Latest Updates
-
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ!
ರೆಸಿಪಿ: ಇಲ್ಲಿದೆ ನೋಡಿ ಜೀರಾ ಆಲೂಫ್ರೈ ರೆಸಿಪಿ
ಜೀರಾ ಆಲೂಫ್ರೈಯನ್ನು ನೀವು ರೆಸ್ಟೋರೆಂಟ್‌ನ ರುಚಿಯಲ್ಲಿಯೇ ಮನೆಯಲ್ಲಿಯೇ ಮಾಡಬಹುದು. ಆಲೂಫ್ರೈಯನ್ನು ನೀವು ಸುಲಭದಲ್ಲಿ ಮಾಡಬಹುದು ಕೂಡ, ಇದಕ್ಕೆ ಜೀರಿಗೆ ಹಾಕಿ ಮಾಡುವುದರಿಂದ ಜೀರಿಗೆ ಜೊತೆ ಆಲೂಫ್ರೈ ತುಂಬಾನೇ ರುಚಿಯಾಗಿರುತ್ತದೆ. ಬನ್ನಿ ಈ ಆಲೂಫ್ರೈ ಮಾಡುವುದು ಹೇಗೆ ಎಂದು ನೋಡೋಣ ಬನ್ನಿ:

ಬೇಕಾಗುವ ಸಾಮಗ್ರಿ
ಆಲೂಗಡ್ಡೆ 5-6 (ಬೇಯಿಸಿ ದಪ್ಪವಾಗಿ ಕತ್ತರಿಸಿ)
ಜೀರಿಗೆ ಒಂದೂವರೆ ಚಮಚ
ಇಂಗು 1/2 ಚಮಚ
ಶುಂಠಿ ಚಿಕ್ಕದಾಗಿ ಕತ್ತರಿಸಿದ್ದು 1 ಚಮಚ
ಹಸಿಮೆಣಸು 2
ಕೊತ್ತಂಬರಿ ಪುಡಿ ಒಂದೂವರೆ ಚಮಚ
ಹಳದಿ 1/2 ಚಮಚ
ಖಾರದ ಪುಡಿ 1 ಚಮಚ
ಮಾವಿನಕಾಯಿ ಪುಡಿ 1 ಚಮಚ (ಬದಲಿಗೆ ನಿಂಬೆರಸ ಬಳಸಿ)
ಎಣ್ಣೆ 2 ಚಮಚ
ರುಚಿಗೆ ತಕ್ಕ ಉಪ್ಪು
ಮಾಡುವ ವಿಧಾನ
ಆಲೂಗಡ್ಡೆ ಬೇಯಿಸಿ ಕತ್ತರಿಸಿ
ಈಗ ಪಾತ್ರೆಯನ್ನು ಬಿಸಿ ಮಾಡಿ 2 ಚಮಚ ಎಣ್ಣೆ ಹಾಕಿ, ಒಂದೂವರೆ ಚಮಚ ಜೀರಿಗೆ ಹಾಕಿ,
ಜೀರಿಗೆ ಚಟ್‌ಪಟ್ ಶಬ್ದ ಮಾಡುವಾಗ ಹಸಿ ಮೆಣಸು, ತುರಿದ ಶುಂಠಿ ಹಾಕಿ, ತುರಿದ
ಶುಂಠಿ ಇಲ್ಲದಿದ್ದರೆ ನೀವು ಶುಂಠಿ ಪೇಸ್ಟ್ ಕೂಡ ಸೇರಿಸಬಹುದು.
ಅದರಿಂದ ಸುವಾಸನೆ ಬರುವಾಗ ಸ್ವಲ್ಪ ಇಂಗು ಹಾಕಿ (ಇಂಗು ಹಾಕದಿದ್ದರೆ ಕೂಡ
ಒಕೆ)
ನಂತರ ಜೀರಗೆ ಪುಡಿ, ಕೊತ್ತಂಬರಿ ಪುಡಿ, ಅರಿಶಿಣ ಪುಡಿ ಹಾಕಿ ಮಿಕ್ಸ್ ಮಾಡಿ.
ನಂತರ ಆಲೂಗಡ್ಡೆ, ರುಚಿಗೆ ತಕ್ಕ ಉಪ್ಪು ಸೇರಿಸಿ ಮಿಕ್ಸ್ ಮಾಡಿ ನಂತರ ಸ್ವಲ್ಪ ಒಣ
ಮಾವಿನಕಾಯಿ ಪುಡಿ ಅಥವಾ ನಿಂಬೆರಸ ಮಿಕ್ಸ್ ಮಾಡಿ.
ಮತ್ತೊಂದು ರೀತಿಯಲ್ಲಿಯೂ ಇದನ್ನು ಮಾಡಬಹುದು
ಆಲೂಗಡ್ಡೆಯನ್ನು ಮೊದಲೇ ಬೇಯಿಸದೆ ಮಸಾಲೆ ಜೊತೆಯೇ ಬೇಯಿಸಿ ಕೂಡ ಮಾಡಬಹುದು.
ನೀವು ಮೊದಲು ಪಾತ್ರೆಗೆ ಎಣ್ಣೆ ಹಾಕಿ ಬಿಸಿ ಮಾಡಿ, ನಂತರ ಜೀರಿಗೆ ಹಾಕಿ, ಜೀರಿಗೆ
ಚಟ್‌ಪಟ್ ಶಬ್ದ ಮಾಡುವಾಗ ಮೆಣಸಿನ ಪುಡಿ, ಕೊತ್ತಂಬರಿ ಪುಡಿ, ಅರಿಶಿಣ ಪುಡಿ ಹಾಕಿ
ಫ್ರೈ ಮಾಡಿ. ನಂತರ ಆಲೂಗಡ್ಡೆ ಹಾಕಿ ಮಿಕ್ಸ್ ಮಾಡಿ, ನೀರು ಸೇರಿಸಿ ನಂತರ ರುಚಿಗೆ
ತಕ್ಕ ಉಪ್ಪು ಸೇರಿಸಿ ಬೇಯಿಸಿ, ನೀರು ಆವಿಯಾದಾಗ ಆಲೂ ಫ್ರೈ ಡ್ರೈಯಾಗುವುದು. ನಂತರ
ನಿಂಬೆರಸ ಹಾಕಿದರೆ ಆಲೂಫ್ರೈ ರೆಡಿ.
ಈ ಆಲೂಫ್ರೈಯನ್ನು ನೀವು ಅನ್ನ ಪರೋಟಾ, ಚಪಾತಿ ಜೊತೆಗೆ ತಿನ್ನಲು ತುಂಬಾನೆ ರುಚಿಯಾಗಿರುತ್ತದೆ.



Click it and Unblock the Notifications
