Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಹುಳಿ-ಸಿಹಿ ಮಿಕ್ಸ್.. ಹುಣಸೆಹಣ್ಣು ಚಟ್ನಿಗಿಂತಲೂ ಅದ್ಭುತ ರುಚಿ! ಈ ರೀತಿ ಬೋರೆ ಹಣ್ಣಿನ ಚಟ್ನಿ ಮಾಡಿ
ಹುಣಸೆಹಣ್ಣು, ಖರ್ಜೂರದ ಚಟ್ನಿ ಮರೆತುಬಿಡ್ತೀರಾ! ಹುಳಿ-ಸಿಹಿ ಬೋರೆ ಹಣ್ಣಿನ ಚಟ್ನಿ (Chutney) ಮಾಡಿ ನೋಡಿ.. ಚಳಿಗಾಲದ ಸ್ಪೆಷಲ್ ರುಚಿ ಇಲ್ಲಿದೆ. ಹೌದು, ಚಳಿಗಾಲ ಆಗಮಿಸಿದೊಡನೆ ಮಾರುಕಟ್ಟೆಗಳಲ್ಲಿ ಕೆಂಪು ಮತ್ತು ಹಸಿರು ಬಣ್ಣದ ಬೋರೆ ಹಣ್ಣುಗಳು (Ber / Jujube) ಕಣ್ಮನ ಸೆಳೆಯುತ್ತವೆ. ಗ್ರಾಮೀಣ ಪ್ರದೇಶಗಳಲ್ಲಿ ಇದನ್ನು ಬೆರಳೆ ಹಣ್ಣು ಎಂದೂ ಕರೆಯಲಾಗುತ್ತದೆ.
ಸಾಮಾನ್ಯವಾಗಿ ಹಣ್ಣನ್ನು ಹಾಗೆಯೇ ಉಪ್ಪು-ಮೆಣಸಿನ ಪುಡಿಯೊಂದಿಗೆ ಸವಿಯಲಾಗುತ್ತದೆ. ಆದರೆ, ಇದೇ ಬೋರೆ ಹಣ್ಣಿನಿಂದ ತಯಾರಿಸುವ ಚಟ್ನಿ (Ber Ki Chutney Recipe) ಒಮ್ಮೆ ಸವಿದರೆ ಹುಣಸೆಹಣ್ಣು ಅಥವಾ ಖರ್ಜೂರದ ಚಟ್ನಿಗಳ ರುಚಿಯನ್ನು ಮರೆಸುತ್ತದೆ. ಪೋಷಕಾಂಶಗಳಿಂದ ಸಮೃದ್ಧವಾಗಿರುವ ಈ ವಿಶಿಷ್ಟ ಚಟ್ನಿ ಮಕ್ಕಳು ಮತ್ತು ದೊಡ್ಡವರು ಸೇರಿದಂತೆ ಎಲ್ಲರ ಅಚ್ಚುಮೆಚ್ಚಾಗಿದೆ. ಈ ಲೇಖನದಲ್ಲಿ ವಿಶೇಷ ರುಚಿಯ, ಪೌಷ್ಟಿಕ ಬೋರೆ ಹಣ್ಣಿನ ಚಟ್ನಿ ತಯಾರಿಸುವ ಸರಳ ವಿಧಾನವನ್ನು (Jujube Fruit Chutney) ತಿಳಿಸಲಾಗಿದೆ.
ಈ ಚಳಿಗಾಲದಲ್ಲಿ ಸಾಂಪ್ರದಾಯಿಕ ಹುಣಸೆಹಣ್ಣು ಚಟ್ನಿ ಬದಿಗಿಟ್ಟು, ಈ ಬೋರೆ ಹಣ್ಣಿನ ವಿಭಿನ್ನ ಹಾಗೂ ರುಚಿಕರ ಚಟ್ನಿಯನ್ನು ಒಮ್ಮೆ ಪ್ರಯತ್ನಿಸಿ. ಸಿಹಿ, ಹುಳಿ ಮತ್ತು ಖಾರದ ಸುಂದರ ಸಮಪಾಲು ಹೊಂದಿರುವ ಈ ಚಟ್ನಿ, ಸ್ನ್ಯಾಕ್ಸ್ ಮತ್ತು ಊಟದ ಜೊತೆಗೆ ಅತ್ಯುತ್ತಮ ಸಂಗಾತಿಯಾಗುತ್ತದೆ. ಇದರ ಸಾಮಗ್ರಿಗಳು ಮತ್ತು ತಯಾರಿಕೆಯ ವಿವರ ಇಲ್ಲಿದೆ.
ಈ ಚಟ್ನಿಗೆ ಬೇಕಾಗುವ ಸಾಮಗ್ರಿಗಳು
• ಚೆನ್ನಾಗಿ ಹಣ್ಣಾದ ಬೋರೆ ಹಣ್ಣು
• ಸಕ್ಕರೆ (ನಿಮ್ಮ ರುಚಿಗೆ ತಕ್ಕಂತೆ)
• ಶುಂಠಿ (ತುರಿದದ್ದು)
• ನೀರು
• ನಿಂಬೆ / ಲಿಂಬೆ ರಸ
• ಕಾಳುಮೆಣಸಿನ ಪುಡಿ
• ರುಚಿಗೆ ತಕ್ಕಷ್ಟು ಉಪ್ಪು
ಈ ಚಟ್ನಿ ತಯಾರಿಸುವ ವಿಧಾನ
- ಮೊದಲಿಗೆ, ಮಾಗಿದ ತಾಜಾ ಬೋರೆ ಹಣ್ಣುಗಳನ್ನು ಆರಿಸಿ ನೀರಿನಲ್ಲಿ ಚೆನ್ನಾಗಿ ತೊಳೆಯಿರಿ. ನಂತರ, ಹಣ್ಣಿನ ಒಳಗಿರುವ ಬೀಜವನ್ನು ತೆಗೆದು ತಿರುಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಿಟ್ಟುಕೊಳ್ಳಿ.
- ಒಂದು ಸಣ್ಣ ಪಾತ್ರೆಯಲ್ಲಿ ಮೂರು ಚಮಚ ನೀರು ಮತ್ತು ಸಕ್ಕರೆಯನ್ನು ಹಾಕಿ ಬಿಸಿ ಮಾಡಿ. ಸಕ್ಕರೆ ಸಂಪೂರ್ಣವಾಗಿ ಕರಗಿದ ನಂತರ, ಕತ್ತರಿಸಿದ ಬೋರೆ ಹಣ್ಣಿನ ತುಂಡುಗಳನ್ನು ಸೇರಿಸಿ.
- ಈಗ ಉರಿಯನ್ನು ನಿಧಾನವಾಗಿ ಇಟ್ಟು, ಹಣ್ಣಿನ ತುಂಡುಗಳು ಸಂಪೂರ್ಣವಾಗಿ ಮೃದುವಾಗುವವರೆಗೆ ಐದರಿಂದ ರಿಂದ ಹತ್ತು ನಿಮಿಷ ಬೇಯಿಸಿ.
- ಮಿಶ್ರಣವು ಸ್ವಲ್ಪ ಗಟ್ಟಿಯಾಗಲು ಪ್ರಾರಂಭಿಸಿದಾಗ, ಅದಕ್ಕೆ ತುರಿದ ಶುಂಠಿ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಒಂದು ಚಿಟಿಕೆ ಕಾಳುಮೆಣಸಿನ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಶುಂಠಿಯ ಪರಿಮಳ ಈ ಚಟ್ನಿಗೆ ವಿಶೇಷ ರುಚಿಯನ್ನು ನೀಡುತ್ತದೆ.
- ಮಿಶ್ರಣವು ಸರಿಯಾದ ಹದಕ್ಕೆ ಬಂದ ನಂತರ, ಒಲೆ ಆಫ್ ಮಾಡಿ ಸಂಪೂರ್ಣವಾಗಿ ತಣ್ಣಗಾಗಲು ಬಿಡಿ. ತಣ್ಣಗಾದ ಮೇಲೆ, ಅದಕ್ಕೆ ಅರ್ಧ ಚಮಚ ನಿಂಬೆ ರಸವನ್ನು ಸೇರಿಸಿ ಚೆನ್ನಾಗಿ ಬೆರೆಸಿ. ಲಿಂಬೆ ರಸವು ಚಟ್ನಿಗೆ ಬೇಕಾದ ಹುಳಿಯ ಅಂಶವನ್ನು ನೀಡುತ್ತದೆ.
- ಅಂತಿಮವಾಗಿ, ಈ ತಣ್ಣಗಾದ ಮಿಶ್ರಣವನ್ನು ಮಿಕ್ಸಿ ಜಾರ್‌ಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಬೋರೆ ಹಣ್ಣಿನ ಸಿಹಿ, ಹುಳಿ ಮತ್ತು ಖಾರ ಮಿಶ್ರಿತ ಸಂಯೋಜನೆಯ ರುಚಿಕರ ಚಟ್ನಿ ಈಗ ಸಿದ್ಧವಾಗಿದೆ. ಇದನ್ನು ಸಿದ್ಧಪಡಿಸಲು ಹೆಚ್ಚು ಸಮಯ ಬೇಕಾಗಿಲ್ಲ.
ಯಾವಾಗ ಸವಿಯಬಹುದು?
ಈ ಚಟ್ನಿಯನ್ನು ಸಮೋಸಾ, ಪಕೋಡಾ ಅಥವಾ ಕಚೋರಿಯಂತಹ ಸ್ನ್ಯಾಕ್ಸ್ ಜೊತೆ ಸವಿಯಬಹುದು. ಊಟದ ಸಮಯದಲ್ಲಿ ಅನ್ನ ಅಥವಾ ರೊಟ್ಟಿಯೊಂದಿಗೆ ಕೂಡ ಇದು ಅತ್ಯುತ್ತಮ ಜೋಡಿಯಾಗುತ್ತದೆ. ಒಮ್ಮೆ ತಯಾರಿಸಿದರೆ ಗಾಳಿಯಾಡದ ಡಬ್ಬದಲ್ಲಿಟ್ಟು ಕೆಲವು ದಿನಗಳವರೆಗೆ ತಾಜಾ ಆಗಿ ಇರಿಸಬಹುದು.
ಬೋರೆ ಹಣ್ಣಿನ ಪ್ರಯೋಜನಗಳು
- ಬೋರೆ ಹಣ್ಣು ವಿಟಮಿನ್ ಸಿ ಮತ್ತು ಆಂಟಿ-ಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿದೆ.
- ಇದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ, ಜೀರ್ಣಕ್ರಿಯೆಗೂ ಸಹಕಾರಿಯಾಗಿದೆ.
- ಚಳಿಗಾಲದಲ್ಲಿ ಕೇವಲ ಹಣ್ಣು ತಿನ್ನುವುದಕ್ಕೆ ಬದಲಾಗಿ, ಹೀಗೆ ವಿಭಿನ್ನವಾಗಿ ಚಟ್ನಿ ಮಾಡಿ ಸವಿಯುವುದು ಆರೋಗ್ಯಕ್ಕೂ ಉತ್ತಮ ಮತ್ತು ಹೊಸ ರುಚಿಯ ಅನುಭವ ನೀಡುತ್ತದೆ.



Click it and Unblock the Notifications

