Just In
- 7 hrs ago ವಾರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಈ 7 ದಿನಗಳು ನಿಮಗೆ ಹೇಗಿರಲಿದೆ?
- 8 hrs ago ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- 9 hrs ago ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
- 9 hrs ago ಲಿವರ್ ಸಮಸ್ಯೆಯಿದೆ ಎಂದು ಸೂಚಿಸುವ ಲಕ್ಷಣಗಳಿವು, ಕುಟುಂಬಸ್ಥರು ಲಿವರ್ ದಾನ ಮಾಡಿದರೆ ವ್ಯಕ್ತಿಯ ಪ್ರಾಣ ಉಳಿಸಬಹುದು
Don't Miss
- Finance mukesh ambaniಗೆ 67 ವರ್ಷ, ಅವರು ಹೊಂದಿರುವ ದುಬಾರಿ ವಸ್ತುಗಳು ಏನೇನು ಗೊತ್ತಾ?
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Movies ಡಿ. ಕೆ ಸುರೇಶ್ ಪರ ನಟ ದರ್ಶನ್ ಪ್ರಚಾರ; ಆ 2 ವಿಧಾನಸಭಾ ಕ್ಷೇತ್ರಗಳಲ್ಲಿ ಮತಬೇಟೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದೀಪಾವಳಿ ಸ್ಪೆಷಲ್: ಜಿಲೇಬಿ ರೆಸಿಪಿ
ಬಿಸಿ-ಬಿಸಿ ದೀಪಾವಳಿ ಸವಿಯಲು ಎಷ್ಟೊಂದು ರುಚಿ ಅಲ್ವಾ? ದೀಪಾವಳಿಯಂದು ಲಕ್ಷ್ಮಿ ಪೂಜೆ ಮಾಡಿದ ಮೇಲೆ ರಾತ್ರಿ ಬಿಸಿ-ಬಿಸಿಯಾದ ಜಿಲೇಬಿ ಸರ್ವ್ ಮಾಡಲು ಬಯಸುವುದಾದರೆ ಇಲ್ಲಿದೆ ನೋಡಿ ರೆಸಿಪಿ.
ಜಿಲೇಬಿ ಮಾಡುವುದು ತುಂಬಾ ಕಷ್ಟವಾದ ಕೆಲಸವಲ್ಲ, ಆದರೆ ಮಾಡುವಾಗ ಅದರ ಹದ ಸರಿಯಾಗಿರಬೇಕು ಅಷ್ಟೇ, ಹ ಹಿಟ್ಟಿದ ಹದ ಹೇಗಿರಬೇಕು, ಜಿಲೇಬಿ ಮಾಡುವುದು ಹೇಗೆ ಎಂದು ನೋಡೋಣ:
Recipe By: Reena TK
Recipe Type: Sweet
Serves: depends
-
ಬೇಕಾಗುವ ಸಾಮಗ್ರಿ
3 ಕಪ್ ಮೈದಾ ಹಿಟ್ಟು
2 ಕಪ್ ಹುಳಿ ಮೊಸರು
1/2 ಚಮಚ ತುಪ್ಪ
3 ಕಪ್ ಸಕ್ಕರೆ
ಸ್ವಲ್ಪ ಸಕ್ಕರೆ
1/2 ಕಪ್ ಜೋಳದ ಹಿಟ್ಟು
ಚಿಟಿಕೆಯಷ್ಟು ಸೋಡಾ
2 ಕಪ್ ಎಣ್ಣೆ
3 ಕಪ್ ನೀರು
4 ಡ್ರಾಪ್ಸ್ ರೋಸ್ ಎಸೆನ್ಸ್
ಅರ್ಧ ಚಮಚ ಫುಡ್ ಕಲರ್
-
ಮಾಡುವುದು ಹೇಗೆ?
ಸ್ಟೆಪ್ 1
ಮೈದಾ ಹಿಟ್ಟು, ಜೋಳದ ಹಿಟ್ಟು, ಅಡುಗೆ ಸೋಡಾ ಇವೆಲ್ಲವನ್ನೂ ಒಂದು ಬೌಲ್ನಲ್ಲಿ ಹಾಕಿ. ಈಗ ತುಪ್ಪ ಹಾಗೂ ಫುಡ್ ಕಲರ್ ಮಿಕ್ಸ್ ಮಾಡಿ. ನಂತರ ಹುಳಿ ಮೊಸರು, ನೀರು ಹಾಕಿ ಮಿಶ್ರ ಮಾಡಿ, ಮಿಶ್ರಣ ತುಂಬಾ ತೆಳುವಾಗಬಾರದು. ಈಗ ಈ ಮಿಶ್ರಣವನ್ನು 7-8 ಗಂಟೆ ಇಡಿ. ಆಗ ಮಿಶ್ರಣ ಹುಳಿ ಬರುತ್ತದೆ.
ಸಕ್ಕರೆ ಪಾಕ ಮಾಡಲು ನೀರನ್ನು ಬಿಸಿ ಮಾಡಿ. ನಂತರ ಸಕ್ಕರೆ ಹಾಕಿ ಕರಗಿಸಿ, ಕಡಿಮೆ ಉರಿಯಲ್ಲಿ ಕುದಿಸಿ, ಸಕ್ಕರೆ ಪಾಕ ಗಟ್ಟಿಯಾಗಿರಲಿ, ಇದಕ್ಕೆ ಕೇಸರಿ, ಏಲಕ್ಕಿ ಪುಡಿ, ರೋಸ್ ಎಸೆನ್ಸ್ ಸೇರಿ, ಚೆನ್ನಾಗಿ ತಿರುಗಿಸಿ, ಉರಿಯಿಂದ ಇಳಿಸಿ ಇಡಿ.
ಸ್ಟೆಪ್ 2: ಜಿಲೇಬಿಯನ್ನು ಎಣ್ಣೆಯಲ್ಲಿ ಕರಿಯಿರಿ
ಈಗ ಅಗಲ ಬಾಯಿಯ ಕಬ್ಬಿಣದ ಪ್ಯಾನ್ ಬಿಸಿ ಮಾಡಿ, ಎಣ್ಣೆ ಕುದಿಯಲ್ಲಿ ಆರಂಭಿಸಿದಾಗ ಮಸ್ಲಿನ್ ಬಟ್ಟೆಯಲ್ಲಿ ಹಿಟ್ಟು ಹಾಕಿ ಜಿಲೇಬಿ ರೀತಿ ಸುತ್ತಿ-ಸುತ್ತಿ ಇಡಿ. ಜಿಲೇಬಿ ಕ್ರಿಸ್ಪಿ ಬಣ್ಣಕ್ಕೆ ತಿರುಗಲಿ.
ಸ್ಟೆಪ್ 3: ಈಗ ಜಿಲೇಬಿಯನ್ನು ಸಕ್ಕರೆ ಪಾಕದಲ್ಲಿ ಹಾಕಿ ಬಿಸಿ-ಬಿಸಿಯಾಗಿ ಸರ್ವ್ ಮಾಡಿ.
- ಸಲಹೆ: * ಜಿಲೇಬಿ ಮಾಡುವಾಗ ಗಮನಿಸಬೇಕಾದ ಮುಖ್ಯವಾದ ಅಂಶವೆಂದರೆ ಮಿಶ್ರಣದ ಹದ ಸರಿಯಾದ ರೀತಿಯಲ್ಲಿ ಇರಬೇಕು, ತುಂಬಾ ಗಟ್ಟಿಯಾಗಬಾರದು. ನೀರು-ನೀರಾಗಿಯೂ ಇರಬಾರದು. * ಜಿಲೇಬಿಗೆ ಕಲೆಸಿದ ಹಿಟ್ಟು ಸಾಧಾರಣ ಉಷ್ಣತೆಯಲ್ಲಿ10-12 ಗಂಟೆ ಇಟ್ಟರೆ ಒಳ್ಳೆಯದು, ತುಂಬಾ ತಂಪಾದ ವಾತಾವರಣ ಆದರೆ 24 ಗಂಟೆ ಇಡಬೇಕು. * ಜಿಲೇಬಿ ಮಾಡುವಾಗ ಗ್ಯಾಸ್ ಉರಿ ಕಡಿಮೆ ಮಾಡಬೇಕು. ಇಲ್ಲದಿದ್ದರೆ ಜಿಲೇಬಿ ಹೊರಗೆ ಸೀದು ಒಳಗೆ ಬೇಯುವುದಿಲ್ಲ. * ಜಿಲೇಬಿ ಮಾಡುವಾಗ ಚೆನ್ನಾಗಿ ಕದಡಬೇಕು.
- ಕ್ಯಾಲೋರಿ - 44ಕ್ಯಾ
- ಪ್ರೊಟೀನ್ - 0.2 ಗ್ರಾಂ
- ಕಾರ್ಬ್ಸ್ - 7ಗ್ರಾಂ