Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಭಾರತೀಯ ಶೈಲಿಯಲ್ಲಿ ಮ್ಯಾಕೋರೋನಿ ಪಾಸ್ತಾ ರೆಸಿಪಿ
ಪಾಸ್ತಾ ನಮ್ಮ ಭಾರತೀಯರ ಆಹಾರ ಅಲ್ಲ, ಆದರೆ ಅದು ಈಗ ಭಾರತೀಯರಿಗೆ ಚಿರಪರಿಚಿತ. ಮಕ್ಕಳು-ದೊಡ್ಡವರು ಎನ್ನದೆ ಎಲ್ಲರೂ ಪಾಸ್ತಾ ಇಷ್ಟ ಪಡುತ್ತಾರೆ.

ಸಂಜೆ ಸ್ನ್ಯಾಕ್ಸ್ಗೆ, ಬೆಳಗ್ಗೆ ಬ್ರೇಕ್ ಫಾಸ್ಟ್ಗೆ ಇದನ್ನು ಮಾಡಿ ಸವಿಯಲು ಇಷ್ಟ ಪಡುತ್ತಾರೆ. ನಾವಿಲ್ಲಿ ಭಾರತೀಯ ಶೈಲಿಯಲ್ಲಿ ಪಾಸ್ತಾ ಮಾಡುವ ವಿಧಾನ ಹೇಳಿದ್ದೇವೆ ನೋಡಿ:
Recipe By: Reena TK
Recipe Type: Snacks
Serves: 2
-
ಬೇಕಾಗುವ ಸಾಮಗ್ರಿ
ಪಾಸ್ತಾ ಬೇಯಿಸಲು
1 ಕಪ್ ಮ್ಯಾಕೋರೋನಿ ಪಾಸ್ತಾ
1 ಚಮಚ ಎಣ್ಣೆ
ರುಚಿಗೆ ತಕ್ಕ ಉಪ್ಪು
ಬೇಯಲು ತಕ್ಕ ನೀರು
ಪಾಸ್ತಾ ತಯಾರಿಸಲು
2 ಚಮಚ ಆಲೀವ್ ಎಣ್ಣೆ/ ಯಾವುದೇ ಅಡುಗೆ ಎಣ್ಣೆ
2 ಎಸಳು ಬೆಳ್ಳುಳ್ಳಿ (ಚಿಕ್ಕದಾಗಿ ಕತ್ತರಿಸಿದ್ದು)
1/2 ಕ್ಯಾರೆಟ್ (ಚಿಕ್ಕದಾಗಿ ಹೆಚ್ಚಿದ್ದು
ಅರ್ಧ ಚಮಚ ಕಾಶ್ಮೀರಿ ಮೆಣಸಿನ ಪುಡಿ
ಅರ್ಧ ಚಮಚ ಆಮ್ ಚೂರ್(ಒಣ ಮಾವಿನಕಾಯಿ ಪುಡಿ0
2 ಚಮಚ ಚೀಸ್
ಸ್ವಲ್ಪ ಸ್ಪ್ರಿಂಗ್ ಆನಿಯನ್
-
ಮಾಡುವುದು ಹೇಗೆ?
* ಮೊದಲಿಗೆ ಪಾತ್ರೆಗೆ ನೀರನ್ನು ಹಾಕಿ ಕುದಿಸಿ.
* ನಂತರ ಅದಕ್ಕೆ ಮ್ಯಾಕೋರೋನ್ ಪಾಸ್ತಾ ಹಾಕಿ, ಜೊತೆಗೆ 1 ಚಮಚ ಎಣ್ಣೆ ಸೇರಿಸಿ.
* 10 ನಿಮಿಷ ಬೇಯಿಸಿ (ಮಧ್ಯದಲ್ಲಿ ಒಂದೆರಡು ಬಾರಿ ಸೌಟ್ನಿಂದ ಆಡಿಸಿ).
* ನೀವು ಬೇರೆ ಬ್ರ್ಯಾಂಡ್ ಪಾಸ್ತಾ ಬಳಸಿದರೆ ಅದಕ್ಕೆ ತಕ್ಕಂತೆ ಬೇಯಿಸಿ.
* ಈಗ ಪಾಸ್ತಾದ ನೀರನ್ನು ಸೋಸಿ, ಪಾಸ್ತಾವನ್ನು ತಣ್ಣೀರಿನಲ್ಲಿ ಹಾಕಿಡಿ.
* ಈಗ ದೊಡ್ಡ ಪ್ಯಾನ್ ತೆಗೆದು ಬಿಸಿ ಮಾಡಿ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಬೆಳ್ಳುಳ್ಳಿ ಹಾಕಿ ಸ್ವಲ್ಪ ಆಡಿಸಿ, ನಂತರ ಈರುಳ್ಳಿ ಹಾಕಿ.
* ಈಗ ಟೊಮೆಟೊ ಹಾಕಿ ಅದು ಮೆತ್ತಗಾಗುವವರೆಗೆ ಸೌಟ್ನಿಂದ ಆಡಿಸುತ್ತಾ ಬೇಯಿಸಿ.
* ಈಗ ನಿಮಗೆ ಬೇಕಾದ ತರಕಾರಿ ಸೇರಿಸಿ (ಕ್ಯಾರೆಟ್, ಬ್ರೊಕೋಲಿ, ಕ್ಯಾಪ್ಸಿಕಂ....)
* ನಂತರ ಸೌಟ್ನಿಂದ ಆಡಿಸಿ, ತರಕಾರಿ ಅರ್ಧ ಬೆಂದ ಮೇಲೆ, ಖಾರದ ಪುಡಿ, ಅರ್ಧ ಚಮಚ ಆಮ್ಚೂರ್ ಹಾಗೂ ರುಚಿಗೆ ತಕ್ಕ ಉಪ್ಪು ಸೇರಿಸಿ.
* ಮಸಾಲೆ ಜೊತೆಗೆ ತರಕಾರಿ ಬೇಯಲಿ.
* ತರಕಾರಿ ಬೆಂದ ಮೇಲೆ, ಬೇಯಿಸಿದ ಪಾಸ್ತಾ ಸೇರಿಸಿ.
* ಈಗ ಮಸಾಲ ಸಾಸ್ ನಿಧಾನಕ್ಕೆ ಹಾಕಿ ಮಿಕ್ಸ್ ಮಾಡಿ.
* ಈಗ ಅವುಗಳನ್ನು ಸರ್ವ್ ಮಾಡುವ ಬೌಲ್ಗೆ ಹಾಕಿ ಅದರ ಮೇಲೆ ತುರಿದ ಚೀಸ್ ಹಾಕಿದರೆ ಮ್ಯಾಕೋರೋನ್ ಪಾಸ್ತಾ ರೆಡಿ.
- * ಪಾಸ್ತಾವನ್ನು ತುಂಬಾ ಬೇಯಿಸಬೇಡಿ, ಅಧಿಕ ಬೆಂದರೆ ಅಂಟು-ಅಂಟಾಗುವುದು.* * ಬೇಯಿಸಿ ಪಾಸ್ತಾವನ್ನು ತಣ್ಣನೆಯ ನೀರಿನಲ್ಲಿ (ಫ್ರಿಡ್ಜ್ನಲ್ಲಿಟ್ಟ ನೀರು) ಹಾಕಿಟ್ಟರೆ ಇನ್ನೂ ಒಳ್ಳೆಯದು. * ರುಚಿಗೆ ತಕ್ಕಂತೆ ಖಾರ ಸೇರಿಸಿ. * ಬಿಸಿ ಬಿಸಿ ಇರುವಾಗಲೇ ಸರ್ವ್ ಮಾಡಿ.
- ಪ್ರೊಟೀನ್ - 8 ಗ್ರಾಂ
- ಕಾರ್ಬ್ಸ್ - 43ಗ್ರಾಂ



Click it and Unblock the Notifications
