಪಿ ತುಂಬಾ ಸರಳವಾಗಿರುವುದರಿಂದ ಯಾರು ಬೇಕಾದರೂ ಟ್ರೈ ಮಾಡಬಹುದು. ಇದನ್ನು ಗ್ಯಾಸ್ ಅಥವಾ ಮೈಕ್ರೋವೇವ್ ಬಳಸಿ ಮಾಡಬಹುದು.
- ಸರ್ವ್ - 4
- ಕ್ಯಾಲೋರಿ - 165cal
- ಪ್ರೊಟೀನ್ - 31ಗ್ರಾಂ



Click it and Unblock the Notifications