Latest Updates
-
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ! -
ಲಕ್ನೋದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಪಂದ್ಯದ ಮಜಾ ಸವಿಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಯೋಗ ದಿನಾಚರಣೆ: ಮೈದಾನದಲ್ಲಿ ಯೋಗ ಮಾಡಲು ಸಿದ್ಧರಿದ್ದೀರಾ? ಇಲ್ಲಿದೆ ಅಗತ್ಯ ಮುನ್ನೆಚ್ಚರಿಕೆಗಳು!
ಹಲಸಿನ ಕಾಯಿ ಬಿರಿಯಾನಿ... ಒಮ್ಮೆ ಮಾಡಿ, ರುಚಿ ನೋಡಿ
ಭಾರತೀಯರ ಊಟದ ಪದ್ಧತಿ ಹಾಗೂ ವಿಭಿನ್ನ ಭೋಜನ ಭಕ್ಷ್ಯಗಳು ಪ್ರಪಂಚದೆಲ್ಲೆಡೆ ಸಿಗಲು ಸಾಧ್ಯವಿಲ್ಲ. ಹೌದು, ನಾನೀಗ ಹೇಳುತ್ತಿರುವುದು ಹಲಸಿನ ಕಾಯಿ ಬಿರಿಯಾನಿ. ಅರೇ! ಕೋಳಿ, ಮೊಟ್ಟೆ, ಮಟನ್ ಬಿರಿಯಾನಿ ಕೇಳಿದ್ದೇವೆ... ಇದೇನು ಹಲಸಿನ ಕಾಯಿ ಬಿರಿಯಾನಿ? ಎಂದು ಆಶ್ಚರ್ಯ ಪಡುತ್ತಿದ್ದೀರಾ? ಹಾಗಾದರೆ ಆಶ್ಚರ್ಯ ಪಡಬೇಡಿ ಇದು ಸಸ್ಯಹಾರಿ ಬಿರಿಯಾನಿ.
ಹಪ್ಪಳ, ಚಿಪ್ಸ್ ತಯಾರಿಸಬಹುದಾದ ಈ ಹಲಸಿನಿಂದ ಅನೇಕ ಅಡುಗೆ ಪದಾರ್ಥಗಳನ್ನು ತಯಾರಿಸಬಹುದು. ಉತ್ತಮ ನಾರಿನಂಶ, ಪೋಷಕಾಂಶಗಳನ್ನು ಒಳಗೊಂಡಿರುವ ಹಲಸು ಆರೋಗ್ಯದ ಪಾಲನೆಗೆ ಸಹಕಾರಿಯಾಗಿದೆ. ವರ್ಷಕೊಮ್ಮೆ ಬೆಳೆಯುವ ಈ ಹಲಸು ಸಿಕ್ಕಾಗ ವಿವಿಧ ಭಕ್ಷ್ಯಗಳನ್ನು ತಯಾರಿಸಿ ಸೇವಿಸಿ. ಹಾಗಾದರೆ ಬನ್ನಿ ಈ ಹೊಸ ರುಚಿಯನ್ನು ತಯಾರಿಸುವ ವಿಧಾನವನ್ನು ಹೇಳುತ್ತೇನೆ.
ಇದನ್ನು 5 ರಿಂದ 6 ಮಂದಿಗೆ ಬಡಿಸಬಹುದು
ತಯಾರಿಗೆ ಬೇಕಾಗುವ ಸಮಯ: 45 ನಿಮಿಷ
ಬಿರಿಯಾನಿ ಮಾಡಲು ಬೇಕಾಗುವ ಸಮಯ: 45 ನಿಮಿಷ

ಸಾಮಾಗ್ರಿಗಳು:
* ಹಲಸಿನ ಕಾಯಿ ಸೊಳೆಯ ಚೂರು -6
ಕಪ್
* ಬಾಸಮತಿ ಅಕ್ಕಿ -4 ಕಪ್
* ಲವಂಗ-4
* ದಾಲ್ಚಿನ್ನಿ- 1ಇಂಚು
* ಏಲಕ್ಕಿ-3
* ಪರಿಮಳದ ಎಲೆ/ಬೇ ಲೀಫ್-3
* ದೊಡ್ಡ ಈರುಳ್ಳಿ -2
* ಹೆಚ್ಚಿದ ಕೊತ್ತಂಬರಿ -2 ಕಪ್
* ಪುದೀನ ಎಲೆ- 2 ಚಮಚ(ಸಣ್ಣಗೆ ಹೆಚ್ಚಿದ)
* ಸ್ವಲ್ಪ ಕೇಸರಿ ಎಳೆ
* ಹಾಲು-1/2 ಕಪ್
* ಉಪ್ಪು- ರುಚಿಗೆ ತಕ್ಕಷ್ಟು
* ತುಪ್ಪ-1 ಚಮಚ
* ಎಣ್ಣೆ -4 ಚಮಚ
* ನೀರು 12 ಕಪ್
ಬಿರಿಯಾನಿ ಮಸಾಲಕ್ಕೆ
* ಲವಂಗ-5
* ದಾಲ್ಚಿನ್ನಿ- 1ಇಂಚು
* ಏಲಕ್ಕಿ-3
* ಷಾ ಜೀರಾ-1/2 ಚಮಚ
* ಕಪ್ಪು ಕಾಳು ಮೆಣಸು-10
ತಯಾರಿಸುವ ವಿಧಾನ
1. ಮೊದಲು ಬಿರಿಯಾನಿ ಮಸಾಲಕ್ಕೆ
ತೆಗೆದುಕೊಂಡ ಸಾಮಾಗ್ರಿಯನ್ನು ಮಿಕ್ಸಿಯಲ್ಲಿ ಹಾಕಿ, ನುಣ್ಣಗೆ
ರುಬ್ಬಿಕೊಳ್ಳಬೇಕು.
2. ಹಲಸಿನಕಾಯಿ ಸೊಳೆಯನ್ನು ಚೆನ್ನಾಗಿ ತೊಳೆದು, 6 ಕಪ್ ನೀರು ಮತ್ತು ಸ್ವಲ್ಪ
ಅರಿಶಿನ ಹಾಕಿ ಬೇಯಿಸಿಕೊಳ್ಳಬೇಕು. ಕುಕ್ಕರ್‌ನಲ್ಲಿ
ಬೇಯಿಸಬಾರದು.
3. ಬೆಂದಮೇಲೆ, ನೀರನ್ನು ಸೋಸಿ ಒಂದೆಡೆ ಇಡಬೇಕು. ಅರ್ಧಗಂಟೆ ಆರಲು ಬಿಡಿ.
4. ಬಾಸಮತಿ ಅಕ್ಕಿಯನ್ನು ಚೆನ್ನಾಗಿ ತೊಳೆದು, 6 ಕಪ್ ನೀರು, ಏಲಕ್ಕಿ , ಲವಂಗ,
ದಾಲ್ಚಿನ್ನಿ, ಪರಿಮಳದ ಎಲೆ ಮತ್ತು ಉಪ್ಪನ್ನು ಹಾಕಿ 15 ನಿಮಿಷ ಸಾಮಾನ್ಯ
ಉರಿಯಲ್ಲಿ, ಅರ್ಧ ಬೇಯಿಸಬೇಕು.
5. ಇದಾದ ಬಳಿಕ, ಉಳಿದ ನೀರನ್ನು ಸೋಸಿ. ಒಂದು ಬಟ್ಟಲಲ್ಲಿ ಹಾಕಿ ಹರಡಿ, ಆರಲು
ಬಿಡಿ.
6. ಹಾಲಿಗೆ ಕೇಸರಿ ಎಳೆಯನ್ನು ಬೆರೆಸಿ ಒಂದೆಡೆ ಇಡಿ.
7. ಒಂದು ಪಾತ್ರೆಯಲ್ಲಿ ಒಂದು ಚಮಚ ಎಣ್ಣೆಯನ್ನು ಹಾಕಿ. ಹೆಚ್ಚಿಕೊಂಡ
ಈರುಳ್ಳಿಯನ್ನು ಹಾಕಿ ಹುರಿಯಿರಿ. ಅವು ಹೊಂಬಣ್ಣಕ್ಕೆ ತಿರುಗಿದ ಮೇಲೆ ಉರಿಯಿಂದ
ಕೆಳಗಿಳಿಸಿ. ಒಂದೆಡೆ ಇಡಿ.
8. ದಪ್ಪ ತಳದ ಪಾತ್ರೆಯಲ್ಲಿ 3 ಚಮಚ ಎಣ್ಣೆಯನ್ನು ಹಾಕಿ, ನಂತರ ಬೇಯಿಸಿಕೊಂಡ
ಹಲಸಿನ ಸೊಳೆಯ ಚೂರನ್ನು ಹಾಕಿ ಸ್ವಲ್ಪ ಹುರಿಯಿರಿ.
9. ನಂತರ ಬೇಯಿಸಿಕೊಂಡ ಅನ್ನವನ್ನು ಎರಡು ಪಾಲು ಮಾಡಿ ಒಂದು ಪಾಲನ್ನು ಹಾಕಿ. ನಂತರ
ಇದರ ಮೇಲೆ ತುಪ್ಪವನ್ನು ಹಾಕಿ.
10 ಇದರ ಮೇಲೆ ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪು ಮತ್ತು ಪುದೀನವನ್ನು
ಬೆರೆಸಿ.
11. ನಂತರ ಇದರ ಮೇಲೆ ಕೇಸರಿ ಬೆರೆಸಿದ ಹಾಲನ್ನು 1/2 ಚಮಚ ಹಾಕಿ.
12. ಇದರ ಮೇಲೆ ತಯಾರಿಸಿಕೊಂಡ ಬಿರಿಯಾನಿ ಮಸಾಲವನ್ನು ಹಾಕಬೇಕು.
13. ನಂತರ ಉಳಿದ ಅನ್ನವನ್ನು ಇದರ ಮೇಲೆ ಹಾಕಿರಿ.
14. ನಂತರ ಹುರಿದುಕೊಂಡ ಈರುಳ್ಳಿಯನ್ನು ಇದರ ಮೇಲೆ ಹರಡಿ. ಉಳಿದ ಬಿರಿಯಾನಿ
ಮಸಾಲಗಳನ್ನು ಹಾಕಿ ಒಂದು ಮುಚ್ಚಲನ್ನು ಮುಚ್ಚಿ. ಸುತ್ತಲು ಹವೆ ಹೊರಗಡೆ ಹೋಗದಂತೆ
ಗೋಧಿ ಹಿಟ್ಟಿನ ಮುದ್ದೆಯಿಂದ ಮುಚ್ಚಿರಿ.
15. ದೊಡ್ಡ ಉರಿಯಲ್ಲಿ 2 ನಿಮಿಷ ಬೇಯಿಸಿ. ನಂತರ ಸಣ್ಣ ಉರಿಯಲ್ಲಿ 15-20 ನಿಮಿಷ
ಬೇಯಿಸಬೇಕು.
16. ಬೆಂದಮೇಲೆ ಉರಿಯನ್ನು ಆರಿಸಿ. ಆರಿಸಿದ ಬಳಿಕ 10 ನಿಮಿಷದ ವರೆಗೂ
ಮುಚ್ಚಳವನ್ನು ತೆಗೆಯದಿರಿ.
17. ಬಳಿಕ ಮುಚ್ಚಳನ್ನು ತೆರೆದು ನಿಧಾನವಾಗಿ ತಿರುವಿ. ಮಿಶ್ರಗೊಳಿಸಿದ ನಂತರ
ತಿನ್ನಲು ನೀಡಿ.



Click it and Unblock the Notifications