Latest Updates
-
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ!
ರೆಸಿಪಿ: ಬೆಂಡೆಕಾಯಿ ಫ್ರೈ ಕ್ರಿಸ್ಪಿಯಾಗಿ ಮಾಡುವುದು ಹೇಗೆ?
ಬೆಂಡೆಕಾಯಿ ಚಿಪ್ಸ್ ರುಚಿಯ ಜೊತೆಗೆ ತುಂಬಾ ಆರೋಗ್ಯಕರವಾದ ಚಿಪ್ಸ್ ಆಗಿದೆ. ಇದನ್ನು ಊಟದ ಜೊತೆಗೆ ಸೈಡ್ ಡಿಶ್ ಆಗಿ ಸವಿಯಲು ತುಂಬಾ ರುಚಿಯಾಗಿರುತ್ತೆ. ಇದೊಂದು ಮೈಕ್ರೋವೇವ್ ರೆಸಿಪಿಯಾಗಿದೆ.

ಇದನ್ನು ಬೇಕಿದ್ದರೆ ಬಾಣಲೆಯಲ್ಲಿ ಮಾಡಬಹುದು, ಆದರೆ ಮೈಕ್ರೋವೇವ್‌ನಲ್ಲಿ ಮಾಡಿದರೆ ನಿಮಗೆ ತುಂಬಾ ಕ್ರಿಸ್ಪಿಯಾಗಿ ಸಿಗುವುದು.ಇದನ್ನು ಮಾಡುವ ವಿಧಾನ ಇಲ್ಲಿ ನೀಡಲಾಗಿದೆ ನೋಡಿ:
Recipe By: Reena TK
Recipe Type: Fry
Serves: 4
-
ಬೇಕಾಗುವ ಸಾಮಗ್ರಿ
15-20 ಬೆಂಡೆಕಾಯಿ
ಅರ್ಧ ಚಮಚ ಅರಿಶಿಣ ಪುಡಿ
ಅರ್ಧ ಚಮಚ ಖಾರದ ಪುಡಿ
ಅರ್ಧ ಚಮಚ ಕೊತ್ತಂಬರಿ ಪುಡಿ
1/4 ಚಮಚ ಜೀರಿಗೆ ಪುಡಿ
ರುಚಿಗೆ ತಕ್ಕ ಉಪ್ಪು
1-2 ಚಮಚ ಎಣ್ಣೆ
-
ಮಾಡುವ ವಿಧಾನ
* ಓವನ್ ಅನ್ನು 220°C/450°Fಗೆ ಪ್ರೀಹೀಟ್ ಮಾಡಿ.
* ಈಗ ಬೇಕಿಂಗ್ ಟ್ರೇಗೆ ನಾನ್‌ಸ್ಟಿಕ್ ಬೇಕಿಂಗ್ ಶೀಟ್ ಹಾಕಿ ಸೆಟ್ ಮಾಡಿ.
* ಈಗ ಬೆಂಡೆಕಾಯಿ ತೊಳೆದು, ಒರೆಸಿ. ಅದರಲ್ಲಿ ನೀರಿನಂಶ ಇರಬಾರದು. ಇಲ್ಲದಿದ್ದರೆ ಅದು ಕ್ರಿಸ್ಪಿ ಆಗುವುದಿಲ್ಲ.
* ಈಗ ಅದನ್ನು ಉದ್ದವಾಗಿ, ಎರಡು ಭಾಗ ವಾಗಿ ಕತ್ತರಿಸಿ.
* ಅವುಗಳನ್ನು ದೊಡ್ಡ ಬೌಲ್‌ನಲ್ಲಿ ಹಾಕಿ.
* ಈಗ ಬೌಲ್ ಮಸಾಲೆ ಸಾಮಗ್ರಿ ಹಾಕಿ (ಎಣ್ಣೆ ಮತ್ತು ಉಪ್ಪು ಬಿಟ್ಟು)
* ಬೆಂಡೆಕಾಯಿಯನ್ನು ಮಸಾಲೆ ಜೊತೆ ಚೆನ್ನಾಗಿ ಮಿಶ್ರ ಮಾಡಿ.
* ಆದರೆ ಮೇಲೆ ಎಣ್ಣೆ ಹಾಕಿ ಮಿಕ್ಸ್ ಮಾಡಿ.
* ಈಗ ಬೆಂಡೆಕಾಯಿಯನ್ನು ಬೇಕಿಂಗ್ ಟ್ರೇ ಮೇಲೆ ಹರಡಿ.
* ಅದನ್ನು 20 ನಿಮಿಷ ಬೇಯಿಸಿ, ಅದು ಬ್ರೌನ್ (ಕಂದು) ಬಣ್ಣಕ್ಕೆ ತಿರುಗಲಿ.
* ಈಗ ಓವನ್‌ನಿಂದ ತೆಗೆದು ಉಪ್ಪನ್ನು ಉದುರಿಸಿ, ಬಿಸಿ ಬಿಸಿಯಾಗಿ ಸರ್ವ್ ,ಮಾಡಿ.
- ನೀವು ಇದನ್ನು ಬಾಣಲೆಯಲ್ಲಿ ಮಾಡುವುದಾದರೆ ಚಿಪ್ಸ್ ಬದಲಿಗೆ ಫ್ರೈ ರೀತಿಯಾಗುವುದು, ಎರಡೂ ಟೇಸ್ಟ್ ಚೆನ್ನಾಗಿರುತ್ತದೆ
- ಕ್ಯಾಲೋರಿ - 53ಕ್ಯಾ
- ಪ್ರೊಟೀನ್ - 0.8ಗ್ರಾಂ
- ಕಾರ್ಬ್ಸ್ - 3.8ಗ್ರಾಂ
- ನಾರಿನಂಶ - 1.3ಗ್ರಾಂ



Click it and Unblock the Notifications
