Latest Updates
-
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ?
ಗಣೇಶ ಚತುರ್ಥಿ ವಿಶೇಷ: ಕಪ್ಪು ಕಡ್ಲೆ ಕಡಿ ರೆಸಿಪಿ
ಕಡ್ಲೆ ಪಾಕವಿಧಾನದಲ್ಲಿ, ಆರೋಗ್ಯ ವಿಚಾರದಲ್ಲಿ, ಔಷಧೀಯ ರೂಪದಲ್ಲಿ ಹಾಗೂ ಸಾಂಪ್ರದಾಯಿಕವಾಗಿ ಪವಿತ್ರವಾದ ಸ್ಥಾನವನ್ನು ಪಡೆದುಕೊಂಡಿದೆ. ಹೆಚ್ಚು ಪೋಷಕಾಂಶ ಗುಣವನ್ನು ಹೊಂದಿರುವ ಕಪ್ಪು ಕಡ್ಲೆ ಗಣಪತಿ, ಲಕ್ಷ್ಮಿ ಸೇರಿದಂತೆ ಅನೇಕ ದೇವತೆಗಳ ಇಷ್ಟ ಪದಾರ್ಥ. ಇದರಿಂದ ವಿವಿಧ ಬಗೆಯ ತಿಂಡಿ, ಅಡುಗೆ, ಹುಸುಳಿಗಳನ್ನು ತಯಾರಿಸುತ್ತಾರೆ. ಅವುಗಳಲ್ಲಿ ರಾಜಸ್ಥಾನಿ ಶೈಲಿಯ ಕಢಿಯು ಒಂದು.
ಕಡಿಯು ಸಾಮಾನ್ಯವಾಗಿ ದಪ್ಪದಾದ ಕೆನೆ ಮೊಸರು-ಆಧಾರಿತ ಗ್ರೇವಿ/ರಸ. ಆದರೆ ಕಪ್ಪು ಕಡ್ಲೆ ಕಡಿ ಮೊಸರು ಆಧಾರಿತ ಪಾಕವಿಧಾನವಲ್ಲ. ಬದಲಿಗೆ ಕಡ್ಲೆ ಮತ್ತು ಕಡಲೇ ಹಿಟ್ಟಿನಿಂದ ತಯಾರಿಸಲಾಗುತ್ತದೆ. ಆಕರ್ಷಣೀಯ, ರುಚಿಕರ ಮತ್ತು ಆರೋಗ್ಯ ಪೂರ್ಣವಾದ ಈ ಕಢಿಯನ್ನು ರೊಟ್ಟಿ, ಚಪಾತಿ ಹಾಗೂ ಅನ್ನದ ಜೊತೆಯೂ ಸವಿಯಬಹುದು. ಜೋಧ್‌ಪುರಿಯ ವಿಶೇಷ ಭಕ್ಷ್ಯವಾದ ಇದನ್ನು ನೀವು ಸವಿಯಬೇಕು ಹಾಗೂ ತಯಾರಿಸಬೇಕು ಎಂದೆನಿಸಿದರೆ ನಾವಿಲ್ಲಿ ನೀಡಿರುವ ವಿಡಿಯೋ ಹಾಗೂ ಹಂತ ಹಂತವಾದ ಚಿತ್ರ ವಿವರಣೆಯನ್ನು ಪರಿಶೀಲಿಸಿ.

Recipe By: ಮೀನಾ ಭಂಡಾರಿ
Recipe Type: ಪ್ರಮುಖ ಭಕ್ಷ್ಯ
Serves: 4 ಮಂದಿಗೆ
-
ತುಪ್ಪ - 1 1/2 ಟೇಬಲ್ ಚಮಚ
ಇಂಗು - ಒಂದು ಚಿಟಕಿ
ಜೀರಿಗೆ - 1 ಟೀ ಚಮಚ
ಬೇಯಿಸಿದ ಕಪ್ಪು ಕಡ್ ಲೆ - 1 ಕಪ್
ಕಡ್ಲೆ ಬೇಯಿಸಿಕೊಂಡ ನೀರು - 1 ಬೌಲ್
ಅರಿಶಿನ - 1/2 ಚಮಚ
ಕಾಶ್ಮೀರಿ ಖಾರದ ಪುಡಿ - 3ಟೀ ಚಮಚ
ಕೊತ್ತರಿ ಪುಡಿ/ಧನಿಯಾ ಪುಡಿ - 3 ಟೀ ಚಮಚ
ನೀರು 2 1/2 ಕಪ್
ರುಚಿಗೆ ತಕ್ಕಷ್ಟು ಉಪ್ಪು
ಕಡಲೇ ಹಿಟ್ಟು - 4 ಟೇಬಲ್ ಚಮಚ
ಗರಮ್ ಮಸಾಲ - 1 ಟೀ ಚಮಚ
-
1. ದಪ್ಪ ತಳದ ಪಾತ್ರೆಯಲ್ಲಿ ಒಂದು ಟೇಬಲ್ ಚಮಚ ತುಪ್ಪವನ್ನು ಹಾಕಿ ಬಿಸಿ ಮಾಡಿ.
2. ಜೀರಿಗೆ ಹಾಗೂ ಇಂಗನ್ನು ಹಾಕಿ. ಜೀರಿಗೆ ಕಂದು ಬಣ್ಣ ಬರುವಷ್ಟು ಹುರಿಯ ಬೇಕು.
3. ನಂತರ ಬೇಯಿಸಿಕೊಂಡ ಕಡ್ಲೆಯನ್ನು ಬೆರೆಸಿ.
4. ಎರಡು ನಿಮಿಷದ ವರೆಗೆ ಚೆನ್ನಾಗಿ ತಿರುವಿ.
5. ಅರಿಶಿನ ಪುಡಿ ಮತ್ತು ಕಾಶ್ಮೀರಿ ಖಾರದ ಪುಡಿಯನ್ನು ಸೇರಿಸಿ.
6. ನಂತರ ಧನಿಯಾ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಗೊಳಿಸಿ.
7. ಅರ್ಧ ಟೇಬಲ್ ಚಮಚ ತುಪ್ಪವನ್ನು ಬೆರೆಸಿ.
8. ಅರ್ಧ ಕಪ್ ನೀರನ್ನು ಬೆರೆಸಿ 3-5 ನಿಮಿಷಗಳ ಕಾಲ ಚೆನ್ನಾಗಿ ಬೇಯಲು ಬಿಡಿ.
9. 3-5 ಚಮಚದಷ್ಟು ಮೇಲಿರುವ ಗ್ರೇವಿಯನ್ನು ತೆಗೆದು, ನಂತರದ ಬಳಕೆಗೆಗಾಗಿ ಪಕ್ಕಕ್ಕಿಡಿ.
10. ಉಪ್ಪನ್ನು ಬೆರೆಸಿ, ಸಣ್ಣ ಉರಿ ಮಾಡಿಕೊಂಡು ಚೆನ್ನಾಗಿ ತಿರುವಿ.
11. ಈ ನಡುವೆಯೇ, ಕಡ್ಲೆ ಬೇಯಿಸಿಕೊಂಡ ನೀರನ್ನು ತೆಗೆದುಕೊಳ್ಳಿ.
12. ಇದಕ್ಕೆ ಕಡಲೇ ಹಿಟ್ಟನ್ನು ಬೆರೆಸಿ. ಗಂಟಾಗದಂತೆ ಚೆನ್ನಾಗಿ ಮಿಶ್ರಗೊಳಿಸಿ.
13. ಕಪ್ಪು ಕಡ್ಲೆ ಮಿಶ್ರಣದ ಪಾತ್ರೆಗೆ ಸುರಿಯಿರಿ.
14. ನಂತರ ಗಂಟಾಗದಂತೆ ಮತ್ತು ತಳ ಹಿಡಿಯದಂತೆ ನಿರಂತರವಾಗಿ ತಿರುವುತ್ತಿರಿ.
15. ಇದಕ್ಕೆ 2 ಕಪ್ ನೀರನ್ನು ಬೆರೆಸಿ 6-6 ನಿಮಿಷ ಬೇಯಲು ಬಿಡಿ.
16. ಚೆನ್ನಾಗಿ ಕುದಿಯಲು ಆರಂಭವಾದಮೇಲೆ ಗರಮ್ ಮಸಾಲವನ್ನು ಸೇರಿಸಿ.
17. ನಂತರ ಇನ್ನೊಂದು ನಿಮಿಷ ಬೇಯಲು ಬಿಡಿ.
18. ನಂತರ ಸರ್ವಿಂಗ್ ಬೌಲ್‍ಗೆ ವರ್ಗಾಯಿಸಿ.
19. ಮೇಲಿರುವ ಗ್ರೇವಿಯನ್ನು ತೆಗೆದು ಅಲಂಕರಿಸಿ, ಸವಿಯಲು ನೀಡಿ.
- 1. ಕಪ್ಪು ಕಡ್ಲೆಯನ್ನು ಒಂದುರಾತ್ರಿ ಅಥವಾ 6-8 ಗಂಟೆಗಳಕಾಲ ನೆನೆಯಿಟ್ಟಿರಬೇಕು.
- 2. ಕುಕ್ಕರ್‍ನಲ್ಲಿ ಕಡ್ಲೆಯನ್ನು ಬೇಯಿಸುವಾಗ ಚಿಟಕಿ ಉಪ್ಪನ್ನು ಹಾಕಿ, 8-10 ಸೀಟಿ ಕೂಗುವಷ್ಟು ಬೇಯಿಸಬೇಕು.
- 3. ಕಡ್ಲೆ ಬೇಯಿಸಿಕೊಂಡ ನೀರನ್ನು ಹಾಗೆಯೇ ತೆಗೆದಿಟ್ಟಿರಬೇಕು. ನಂತರ ಪಾಕವಿಧಾನದ ಬಳಕೆಗೆ ಬೇಕಾಗುವುದು.
- 4. ಕೊನೆಯಲ್ಲಿ ಗ್ರೇವಿಯನ್ನು ತೆಗೆದು ಸವಿಯಲು ನೀಡುವುದು ಅಲಂಕಾರಕ್ಕಾಗಿ ಮಾಡುವ ಒಂದು ವಿಧಾನ. ಇದು ಆಯ್ಕೆ ಅಷ್ಟೆ.
- ಸರ್ವಿಂಗ್ ಸೈಜ್ - 1 ಕಪ್
- ಕ್ಯಾಲೋರಿ - 198 ಕ್ಯಾಲ್
- ಫ್ಯಾಟ್ - 9 ಗ್ರಾಂ.
- ಪ್ರೋಟೀನ್ - 6 ಗ್ರಾಂ.
- ಕಾರ್ಬೋಹೈಡ್ರೇಟ್ - 23 ಗ್ರಾಂ.
- ಫೈಬರ್ - 2 ಗ್ರಾಂ.
ಸ್ಟೆಪ್ ಬೈ ಸ್ಟೆಪ್ ಕಾಲಾ ಚನ್ನಾ ಕಡಿ ರೆಸಿಪಿ ಮಾಡುವ ವಿಧಾನ
1. ದಪ್ಪ ತಳದ ಪಾತ್ರೆಯಲ್ಲಿ ಒಂದು ಟೇಬಲ್ ಚಮಚ ತುಪ್ಪವನ್ನು ಹಾಕಿ ಬಿಸಿ ಮಾಡಿ.

2. ಜೀರಿಗೆ ಹಾಗೂ ಇಂಗನ್ನು ಹಾಕಿ. ಜೀರಿಗೆ ಕಂದು ಬಣ್ಣ ಬರುವಷ್ಟು ಹುರಿಯ ಬೇಕು.



3. ನಂತರ ಬೇಯಿಸಿಕೊಂಡ ಕಡ್ಲೆಯನ್ನು ಬೆರೆಸಿ.

4. ಎರಡು ನಿಮಿಷದ ವರೆಗೆ ಚೆನ್ನಾಗಿ ತಿರುವಿ.

5. ಅರಿಶಿನ ಪುಡಿ ಮತ್ತು ಕಾಶ್ಮೀರಿ ಖಾರದ ಪುಡಿಯನ್ನು ಸೇರಿಸಿ.


6. ನಂತರ ಧನಿಯಾ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಗೊಳಿಸಿ.


7. ಅರ್ಧ ಟೇಬಲ್ ಚಮಚ ತುಪ್ಪವನ್ನು ಬೆರೆಸಿ.

8. ಅರ್ಧ ಕಪ್ ನೀರನ್ನು ಬೆರೆಸಿ 3-5 ನಿಮಿಷಗಳ ಕಾಲ ಚೆನ್ನಾಗಿ ಬೇಯಲು ಬಿಡಿ.


9. 3-5 ಚಮಚದಷ್ಟು ಮೇಲಿರುವ ಗ್ರೇವಿಯನ್ನು ತೆಗೆದು, ನಂತರದ ಬಳಕೆಗೆಗಾಗಿ ಪಕ್ಕಕ್ಕಿಡಿ.

10. ಉಪ್ಪನ್ನು ಬೆರೆಸಿ ಸಣ್ಣ ಉರಿ ಮಾಡಿಕೊಂಡು ಚೆನ್ನಾಗಿ ತಿರುವಿ.



11. ಈ ನಡುವೆಯೇ ಕಡ್ಲೆ ಬೇಯಿಸಿಕೊಂಡ ನೀರನ್ನು ತೆಗೆದುಕೊಳ್ಳಿ.

12. ಇದಕ್ಕೆ ಕಡಲೇ ಹಿಟ್ಟನ್ನು ಬೆರೆಸಿ. ಗಂಟಾಗದಂತೆ ಚೆನ್ನಾಗಿ ಮಿಶ್ರಗೊಳಿಸಿ.


13. ಕಪ್ಪು ಕಡ್ಲೆ ಮಿಶ್ರಣದ ಪಾತ್ರೆಗೆ ಸುರಿಯಿರಿ.

14. ನಂತರ ಗಂಟಾಗದಂತೆ ಮತ್ತು ತಳ ಹಿಡಿಯದಂತೆ ನಿರಂತರವಾಗಿ ತಿರುವುತ್ತಿರಿ.

15. ಇದಕ್ಕೆ 2 ಕಪ್ ನೀರನ್ನು ಬೆರೆಸಿ 6-6 ನಿಮಿಷ ಬೇಯಲು ಬಿಡಿ.


16. ಚೆನ್ನಾಗಿ ಕುದಿಯಲು ಆರಂಭವಾದಮೇಲೆ ಗರಮ್ ಮಸಾಲವನ್ನು ಸೇರಿಸಿ.


17. ನಂತರ ಇನ್ನೊಂದು ನಿಮಿಷ ಬೇಯಲು ಬಿಡಿ.

18. ನಂತರ ಸರ್ವಿಂಗ್ ಬೌಲ್‍ಗೆ ವರ್ಗಾಯಿಸಿ.

19. ಮೇಲಿರುವ ಗ್ರೇವಿಯನ್ನು ತೆಗೆದು ಅಲಂಕರಿಸಿ ಸವಿಯಲು ನೀಡಿ.





Click it and Unblock the Notifications