Latest Updates
-
ದೆಹಲಿ-ಎನ್ಸಿಆರ್ನಲ್ಲಿ ಧೂಳಿನ ಆರ್ಭಟ: ಹೊರಗೆ ಹೋಗುವ ಮುನ್ನ ಎಚ್ಚರ, ಮನೆಯಲ್ಲೇ ಫಿಟ್ ಆಗಿರಲು ಈ 8 ನಿಮಿಷದ ಟಿಪ್ಸ್! -
ಟೆಲಿಗ್ರಾಂ ಬಳಕೆದಾರರೇ ಗಮನಿಸಿ: ಸೇವೆ ಆರಂಭವಾದರೂ ಈ ಬದಲಾವಣೆ ಮರೆಯದಿರಿ! -
ಬಿಸಿಗಾಳಿಯ ಎಚ್ಚರಿಕೆ: ಅಡುಗೆ ಮಾಡದೆಯೇ ದೇಹಕ್ಕೆ ತಂಪು ನೀಡುವ ಪ್ರೋಟೀನ್ ಆಹಾರಗಳಿವು! -
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ!
ಅಪ್ಪಟ ಹೋಟೆಲ್ ಶೈಲಿಯ ರಾಯಲ್ ಕಾಶ್ಮೀರಿ ಪುಲಾವ್! ಬಾಯಲ್ಲಿ ನೀರೂರಿಸುವ ರುಚಿ.. ಮಾಡೋದು ಹೇಗೆ?
ಅಪ್ಪಟ ಕಾಶ್ಮೀರಿ ರುಚಿ.. ಅತಿಥಿಗಳು ಫಿದಾ ಆಗೋದು ಗ್ಯಾರಂಟಿ! ಮನೆಯಲ್ಲೇ ಮಾಡಿ ರೆಸ್ಟೋರೆಂಟ್ ಸ್ಟೈಲ್ ಕಾಶ್ಮೀರಿ ಪುಲಾವ್ (Kashmiri Pulao). ಹೌದು, ಅತಿಥಿಗಳು ಮನೆಗೆ ಬಂದಾಗ ಅಥವಾ ಯಾವುದೇ ವಿಶೇಷ ಸಂಭ್ರಮವಿದ್ದಾಗ ಸಾಂಪ್ರದಾಯಿಕ ಬಿರಿಯಾನಿ, ವೆಜ್ ಪಲಾವ್ (Pulao) ಬದಲು ಈ ಬಾರಿ ಅಪ್ಪಟ ಕಾಶ್ಮೀರಿ ಶೈಲಿಯ ಪುಲಾವ್ ಪ್ರಯತ್ನಿಸಿ. ಇದು ರುಚಿ ಮತ್ತು ನೋಟ ಎರಡರಲ್ಲೂ ಆಕರ್ಷಕವಾಗಿ ಎಲ್ಲರ ಮೆಚ್ಚುಗೆ ಗಳಿಸುತ್ತದೆ.
ಕೇಸರಿ, ಸೇಬು, ದಾಳಿಂಬೆ ಹಾಗೂ ಒಣಹಣ್ಣುಗಳ ಸಮೃದ್ಧ ಸಮ್ಮಿಲನವಿರುವ ಈ ಖಾದ್ಯವು ಅತಿಯಾದ ಖಾರವಿಲ್ಲದೆ, ಲಘು ಸಿಹಿ ಮತ್ತು ಮಸಾಲೆಯುಕ್ತ ಸುವಾಸನೆ ನೀಡುತ್ತದೆ. ಮಕ್ಕಳು, ಹಿರಿಯರು ಎಲ್ಲರೂ ಇಷ್ಟಪಡುವ ಹೋಟೆಲ್ ಶೈಲಿಯ ರಾಯಲ್ ಕಾಶ್ಮೀರಿ ಪುಲಾವ್ ತಯಾರಿಸುವ ಸಂಪೂರ್ಣ ವಿಧಾನ (Kashmiri Pulao Recipe) ಮತ್ತು ಕೆಲವು ಸಲಹೆಗಳು ಇಲ್ಲಿವೆ.

ಕಾಶ್ಮೀರಿ ಪುಲಾವ್‌ಗೆ ಬೇಕಾಗುವ ಪದಾರ್ಥಗಳು
• ಬಾಸ್ಮತಿ ಅಕ್ಕಿ - ಒಂದು ಕಪ್ (ತೊಳೆದು 30 ನಿಮಿಷ ನೆನೆಸಿದ್ದು)
• ಗೋಡಂಬಿ - 8-10
• ಬಾದಾಮಿ - 8-10
• ದಾಳಿಂಬೆ ಕಾಳು - 1/4 ಕಪ್
• ಸೇಬು - 1/2 ಕಪ್
• ಏಲಕ್ಕಿ ಪುಡಿ - 1/2 ಚಮಚ
• ಏಲಕ್ಕಿ - 2
• ಲವಂಗ - 3
• ದಾಲ್ಚಿನ್ನಿ - 1 ಇಂಚು
• ಪಲಾವ್ ಎಲೆ - 1
• ಕಾಶ್ಮೀರಿ ಕೆಂಪು ಮೆಣಸಿನ ಪುಡಿ - 1/2 ಚಮಚ
• ಸಕ್ಕರೆ - 1 ಚಮಚ
• ಕೇಸರಿ ದಳ - 2 ಚಿಟಿಕೆ
• ಕೊತ್ತಂಬರಿ ಸೊಪ್ಪು
• ತುಪ್ಪ - ಅಗತ್ಯಕ್ಕೆ ತಕ್ಕಷ್ಟು
• ಉಪ್ಪು - ರುಚಿಗೆ ತಕ್ಕಷ್ಟು
ಕಾಶ್ಮೀರಿ ಪುಲಾವ್ ತಯಾರಿಸುವ ವಿಧಾನ
- ಮೊದಲು ಬಾಸ್ಮತಿ ಅಕ್ಕಿಯನ್ನು ತೊಳೆದು 30 ನಿಮಿಷ ನೆನೆಸಿಡಿ.
- ಈಗ ಒಂದು ದಪ್ಪ ತಳದ ಪಾತ್ರೆ ಅಥವಾ ಕಡಾಯಿಯಲ್ಲಿ ಅಗತ್ಯಕ್ಕೆ ತಕ್ಕಷ್ಟು ತುಪ್ಪ ಹಾಕಿ ಬಿಸಿ ಮಾಡಿ.
- ತುಪ್ಪ ಕಾದ ನಂತರ ಲವಂಗ, ದಾಲ್ಚಿನ್ನಿ, ಪಲಾವ್ ಎಲೆ ಮತ್ತು ದೊಡ್ಡ ಏಲಕ್ಕಿ ಹಾಕಿ ಘಮ ಬರುವವರೆಗೆ ಹುರಿಯಿರಿ.
- ನಂತರ ಹುರಿದ ಮಸಾಲೆಗಳಿಗೆ ಕಾಶ್ಮೀರಿ ಕೆಂಪು ಮೆಣಸಿನ ಪುಡಿ, ಸಕ್ಕರೆ, ಕೇಸರಿ ದಳ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಒಂದು ನಿಮಿಷ ಬಾಡಿಸಿ. ಕೇಸರಿ ಮತ್ತು ಸಕ್ಕರೆಯು ಪುಲಾವ್‌ಗೆ ನೈಸರ್ಗಿಕ ಬಣ್ಣ ಹಾಗೂ ಹದವಾದ ಸಿಹಿಯನ್ನು ನೀಡುತ್ತವೆ.
- ನೆನೆಸಿದ ಅಕ್ಕಿಯಿಂದ ನೀರನ್ನು ಬಸಿದು ಮಸಾಲೆಯೊಂದಿಗೆ ಸೇರಿಸಿ 1 ರಿಂದ 2 ನಿಮಿಷ ಹಗುರವಾಗಿ ಫ್ರೈ ಮಾಡಿ.
- ನಂತರ ಇದಕ್ಕೆ 2 ಕಪ್ ನೀರು ಸೇರಿಸಿ, ಮುಚ್ಚಳ ಮುಚ್ಚಿ ಮಧ್ಯಮ ಉರಿಯಲ್ಲಿ ಸುಮಾರು 15 ನಿಮಿಷ ಬೇಯಿಸಿ. ಅಕ್ಕಿಯು ಹದವಾಗಿ ಬೆಂದು ಉದುರುದುರಾಗಿರಬೇಕು.
- ಅಕ್ಕಿ ಬೆಂದ ನಂತರ ಸ್ಟೌವ್ ಆರಿಸಿ ಅದನ್ನು ಅಗಲವಾದ ಪಾತ್ರೆಗೆ ಹಾಕಿ. ಸಣ್ಣಗೆ ಹೆಚ್ಚಿದ ಬಾದಾಮಿ ಮತ್ತು ಗೋಡಂಬಿಯನ್ನು ಸೇರಿಸಿ (ಬೇಕಿದ್ದರೆ ಇವುಗಳನ್ನು ತುಪ್ಪದಲ್ಲಿ ಹುರಿದು ಸೇರಿಸಬಹುದು).
- ನಂತರ ದಾಳಿಂಬೆ ಕಾಳು ಮತ್ತು ಸಣ್ಣಗೆ ಹೆಚ್ಚಿದ ಸೇಬಿನ ಚೂರುಗಳನ್ನು ಹಾಕಿ ನಿಧಾನವಾಗಿ ಬೆರೆಸಿ. ಪರ್ಫೆಕ್ಟ್ ರುಚಿಗಾಗಿ ಹಣ್ಣುಗಳನ್ನು ಅಕ್ಕಿ ಬೆಂದ ನಂತರವಷ್ಟೇ ಸೇರಿಸಿ.
- ಕೊನೆಯಲ್ಲಿ, ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ, ಘಮಘಮಿಸುವ ರೆಸ್ಟೋರೆಂಟ್ ಶೈಲಿಯ ಕಾಶ್ಮೀರಿ ಪುಲಾವ್ ಸವಿಯಲು ಸಿದ್ಧ.
ಈ ಟಿಪ್ಸ್ ಫಾಲೋ ಮಾಡಿ
- ಸೇಬು ಮತ್ತು ದಾಳಿಂಬೆ ಜೊತೆಗೆ ನೀವು ಕಪ್ಪು ದ್ರಾಕ್ಷಿ ಅಥವಾ ಅನಾನಸ್ ತುಂಡುಗಳನ್ನೂ ಬಳಸಬಹುದು.
- ಕೇಸರಿಯನ್ನು ಸ್ವಲ್ಪ ಬಿಸಿ ಹಾಲಿನಲ್ಲಿ ನೆನೆಸಿ ಹಾಕಿದರೆ ಪುಲಾವ್‌ಗೆ ಮನಮೋಹಕ ಹಳದಿ ಬಣ್ಣ ಮತ್ತು ಅದ್ಭುತ ಪರಿಮಳ ಸಿಗುತ್ತದೆ.
- ಈ ರಾಯಲ್ ಪುಲಾವನ್ನು ರೈತಾ ಅಥವಾ ಪನೀರ್ ಮಸಾಲದೊಂದಿಗೆ ಸವಿಯಲು ತುಂಬಾ ರುಚಿಯಾಗಿರುತ್ತದೆ.
ಮನೆಯಲ್ಲೇ ಅತಿ ಸುಲಭವಾಗಿ ತಯಾರಿಸಬಹುದಾದ ಈ 'ರಾಯಲ್ ಕಾಶ್ಮೀರಿ ಪುಲಾವ್' ನಿಮ್ಮ ಅಡುಗೆಯ ಕಲೆಗೆ ಮೆರುಗು ನೀಡುತ್ತದೆ. ಈ ವಾರಾಂತ್ಯದಲ್ಲಿ ಅತಿಥಿಗಳಿಗಾಗಿ ಈ ಸ್ಪೆಷಲ್ ಖಾದ್ಯವನ್ನು ತಪ್ಪದೇ ಟ್ರೈ ಮಾಡಿ.



Click it and Unblock the Notifications