For Quick Alerts
ALLOW NOTIFICATIONS  
For Daily Alerts

ರೆಸಿಪಿ: ಬೆಂಡೆಕಾಯಿ ಫ್ರೈ ಕ್ರಿಸ್ಪಿಯಾಗಿ ಮಾಡುವುದು ಹೇಗೆ?

Posted By:
|

ಬೆಂಡೆಕಾಯಿ ಚಿಪ್ಸ್ ರುಚಿಯ ಜೊತೆಗೆ ತುಂಬಾ ಆರೋಗ್ಯಕರವಾದ ಚಿಪ್ಸ್ ಆಗಿದೆ. ಇದನ್ನು ಊಟದ ಜೊತೆಗೆ ಸೈಡ್‌ ಡಿಶ್‌ ಆಗಿ ಸವಿಯಲು ತುಂಬಾ ರುಚಿಯಾಗಿರುತ್ತೆ. ಇದೊಂದು ಮೈಕ್ರೋವೇವ್ ರೆಸಿಪಿಯಾಗಿದೆ.

 oven roasted lady finger fries recipe

ಇದನ್ನು ಬೇಕಿದ್ದರೆ ಬಾಣಲೆಯಲ್ಲಿ ಮಾಡಬಹುದು, ಆದರೆ ಮೈಕ್ರೋವೇವ್‌ನಲ್ಲಿ ಮಾಡಿದರೆ ನಿಮಗೆ ತುಂಬಾ ಕ್ರಿಸ್ಪಿಯಾಗಿ ಸಿಗುವುದು.ಇದನ್ನು ಮಾಡುವ ವಿಧಾನ ಇಲ್ಲಿ ನೀಡಲಾಗಿದೆ ನೋಡಿ:

Lady Finger Fries Recipe , ಬೆಂಡೆಕಾಯಿ ಫ್ರೈ ರೆಸಿಪಿ
Lady Finger Fries Recipe , ಬೆಂಡೆಕಾಯಿ ಫ್ರೈ ರೆಸಿಪಿ
Prep Time
15 Mins
Cook Time
20M
Total Time
35 Mins

Recipe By: Reena TK

Recipe Type: Fry

Serves: 4

Ingredients
  • ಬೇಕಾಗುವ ಸಾಮಗ್ರಿ

    15-20 ಬೆಂಡೆಕಾಯಿ

    ಅರ್ಧ ಚಮಚ ಅರಿಶಿಣ ಪುಡಿ

    ಅರ್ಧ ಚಮಚ ಖಾರದ ಪುಡಿ

    ಅರ್ಧ ಚಮಚ ಕೊತ್ತಂಬರಿ ಪುಡಿ

    1/4 ಚಮಚ ಜೀರಿಗೆ ಪುಡಿ

    ರುಚಿಗೆ ತಕ್ಕ ಉಪ್ಪು

    1-2 ಚಮಚ ಎಣ್ಣೆ

Red Rice Kanda Poha
How to Prepare
  • ಮಾಡುವ ವಿಧಾನ

    * ಓವನ್ ಅನ್ನು 220°C/450°Fಗೆ ಪ್ರೀಹೀಟ್ ಮಾಡಿ.

    * ಈಗ ಬೇಕಿಂಗ್‌ ಟ್ರೇಗೆ ನಾನ್‌ಸ್ಟಿಕ್ ಬೇಕಿಂಗ್‌ ಶೀಟ್‌ ಹಾಕಿ ಸೆಟ್ ಮಾಡಿ.

    * ಈಗ ಬೆಂಡೆಕಾಯಿ ತೊಳೆದು, ಒರೆಸಿ. ಅದರಲ್ಲಿ ನೀರಿನಂಶ ಇರಬಾರದು. ಇಲ್ಲದಿದ್ದರೆ ಅದು ಕ್ರಿಸ್ಪಿ ಆಗುವುದಿಲ್ಲ.

    * ಈಗ ಅದನ್ನು ಉದ್ದವಾಗಿ, ಎರಡು ಭಾಗ ವಾಗಿ ಕತ್ತರಿಸಿ.

    * ಅವುಗಳನ್ನು ದೊಡ್ಡ ಬೌಲ್‌ನಲ್ಲಿ ಹಾಕಿ.

    * ಈಗ ಬೌಲ್‌ ಮಸಾಲೆ ಸಾಮಗ್ರಿ ಹಾಕಿ (ಎಣ್ಣೆ ಮತ್ತು ಉಪ್ಪು ಬಿಟ್ಟು)

    * ಬೆಂಡೆಕಾಯಿಯನ್ನು ಮಸಾಲೆ ಜೊತೆ ಚೆನ್ನಾಗಿ ಮಿಶ್ರ ಮಾಡಿ.

    * ಆದರೆ ಮೇಲೆ ಎಣ್ಣೆ ಹಾಕಿ ಮಿಕ್ಸ್ ಮಾಡಿ.

    * ಈಗ ಬೆಂಡೆಕಾಯಿಯನ್ನು ಬೇಕಿಂಗ್ ಟ್ರೇ ಮೇಲೆ ಹರಡಿ.

    * ಅದನ್ನು 20 ನಿಮಿಷ ಬೇಯಿಸಿ, ಅದು ಬ್ರೌನ್ (ಕಂದು) ಬಣ್ಣಕ್ಕೆ ತಿರುಗಲಿ.

    * ಈಗ ಓವನ್‌ನಿಂದ ತೆಗೆದು ಉಪ್ಪನ್ನು ಉದುರಿಸಿ, ಬಿಸಿ ಬಿಸಿಯಾಗಿ ಸರ್ವ್ ,ಮಾಡಿ.

Instructions
  • ನೀವು ಇದನ್ನು ಬಾಣಲೆಯಲ್ಲಿ ಮಾಡುವುದಾದರೆ ಚಿಪ್ಸ್ ಬದಲಿಗೆ ಫ್ರೈ ರೀತಿಯಾಗುವುದು, ಎರಡೂ ಟೇಸ್ಟ್ ಚೆನ್ನಾಗಿರುತ್ತದೆ
Nutritional Information
  • ಕ್ಯಾಲೋರಿ - 53ಕ್ಯಾ
  • ಪ್ರೊಟೀನ್ - 0.8ಗ್ರಾಂ
  • ಕಾರ್ಬ್ಸ್ - 3.8ಗ್ರಾಂ
  • ನಾರಿನಂಶ - 1.3ಗ್ರಾಂ
[ 4.5 of 5 - 91 Users]
X
Desktop Bottom Promotion