For Quick Alerts
ALLOW NOTIFICATIONS  
For Daily Alerts

ಕೇರಳ ಶೈಲಿ ಪಯಂಪುರಿ(ಬಾಳೆಹಣ್ಣಿನ ಬಜ್ಜಿ) ರೆಸಿಪಿ

Posted By:
|

'ಪಯಂಪುರಿ' ಇದು ಕೇರಳದ ಪ್ರಸಿದ್ಧ ಸ್ನ್ಯಾಕ್ಸ್‌ ಆಗಿದೆ. ನೀವು ಕೇರಳಕ್ಕೆ ಭೇಟಿ ನೀಡಿದರೆ ಅಲ್ಲಿಯ ವಿಶೇಷ ತಿನಿಸುಗಳ ಪಟ್ಟಿಯಲ್ಲಿ ಇದು ಕೂಡ ಇರುತ್ತದೆ. ನಮ್ಮಲ್ಲಿ ಸಂಜೆ ಮೆನಸಿನಕಾಯಿ ಬಜ್ಜಿ ಹೇಗೆ ಸವೆಯಲು ಇಷ್ಟಪಡುತ್ತೇವೀ ಹಾಗೇ ಬಾಳೆಹಣ್ಣಿನ ಬಜ್ಜಿ ಅಲ್ಲಿಯ ಜನರು ಹೆಚ್ಚಾಗಿ ಸವಿಯುತ್ತಾರೆ. ಇದರ ರುಚಿ ನಿಮಗೆ ಕೂಡ ಇಷ್ಟವಾಗಬಹುದು. ಇದನ್ನು ಮಾಡಲು ನಿಮಗೆ ಮುಖ್ಯವಾಗಿ ಬೇಕಾಗುರುವುದು ನೇಂದ್ರಬಾಳೆಹಣ್ಣು.

pazhampori recipe

ಮಂಗಳೂರಿನವರಿಗೆ ಇದು ಚಿರಪರಿಚಿತ, ಅದೇ ಉತ್ತರ ಕರ್ನಾಟಕದಲ್ಲಿ ಈ ಬಾಳೆಹಣ್ಣಿನ ರುಚಿ ನೋಡಿದವರು ವಿರಳ ಎಂದೇ ಹೇಳಬಹುದು, ಇದು ಹಣ್ಣಾದರೂ ಗಟ್ಟಿಯಾಗಿ ಇರುವುದರಿಂದ ಅಲ್ಲದೆ ಗಾತ್ರದಲ್ಲಿ ದೊಡ್ಡದಾಗಿ ಇರುವುದರಿಂದ ಇದನ್ನು ಕೊಟ್ಟರೆ ತಿನ್ನುವುದು ಹೇಗೆ ಎಂದು ಕೇಳುವವರೇ ಹೆಚ್ಚು. ನೀವು ಹಣ್ಣು ತಿನ್ನಲು ಇಷ್ಟಪಡದಿದ್ದರೂ ಇದರಿಂದ ಬಜ್ಜಿ ಮಾಡಿದರೆ ಖಂಡಿತ ತುಂಬಾ ಇಷ್ಟಪಟ್ಟು ಸವಿಯುತ್ತೀರಿ, ಅಷ್ಟೊಂದು ರುಚಿಯಾಗಿರುತ್ತೆ. ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:

Pazhampori Recipe , ಪಯಂಪುರಿ ರೆಸಿಪಿ
Pazhampori Recipe , ಪಯಂಪುರಿ ರೆಸಿಪಿ
Prep Time
10 Mins
Cook Time
10M
Total Time
20 Mins

Recipe By: Reena TK

Recipe Type: snacks

Serves: 5

Ingredients
  • ಬೇಕಾಗುವ ಸಾಮಗ್ರಿ

    ಹಣ್ಣಾದ ನೇಂದ್ರ ಬಾಳೆಹಣ್ಣು 3

    ಮೈದಾ 1 ಕಪ್

    ಅಕ್ಕಿ ಹಿಟ್ಟು 1 ಚಮಚ

    ಸಕ್ಕರೆ 1 ಚಮಚ

    ಅರಿಶಿಣ ಪುಡಿ, ಚಿಟಿಕೆಯಷ್ಟು

    ನೀರು

    ರುಚಿಗೆ ತಕ್ಕ ಉಪ್ಪು

    ಎಣ್ಣೆ

Red Rice Kanda Poha
How to Prepare
  • ಮಾಡುವ ವಿಧಾನ

    * ಬಾಳೆಹಣ್ಣಿನ ಸಿಪ್ಪೆ ಸುಲಿದು ಅದನ್ನು ಉದ್ದವಾಗಿ 3 ಭಾಗ ಮಾಡಿ.

    * ಒಂದು ಬೌಲ್‌ನಲ್ಲಿ ಮೈದಾ, ಅಕ್ಕಿಹಿಟ್ಟು, ಸಕ್ಕರೆ, ಅರಿಶಿಣ ಪುಡಿ ಉಪ್ಪು ಹಾಕಿ, ಸ್ವಲ್ಪ ನೀರು ಹಾಕಿ ಚೆನ್ನಾಗಿ ಕಲೆಸಿ.

    * ಮಿಶ್ರಣ ತುಂಬಾ ನೀರು-ನೀರಾಗಿ ಇರಬಾರದು.

    * ಬಾಣಲೆಗೆ 1 ಕಪ್ ಎಣ್ಣೆ ಹಾಕಿ ಬಿಸಿ ಮಾಡಿ, ಎಣ್ಣೆ ಕುದಿಯಲಾರಂಭಿಸಿದಾಗ ಬಾಳೆಹಣ್ಣನ್ನು ಮೈದಾ ಮಿಶ್ರಣದಲ್ಲಿ ಹಾಕಿ ಸ್ವಲ್ಪ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ, ನಂತರ ತೆಗೆದು ತಟ್ಟೆಗೆ.

    * ಈಗ ರೆಡಿಯಾದ ಬಾಳೆಹಣ್ಣಿನ ಬಜ್ಜಿಯನ್ನು ಬ್ಲ್ಯಾಕ್‌ ಟೀ ಜೊತೆ ಸರ್ವ್ ಮಾಡಿ ( ಬ್ಲ್ಯಾಕ್‌ ಟೀ ಇಷ್ಟ ಪಡದವರು ಮಾಮೂಲಿ ಟೀ ಜೊತೆ ಸವೆಯಿರಿ).

Instructions
  • ನೇಂದ್ರಬಾಳೆಹಣ್ಣು ಕರ್ನಾಟಕದಲ್ಲಿ ಕೆಲವರಿಗೆ ಪರಿಚಯವೇ ಇರಲ್ಲ, ಈ ಬಾಳೆಹಣ್ಣು ಸೂಪರ್‌ ಮಾರ್ಕೆಟ್‌ಗಳಲ್ಲಿ ಸಿಗುತ್ತವೆ. ಇನ್ನು ಮೈದಾ ಹಾಕಲು ಇಷ್ಟಪಡವರು ಗೋಧಿ ಹಿಟ್ಟು ಹಾಕಿಯೂ ಮಾಡಬಹುದು.
Nutritional Information
  • ಕ್ಯಾಲೋರಿ - 300ಕ್ಯಾ
  • ಕೊಬ್ಬು - 13ಗ್ರಾಂ
  • ಕಾರ್ಬ್ಸ್ - 45ಗ್ರಾಂ
[ 5 of 5 - 13 Users]
X
Desktop Bottom Promotion