For Quick Alerts
ALLOW NOTIFICATIONS  
For Daily Alerts

ದೀಪಾವಳಿ ರೆಸಿಪಿ: 1ಲೀ ಹಾಲಿನಲ್ಲಿ ಮಾಡಿ ಕೇಸರಿ ಪೇಡಾ

Posted By:
|

ಕೇಸರಿ ಪೇಡಾ ಎಲ್ಲರೂ ಇಷ್ಟಪಡುವ ಒಂದು ತಿಂಡಿಯಾಗಿದೆ. ಅದರಲ್ಲೂ ದೀಪಾವಳಿ ಎಂದ ಮೇಲೆ ಪೇಡಾ ಸವಿಯದಿದ್ದರೆ ಆಗುತ್ತೇ, ದೀಪಾವಳಿಯಲ್ಲಿ ವೆರೈಟಿ ಸಿಹಿ ತಿಂಡಿ ಮಾಡಲಾಗುವುದು, ಅದರ ಜೊತೆಗೆ ಪೇಡಾ ಇದ್ದರೆ ಆ ಸಿಹಿ ತಿಂಡಿಯ ತಟ್ಟೆ ಅಥವಾ ಬಾಕ್ಸ್ ಸಂಪೂರ್ಣವಾಗುವುದು, ಬೇರೆ ಸಿಹಿ ತಿಂಡಿ ಇಟ್ಟು, ಪೇಡಾ ಇಲ್ಲದೆ ನೀವು ತಿಮಡಿ ಬಾಕ್ಸ್ ಕೊಟ್ಟರೆ ಅವರು ಅದನ್ನು ಓಪನ್ ಮಾಡಿ ಮೊದಲು ಹುಡುಕುವುದು ಪೇಡಾ ಇದೆಯೇ ಎಂದು, ಈ ಪೇಡಾ ಬೇಕರಿಯಲ್ಲಿ ಮಾತ್ರ ಸಿಗುವುದು ಎಂದೇನಿಲ್ಲ, ನೀವು ಕೂಡ ಮಾಡಬಹುದಾಗಿದೆ.

Kesar Peda Recipe

ಬನ್ನಿ ಹಾಲಿನಿಂದ ಕೇಸರಿ ಪೇಡಾ ಮಾಡುವುದು ಹೇಗೆ ಎಂದು ನೋಡೋಣ, ನೀವು ಮೊದಲಿಗೆ ಮಾಡುವುದಾದರೆ ಒಂದು ಲೀಟರ್‌ ಹಾಲಿನಲ್ಲಿ ಟ್ರೈ ಮಾಡಿ.
Kesar Peda Recipe, ಕೇಸರಿ ಪೇಡಾ ರೆಸಿಪಿ
Kesar Peda Recipe, ಕೇಸರಿ ಪೇಡಾ ರೆಸಿಪಿ
Prep Time
5 Mins
Cook Time
45M
Total Time
50 Mins

Recipe By: Reena TK

Recipe Type: Sweet

Serves: depends

Ingredients
  • ಬೇಕಾಗುವ ಸಾಮಗ್ರಿ

    1 ಲೀಟರ್ ಹಾಲು

    100 ಗ್ರಾಂ ಸಕ್ಕರೆ

    ಏಲಕ್ಕಿ ಪುಡಿ

    ಸ್ವಲ್ಪ ಕೇಸರಿ

    ಸ್ವಲ್ಪ ಪಿಸ್ತಾ

Red Rice Kanda Poha
How to Prepare
  • ಕೇಸರಿ ಪೇಡಾ ಮಾಡುವ ವಿಧಾನ

    * ಹಾಲನ್ನು ಕುದಿಸಿ, ನಂತರ ಸಿಮ್‌ನಲ್ಲಿಟ್ಟು ತುಂಬಾ ಹೊತ್ತು ಕುದಿಸಿ, ಹಾಲು ಗಟ್ಟಿಯಾಗಲಿ, ಆದರೆ ಹೀಗೆ ಕುದಿಸುವಾಗ ಆಗಾಗ ತಿರುಗಿಸುತ್ತಲೇ ಇರಿ.

    * ಹಾಲು ಗಟ್ಟಿಯಾದಾಗ ಸಕ್ಕರೆ ಹಾಕಿ ಮಿಕ್ಸ್ ಮಾಡಿ. ಈಗ ಕೇಸರಿ ಹಾಕಿ, ಕೇಸರಿ ಹಾಕಿದಾಗ ಹಾಲು ಹಳದಿ ಬಣ್ಣಕ್ಕೆ ತಿರುಗುತ್ತದೆ.

    * ಮಿಶ್ರಣ ಗಟ್ಟಿಯಾದಾಗ ಉರಿ ಆಫ್‌ ಮಾಡಿ. ಈಗ ಮಿಶ್ರಣವನ್ನು ಕೈಯಿಂದ ಕಲೆಸಿ ನಂತರ ತಣ್ಣಗಾಗಲು ಬಿಡಿ. ಈಗ ಅದರಿಂದ ಚಿಕ್ಕ-ಚಿಕ್ಕ ಉಂಡೆ ಕಟ್ಟಿ, ನಂತರ ಮೆಲ್ಲನೆ ಪ್ರೆಸ್ ಮಾಡಿ, ಅದರ ಮೇಲೆ ಪಿಸ್ತಾ ಉದುರಿಸಿ.

    * ಇಷ್ಟು ಮಾಡಿದರೆ ಕೇಸರಿ ಪೇಡಾ ಸವಿಯಲು ರೆಡಿ.

Instructions
  • ಇದನ್ನು ಕೋವಾ ಹಾಕಿ ಮಾಡುವುದಾದರೆ ಇನ್ನು ಸುಲಭ, ಅಲ್ಲದೆ ಹಾಲು ಒಂದು ಚಮಚ ಸಾಕು.
Nutritional Information
  • ಸರ್ವ್ - 1 ಪೇಡಾ
  • ಕ್ಯಾಲೋರಿ - 98ಕ್ಯಾ
  • ಪ್ರೊಟೀನ್ - 3 ಗ್ರಾಂ
  • ಕಾರ್ಬ್ಸ್ - 10ಗ್ರಾಂ
[ 5 of 5 - 75 Users]
X
Desktop Bottom Promotion