Latest Updates
-
ದೆಹಲಿ ವಾಯುಮಾಲಿನ್ಯದ ಭೀತಿ: ಮನೆಯಲ್ಲೇ 12 ನಿಮಿಷದ ಸರಳ ವರ್ಕೌಟ್ ಮೂಲಕ ಆರೋಗ್ಯ ಕಾಪಾಡಿಕೊಳ್ಳಿ -
ವಾಟ್ಸಾಪ್ನಲ್ಲಿ ದೀಪಾವಳಿ ಬೋನಸ್ ಲಿಂಕ್ ಬಂದಿದೆಯೇ? ಮೋಸ ಹೋಗುವ ಮುನ್ನ ಈ 30 ಸೆಕೆಂಡ್ ಕೆಲಸ ಮಾಡಿ! -
ದೆಹಲಿ ಮಾಲಿನ್ಯದ ಭೀತಿ: ₹150 ಬಜೆಟ್ನಲ್ಲಿ ನಿಮ್ಮ ಆರೋಗ್ಯ ರಕ್ಷಿಸುವ ಆಂಟಿ-ಸ್ಮಾಗ್ ಡಯಟ್ ಪ್ಲಾನ್ ಇಲ್ಲಿದೆ! -
ದೀಪಾವಳಿ 2026: ಬೆಂಗಳೂರು, ದೆಹಲಿ, ಮುಂಬೈನಲ್ಲಿ ಪಟಾಕಿ ಸಿಡಿಸಲು ಹೊಸ ನಿಯಮಗಳು, ಸಮಯದ ಮಿತಿ! -
ದಕ್ಷಿಣ ಭಾರತದಲ್ಲಿ ಮಳೆ ಅಲರ್ಟ್: ಮನೆಯಲ್ಲೇ ಫಿಟ್ ಆಗಿರಲು ಈ 10 ನಿಮಿಷದ ವರ್ಕೌಟ್ ಟ್ರೈ ಮಾಡಿ! -
ದೀಪಾವಳಿ ಹಬ್ಬದ ಡ್ರಾಮಾ ತಪ್ಪಿಸಿ: ದಂಪತಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಪ್ಲಾನ್ ಮತ್ತು ಮೆಸೇಜ್ ಟಿಪ್ಸ್ -
ದೀಪಾವಳಿ ಪಾರ್ಟಿ ಜೋರಾಗಿದೆಯಾ? ₹30ರೊಳಗೆ ಸಿಗುವ 12 ಆರೋಗ್ಯಕರ ಹೈ-ಪ್ರೋಟೀನ್ ಸ್ನ್ಯಾಕ್ಸ್ ಇಲ್ಲಿದೆ! -
ಧನ್ತೇರಸ್ ಮುನ್ನವೇ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ: ಇಂದೇ ಖರೀದಿಸಬೇಕಾ ಅಥವಾ ನಾಳೆ ಕಾಯಬೇಕಾ? -
IND vs NZ 2nd ODI: ಪಂದ್ಯದ ದಿನ ಬೆಳಿಗ್ಗೆ ಫ್ರೆಶ್ ಆಗಿರಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ! -
ಎನ್ಆರ್ಐಗಳೇ ಎಚ್ಚರ! ವಿದೇಶಿ ವಿಚ್ಛೇದನ ಭಾರತದಲ್ಲಿ ಸಿಂಧುವಲ್ಲ: ದ್ವಿವಿವಾಹದ ಅಪಾಯ ತಪ್ಪಿಸಿಕೊಳ್ಳುವುದು ಹೇಗೆ?
ಬೋರಿಂಗ್ ಊಟಕ್ಕೂ ಕಿಕ್.. ಹಸಿರು ಬಟಾಣಿ ಬಳಸಿ ಉಪ್ಪಿನಕಾಯಿ ಮಾಡಿ! ವರ್ಷವಿಡೀ ಕೆಡಲ್ಲ, ಮಾಡೋದು ಹೇಗೆ?
ಬೋರಿಂಗ್ ಊಟಕ್ಕೂ ಮಜಾ ನೀಡುವ ಈಸಿ ರೆಸಿಪಿ! ಕೆಲವೇ ಪದಾರ್ಥಗಳೊಂದಿಗೆ ಖಾರವಾದ ಹಸಿರು ಬಟಾಣಿ ಉಪ್ಪಿನಕಾಯಿ ಮಾಡಿ ನೊಡಿ. ವರ್ಷವಿಡೀ ಸ್ಟೋರ್ ಮಾಡಿ.. ಬಾಯಿ ನೀರೂರಿಸುವುದು ಗ್ಯಾರಂಟಿ! ಹೌದು, ಮಾರುಕಟ್ಟೆಯಲ್ಲಿ ಹಸಿರು ಬಟಾಣಿಗಳ ಹೇರಳವಾಗಿ ಲಭ್ಯವಿದೆ. ಸಾಮಾನ್ಯವಾಗಿ ಬಟಾಣಿಯನ್ನು ಬಳಸಿ ಪಲಾವ್, ಕುರ್ಮಾ ಅಥವಾ ಸಾಗುಗಳನ್ನು ತಯಾರಿಸುವುದು ವಾಡಿಕೆ. ಆದರೆ, ನೀವು ಎಂದಾದರೂ ಹಸಿರು ಬಟಾಣಿಯಿಂದ ಉಪ್ಪಿನಕಾಯಿ (Peas Pickle) ತಯಾರಿಸಿದ್ದೀರಾ?
ನಿಮ್ಮ ದೈನಂದಿನ ಊಟವನ್ನು ಮತ್ತಷ್ಟು ಆಕರ್ಷಕವಾಗಿಸುವ ಸುಲಭ ಮಸಾಲೆಯುಕ್ತ ಹಸಿರು ಬಟಾಣಿ ಉಪ್ಪಿನಕಾಯಿ (Hare Matar Ka Achar) ರೆಸಿಪಿ ಇಲ್ಲಿದೆ. ಕೇವಲ ಹತ್ತೇ ನಿಮಿಷಗಳಲ್ಲಿ, ಮನೆಯಲ್ಲಿರುವ ಕೆಲವೇ ಪದಾರ್ಥಗಳನ್ನು ಉಪಯೋಗಿಸಿ ಬಾಯಲ್ಲಿ ನೀರೂರಿಸುವ ಬಟಾಣಿ ಉಪ್ಪಿನಕಾಯಿಯನ್ನು ಸಿದ್ಧಪಡಿಸಬಹುದು. ಇದು ನಿಮ್ಮ ಸಾಧಾರಣ ದಾಲ್-ರೊಟ್ಟಿ ಅಥವಾ ಅನ್ನ-ಸಾರಿನ ಊಟದ ರುಚಿಯನ್ನು ಇಮ್ಮಡಿಗೊಳಿಸುವುದರಲ್ಲಿ ಸಂದೇಹವಿಲ್ಲ. ಈ ರುಚಿಕರ ಖಾದ್ಯವು ಬೋರಿಂಗ್ ಅನಿಸುವ ಊಟಕ್ಕೂ ಹೊಸ ಕಿಕ್ ನೀಡುತ್ತೆ.
ರುಚಿ ಮಾತ್ರವಲ್ಲ.. ಆರೋಗ್ಯಕ್ಕೂ ಹಿತ!
ರುಚಿಗೆ ಮಾತ್ರ ಸೀಮಿತವಲ್ಲದೆ, ಹಸಿರು ಬಟಾಣಿ ಆರೋಗ್ಯಕ್ಕೂ ಹಿತಕಾರಿ. ಇದರಲ್ಲಿ ಪ್ರೋಟೀನ್ ಮತ್ತು ಫೈಬರ್ ಹೇರಳವಾಗಿರುವುದರಿಂದ ಆರೋಗ್ಯಕ್ಕೆ ಉತ್ತಮ. ಮಸಾಲೆಗಳು ಹಾಗೂ ಸಾಸಿವೆ ಎಣ್ಣೆಯ ಮಿಶ್ರಣದಿಂದ ತಯಾರಾಗುವ ಈ ಉಪ್ಪಿನಕಾಯಿ, ಜೀರ್ಣಕ್ರಿಯೆಗೆ ನೆರವಾಗುವುದಲ್ಲದೆ ನಾಲಿಗೆಗೊಂದು ಹಬ್ಬವನ್ನೇ ಉಂಟುಮಾಡುತ್ತದೆ.
ಈ ವಿಶೇಷ ಉಪ್ಪಿನಕಾಯಿಯನ್ನು ಒಮ್ಮೆ ತಯಾರಿಸಿದರೆ ಸಾಕು, ಅದನ್ನು ದೀರ್ಘಕಾಲದವರೆಗೆ ಹಾಳಾಗದಂತೆ ಸಂಗ್ರಹಿಸಿಡಬಹುದು. ಸರಿಯಾದ ವಿಧಾನದಲ್ಲಿ ತಯಾರಿಕೆ ಮತ್ತು ಶೇಖರಣೆಯಿಂದ ಇದರ ರುಚಿ ಮತ್ತು ಬಾಳಿಕೆ ಹೆಚ್ಚುತ್ತದೆ, ಯಾವುದೇ ಸಮಯದಲ್ಲೂ ಊಟಕ್ಕೆ ರುಚಿ ನೀಡುತ್ತದೆ. ಹಸಿರು ಬಟಾಣಿ ಉಪ್ಪಿನಕಾಯಿಗೆ ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ (Green Peas Pickle Recipe) ಇಲ್ಲಿದೆ.
ಹಸಿರು ಬಟಾಣಿ ಉಪ್ಪಿನಕಾಯಿಗೆ ಬೇಕಾಗುವ ಸಾಮಗ್ರಿಗಳು
• ಹಸಿರು ಬಟಾಣಿ (ಸಿಪ್ಪೆ ಸುಲಿದ)
• ಸಾಸಿವೆ ಎಣ್ಣೆ
• ಸಾಸಿವೆ ಕಾಳು
• ಸೋಂಪು (Fennel)
• ಮೆಂತ್ಯ ಕಾಳು
• ಜೀರಿಗೆ
• ಅರಿಶಿನ ಪುಡಿ
• ಅಚ್ಚಖಾರ ಪುಡಿ
• ಉಪ್ಪು
• ಹಿಂಗು
• ನಿಂಬೆ ರಸ ಅಥವಾ ವಿನೆಗರ್
ಹಸಿರು ಬಟಾಣಿ ಉಪ್ಪಿನಕಾಯಿ ತಯಾರಿಸುವ ವಿಧಾನ
- ಮೊದಲಿಗೆ ಹಸಿರು ಬಟಾಣಿಯನ್ನು ಚೆನ್ನಾಗಿ ತೊಳೆಯಿರಿ. ನಂತರ ಒಂದು ಪಾತ್ರೆಯಲ್ಲಿ ನೀರನ್ನು ಕುದಿಸಿ, ಬಟಾಣಿಗಳನ್ನು 2-3 ನಿಮಿಷಗಳ ಕಾಲ ಮಾತ್ರ ಬೇಯಿಸಿ.
- ಬಳಿಕ ನೀರನ್ನು ಸೋಸಿ, ಬಟಾಣಿ ಸಂಪೂರ್ಣವಾಗಿ ತಣ್ಣಗಾಗಲು ಬಿಡಿ. ತೇವಾಂಶ ಸಂಪೂರ್ಣವಾಗಿ ಒಣಗಲು ಒಣ ಬಟ್ಟೆಯ ಮೇಲೆ ಹರಡಿ.
- ಬಾಣಲೆಗೆ ಸಾಸಿವೆ ಕಾಳು, ಸೋಂಪು, ಮೆಂತ್ಯ ಮತ್ತು ಜೀರಿಗೆ ಹಾಕಿ ಸಣ್ಣ ಉರಿಯಲ್ಲಿ ಸ್ವಲ್ಪ ಹುರಿಯಿರಿ. ಮಸಾಲೆಯ ಸುವಾಸನೆ ಬರಲಾರಂಭಿಸಿದಾಗ ಉರಿಯನ್ನು ನಿಲ್ಲಿಸಿ.
- ಈ ಮಸಾಲೆಗಳು ತಣ್ಣಗಾದ ಮೇಲೆ ಮಿಕ್ಸಿಯಲ್ಲಿ ತರಿತರಿಯಾಗಿ ಪುಡಿ ಮಾಡಿಕೊಳ್ಳಿ, ನುಣ್ಣಗೆ ಮಾಡಬೇಡಿ.
- ಮತ್ತೊಂದು ಬಾಣಲೆಗೆ ಒಂದು ಕಪ್ ಸಾಸಿವೆ ಎಣ್ಣೆಯನ್ನು ಹಾಕಿ ಚೆನ್ನಾಗಿ ಕಾಯಿಸಿ. ಎಣ್ಣೆಯಿಂದ ಹೊಗೆ ಬರಲಾರಂಭಿಸಿದಾಗ ಉರಿಯನ್ನು ಆಫ್ ಮಾಡಿ.
- ಉಪ್ಪಿನಕಾಯಿಗೆ ಸಾಸಿವೆ ಎಣ್ಣೆ ಬಳಸುವುದು ರುಚಿ ಮತ್ತು ದೀರ್ಘ ಬಾಳಿಕೆಗೆ ಹೆಚ್ಚು ಸಹಕಾರಿ. ಎಣ್ಣೆ ಸ್ವಲ್ಪ ತಣ್ಣಗಾಗಲು ಬಿಡಿ.
- ಸ್ವಲ್ಪ ತಣ್ಣಗಾದ ಎಣ್ಣೆಗೆ ಹಿಂಗು, ಅರಿಶಿನ ಪುಡಿ, ಖಾರದ ಪುಡಿ, ಉಪ್ಪು ಮತ್ತು ಸಿದ್ಧಪಡಿಸಿಕೊಂಡ ತರಿತರಿ ಮಸಾಲೆಯನ್ನು ಸೇರಿಸಿ ಚೆನ್ನಾಗಿ ಕಲಸಿ.
- ಈಗ ಈ ಮಸಾಲೆಯ ಮಿಶ್ರಣಕ್ಕೆ ಬೇಯಿಸಿ ಒಣಗಿಸಿದ ಬಟಾಣಿಯನ್ನು ಹಾಕಿ.
- ಕೊನೆಯಲ್ಲಿ ನಿಂಬೆ ರಸ ಅಥವಾ ವಿನೆಗರ್ ಸೇರಿಸಿ ಚೆನ್ನಾಗಿ ಬೆರೆಸಿ. ವಿನೆಗರ್ ಸೇರಿಸುವುದರಿಂದ ಉಪ್ಪಿನಕಾಯಿ ಹೆಚ್ಚು ದಿನ ಹಾಳಾಗದೆ ಇರುತ್ತದೆ.
ಕೆಡದಂತೆ ಸಂಗ್ರಹಿಸೋದು ಹೇಗೆ?
ತಯಾರಾದ ಉಪ್ಪಿನಕಾಯಿ ಸಂಪೂರ್ಣವಾಗಿ ತಣ್ಣಗಾದ ನಂತರ, ಅದನ್ನು ಒಣಗಿದ ಗಾಜಿನ ಸೀಸೆಯಲ್ಲಿ ಹಾಕಿಡಿ. ಈ ಉಪ್ಪಿನಕಾಯಿಯನ್ನು 2-3 ದಿನಗಳ ಕಾಲ ಬಿಸಿಲಿನಲ್ಲಿಡುವುದರಿಂದ ಮಸಾಲೆಗಳು ಬಟಾಣಿಯೊಂದಿಗೆ ಚೆನ್ನಾಗಿ ಬೆರೆತು ರುಚಿ ಹೆಚ್ಚುತ್ತದೆ. ಪ್ರತಿದಿನ ಒಣ ಚಮಚದಿಂದ ಒಮ್ಮೆ ಮೇಲೆ ಕೆಳಗೆ ಬೆರೆಸುವುದನ್ನು ಮರೆಯಬೇಡಿ. ನಿಮ್ಮ ಮನೆಯಲ್ಲೂ ಈ ಪೌಷ್ಟಿಕ ಮತ್ತು 'ಹಸಿರು ಬಟಾಣಿ ಉಪ್ಪಿನಕಾಯಿ'ಯನ್ನು ಒಮ್ಮೆ ಟ್ರೈ ಮಾಡಿ ನೋಡಿ ಮತ್ತು ಮನೆಯವರ ಮೆಚ್ಚುಗೆ ಪಡೆಯಿರಿ.



Click it and Unblock the Notifications

