Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ರೆಸಿಪಿ: ಯಮ್ಮೀ...ಯಮ್ಮೀ ಕೀಮಾ ದಾಲ್
ನೀವು ಕೀಮಾ ಇಷ್ಟ ಪಡುವುದಾದರೆ ಅದನ್ನು ದಾಲ್ ಜೊತೆ ಒಮ್ಮೆ ಟ್ರೈ ಮಾಡಿ ನೋಡಿ, ಟೇಸ್ಟ್ ಖಂಡಿತ ನಿಮಗೆ ಇಷ್ಟವಾಗುವುದು. ಈ ಕೀಮಾ ರೆಸಿಪಿ ಮಾಡಲು ಸರಳವಾಗಿದ್ದು ಇದನ್ನು ನೀವು ದಾಲ್ ಅಥವಾ ಬಟಾಣಿ ಜೊತೆ ಹಾಕಿ ತಯಾರಿಸಬಹುದು, ನಿಮ್ಮ ರುಚಿಗೆ ತಕ್ಕಂತೆ ನೀವು ಇದನ್ನು ತಯಾರಿಸಿ ತಿನ್ನಬಹುದು.

ಇದನ್ನು ಚಪಾತಿ ಅಥವಾ ರೊಟ್ಟಿ, ನಾನ್ ಜೊತೆ ಸವಿಯಲು ಸೂಪರ್ ಆಗಿದ್ದು ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:
Recipe By: Reena TK
Recipe Type: Curry
Serves: 4
-
ಬೇಕಾಗುವ ಸಾಮಗ್ರಿ
* 2 ಚಮಚ ಅಡುಗೆ ಎಣ್ಣೆ ಅಥವಾ ಸಾಸಿವೆ ಎಣ್ಣೆ
* 1 ಕಪ್ ಈರುಳ್ಳಿ ಕತ್ತರಿಸಿದ್ದು
* 2 ಚಮಚ ಶುಂಠಿ
* 1 ಕತ್ತರಿಸಿದ ಹಸಿ ಮೆಣಸು (optional)
* 2 ಟೊಮೆಟೊ (ಕತ್ತರಿಸಿದ್ದು)
* 1 ಚಮಚ ಜೀರಿಗೆ ಪುಡಿ
* 2 ಚಮಚ ಕೊತ್ತಂಬರಿ ಪುಡಿ
* 1/2 ಚಮಚ ಖಾರದ ಪುಡಿ (ರುಚಿಗೆ ತಕ್ಕಷ್ಟು)
ರುಚಿಗೆ ತಕ್ಕ ಉಪ್ಪು
* 250ಗ್ರಾಂ ಆಡು ಮಾಂಸ/ಚಿಕನ್/ಟರ್ಕಿ
* 1ಕಪ್ ತೊಗರಿ ಬೇಳೆ
*ಎರಡೂವರೆ ಕಪ್ ನೀರು
* 1 ಚಮಚ ಗರಂ ಮಸಾಲೆ ಪುಡಿ
* 2 ಚಮಚ ಕತ್ತರಿಸಿದ ಪುದೀನಾ
* 1 ನಿಂಬೆಹಣ್ಣು
-
ಮಾಡುವ ವಿಧಾನ
* ಪ್ರೆಶರ್ ಕುಕ್ಕರ್ನಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ. ಎಣ್ಣೆ ಬಿಸಿಯಾದಾ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ. (ಅಲಂಕಾರಕ್ಕೆ ಬೇಕಿದ್ದರೆ ಈರುಳ್ಳಿ ಸ್ವಲ್ಪ ಅಧಿಕ ಫ್ರೈ ಮಾಡಿ ತೆಗೆದು ಇಡಬಹುದು)
* ಈಗ ಶುಂಠಿ, ಟೊಮೆಟೊ, ಹಸಿ ಮೆಣಸು ಹಾಕಿ ಸೌಟ್ನಿಂದ ಆಡಿಸುತ್ತಾ ಫ್ರೈ ಮಾಡಿ. ಅದರಿಂದ ಎಣ್ಣೆ ಬೇರ್ಪಟ್ಟು ಮೇಲ್ಭಾಗದಲ್ಲಿ ತೇಲುವಷ್ಟು ಹೊತ್ತು ಫ್ರೈ ಮಾಡಿ.
* ಈಗ ಅರಿಶಿಣ ಪುಡಿ, ಜೀರಿಗೆ ಪುಡಿ, ಕೊತ್ತಂಬರಿ ಪುಡಿ, ಖಾರದ ಪುಡಿ, ರುಚಿಗೆ ತಕ್ಕ ಉಪ್ಪು ಹಾಕಿ 2 ನಿಮಿಷ ಸೌಟ್ನಿಂದ ಆಡಿಸುತ್ತಾ ಫ್ರೈ ಮಾಡಿ.
* ಈಗ ಕೀಮಾಗೆ ಕತ್ತರಿಸಿದ ಮಟನ್ ಹಾಕಿ ಫ್ರೈ ಮಾಡಿ, ಮಟನ್ ಬಣ್ಣ ಸ್ವಲ್ಪ ಬದಲಾದಾಗ ತೊಗರಿ ಬೇಳೆ ಹಾಕಿ, ನೀರು ಹಾಕಿ 3-4 ವಿಶಲ್ ಬರುವವರೆಗೆ ಫ್ರೈ ಮಾಡಿ.
* ನಂತರ ಕುಕ್ಕರ್ನ ಹಬೆ ಹೋದ ಬಳಿಕ ಮುಚ್ಚಳ ತೆಗೆದು ಅದಕ್ಕೆ ಗರಂ ಮಸಾಲ ಪುಡಿ, ಪುದೀನಾ ಎಲೆ ಹಾಕಿ ಮಿಶ್ರ ಮಾಡಿ, ನಿಂಬೆ ರಸ ಹಿಂಡಿ.
* ಈಗ ಬೌಲ್ಗೆ ಹಾಕಿ ಅದರ ಬೇಳೆ ಫ್ರೈ ಮಾಡಿ ತೆಗೆದಿಟ್ಟ ಸ್ವಲ್ಪ ಈರುಳ್ಳಿಯಿಂದ ಅಲಂಕರಿಸಿದರೆ ಕೀಮಾ ದಾಲ್ ರೆಡಿ.
- ನೀವು ಕಪ್ಪು ದಾಲ್, ಕೆಂಪು ದಾಲ್ ಬೇಕಾದರೆ ಬಳಸಬಹುದು.
- ಸರ್ವ್ - 250ಗ್ರಾಂ ಕೀಮಾ
- ಕ್ಯಾಲೋರಿ - 36ಕ್ಯಾ
- ಕೊಬ್ಬು - 15ಗ್ರಾಂ
- ಪ್ರೊಟೀನ್ - 36ಗ್ರಾಂ



Click it and Unblock the Notifications
