Latest Updates
-
ಮರೆವಿನ ಕಾಯಿಲೆಗೆ ವಿದಾಯ: ಮೆದುಳಿನ ಆರೋಗ್ಯಕ್ಕೆ ಭಾರತೀಯ ಶೈಲಿಯ 'ಮೈಂಡ್ ಡಯಟ್' ಹೀಗಿರಲಿ! -
2026ರ ಏಷ್ಯನ್ ಗೇಮ್ಸ್: ಮೊದಲ ದಿನವೇ ಭಾರತಕ್ಕೆ ಪದಕದ ಬೇಟೆ! ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ ಮತ್ತು ಲೈವ್ ಅಪ್ಡೇಟ್ಸ್ ಇಲ್ಲಿದೆ -
ದೆಹಲಿ-ಎನ್ಸಿಆರ್ನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಬಾಂದ್ರಾ ಫೇರ್ ರಶ್: ಕಪಲ್ಸ್ ಹುಷಾರ್! ಟ್ರಾಫಿಕ್ ಜಾಮ್ನಲ್ಲಿ ಸಿಲುಕದಂತೆ ಡೇಟಿಂಗ್ ಪ್ಲಾನ್ ಮಾಡುವುದು ಹೇಗೆ? -
ಅಪಾರ್ಟ್ಮೆಂಟ್ನಲ್ಲಿ ಗಣೇಶ ವಿಸರ್ಜನೆ: ಪರಿಸರ ಸ್ನೇಹಿಯಾಗಿ ಆಚರಿಸಲು ಇಲ್ಲಿವೆ 5 ಸಿಂಪಲ್ ಟಿಪ್ಸ್ -
ಹಬ್ಬದ ಸೀಸನ್ನಲ್ಲಿ ಎಚ್ಚರ! ಮಾರುಕಟ್ಟೆಯಲ್ಲಿ ನಕಲಿ 'ಅನಲಾಗ್ ಪನೀರ್' ಹಾವಳಿ: ಅಸಲಿ ಪನೀರ್ ಗುರುತಿಸುವುದು ಹೇಗೆ? -
iPhone 18 ಪ್ರೀ-ಆರ್ಡರ್ ಆರಂಭ: ನಿಮ್ಮ ಫೋನ್ ಬುಕ್ ಮಾಡುವ ಮುನ್ನ ಈ 5 ವಿಷಯಗಳನ್ನು ಮಿಸ್ ಮಾಡ್ಬೇಡಿ! -
ಬೀಚ್ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳುತ್ತಿದ್ದೀರಾ? ಗಾಯಗಳಾಗದಂತೆ ಕೆಲಸ ಮಾಡಲು ಈ ಸುರಕ್ಷತಾ ಟಿಪ್ಸ್ ಮಿಸ್ ಮಾಡಬೇಡಿ! -
ಇಂದಿನ ಲವ್ ಜಾತಕ: ನಿಮ್ಮ ಪ್ರೀತಿಯನ್ನು ಗಟ್ಟಿಗೊಳಿಸಲು ಇಂದಿನ ಬೆಸ್ಟ್ ಟಿಪ್ಸ್ ಮತ್ತು ಡೇಟಿಂಗ್ ಐಡಿಯಾಗಳು -
₹1,000 ಕ್ಕಿಂತ ಕಡಿಮೆ ಬಜೆಟ್ನಲ್ಲಿ ಮನೆಗೆ ಹೊಸ ಲುಕ್: ಬಿದಿರಿನ ಅಲಂಕಾರಿಕ ವಸ್ತುಗಳ ಮ್ಯಾಜಿಕ್!
ಕೇರಳ ಶೈಲಿ ಪಯಂಪುರಿ(ಬಾಳೆಹಣ್ಣಿನ ಬಜ್ಜಿ) ರೆಸಿಪಿ
'ಪಯಂಪುರಿ' ಇದು ಕೇರಳದ ಪ್ರಸಿದ್ಧ ಸ್ನ್ಯಾಕ್ಸ್ ಆಗಿದೆ. ನೀವು ಕೇರಳಕ್ಕೆ ಭೇಟಿ ನೀಡಿದರೆ ಅಲ್ಲಿಯ ವಿಶೇಷ ತಿನಿಸುಗಳ ಪಟ್ಟಿಯಲ್ಲಿ ಇದು ಕೂಡ ಇರುತ್ತದೆ. ನಮ್ಮಲ್ಲಿ ಸಂಜೆ ಮೆನಸಿನಕಾಯಿ ಬಜ್ಜಿ ಹೇಗೆ ಸವೆಯಲು ಇಷ್ಟಪಡುತ್ತೇವೀ ಹಾಗೇ ಬಾಳೆಹಣ್ಣಿನ ಬಜ್ಜಿ ಅಲ್ಲಿಯ ಜನರು ಹೆಚ್ಚಾಗಿ ಸವಿಯುತ್ತಾರೆ. ಇದರ ರುಚಿ ನಿಮಗೆ ಕೂಡ ಇಷ್ಟವಾಗಬಹುದು. ಇದನ್ನು ಮಾಡಲು ನಿಮಗೆ ಮುಖ್ಯವಾಗಿ ಬೇಕಾಗುರುವುದು ನೇಂದ್ರಬಾಳೆಹಣ್ಣು.

ಮಂಗಳೂರಿನವರಿಗೆ ಇದು ಚಿರಪರಿಚಿತ, ಅದೇ ಉತ್ತರ ಕರ್ನಾಟಕದಲ್ಲಿ ಈ ಬಾಳೆಹಣ್ಣಿನ ರುಚಿ ನೋಡಿದವರು ವಿರಳ ಎಂದೇ ಹೇಳಬಹುದು, ಇದು ಹಣ್ಣಾದರೂ ಗಟ್ಟಿಯಾಗಿ ಇರುವುದರಿಂದ ಅಲ್ಲದೆ ಗಾತ್ರದಲ್ಲಿ ದೊಡ್ಡದಾಗಿ ಇರುವುದರಿಂದ ಇದನ್ನು ಕೊಟ್ಟರೆ ತಿನ್ನುವುದು ಹೇಗೆ ಎಂದು ಕೇಳುವವರೇ ಹೆಚ್ಚು. ನೀವು ಹಣ್ಣು ತಿನ್ನಲು ಇಷ್ಟಪಡದಿದ್ದರೂ ಇದರಿಂದ ಬಜ್ಜಿ ಮಾಡಿದರೆ ಖಂಡಿತ ತುಂಬಾ ಇಷ್ಟಪಟ್ಟು ಸವಿಯುತ್ತೀರಿ, ಅಷ್ಟೊಂದು ರುಚಿಯಾಗಿರುತ್ತೆ. ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:
Recipe By: Reena TK
Recipe Type: snacks
Serves: 5
-
ಬೇಕಾಗುವ ಸಾಮಗ್ರಿ
ಹಣ್ಣಾದ ನೇಂದ್ರ ಬಾಳೆಹಣ್ಣು 3
ಮೈದಾ 1 ಕಪ್
ಅಕ್ಕಿ ಹಿಟ್ಟು 1 ಚಮಚ
ಸಕ್ಕರೆ 1 ಚಮಚ
ಅರಿಶಿಣ ಪುಡಿ, ಚಿಟಿಕೆಯಷ್ಟು
ನೀರು
ರುಚಿಗೆ ತಕ್ಕ ಉಪ್ಪು
ಎಣ್ಣೆ
-
ಮಾಡುವ ವಿಧಾನ
* ಬಾಳೆಹಣ್ಣಿನ ಸಿಪ್ಪೆ ಸುಲಿದು ಅದನ್ನು ಉದ್ದವಾಗಿ 3 ಭಾಗ ಮಾಡಿ.
* ಒಂದು ಬೌಲ್ನಲ್ಲಿ ಮೈದಾ, ಅಕ್ಕಿಹಿಟ್ಟು, ಸಕ್ಕರೆ, ಅರಿಶಿಣ ಪುಡಿ ಉಪ್ಪು ಹಾಕಿ, ಸ್ವಲ್ಪ ನೀರು ಹಾಕಿ ಚೆನ್ನಾಗಿ ಕಲೆಸಿ.
* ಮಿಶ್ರಣ ತುಂಬಾ ನೀರು-ನೀರಾಗಿ ಇರಬಾರದು.
* ಬಾಣಲೆಗೆ 1 ಕಪ್ ಎಣ್ಣೆ ಹಾಕಿ ಬಿಸಿ ಮಾಡಿ, ಎಣ್ಣೆ ಕುದಿಯಲಾರಂಭಿಸಿದಾಗ ಬಾಳೆಹಣ್ಣನ್ನು ಮೈದಾ ಮಿಶ್ರಣದಲ್ಲಿ ಹಾಕಿ ಸ್ವಲ್ಪ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ, ನಂತರ ತೆಗೆದು ತಟ್ಟೆಗೆ.
* ಈಗ ರೆಡಿಯಾದ ಬಾಳೆಹಣ್ಣಿನ ಬಜ್ಜಿಯನ್ನು ಬ್ಲ್ಯಾಕ್ ಟೀ ಜೊತೆ ಸರ್ವ್ ಮಾಡಿ ( ಬ್ಲ್ಯಾಕ್ ಟೀ ಇಷ್ಟ ಪಡದವರು ಮಾಮೂಲಿ ಟೀ ಜೊತೆ ಸವೆಯಿರಿ).
- ನೇಂದ್ರಬಾಳೆಹಣ್ಣು ಕರ್ನಾಟಕದಲ್ಲಿ ಕೆಲವರಿಗೆ ಪರಿಚಯವೇ ಇರಲ್ಲ, ಈ ಬಾಳೆಹಣ್ಣು ಸೂಪರ್ ಮಾರ್ಕೆಟ್ಗಳಲ್ಲಿ ಸಿಗುತ್ತವೆ. ಇನ್ನು ಮೈದಾ ಹಾಕಲು ಇಷ್ಟಪಡವರು ಗೋಧಿ ಹಿಟ್ಟು ಹಾಕಿಯೂ ಮಾಡಬಹುದು.
- ಕ್ಯಾಲೋರಿ - 300ಕ್ಯಾ
- ಕೊಬ್ಬು - 13ಗ್ರಾಂ
- ಕಾರ್ಬ್ಸ್ - 45ಗ್ರಾಂ



Click it and Unblock the Notifications
