Latest Updates
-
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ
ಇನ್ಸ್ಟಾಂಟ್ ದೋಸೆ ರೆಸಿಪಿ: ಈ ರವೆ ದೋಸೆಗೆ ಹಿಟ್ಟು ಮೊದಲೇ ರೆಡಿ ಮಾಡಬೇಕಾಗಿಲ್ಲ
ಸಾಮಾನ್ಯವಾಗಿ ಬೆಳಗ್ಗೆ ಎದ್ದಾಗ ಇವತ್ತು ಬೆಳಗ್ಗೆ ಏನು ತಿಂಡಿ ಮಾಡುವುದು ಎಂಬುವುದೇ ದೊಡ್ಡ ಚಿಂತೆಯಾಗುವುದು, ದೋಸೆ , ಇಡ್ಲಿ ಮಾಡೋಣ ಅಂತ ಮಾಡೋಣ ಅಂದರೆ ಹಿಟ್ಟು ರೆಡಿ ಮಾಡಿಲ್ಲ, ಚಿತ್ರಾನ್ನ, ಪಲಾವ್ ಬೇಡ, ಇವತ್ತು ದೋಸೆನೇ ಬೇಕು ಎಂದೆನಿಸಿದಾಗ ನೀವು ಹೆಚ್ಚು ಚಿಂತೆ ಮಾಡದೆ ಈ ಇನ್ಸ್ಟಾಂಟ್ ದೋಸೆ ಟ್ರೈ ಮಾಡಿ, ರುಚಿ ಸೂಪರ್ ಆಗಿರುತ್ತದೆ. ಈ ದೋಸೆ ಮಾಡುವುದು ಹೇಗೆ ಎಂದು ನೋಡೋಣ ಬನ್ನಿ:

ಬೇಕಾಗುವ ಸಾಮಗ್ರಿ
2 ಚಮಚ ಅಕ್ಕಿಹಿಟ್ಟು
1 ಕಪ್ ರವೆ
2 ಚಮಚ ಗೋಧಿ ಹಿಟ್ಟು
2 ಚಮಚ ಎಣ್ಣೆ
1 ಕಪ್ ಮೊಸರು
ರುಚಿಗೆ ತಕ್ಕ ಉಪ್ಪು
ದೋಸೆ ಹದಕ್ಕೆ ಬರುವಷ್ಟು ನೀರು ಸೇರಿಸಿ
ಚಿಟಿಕೆಯಷ್ಟು ಅಡುಗೆ ಸೋಡಾ
ಮಾಡುವ ವಿಧಾನ
ಒಂದು ಬ್ಲೆಂಡರ್ಗೆ ರವೆ, ಅಕ್ಕಿ ಹಿಟ್ಟು, ಗೋಧಿ ಹಿಟ್ಟು, ಮೊಸರು ಹಾಕಿ
ಬ್ಲೆಂಡ್ ಮಾಡಿ
ನಂತರ ಅದನ್ನು ಒಂದು ಬೌಲ್ಗೆ ಹಾಕಿ, 2 ಚಮಚ ಎಣ್ಣೆ ಸೇರಿಸಿ, ರುಚಿಗೆ ತಕ್ಕ
ಉಪ್ಪು ಸೇರಿಸಿ ಮಿಕ್ಸ್ ಮಾಡಿ
ಅಡುಗೆ ಸೋಡಾ ಸೇರಿಸಿ ಮಿಕ್ಸ್ ಮಾಡಿ
ನಂತರ 10 ನಿಮಿಷ ಹಾಗೆಯೇ ಇಡಿ
ಈಗ ದೋಸೆ ತವಾ ಬಿಸಿ ಮಾಡಿ ಅದರಲ್ಲಿ ಎಣ್ಣೆ ಸವರಿ ದೋಸೆ ಹಿಟ್ಟು ಹಾಕಿ ತವಾದ ಬಾಯಿ
ಮುಚ್ಚಿ ಬೇಯಿಸಿ.
ಸಲಹೆ: ನೀವು ಈ ದೋಸೆಯನ್ನು ದಪ್ಪವಾಗಿ ಮಾಡಬಹುದು, ಈ
ದೋಸೆ ಮೃದುವಾಗಿ ತಿನ್ನಲು ರುಚಿಯಾಗಿರುತ್ತದೆ.
ಇಲ್ಲಾ ನಿಮಗೆ ಗರಿಗರಿಬೇಕೆಂದರೆ ಹಾಗೆಯೂ ಮಾಡಿ ತಿನ್ನಬಹುದು. ನಿಮಗೆ ಬೇಕಾ
ರುಚಿಯಲ್ಲಿ ಈ ದೋಸೆಯನ್ನು ಮಾಡಿ ಸವಿಯಬಹುದು.
ಇನ್ನು ದೋಸೆ ತರಕಾರಿ ಕತ್ತರಿಸಿ ಹಾಕಿ (ಈರುಳ್ಳಿ, ಹಸಿ ಮೆಣಸು) ಕತ್ತರಿಸಿ ಹಾಕಿ
ಕೂಡ ತಿನ್ನಬಹುದು.
ಮನೆಯಲ್ಲಿ ಚೀಸ್ ಇದ್ದರೆ ಈ ದೋಸೆ ಮೇಲೆ ತುರಿದು ಹಾಕಿದರೆ ತುಂಬಾ
ರುಚಿಯಾಗಿರುತ್ತದೆ.
ಅಲ್ಲದೆ ಈ ರವೆ ದೋಸೆ ಹಿಟ್ಟನ್ನು ತವಾಗೆ ಹಾಕಿದಾಗ ತವಾದಲ್ಲಿ ಅಂಟಿಕೊಳ್ಳುದಿಲ್ಲ,
ಬೆಂದಾಗ ಬಿಟ್ಟು ಬರುವುದು ಈ ದೋಸೆ ಮಾಡುವುದು ಕೂಡ ಸುಲಭ.
ನಿಮಗ ಮಧುಮೇಹವಿದ್ದರೆ ರವೆ ಜೊತೆ ಅಕ್ಕಿಹಿಟ್ಟು ಬದಲಿಗೆ ರಾಗಿ ಬಳಸಿ.
ಈ ದೋಸೆಗೆ ಕೆಂಪು ಚಟ್ನಿ, ಖಾರ ಚಟ್ನಿ, ಸಾಂಬಾರ್ ಈ ಬಗೆಯ ಕಾಂಬಿನೇಷನ್ ತುಂಬಾನೇ ಚೆನ್ನಾಗಿ ಕಾಣುತ್ತದೆ.



Click it and Unblock the Notifications
