Just In
Don't Miss
- News
ತಮಿಳುನಾಡು ಹಿಂದಿಕ್ಕಿ ಮತ್ತೆ ಮೊದಲ ಸ್ಥಾನ ಪಡೆದ ಕರ್ನಾಟಕ!
- Automobiles
ಬಹುನಿರೀಕ್ಷಿತ 2021ರ ವೊಲ್ವೊ ಎಸ್60 ಕಾರು ಬಿಡುಗಡೆ
- Sports
ಸನ್ ರೈಸರ್ಸ್ ಹೈದರಾಬಾದ್ ತಂಡದಲ್ಲಿ ಹೆಚ್ಚಿನ ಬದಲಾವಣೆಯಿಲ್ಲ
- Movies
ನಟಿ ಚಿತ್ರಾ ಅನುಮಾನಾಸ್ಪದ ಸಾವು: ವರದಿ ಸಲ್ಲಿಸಿದ ಪೊಲೀಸರು
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 20ರ ಚಿನ್ನ, ಬೆಳ್ಳಿ ದರ
- Education
UAS Dharwad Recruitment 2021: ರಿಸರ್ಚ್ ಅಸೋಸಿಯೇಟ್ ಹುದ್ದೆಗೆ ಜ.28ಕ್ಕೆ ನೇರ ಸಂದರ್ಶನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕಡಾಯಿ ಚಿಕನ್ ಟ್ರೈ ಮಾಡಿದ್ದೀರಾ, ತುಂಬಾ ಸರಳ ರೆಸಿಪಿ ಇಲ್ಲಿದೆ
ಕಡಾಯಿ ಚಿಕನ್ ಇದು ನೀವು ರೆಸ್ಟೋರೆಂಟ್ಗಳಿಗೆ ಹೋದಾಗ ಮೆನುವಿನಲ್ಲಿ ಕಾಣ ಸಿಗುವ ಒಂದು ಐಟಂ ಆಗಿದೆ. ರೆಸ್ಟೋರೆಂಟ್ ರುಚಿಯಲ್ಲಿಯೇ ಕಡಾಯಿ ಚಿಕನ್ ಅನ್ನು ಮನೆಯಲ್ಲಿಯೂ ಮಾಡಬಹುದು. ನೀವು ಕಡಾಯಿ ಚಿಕನ್ ಪ್ರಿಯರಾಗಿದ್ದರೆ ಈ ವೀಕೆಂಡ್ಗೆ ಕಡಾಯಿ ಚಿಕನ್ ರೆಸಿಪಿ ಏಕೆ ಡ್ರೈ ಮಾಡಬಾರದು? ಇದು ಮಾಡುವ ವಿಧಾನ ಕಷ್ಟವೆಂದು ನೀವು ಅಂದುಕೊಂಡಿದ್ದರೆ ಖಂಡಿತ ಅಲ್ಲ, ತುಂಬಾ ಸುಲಭವಾಗಿದೆ ಬನ್ನಿ ನೋಡೋಣ:
ಸಲಹೆ: ಈ ಚಿಕನ್ ಫ್ಲೇವರ್ ಅನುಭವಿಸಲು ಶುದ್ಧವಾದ ತುಪ್ಪ ಬಳಸಿ, ಎಣ್ಣೆ ಬಳಸಬೇಡಿ. ಬೇಕಿದ್ದರೆ ಗೋಡಂಬಿ ಪೇಸ್ಟ್ ಹಾಕಬಹುದು.
Recipe By: Reena TK
Recipe Type: Gravy
Serves: 4
-
ಬೇಕಾಗುವ ಸಾಮಗ್ರಿ
1 ಚಮಚ ಕಾಳು ಮೆಣಸು
2 ಚಮಚ ಕೊತ್ತಂಬರಿ ಬೀಜ
2 ಚಮಚ ಜೀರಿಗೆ
3 ಚಮಚ ತುಪ್ಪ
1 ಪಲಾವ್ ಎಲೆ
4 ಈರುಳ್ಳಿ
6 ಬೆಳ್ಳುಳ್ಳಿ ಎಸಳು
ಸ್ವಲ್ಪ ಶುಂಠಿ
1-2 ಮೆಣಸಿನ ಕಾಯಿ
1 ಚಮಚ ಖಾರದ ಪುಡಿ
1 ಚಮಚ ಖಾರದ ಪುಡಿ (ಖಾರ ಕಮ್ಮಿ ಇದ್ದು ಕೆಂಪು ಬಣ್ಣ ಇರುವುದು, ಬ್ಯಾಡಗಿ ಮೆಣಸಿನ ಪುಡಿ)
1 ಚಮಚ ಅರಿಶಿಣ ಪುಡಿ
1/2 ಕೆಜಿ ಚಿಕನ್
3 ಟೊಮೆಟೊ (ಪೇಸ್ಟ್)
-
ಮಾಡುವ ವಿಧಾನ:
* ಮೊದಲಿಗೆ ಕಾಳುಮೆಣಸು, ಜೀರಿಗೆ, ಕೊತ್ತಂಬರಿ ಬೀಜ ಇವುಗಳನ್ನು ಹುರಿಯಿರಿ. ನಂತರ ಅವುಗಳನ್ನು ತರಿತರಿಯಾಗಿ ರುಬ್ಬಿಕೊಳ್ಳಿ.
*ಈಗ ಪ್ಯಾನ್ಗೆ ತುಪ್ಪ ಹಾಕಿ ಹಾಕಿ ಬಿಸಿ ಮಾಡಿ, ನಂತರ ಪಲಾವ್ ಎಲೆ ಹಾಕಿ ಈರುಳ್ಳಿ ಹಾಕಿ ಅದು ಕಂದು ಬಣ್ಣಕ್ಕೆ ತಿರುಗುವಷ್ಟು ಹೊತ್ತು ಫ್ರೈ ಮಾಡಿ.
* ನಂತರ ಶುಂಠಿ, ಬೆಳ್ಳುಳ್ಳಿ ಜಜ್ಜಿ ಹಾಕಿ 2 ಸೆಕೆಂಡ್ ಸೌಟ್ನಿಂದ ಆಡಿಸಿ. ನಂತರ ತರಿತರಿಯಾಗಿ ರುಬ್ಬಿದ ಮಸಾಲೆ ಹಾಕಿ.
* ನಂತರ ಚಿಕನ್ ಹಾಕಿ ಮಿಕ್ಸ್ ಮಾಡಿ.
* ಚಿಕನ್ ಮಸಾಲೆ ಜೊತೆ ಮಿಕ್ಸ್ ಆದ ಮೇಲೆ ಟೊಮೆಟೊ ಪೇಸ್ಟ್ ಹಾಕಿ 2-3 ನಿಮಿಷ ಸೌಟ್ನಿಂದ ಆಡಿಸುತ್ತಾ ಇರಿ. ನಂತರ ಅರಿಶಿಣ, ಖಾರದ ಪುಡಿ, ರುಚಿಗೆ ತಕ್ಕ ಉಪ್ಪು ಸೇರಿಸಿ 25-30 ನಿಮಿಷ ಪಾತ್ರೆಯ ಬಾಯಿ ಮುಚ್ಚಿ ಬೇಯಿಸಿ. ಹೀಗೆ ಬೇಯಿಸುವಾಗ ಆಗಾಗ ತಿರುಗಿಸುತ್ತಾ ಇರಿ.
ಇಷ್ಟು ಮಾಡಿದರೆ ಕಡಾಯಿ ಚಿಕನ್ ರೆಡಿ.
- ಕಬ್ಬಿಣದ ಕಡಾಯಿಯಲ್ಲಿ ಮಾಡಿದರೆ ಒಳ್ಳೆಯದು, ಬೇರೆ ಪಾತ್ರೆಯಲ್ಲಿ ಆದರೆ ರುಚಿಯಲ್ಲಿ ಸ್ವಲ್ಪ ವ್ಯತ್ಯಾಸವಾಗುವುದು.
- ಕೊಬ್ಬು - 14g
- ಪ್ರೊಟೀನ್ - 25ಗ್ರಾಂ
- ಕಾರ್ಬ್ಸ್ - 10%6g