Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಕೇರಳ ಶೈಲಿಯ ಪುಳಿಂಜಿ (ಹುಳಿ, ಖಾರ, ಸಿಹಿ ಮಿಶ್ರಿತ ಶುಂಠಿ ಸಾರು) ರೆಸಿಪಿ
ಪುಳಿಂಜಿ ಇದು ಫೇಮಸ್ ಕೇರಳಶೈಲಿಯ ರೆಸಿಪಿಯಾಗಿದೆ. ಇದರ ರುಚಿ ನೋಡಿದವರು ಇದಕ್ಕೆ ಫಿದಾ ಆಗುವುದರಲ್ಲಿ ನೋ ಡೌಟ್ ಅಷ್ಟೊಂದು ರುಚಿಕರವಾಗಿರುತ್ತದೆ. ಕೇರಳ ಸದ್ಯ ( ಹಬ್ಬದ ಊಟ)ಯಲ್ಲಿ ಇದು ಇದ್ದೇ ಇರುತ್ತದೆ.
ಉಪ್ಪಿನಕಾಯಿ ಬಡಿಸುವ ರೀತಿ ಇದನ್ನು ಸ್ವಲ್ಪ-ಸ್ವಲ್ಪ ಬಡಿಸುತ್ತಾರೆ. ಆದರೆ ಇದರ ರುಚಿ ಮಾತ್ರ ಇದೆಯೆಲಲ್ಆ ನಿಮಗರಿಯದೆ ಎಂಥ ಡಯಟ್ ಫಾಲೋ ಮಾಡುತ್ತಿದ್ದರೂ ಎರಡು ತುತ್ತು ಅನ್ನ ಅಧಿಕವೇ ಉಣ್ಣುವಿರಿ.

ಇದನ್ನು ಮಾಡುವುದು ಸ್ವಲ್ಪ ಶ್ರಮದ ಕೆಲಸ ಆದರೆ ಇದರ ರುಚಿಗೆ ಪಟ್ಟ ಶ್ರಮ ಸಾರ್ಥಕ. ಇದನ್ನು ಮಾಡಿ ಹಾಗೇ ಇಟ್ಟರೆ ಒಂದು ವಾರ ಬಳಸಬಹುದು, ಫ್ರಿಡ್ಜ್‌ನಲ್ಲಿ ಇಟ್ಟರೆ ತಿಂಗಳವರೆಗೆ ಬಳಸಬಹುದು. ಇದನ್ನು ಮಾಡಬಯಸುವುದಾದರೆ ಕೇರಳ ಶೈಲಿಯ ರೆಸಿಪಿ ನೋಡಿ ಇಲ್ಲಿದೆ.
Recipe By: Reena TK
Recipe Type: Sides
Serves: 6-10
-
ಬೇಕಾಗುವ ಸಾಮಗ್ರಿ
ಶುಂಠಿ 1 ಕಪ್
ಹುಣಸೆ ಹಣ್ಣು 2 ನಿಂಬೆ ಹಣ್ಣು ಗಾತ್ರದಷ್ಟು
ಹಸಿ ಮೆಣಸಿನಕಾಯಿ 4-5
ಅರಿಶಿಣ ಪುಡಿ 1/4 ಚಮಚ
ಖಾರದ ಪುಡಿ 1/2 ಚಮಚ
ಸಾಸಿವೆ ಬೀಜ 1/2 ಚಮಚ
ಚಿಕ್ಕ ಈರುಳ್ಳಿ 5
ಒಣ ಮೆಣಸು 2-3
ಕರಿ ಬೇವು ಸ್ವಲ್ಪ
ತೆಂಗಿನೆಣ್ಣೆ 4-5 ಚಮಚ
ನೀರು 2 ಕಪ್
ರುಚಿಗೆ ತಕ್ಕ ಉಪ್ಪು
-
ಮಾಡುವ ವಿಧಾನ
* ಹುಣಸೆ ಹಣ್ಣನ್ನು ಬಿಸಿ ನೀರಿನಲ್ಲಿ ನೆನೆ ಹಾಕಿ.
* ಶುಂಠಿಯ ಸಿಪ್ಪೆ ಸುಲಿದು ಚಿಕ್ಕದಾಗಿ ಕತ್ತರಿಸಿ( ತುಂಬಾ ಚಿಕ್ಕದಾಗಿ ಕತ್ತರಿಸಬೇಕು, ಇದಕ್ಕೆ ತುಂಬಾ ಸಮಯ ಹಿಡಿಯುತ್ತೆ, ಅಷ್ಟು ಸಮಯ ಇಲ್ಲದಿದ್ದರೆ ಮಿಕ್ಸಿಯಲ್ಲಿ ಒಂದು ರೌಂಡ್ ತಿರುಗಿಸಿದರೆ ಸಾಕು).
* ಈಗ ಮಣಿನ ಪಾತ್ರೆ ಅಥವಾ ತಪ್ಪ ತಳವಿರುವ ಪಾತ್ರೆ ತೆಗೆದುಕೊಳ್ಳಿ.
* ಅದಕ್ಕೆ ಹುಣಸೆ ಹಣ್ಣಿ ರಸ ಹಾಕಿ, ಉಪ್ಪು, ಹಸಿ ಮೆಣಸಿನಕಾಯಿ ಕತ್ತರಿಸಿ ಹಾಕಿ, ಅರಿಶಿಣ ಪುಡಿ ಹಾಕಿ ಮಿಶ್ರ ಮಾಡಿ.
* ಮಿಶ್ರಣವನ್ನು ಚೆನ್ನಾಗಿ ಕುದಿಸಿ, ಕುದಿ ಬಂದು ಮಿಶ್ರಣ ಗಟ್ಟಿಯಾಗಲಿ, ಅದಕ್ಕೆ 1 ಕಪ್ ನೀರು ಹಾಕಿ, ಸ್ವಲ್ಪ ಬೆಲ್ಲದ ಪುಡಿ ಹಾಕಿ ಮಿಶ್ರ ಮಾಡಿ.
* ಈಗ ಪ್ಯಾನ್ ಬಿಸಿ ಮಾಡಿ ಅದಕ್ಕೆ ಸಾಸಿವೆ ಬೀಜ ಹಾಕಿ, ಅದು ಚಟ್ಪಟ್ ಶಬ್ದ ಮಾಡುವಾಗ ಕತ್ತರಿಸಿದ ಈರುಳ್ಳಿ, ಒಣ ಮೆಣಸು, ಹಸಿ ಮೆಣಸಿನಕಾಯಿ, ಕರಿ ಬೇವು ಹಾಕಿ, ಈರುಳ್ಳಿ ಕಂದು ಬಣ್ಣಕ್ಕೆ ಬರುವಷ್ಟು ಹೊತ್ತು ಫ್ರೈ ಮಾಡಿ.ಮಿಶ್ರಣ ಕುದಿ ಬರುವಾಗ ಕುದಿಸಿದ ಹುಣಸೆ ಹಣ್ಣಿನ ರಸ ಹಾಕಿ, ಶುಂಠಿ ಹಾಕಿ ಕಡಿಮೆ ಉರಿಯಲ್ಲಿ ಕುದಿಸಿ. ಮಿಶ್ರಣ ಗಟ್ಟಿಯಾದಾಗ ಅದನ್ನು ಉರಿಯಿಂದ ಇಳಿಸಿ ಟೇಸ್ಟ್ ಮಾಡಿ ನೀವು ವಾವ್! ಎನ್ನುವಿರಿ.
- ಪುಳಿಂಜಿ ತುಂಬಾ ಟೇಸ್ಟಿ ಫುಡ್ ಆಗಿದ್ದು, ಇದನ್ನು ಕೇರಳ ಹಬ್ಬಗಳಲ್ಲಿ ಕಡ್ಡಾಯವಾಗಿ ಮಾಡಲಾಗುವುದು
- ಸರ್ವ್ - 1 ಕಪ್
- ಕ್ಯಾಲೋರಿ - 60 ಕ್ಯಾ
- ಕೊಬ್ಬು - 10ಗ್ರಾಂ
- ಕಾರ್ಬ್ಸ್ - 95ಗ್ರಾಂ



Click it and Unblock the Notifications
