Latest Updates
-
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು!
ರೆಸಿಪಿ: ಪಟ್ ಅಂತ ಮಾಡಿ ಮಾವಿನಕಾಯಿ ಉಪ್ಪಿನಕಾಯಿ
ಹೇಳಿ ಕೇಳಿ ಇದು ಮಾವಿನಕಾಯಿ ಸೀಸನ್, ಈ ಸೀಸನ್ನಲ್ಲಿ ರುಚಿ-ರುಚಿಯಾದ ಉಪ್ಪಿನಕಾಯಿ ಮಾಡಿ ಸವಿಯುವ ಸಮಯ. ನೀವು ಅನೇಕ ರುಚಿಯಲ್ಲಿ ಉಪ್ಪಿನಕಾಯಿ ತಯಾರಿಸಬಹುದು. ಕೆಲವೊಂದು ಉಪ್ಪಿನಕಾಯಿ ಮಾಡಿ ನೀವು ವರ್ಷದವರೆಗೆ ಇಡಬಹುದು. ಇನ್ನು ಕೆಲವು ಒಂದೆರಡು ವಾರದವರೆಗೆ ಇರಬಹುದು. ನಾವಿಲ್ಲಿ ಸರಳವಾಗಿ ಉಪ್ಪಿನಕಾಯಿ ಮಾಡುವ ರೆಸಿಪಿ ನೀಡಿದ್ದೇವೆ.

ತಕ್ಷಣಕ್ಕೆ ಉಪ್ಪಿನಕಾಯಿ ಮಾಡಬೇಕು ಎಂದ್ರೆ ಈ ಉಪ್ಪಿನಕಾಯಿ ತಯಾರಿಸಬಹುದು. ಮನೆಯಲ್ಲಿ ಏನಾದರೂ ಫಂಕ್ಷನ್ ಇದ್ದರೆ ಸ್ವಲ್ಪ ಅಧಿಕ ಮಾವಿನಕಾಯಿ ತಂದು ನೀವೇ ತಯಾರಿಸಬಹುದು. ನಾವಿಲ್ಲಿ ಒಂದು ಅಥವಾ ಎರಡು ಮಾವಿನಕಾಯಿಂದ ಉಪ್ಪಿನಕಾಯಿ ಮಾಡುವ ರೆಸಿಪಿ ನೀಡಿದ್ದೇವೆ. ನೀವು ಅಧಿಕ ಮಾಡುವುದಾದರೆ ರುಚಿಗೆ ತಕ್ಕಂತೆ ಸಾಮಗ್ರಿ ಅಧಿಕ ಬಳಸಿ.
Recipe By: Reena TK
Recipe Type: pickle
Serves: 10
-
ಬೇಕಾಗುವ ಸಾಮಗ್ರಿ
ಹಸಿ ಮಾವಿನ ಕಾಯಿ 2-3 (ದೊಡ್ಡ ಗಾತ್ರದ್ದು ಆದ್ರೆ 1 ಸಾಕು)
ಎಣ್ಣೆ 1 ಚಮಚ
ಚಿಟಿಕೆಯಷ್ಟು ಇಂಗು
ಸಾಸಿವೆ ಒಂದು ಚಿಕ್ಕ ಚಮಚ
ಅರಿಶಿಣ ಪುಡಿ 1/4 ಚಮಚ
ರುಚಿಗೆ ತಕ್ಕ ಉಪ್ಪು
ಖಾರದ ಪುಡಿ 1 ಚಮಚ
-
ಮಾಡುವುದು ಹೇಗೆ?
* ಮಾವಿನ ಕಾಯಿಯನ್ನು ಚಿಕ್ಕದಾಗಿ ಕತ್ತರಿಸಿ.
* ಅದಕ್ಕೆ ಅರಿಶಿಣ ಪುಡಿ, ಖಾರದ ಪುಡಿ, ಉಪ್ಪು ಹಾಕಿ ಮಿಕ್ಸ್ ಮಾಡಿ.
* ಈಗ ಬಾಣಲೆ ಬಿಸಿ ಮಾಡಿ ಅದಕ್ಕೆ ಎಣ್ಣೆ ಹಾಕಿ, ನಂತರ ಸಾಸಿವೆ ಹಾಕಿ, ಇಂಗು ಹಾಕಿ.
* ನಂತರ ಮಾವಿನಕಾಯಿ ಹಾಕಿ, ಮಿಕ್ಸ್ ಮಾಡಿ ಉರಿಯಿಂದ ಇಳಿಸಿ.
* ಒಂದು ಗಾಜಿನ ಗರಡಿಯಲ್ಲಿ ಹಾಕಿ ಮುಚ್ಚಳ ಹಾಕಿ ಇಡಿ.
- ಈ ಉಪ್ಪಿನಕಾಯಿ ಒಂದು ಒಂದರಿಂದ ಎರಡು ವರ ಇಡಬಹುದು ಅಷ್ಟೇ
- ಸರ್ವ್ - 1 ಮಾವಿನಕಾಯಿ
- ಕ್ಯಾಲೋರಿ - 16ಕ್ಯಾ
- ಕೊಬ್ಬು - 1ಗ್ರಾಂ



Click it and Unblock the Notifications
