Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
Katta Avallaki: 5 ನಿಮಿಷದಲ್ಲಿ ಕಟ್ಟಾ ಅವಲಕ್ಕಿ! ಬ್ರೇಕ್‌ಫಾಸ್ಟ್ ಇನ್ನೆಂದು ತಡವಾಗಲ್ಲ!
Katta Avallaki: ಬೆಳಗ್ಗೆ ತಿಂಡಿಗೆ ನೀವು ಹಲವು ರೀತಿಯ ತಿಂಡಿಗಳ ಮಾಡಿ ಸವಿದಿರುತ್ತೀರಿ, ಅದ್ರಲ್ಲೂ ವಿಶೇಷ ಬಗೆಯ ತಿಂಡಿಗಳು ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಆದ್ತೆ ಬೆಳಗ್ಗೆ ಎಲ್ಲರು ಗಡಿಬಿಡಿಯಲ್ಲಿಯೇ ತಿಂಡಿ ಮಾಡುವ ಕುರಿತಾಗಿ ಆಲೋಚಿಸುತ್ತಾರೆ. ಮಕ್ಕಳು ಶಾಲೆಗೆ ಹೋಗುವುದಾದರೆ, ಪತಿ ಕೆಲಸಕ್ಕೆ ಹೋಗುವುದಾದರೆ ಇಲ್ಲವೆ ಮಕ್ಕಳು ಕೆಲಸಕ್ಕೆ ತೆರಳುವ ಮನೆ ಆಗಿದ್ದರೆ ಬೆಳಗ್ಗೆ ಬೇಗನೆ ತಿಂಡಿ ಮಾಡಿ ಮುಗಿಸಬೇಕಾಗುತ್ತದೆ.
ಇಂತಹ ಸಮಯದಲ್ಲಿ ನೀವು ಸುಲಭವಾಗಿ ಮಾಡಿ ಮುಗಿಸಬಹುದಾದ ಯಾವುದಾದರು ತಿಂಡಿ ಕುರಿತು ಆಲೋಚಿಸುತ್ತೀರಿ. ಸಾಮಾನ್ಯವಾಗಿ ಚಿತ್ರಾನ್ನ, ಪಲಾವ್, ರೈಸ್ ಬಾತ್, ಉಪ್ಪಿಟ್ಟು ಇಂತಹ ತಿಂಡಿಗಳನ್ನು ಕಡಿಮೆ ಸಮಯದಲ್ಲಿ ಮಾಡಿ ಮುಗಿಸಬಹುದು. ಹಾಗೆ ಅವಲಕ್ಕಿಯಿಂದ ಮಾಡುವಂತಹ ಬಗೆ ಬಗೆಯ ಖಾದ್ಯಗಳಿಗೂ ಹೆಚ್ಚು ಸಮಯ ಹಿಡಿಯೋದಿಲ್ಲ.

ನಾವಿಂದು ಬೆಳಗ್ಗೆ ಸಮಯವೇ ಇಲ್ಲ ಎನ್ನುವಾಗ 5 ನಿಮಿಷದ ಸಮಯದಲ್ಲಿ ಮಾಡಿ ಮುಗಿಸಬಹುದಾದ ರುಚಿ ರುಚಿಯಾದ ಕಟ್ಟಾ ಅವಲಕ್ಕಿ ತಿಂಡಿ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ. ಹಾಗಾದ್ರೆ ಈ ಅವಲಕ್ಕಿ ತಿಂಡಿ ಮಾಡುವುದು ಹೇಗೆ? ಕಟ್ಟಾ ಅವಲಕ್ಕಿ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?, ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಕಟ್ಟಾ ಅವಲಕ್ಕಿ ತಿಂಡಿಗೆ ಬೇಕಾವುವ ವಸ್ತುಗಳು
ಪೇಪರ್ ಅವಲಕ್ಕಿ
ಹಸಿ ಮೆಣಸು ಅಥವಾ ಒಣ ಮೆಣಸು
ಕರಿಬೇವು
ಅರಶಿಣ
ಉಪ್ಪು
ಸಾಸಿವೆ
ಎಣ್ಣೆ
ಕಪ್ಪು ಎಳ್ಳು
ಒಣ ದ್ರಾಕ್ಷಿ
ಬಾದಾಮಿ
ಕಡಲೆ ಬೀಜ
ಹುರಿಗಡಲೆ
ಕಟ್ಟಾ ಅವಲಕ್ಕಿ ತಿಂಡಿ ಮಾಡುವುದು ಹೇಗೆ
ಮೊದಲಿಗೆ ಒಲೆ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿಕೊಂಡು ಅದಕ್ಕೆ ಕಡಲೆ ಬೀಜ ಹಾಕಿಕೊಂಡು ಕರಿದುಕೊಳ್ಳಿ. ನಂತರ ಇದನ್ನು ತೆಗೆದು ಬದಿಗಿಟ್ಟು ಈಗ ಅದೇ ಎಣ್ಣೆಗೆ ಹುರಿಗಡಲೆ ಕೂಡ ಹಾಕಿ ಹುರಿದು ತೆಗೆದಿಡಿ. ನಂತರ ಕರಿಬೇವು ಸಹ ಹಾಕಿ ಫ್ರೈ ಮಾಡಿ ತೆಗೆದಿಟ್ಟುಕೊಳ್ಳಿ. ಈಗ ಬಾಣಲೆಯ ಎಣ್ಣೆ ತೆಗೆದು ಬಳಿಕ 1 ಸ್ಪೂನ್ ತುಪ್ಪ ಹಾಕಿ ದ್ರಾಕ್ಷಿ ಗೋಡಂಬಿ, ಬಾದಾಮಿ ಹಾಕಿ ಫ್ರೈ ಮಾಡಿ ತೆಗೆದಿಡಿ.
ಈಗ ಅದೇ ಬಾಣಲೆಗೆ ಒಣ ಮೆಣಸು ಅಥವಾ ಹಸಿ ಮೆಣಸು, ಅರಶಿಣ, ಉಪ್ಪು, ಕಪ್ಪು ಎಳ್ಳು, ಹಾಕಿ ಬಳಿಕ ಪೇಪರ್ ಅವಲಕ್ಕಿ ಹಾಕಿ. ಪೇಪರ್ ಅವಲಕ್ಕಿಗೆ ನೀರು ಹಾಕಿ ನೆನೆಸುವ ಅಗತ್ಯವಿಲ್ಲ ಹಾಗೆಯೇ ಹಾಕಿ. ಚೆನ್ನಾಗಿ 2 ನಿಮಿಷಗ ಕಾಲ ಫ್ರೈ ಮಾಡಿಕೊಳ್ಳಿ. ಈಗ ಕರಿಬೇವು, ಹಾಗೆ ಮೊದಲು ತುಪ್ಪದಲ್ಲಿ ಹುರಿದುಕೊಂಡಿದ್ದ ಡ್ರೈ ಫ್ರೋಟ್ಸ್ ಅನ್ನು ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಹಾಗೆ ಹುರಿಗಡಲೆ, ಕಡಲೇ ಬೀಜ ಸಹ ಇದಕ್ಕೆ ಹಾಕಿ ಒಲೆ ಆಫ್ ಮಾಡಿಕೊಳ್ಳಿ.
ನಂತರ ನಿಧಾನವಾಗಿ 2 ನಿಮಿಷ ಮಿಕ್ಸ್ ಮಾಡಿ ಎಲ್ಲಾ ಮಸಾಲೆಯೂ ಈ ಅವಲಕ್ಕಿಗೆ ಹಿಡಿಯಬೇಕು ಹಾಗೆ ಮಿಕ್ಸ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಕಟ್ಟಾ ಅವಲಕ್ಕಿ ತಿಂಡಿ ರೆಡಿಯಾಗುತ್ತೆ. ಮಸಾಲೆ ಭರಿತ ಈ ತಿಂಡಿ ಸವಿಯಲು ಬಹಳ ರುಚಿ ನೀಡಲಿದೆ. ಹಾಗೆ ಬೆಳಗ್ಗೆ ತಿಂಡಿಗೆ ಮಾತ್ರವಲ್ಲ ಸಂಜೆಯ ಸ್ನ್ಯಾಕ್ಸ್ ಸೇರಿದಂತೆ ಬಾಕ್ಸ್‌ಗೂ ಇದನ್ನು ಬಳಸಬಹುದು, ಒಂದು ಸ್ಟೀಲ್ ಡಬ್ಬಿಯಲ್ಲಿ ಹಾಕಿ ಇಟ್ಟರೆ ಇದು ಬಹಳ ಸಮಯ ಹಾಳಾಗುವುದಿಲ್ಲ. ಈ ವಿಧಾನದಲ್ಲಿ ಮಾಡಿದರೆ ರುಚಿಗೆ ನಿತ್ಯವೂ ಮಾಡಿ ಸವಿಯಲು ಮುಂದಾಗೋದು ಖಚಿತ. ಹಾಗೆ ನೀವು ಇದಕ್ಕೆ ಸಕ್ಕರೆ ಕೂಡ ಕೊನೆಯಲ್ಲಿ ಹಾಕಿಕೊಳ್ಳಬಹುದು. ಇದು ಸಹ ರುಚಿ ಹೆಚ್ಚಾಗುವಂತೆ ಮಾಡಲಿದೆ.



Click it and Unblock the Notifications
