Latest Updates
-
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ!
ದೀಪಾವಳಿ ರೆಸಿಪಿ: 1ಲೀ ಹಾಲಿನಲ್ಲಿ ಮಾಡಿ ಕೇಸರಿ ಪೇಡಾ
ಕೇಸರಿ ಪೇಡಾ ಎಲ್ಲರೂ ಇಷ್ಟಪಡುವ ಒಂದು ತಿಂಡಿಯಾಗಿದೆ. ಅದರಲ್ಲೂ ದೀಪಾವಳಿ ಎಂದ ಮೇಲೆ ಪೇಡಾ ಸವಿಯದಿದ್ದರೆ ಆಗುತ್ತೇ, ದೀಪಾವಳಿಯಲ್ಲಿ ವೆರೈಟಿ ಸಿಹಿ ತಿಂಡಿ ಮಾಡಲಾಗುವುದು, ಅದರ ಜೊತೆಗೆ ಪೇಡಾ ಇದ್ದರೆ ಆ ಸಿಹಿ ತಿಂಡಿಯ ತಟ್ಟೆ ಅಥವಾ ಬಾಕ್ಸ್ ಸಂಪೂರ್ಣವಾಗುವುದು, ಬೇರೆ ಸಿಹಿ ತಿಂಡಿ ಇಟ್ಟು, ಪೇಡಾ ಇಲ್ಲದೆ ನೀವು ತಿಮಡಿ ಬಾಕ್ಸ್ ಕೊಟ್ಟರೆ ಅವರು ಅದನ್ನು ಓಪನ್ ಮಾಡಿ ಮೊದಲು ಹುಡುಕುವುದು ಪೇಡಾ ಇದೆಯೇ ಎಂದು, ಈ ಪೇಡಾ ಬೇಕರಿಯಲ್ಲಿ ಮಾತ್ರ ಸಿಗುವುದು ಎಂದೇನಿಲ್ಲ, ನೀವು ಕೂಡ ಮಾಡಬಹುದಾಗಿದೆ.

ಬನ್ನಿ ಹಾಲಿನಿಂದ ಕೇಸರಿ ಪೇಡಾ ಮಾಡುವುದು ಹೇಗೆ ಎಂದು ನೋಡೋಣ, ನೀವು ಮೊದಲಿಗೆ ಮಾಡುವುದಾದರೆ ಒಂದು ಲೀಟರ್ ಹಾಲಿನಲ್ಲಿ ಟ್ರೈ ಮಾಡಿ.
Recipe By: Reena TK
Recipe Type: Sweet
Serves: depends
-
ಬೇಕಾಗುವ ಸಾಮಗ್ರಿ
1 ಲೀಟರ್ ಹಾಲು
100 ಗ್ರಾಂ ಸಕ್ಕರೆ
ಏಲಕ್ಕಿ ಪುಡಿ
ಸ್ವಲ್ಪ ಕೇಸರಿ
ಸ್ವಲ್ಪ ಪಿಸ್ತಾ
-
ಕೇಸರಿ ಪೇಡಾ ಮಾಡುವ ವಿಧಾನ
* ಹಾಲನ್ನು ಕುದಿಸಿ, ನಂತರ ಸಿಮ್ನಲ್ಲಿಟ್ಟು ತುಂಬಾ ಹೊತ್ತು ಕುದಿಸಿ, ಹಾಲು ಗಟ್ಟಿಯಾಗಲಿ, ಆದರೆ ಹೀಗೆ ಕುದಿಸುವಾಗ ಆಗಾಗ ತಿರುಗಿಸುತ್ತಲೇ ಇರಿ.
* ಹಾಲು ಗಟ್ಟಿಯಾದಾಗ ಸಕ್ಕರೆ ಹಾಕಿ ಮಿಕ್ಸ್ ಮಾಡಿ. ಈಗ ಕೇಸರಿ ಹಾಕಿ, ಕೇಸರಿ ಹಾಕಿದಾಗ ಹಾಲು ಹಳದಿ ಬಣ್ಣಕ್ಕೆ ತಿರುಗುತ್ತದೆ.
* ಮಿಶ್ರಣ ಗಟ್ಟಿಯಾದಾಗ ಉರಿ ಆಫ್ ಮಾಡಿ. ಈಗ ಮಿಶ್ರಣವನ್ನು ಕೈಯಿಂದ ಕಲೆಸಿ ನಂತರ ತಣ್ಣಗಾಗಲು ಬಿಡಿ. ಈಗ ಅದರಿಂದ ಚಿಕ್ಕ-ಚಿಕ್ಕ ಉಂಡೆ ಕಟ್ಟಿ, ನಂತರ ಮೆಲ್ಲನೆ ಪ್ರೆಸ್ ಮಾಡಿ, ಅದರ ಮೇಲೆ ಪಿಸ್ತಾ ಉದುರಿಸಿ.
* ಇಷ್ಟು ಮಾಡಿದರೆ ಕೇಸರಿ ಪೇಡಾ ಸವಿಯಲು ರೆಡಿ.
- ಇದನ್ನು ಕೋವಾ ಹಾಕಿ ಮಾಡುವುದಾದರೆ ಇನ್ನು ಸುಲಭ, ಅಲ್ಲದೆ ಹಾಲು ಒಂದು ಚಮಚ ಸಾಕು.
- ಸರ್ವ್ - 1 ಪೇಡಾ
- ಕ್ಯಾಲೋರಿ - 98ಕ್ಯಾ
- ಪ್ರೊಟೀನ್ - 3 ಗ್ರಾಂ
- ಕಾರ್ಬ್ಸ್ - 10ಗ್ರಾಂ



Click it and Unblock the Notifications
