Latest Updates
-
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್ -
ಮುಂಬೈನಲ್ಲಿ ಭಾರೀ ಮಳೆ: ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ, ಪೋಷಕರು ಗಮನಿಸಿ!
ಈ ಹಲಸಿನ ಹಣ್ಣು ಜಾಮ್ ಮಾಡಿದರೆ ತಿಂಗಳವರೆಗೆ ಇಡಬಹುದು
ಹಲಸಿನ ಹಣ್ಣು ಸಮಯದಲ್ಲಿ ಹಲಸಿನ ಜಾಮ್ ಮಾಡಲು ಮಿಸ್ ಮಾಡದಿರಿ, ಇದನ್ನು ಸುಲಭವಾಗಿ ಮಾಡಬಹುದು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು, ಮಕ್ಕಳು ಇದನ್ನು ಖುಷಿಯಿಂದ ಮಾಡಿ ಸವಿಯುತ್ತಾರೆ. ಹಲಸಿನ ಹಣ್ಣಿನ ಜಾಮ್ ಮಾಡಿ ತಿಂಗಳವರೆಗೆ ಇಡಬಹುದು, ಬನ್ನಿ ಹಲಸಿನ ಹಣ್ಣಿನ ಜಾಮ್ ಮಾಡುವುದು ಹೇಗೆ ಎಂದು ನೋಡೋಣ ಬನ್ನಿ:

ಬೇಕಾಗುವ ಸಾಮಗ್ರಿ
ಒಂದು ಹಲಸಿನ ಹಣ್ಣು, ತುಂಬಾ ಹಣ್ಣಾಗಲಿ, ನಂತರ ಕತ್ತರಿಸಿ ತೊಳೆ ಬಿಡಿಸಿ.
1/4 ಕೆಜಿ ಬೆಲ್ಲ ಅಥವಾ ಸಕ್ಕರೆ'
2 ಏಲಕ್ಕಿ, ಸ್ವಲ್ಪ ಶುಂಠಿ ಪುಡಿ
- ಹಲಸಿನ ಹಣ್ಣನ್ನು ನುಣ್ಣನೆ ರುಬ್ಬಿ, ನೀರು ಹಾಕುವ ಅವಶ್ಯಕತೆಯಿಲ್ಲ, ಹಲಸಿನ ಹಣ್ಣಿನಲ್ಲಿರುವ ನೀರಿನಂಶ ಇರುತ್ತದೆ.
- ನಂತರ ಬೆಲ್ಲವನ್ನು ಪುಡಿ ಮಾಡಿ ಸೇರಿಸಿ ಕೈಯಿಂದ ಮಿಕ್ಸ್ ಮಾಡಬಹುದು ಅಥವಾ ಮಿಕ್ಸ್ ಮತ್ತೆ ಎರಡು ರೌಂಡ್ ರುಬ್ಬಬಹುದು.
- ಈಗ ದಪ್ಪ ತಳವಿರುವ ಪಾತ್ರೆಯನ್ನು ಬಿಸಿ ಮಾಡಿ ಅದರಲ್ಲಿ ರುಬ್ಬಿದ ಹಲಸಿನ ಹಿಟ್ಟು ಹಾಕಿ ತಿರುಗಿಸುತ್ತಾ ಬಿಸಿ ಮಾಡಿ. ಈ ರೀತಿ ನೀವು ಸುಮಾರು 25-30 ನಿಮಿಷ ತಿರುಗಿಸುತ್ತಾ ಬೇಯಿಸಬೇಕು. ನಂತರ ಏಲಕ್ಕಿ ಪುಡ, ನಟ್ಮಗ್ ಪುಡಿ ಸೇರಿಸಿ, ಮಿಕ್ಸ್ ಮಾಡಿ, ಮಿಶ್ರಣ ಜಾಮ್ ರೀತಿಯಾದಾಗ ಉರಿ ಆಫ್ ಮಾಡಿ.
- ಬಳಿಕ ತೊಳೆದು ಒಣಗಿಸಿಟ್ಟ ಗಾಜಿನ ಡಬ್ಬದಲ್ಲಿ ಜಾಮ್ ಹಾಕಿಟ್ಟು ಫ್ರಿಡ್ಜ್ನಲ್ಲಿಡಿ.
- ರೆಡಿಯಾದ ಜಾಮ್ ಅನ್ನು ನೀವು ಬ್ರೆಡ್ ಅಥವಾ ಚಪಾತಿಗೆ ಹಾಕಿ ಮಕ್ಕಳಿಗೆ ನೀಡಿದರೆ ಸಾಕು ಖುಷಿಯಿಂದ ಸವಿಯುತ್ತಾರೆ.
ನೀವು ಹಲಸಿನ ಜಾಮ್ ತಿನ್ನುವುದರಿಂದ ಈ ಪ್ರಯೋಜನಗಳನ್ನು ಪಡೆಯಬಹುದು:
ಹಲಸಿನ ಹಣ್ಣಿನಲ್ಲಿ ವಿಟಿಮಿನ್ ಬಿ1, ಬಿ3, ಬಿ6 ಹಾ ಗೂ ಪೋಲೆಟ್ ಅಂಶವಿದೆ. ಸೇಬು, ಏಪ್ರಿಕಾಟ್, ಬೆಣ್ಣೆ ಹಣ್ಣು, ಬಾಳೆಹಣ್ಣಿನಲ್ಲಿ ಸಿಗುವ ಪೋಷಕಾಂಶ ಇದರಲ್ಲಿ ಸಿಗುವುದು. ಕ್ಯಾಲ್ಸಿಯಂ, ಕಬ್ಬಿಣದಂಶ ಹಲಸಿನ ಹಣ್ಣಿನಲ್ಲಿದೆ.
ಸೀಸನಲ್ ಆರೋಗ್ಯ ಸಮಸ್ಯೆಯಿಂದ ಆರೋಗ್ಯ ರಕ್ಷಣೆ
ಮಾಡುತ್ತದೆ
ಎಲ್ಲಾ ಸೀಸನಲ್ ಹಣ್ಣುಗಳು ಆರೋಗ್ಯವನ್ನು ರಕ್ಷಣೆ ಮಾಡುತ್ತದೆ ಹಾಗಾಗಿ ಹಲಸಿನ
ಹಣ್ಣನ್ನು ಧೈರ್ಯವಾಗಿ ತಿನ್ನಿ, ಇದರಿಂದ ರೋಗ ನಿರೋಧಕ ಶಕ್ತಿ
ಹೆಚ್ಚಾಗುವುದು.
ರಕ್ತದಲ್ಲಿ ಸಕ್ಕರೆಯಂಶ ಹೆಚ್ಚಿಸುವುದಿಲ್ಲ
ಮಧುಮೇಹಿಗಳು ಹಲಸಿನ ಹಣ್ಣು ತಿನ್ನಬಹುದು, ಮಿತಿಯಲ್ಲಿ ತಿಂದರೆ ಯಾವುದೇ
ಸಮಸ್ಯೆಯಿಲ್ಲ.
ಜಾಮ್ ಮಾಡುವಾಗ ಹಲಸಿನ ಹಣ್ಣನ್ನು ಬೇಯಿಸಿರುತ್ತೇವೆ, ಆದ್ದರಿಂದ ಮಕ್ಕಳಿಗೆ
ಧೈರ್ಯವಾಗಿ ನೀಡಬಹುದು.
ಜಾಮ್ ಎಷ್ಟು ಸಮಯ ಬಳಸಬಹುದು?
ನೀವು ಹಲಸಿನ ಹಣ್ಣು ಜಾಮ್ ತಯಾರಿಸಿ ಫ್ರಿಡ್ಜ್ನಲ್ಲಿ ಇಟ್ಟು ಬಳಸುವುದಾದರೆ
ವರ್ಷದವರೆಗೆ ಇಟ್ಟು ಬಳಸಬಹುದು.



Click it and Unblock the Notifications