Latest Updates
-
ಬೆಂಗಳೂರು ಮಳೆ ಅಲರ್ಟ್: ನಿಮ್ಮ ಅಪಾರ್ಟ್ಮೆಂಟ್ ಮತ್ತು ಬೇಸ್ಮೆಂಟ್ ಸುರಕ್ಷತೆಗೆ ಇಂದೇ ಈ ಕ್ರಮಗಳನ್ನು ಕೈಗೊಳ್ಳಿ! -
ವಿಜಯದಶಮಿ ಹಬ್ಬದೂಟ: ಬ್ಲಡ್ ಶುಗರ್ ಏರಿಕೆಯಾಗದಂತೆ ಹೋಳಿಗೆ-ಪಾಯಸ ಸವಿಯುವುದು ಹೇಗೆ? -
ದಸರಾ ಸಂಭ್ರಮ: ರಾವಣ ದಹನ, ಟ್ರಾಫಿಕ್ ನಿರ್ಬಂಧ ಮತ್ತು ಮಳೆ ಎಚ್ಚರಿಕೆ - ಹೊರಡುವ ಮುನ್ನ ಇದನ್ನು ಓದಿ! -
ದಸರಾ ಟ್ರಾವೆಲ್ ರಶ್: ಕುಳಿತ ಸೀಟಿನಲ್ಲೇ ಮಾಡಿ ಈ 9 ನಿಮಿಷಗಳ ಮ್ಯಾಜಿಕ್ ಸ್ಟ್ರೆಚಿಂಗ್! -
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್
ಪೂರಿ ಚೆನ್ನಾಗಿ ಉಬ್ಬಿ ಬರಲು ಏನು ಮಾಡಬೇಕು? ಸ್ಟೆಪ್ ಬೈ ಸ್ಟೆಪ್ ಟಿಪ್ಸ್
ನೀವು ಹೋಟೆಲ್ಗೆ ಹೋಗಿ ಪೂರಿ ಆರ್ಡರ್ ಮಾಡಿದರೆ ಅವರ ತರುವ ಪೂರಿ ನೋಡಿಯೇ ಎಷ್ಟು ಚೆನ್ನಾಗಿ ಉಬ್ಬಿದಂತೆ ಇದೆ ಅಲ್ವಾ ನಾವು ಮಾಡಿದಾಗ ಏಕೆ ಹೀಗೆ ಬರುವುದಿಲ್ಲ ಎಂದನಿಸುತ್ತೆ ಅಲ್ವಾ? ನಂತರ ಅವರು ಪೂರಿ ಉಬ್ಬಿ ಬರಲು ಸೋಡಾ ಹಾಕಿರಬಹುದು ಎಂದುನಮಗೆ ನಾವೇ ಸಮಧಾನ ಮಾಡಿಕೊಳ್ಳುತ್ತೇವೆ.
ಪೂರಿ ಅಂದರೆ ಅದು ಉಬ್ಬಿದಂತಿರಬೇಕು, ಆದರೆ ಕೆಲವರು ಪೂರಿಯನ್ನು ಗಟ್ಟಿಯಾಗಿ ಮಾಡುತ್ತಾರೆ, ಅದು ಸರಿಯಾಗಿ ಉಬ್ಬಿ ಬರುವುದಿಲ್ಲ, ಅಂಥ ಪೂರಿ ತಿನ್ನಲು ಅಷ್ಟು ಟೇಸ್ಟ್ ಅಂತ ಅನಿಸಲ್ಲ, ಆದರೆ ಮೃದುವಾದ ಉಬ್ಬಿಕೊಂಡ ಪೂರಿ ಮುರಿದು ಬಾಯಿಗಿಡುವಾಗಲೇ ತುಂಬಾನೇ ಖುಷಿಯಾಗುವುದು. ನೀವು ಸೋಡಾ ಹಾಕದೆಯೇ ಉಬ್ಬಿದ ಪೂರಿ ಮಾಡಬಹುದು, ಅದಕ್ಕೆ ಕೆಲವೊಂದು ಟಿಪ್ಸ್ ಬಳಸಬೇಕಷ್ಟೇ....

ಪೂರಿಗೆ ಬೇಕಾಗುವ ಸಾಮಗ್ರಿ
1 ಕಪ್ ಗೋಧಿ ಹಿಟ್ಟು ಹಾಗೂ 2 ಚಮಚ ಸೂಜಿ ರವೆ
ಎಣ್ಣೆ
ರುಚಿಗೆ ತಕ್ಕ ಉಪ್ಪು
ಕಲೆಸಲು ನೀರು
ಪೂರಿ ಉಬ್ಬಿ ಬರಲು ಕೆಲ ಕಿಚನ್ ಟಿಪ್ಸ್
- ಬೌಲ್ಗೆ 1 ಕಪ್ ಗೋಧಿ ಹಿಟ್ಟು, 3/4 ಚಮಚ ಸೂಜಿ ರವೆ, ರುಚಿಗೆ ತಕ್ಕ ಉಪ್ಪು ಹಾಕಿ ಮಿಕ್ಸ್ ಮಾಡಿ. ಕೈಯಿಂದಲೇ ಮಿಕ್ಸ್ ಮಾಡಬೇಕು.
- ಈಗ ಒಂದು ಚಮಚ ಎಣ್ಣೆ ಹಾಕಿ, ಮಿಕ್ಸ್ ಮಾಡಲು ಸಾಕಾಗುವಷ್ಟು ನೀರು ಹಾಕಿ ಮಿಕ್ಸ್ ಮಾಡಿ
- ಹಿಟ್ಟು ಇನ್ನೂ ಮೃದುವಾಗಲು ಮತ್ತೊಂದು ಚಮಚ ಎಣ್ಣೆ ಬೇಕಾದರೂ ಸೇರಿಸಬಹುದು. ಹಿಟ್ಟು ಅಂಟು- ಅಂಟಾಗಿ ಇರಬಾರದು,
- ಗಟ್ಟಿಯಾಗಿಯೂ ಇರಬಾರದು
- ನೀವು ಹಿಟ್ಟು ಕಲೆಸಿದ ಮೇಲೆ ಬಟ್ಟೆಯಿಂದ ಸುತ್ತಿ ಅರ್ಧ ಗಂಟೆ ಇಡಿ
- ನೀವು ಹಿಟ್ಟು ತುಂಬಾ ಹೊತ್ತು ಕೂಡ ಕಲೆಸಬಾರದು, ನಂತರ 1/4 ಚಮಚ ಎಣ್ಣೆ ಸೇರಿಸಿ, ಹಿಟ್ಟಿನಿಂದ ಚಿಕ್ಕ ಚಿಕ್ಕ ಉಂಡೆ ಸೇರಿಸಿ.
- ನಂತರ ಚಿಕ್ಕ ಚಿಕ್ಕ ಉಂಡೆ ಕಟ್ಟಿ
- ನಂತರ ಹಿಟ್ಟು ತಟ್ಟುವಾಗ ಸ್ವಲ್ಪ ಗೋಧಿ ಹಿಟ್ಟು ಉದುರಿಸಿ ನಂತರ ತಟ್ಟಿ,
- ಪೂರಿ ಹಿಟ್ಟು ತಟ್ಟುವಾಗ ತುಂಬಾ ತೆಳುವಾಗಿ ತಟ್ಟಬೇಡಿ, ಅದರಂತೆ ತುಂಬಾ ದಪ್ಪವಾಗಿಯೂ ತಟ್ಟಬಾರದು, ಸ್ವಲ್ಪ ಮಂದವಾಗಿ ತಟ್ಟಿ.
- ಎಣ್ಣೆಯನ್ನು ಸಾಧಾರಣ ಉರಿಯಲ್ಲಿ ಕುದಿಸಿ, ಸ್ವಲ್ಪ ಹಿಟ್ಟು ಹಾಕಿ ಹಿಟ್ಟು ಉಬ್ಬಿ ಬರುತ್ತಿದೆಯೇ ಎಂದು ಪರಿಶೀಲಿಸಿ ನಂತರ ತಟ್ಟಿದ ಹಿಟ್ಟು ಹಾಕಿ.
- ಪೂರಿ ಎಣ್ಣೆಯಲ್ಲಿ ಸಂಪೂರ್ಣ ಮುಳುಗುವಂತಿರಬೇಕು
- ಪೂರಿ ಚೆನ್ನಾಗಿ ಉಬ್ಬಿ ಬರಲು ಸೌಟ್ನಿಂದ ಮೆಲ್ಲನೆ ಪ್ರೆಸ್ ಮಾಡಿ ಮಗುಚಿ ಹಾಕಿ, ಪೂರಿ ಸ್ವಲ್ಪ ಕಂದು ಬಣ್ಣಕ್ಕೆ ಬರುವಾಗ ತೆಗೆಯಿರಿ
ಇತರ ಸಲಹೆ:
ನೀವು ಇದೇ ಟಿಪ್ಸ್ ಬಳಸಿ ದೊಡ್ಡ ಗಾತ್ರದ ಪೂರಿ ಕೂಡ ಮಾಡಬಹುದು, ಚಿಕ್ಕ ಗಾತ್ರದ ಪೂರಿ ಕೂಡ ಮಾಡಬಹುದು. ಪೂರಿ ಚೆನ್ನಾಗಿ ಉಬ್ಬಿಕೊಂಡು ಬಂದರೆ ಅದರೊಳಗಡೆ ಕೂಡ ಚೆನ್ನಾಗಿ ಬೇಯುತ್ತದೆ, ಇಲ್ಲದಿದ್ದರೆ ಒಳಗಡೆ ಅಷ್ಟು ಚೆನ್ನಾಗಿ ಬೇಯಲ್ಲ
ನೀವು ಸೂಜಿ ರವೆ ಬಳಸದೆಯೂ ಇರಬಹುದು
ಕೆಲವರು ಹಿಟ್ಟು ಕಲೆಸಲು ಬಿಸಿ ನೀರು ಹಾಕುತ್ತಾರೆ, ಯಾವುದೇ ನೀರಿನಲ್ಲಿ ಕಲೆಸಬಹುದು, ಆದರೆ ವಾತಾವರಣ ತುಂಬಾ ಚಳಿಯಿದ್ದರೆ ಬಿಸಿ ನೀರಿನಲ್ಲಿ ಕಲೆಸುವುದು ಒಳ್ಳೆಯದು.
ಪೂರಿಗೆ ಬೇಗನೆ ಹೊಗೆ ಬರುವ ಎಣ್ಣೆ ಬಳಸಬೇಡಿ.



Click it and Unblock the Notifications
