Latest Updates
-
ಮಳೆಗಾಲದ ಪ್ರಯಾಣ: ಟ್ರಾಫಿಕ್ ಮತ್ತು ಕ್ಯಾಬ್ ಸಮಸ್ಯೆಗಳ ನಡುವೆ ದಂಪತಿಗಳು ನೆಮ್ಮದಿ ಕಾಪಾಡಿಕೊಳ್ಳುವುದು ಹೇಗೆ? -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ಇಂದಿನ ಪರಿಷ್ಕೃತ ಪಟ್ಟಿ ಮತ್ತು ನಿಮ್ಮ ಪ್ರಕರಣದ ಸ್ಥಿತಿ ಪರಿಶೀಲಿಸಿ -
ಓಣಂ ಹಬ್ಬ: ಮಳೆಗೆ ಹಾಳಾಗದ, ₹500ರೊಳಗೆ ಸುಂದರ ಪೂಕಳಂ ಬಿಡಿಸುವ ಸರಳ ಟಿಪ್ಸ್! -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಜಾಗ ಉಳಿಸುವ ಸುಂದರ ಪೂಕಳಂ ಐಡಿಯಾಗಳು -
ಓಣಂ ಸದ್ಯದ ಸಂಭ್ರಮ: ಡಯಾಬಿಟಿಸ್ ಇದ್ದರೂ ಆರೋಗ್ಯಕರವಾಗಿ ಸವಿಯುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ಮೊಟ್ಟೆ ದರ ಏರಿಕೆ ಚಿಂತೆಯೇ? ಕಡಿಮೆ ಬಜೆಟ್ನಲ್ಲಿ ಪ್ರೋಟೀನ್ ಪಡೆಯಲು ಈ ಸ್ಮಾರ್ಟ್ ಟಿಪ್ಸ್ ಫಾಲೋ ಮಾಡಿ -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ಕುಟುಂಬದೊಂದಿಗೆ ಸಂಭ್ರಮಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಪ್ಲಾನ್! -
ವರ್ಕ್ ಫ್ರಮ್ ಹೋಮ್ ಜೊತೆ ಭಾರತ-ಶ್ರೀಲಂಕಾ ಟೆಸ್ಟ್ ಮ್ಯಾಚ್: ಲೈವ್ ಸ್ಕೋರ್ ಮತ್ತು ಸ್ಮಾರ್ಟ್ ಟಿಪ್ಸ್ ಇಲ್ಲಿದೆ! -
ದೆಹಲಿ ಟಫ್ಮನ್ ಹಾಫ್ ಮ್ಯಾರಥಾನ್: ತೇವಾಂಶದ ನಡುವೆಯೂ ಓಟದಲ್ಲಿ ಮಿಂಚಲು ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರು ರನ್ನಿಂಗ್ ಡೇ: ಮಳೆಗಾಲದಲ್ಲಿ ಓಡುವಾಗ ಈ ತಪ್ಪುಗಳನ್ನು ಮಾಡಬೇಡಿ, ಸುರಕ್ಷಿತವಾಗಿರಿ!
ಅಜ್ಜಿ ಮನೆ ಸ್ಟೈಲ್ ರುಚಿಕರ ಕಜ್ಜಾಯ! ತಿಂದ್ರೆ ತಿಂತನೇ ಇರಬೇಕು ಅನ್ಸುತ್ತೆ.. ದೀಪಾವಳಿಗೆ ಹೀಗೆ ಮಾಡಿ
ಈ ದೀಪಾವಳಿಗೆ ಮನೆಯಲ್ಲೇ ಮಾಡಿ ಅಜ್ಜಿ ಮನೆ ಶೈಲಿಯ ಬಿಸಿ ಬಿಸಿಯಾದ ಕಜ್ಜಾಯ. ರುಚಿ ನೋಡಿ ಎಲ್ಲರೂ ಮೆಚ್ಚುತ್ತಾರೆ. ದೀಪಾವಳಿ (Diwali 2025) ಬಂದ್ರೆ ಅಜ್ಜಿ ಮನೆ ನೆನಪು ಆಗುತ್ತೆ. ಅದರಲ್ಲೂ ಅಜ್ಜಿ ಮಾಡುವ ಮತ್ತು ಕೊಡುವ ಕಜ್ಜಾಯ (Kajjaaya) ಥಟ್ಟನೆ ಕಣ್ಮುಂದೆ ಬರುತ್ತದೆ. ಹೌದು, ದೀಪಾವಳಿಯು ದೇಶದ ಅತಿ ದೊಡ್ಡ ಹಬ್ಬಗಳಲ್ಲಿ ಒಂದು. ಈ ಹಬ್ಬದಂದು ಮನೆಯನ್ನು ಸ್ವಚ್ಛಗೊಳಿಸಿ, ಹೊಸ ಬಟ್ಟೆಗಳನ್ನು ಧರಿಸಿ, ದೀಪಗಳನ್ನು ಬೆಳಗಿಸಿ ಸಂಭ್ರಮಿಸಲಾಗುತ್ತದೆ.
ಈ ವಿಶೇಷ ಸಂದರ್ಭದಲ್ಲಿ ಸಿಹಿ ತಿಂಡಿಗಳನ್ನು ತಯಾರಿಸಿ ಕುಟುಂಬ ಸದಸ್ಯರೊಂದಿಗೆ ಸವಿಯುವುದು ಒಂದು ಸಾಂಪ್ರದಾಯಿಕ ಆಚರಣೆಯಾಗಿದೆ. ದೀಪಾವಳಿ ಹಬ್ಬದಲ್ಲಿ ಕಜ್ಜಾಯವು ಒಂದು ಪ್ರಮುಖ ಸಿಹಿ ತಿನಿಸಾಗಿದೆ. ಅನೇಕರಿಗೆ ಮನೆಯಲ್ಲಿ ಕಜ್ಜಾಯ ಮಾಡುವುದು ಕಷ್ಟವಾಗಿ ತೋರುವುದರಿಂದ ಅಂಗಡಿಗಳಿಂದ ಖರೀದಿಸುವುದು ಸಾಮಾನ್ಯ. ಆದರೆ, ಮನೆಯಲ್ಲೇ ಸುಲಭವಾಗಿ, ರುಚಿಕರವಾಗಿ ಕಜ್ಜಾಯ (Kajjaaya Recipe) ತಯಾರಿಸುವುದು ಹೇಗೆ ಎಂದು ಈ ಲೇಖನದಲ್ಲಿ ತಿಳಿಸಲಾಗಿದೆ.

ಕಜ್ಜಾಯ ತಯಾರಿಸಲು ಬೇಕಾಗುವ ಸಾಮಗ್ರಿಗಳು ಇಂತಿವೆ
• ಅಕ್ಕಿ - 1 ಕಪ್
• ಬೆಲ್ಲ - ¾ ಕಪ್
• ಏಲಕ್ಕಿ ಪುಡಿ - ಸ್ವಲ್ಪ
• ಗಸಗಸೆ - 1 ಚಮಚ
• ಬಿಳಿ ಎಳ್ಳು - ಸ್ವಲ್ಪ
• ಎಣ್ಣೆ - ಕರಿಯಲು ಅಗತ್ಯವಿರುವಷ್ಟು
ಕಜ್ಜಾಯ ತಯಾರಿಸುವ ವಿಧಾನ
ಮನೆಯಲ್ಲಿ ಕಜ್ಜಾಯ ತಯಾರಿಸುವುದು ಇನ್ನು ಸುಲಭ. ಈ ಸಾಂಪ್ರದಾಯಿಕ ಸಿಹಿಯನ್ನು ಮಾಡುವ ಸರಳ ಹಂತಗಳು ಇಲ್ಲಿವೆ. ದೀಪಾವಳಿ ಹಬ್ಬಕ್ಕೆ ಅಥವಾ ವಿಶೇಷ ಸಂದರ್ಭಗಳಲ್ಲಿ ಕಜ್ಜಾಯ ಮಾಡಿ ಕುಟುಂಬದವರೊಂದಿಗೆ ಸಂತೋಷದಿಂದ ಆಚರಿಸಬಹುದು.
- ಮೊದಲಿಗೆ, 1 ಕಪ್ ಅಕ್ಕಿಯನ್ನು ಚೆನ್ನಾಗಿ ತೊಳೆಯಿರಿ. ಇದನ್ನು ಅರ್ಧ ಗಂಟೆಗಳ ಕಾಲ ಅಥವಾ ರಾತ್ರಿಯಿಡೀ ನೆನೆಸಿಡಬೇಕು. ನಂತರ, ನೀರನ್ನು ಸಂಪೂರ್ಣವಾಗಿ ತೆಗೆದು, ಅಕ್ಕಿಯನ್ನು ಕಾಟನ್ ಬಟ್ಟೆಯ ಮೇಲೆ ಹರಡಿ ಒಣಗಲು ಬಿಡಬೇಕು. ಇದರಿಂದ ಅಕ್ಕಿಯಲ್ಲಿರುವ ತೇವಾಂಶ ಕಡಿಮೆಯಾಗುತ್ತದೆ.
- ಅಕ್ಕಿ ಒಣಗಿದ ನಂತರ, ಅದನ್ನು ಮಿಕ್ಸಿ ಜಾರ್‌ಗೆ ಹಾಕಿ ನುಣ್ಣಗೆ ಪುಡಿ ಮಾಡಿಕೊಳ್ಳಿ. ಈ ಪುಡಿಯಲ್ಲಿ ಯಾವುದೇ ಉಂಡೆಗಳಿಲ್ಲ ಎಂದು ಖಚಿತಪಡಿಸಿಕೊಳ್ಳಲು ಜರಡಿಯಿಂದ ಜರಡಿ ಹಿಡಿಯಬೇಕು. ನಂತರ, ಒಂದು ಬಾಣಲೆಯಲ್ಲಿ 1 ಸ್ಪೂನ್ ಎಳ್ಳು ಮತ್ತು 1 ಸ್ಪೂನ್ ಗಸಗಸೆಯನ್ನು ಡ್ರೈ ರೋಸ್ಟ್ ಮಾಡಿಕೊಳ್ಳಿ.
- ಈಗ ದೊಡ್ಡ ಕಡಾಯಿಯಲ್ಲಿ ¾ ಕಪ್ ಬೆಲ್ಲ ಮತ್ತು ¼ ಕಪ್ ನೀರನ್ನು ಹಾಕಿ ಪಾಕ ಮಾಡಿಕೊಳ್ಳಬೇಕು. ಪಾಕ ಸಿದ್ಧವಾದ ನಂತರ, ಅಕ್ಕಿ ಹಿಟ್ಟನ್ನು ಸೇರಿಸಿ ನಿಧಾನವಾಗಿ ಬೆರೆಸಬೇಕು, ಇದರಿಂದ ಯಾವುದೇ ಉಂಡೆಗಳು ಆಗುವುದಿಲ್ಲ. ಇದು ಕಜ್ಜಾಯದ ಹಿಟ್ಟಿನ ಪ್ರಮುಖ ಹಂತವಾಗಿದೆ.

- ಇದಾದ ನಂತರ, ರೋಸ್ಟ್ ಮಾಡಿದ ಎಳ್ಳು, ಗಸಗಸೆ, ಮತ್ತು ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಸ್ವಲ್ಪ ತುಪ್ಪ ಸೇರಿಸುವುದರಿಂದ ಹಿಟ್ಟು ಮೃದುವಾಗುತ್ತದೆ.
- ಅಕ್ಕಿ ಹಿಟ್ಟಿನಲ್ಲಿ ತೇವಾಂಶ ಇರುವುದರಿಂದ ಮಿಶ್ರಣವು ತೆಳುವಾಗಿರುತ್ತದೆ. ಹಾಗಾಗಿ, ಈ ಮಿಶ್ರಣವನ್ನು ಒಂದು ರಾತ್ರಿ ನೆನೆಯಲು ಬಿಡಬೇಕು, ಇದರಿಂದ ಅದು ಗಟ್ಟಿಯಾಗುತ್ತದೆ. ನಂತರ ಈ ಹಿಟ್ಟನ್ನು ಮತ್ತೊಂದು ಪಾತ್ರೆಗೆ ವರ್ಗಾಯಿಸಿ.
- ಅಂತಿಮವಾಗಿ, ಬಾಣಲೆಯನ್ನು ಒಲೆಯ ಮೇಲಿಟ್ಟು ಎಣ್ಣೆ ಹಾಕಿ ಕಾಯಿಸಿ. ಕೈಗೆ ತುಪ್ಪವನ್ನು ಸವರಿಕೊಂಡು, ಹಿಟ್ಟನ್ನು ಸಣ್ಣ ಉಂಡೆಗಳನ್ನಾಗಿ ಮಾಡಿ ಕಜ್ಜಾಯದ ಆಕಾರದಲ್ಲಿ ತಟ್ಟಿ.
- ನಂತರ, ಬಿಸಿ ಎಣ್ಣೆಯಲ್ಲಿ ಎರಡೂ ಬದಿಯಲ್ಲಿ ಗೋಲ್ಡನ್ ಬ್ರೌನ್ ಬರುವವರೆಗೆ ಕರಿದರೆ, ಅಜ್ಜಿ ಮನೆ ಶೈಲಿಯ ರುಚಿಕರವಾದ ಕಜ್ಜಾಯ (Bellada Kajjaaya) ಸವಿಯಲು ಸಿದ್ಧವಾಗುತ್ತದೆ.



Click it and Unblock the Notifications