Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಸ್ವಾತಂತ್ರ್ಯ ದಿನಾಚರಣೆ: ರಾಷ್ಟ್ರ ಹಬ್ಬದ ಸಂಭ್ರಮಕ್ಕೆ ಆರೋಗ್ಯಕರ ತಿರಂಗಾ ಜ್ಯೂಸ್
ನಾವು 78ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸುತ್ತಿದ್ದೇನೆ, 77 ವರ್ಷಗಳು ಸಂಪೂರ್ಣವಾಗಿ 78ನೇ ವರ್ಷಕ್ಕೆ ಕಾಲಿಡುತ್ತಿದ್ದೇವೆ. ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ ಶಾಲೆಯಲ್ಲಿ ಮಾತ್ರವಲ್ಲ ಮನೆಯಿಂದಲೇ ಶುರುವಾಗಬೇಕು, ಆ ದಿನವನ್ನು ಇತರ ಹಬ್ಬದಂತೆ ಆಚರಿಸಬೇಕು. ಅದರಲ್ಲಿಯೂ ಹರ್ ಘರ್ ತಿರಂಗಾ ಅಭಿಯಾನ ನಡೆಯುತ್ತಿದೆ. ನೀವು ರಾಷ್ಟ್ರ ಹಬ್ಬದ ದಿನ ಕೇಸರಿ, ಬಿಳಿ ಹಸಿರು ಬಣ್ಣದ ಜ್ಯೂಸ್ ಮಾಡಿದರೆ ಇನ್ನೂ ಸೂಪರ್ ಆಗಿರುತ್ತದೆ ಅಲ್ವಾ?

ಇಲ್ಲಿ ಮಕ್ಕಳಿಗೆ ಟ್ರೀಟ್ ಕೊಡಲು ಟ್ರೈ ಕೊಡಲು ರೆಸಿಪಿ ನೀಡಿದ್ದೇವೆ ನೋಡಿ
ಆರೇಂಜ್ ಜ್ಯೂಸ್
ಬೇಕಾಗುವ ಸಾಮಗ್ರಿ
4-5 ಆರೇಂಜ್(ನಾಗಾಪುರ ಆರೇಂಜ್)
ಸಕ್ಕರೆ 2 ಚಮಚ
ಆರೇಂಜ್ ಸಿಪ್ಪೆ ಸುಲಿದು ಅದರೊಳಗಿನ ಬೀಜ ತೆಗೆದು ಸಕ್ಕರೆ ಹಾಕಿ, ಸ್ವಲ್ಪ ನೀರು
ಸೇರಿಸಿ ಗ್ರೈಂಡ್ ಮಾಡಿ
ಆರೇಂಜ್ ಜ್ಯೂಸ್ ರೆಡಿ.
ಬೇಕಾಗುವ ಸಾಮಗ್ರಿ
1-2 ಕ್ಯಾರೆಟ್
1/2 ಇಂಚಿನಷ್ಟು ಶುಂಠಿ
2 ಆರೇಂಜ್ ಅಥವಾ ಎಳನೀರು
ಕ್ಯಾರೇಟ್ ಅನ್ನು ಚಿಕ್ಕದಾಗಿ ಕತ್ತರಿಸಿ, ನಂತರ ಶುಂಠಿ, ಆರೇಂಜ್ ಅಥವಾ
ಎಳನೀರು, ಸಕ್ಕರೆ ಸೇರಿಸಿ ಗ್ರೈಂಡ್ ಮಾಡಿ
ಅರೇಂಜ್ ಬಣ್ಣದ ಜ್ಯೂಸ್ ರೆಡಿ.
ಬಿಳಿ ಜ್ಯೂಸ್
ಎಳನೀರಿನ ಜ್ಯೂಸ್
1 ಎಳನೀರು
ಸಕ್ಕರೆ 1 ಚಮಚ
ಎಳನೀರು ಹಾಗೂ ಅದರ ತಿರುಳಿಗೆ 1 ಚಮಚ ಸಕ್ಕರೆ ಹಾಕಿ ಗ್ರೈಂಡ್ ಮಾಡಿದರೆ ಬಿಳಿ ಜ್ಯೂಸ್ ರೆಡಿ.
ಬಾಳೆಹಣ್ಣಿನ ಜ್ಯೂಸ್
1 ಬಾಳೆಹಣ್ಣು
1 ಲೋಟ ಹಾಲು
ಜೇನು 1 ಚಮಚ
ಬಾಳೆಹಣ್ಣು ಗ್ರೈಂಡ್ ಮಾಡಿ, ನಂತರ ಹಾಲು ಸೇರಿಸಿ ಒಂದು ರೌಂಡ್ ತಿರುಗಿಸಿ,
ಜೇನು ಸೇರಿಸಿ ಮಿಕ್ಸ್ ಮಾಡಿದರೆ ಜ್ಯೂಸ್ ರೆಡಿ.
ಹಸಿರು ಜ್ಯೂಸ್
ಬೇಕಾಗುವ ಸಾಮಗ್ರಿ
1 ಕಪ್ ಗಟ್ಟಿ ಮೊಸರು
1 ಕಪ್ ಪಾಲಾಕ್
1 ಬಾಳೆಹಣ್ಣು
1/4 ಬೆಣ್ಣೆಹಣ್ಣು
1 ಚಮಚ ಜೇನು
2 ಚಮಚ ನೀರು
ಮಾಡುವ ವಿಧಾನ
ಮೊಸರು, ಪಾಲಾಕ್, ಬಾಳೆಹಣ್ಣು, ಬೆಣ್ಣೆಹಣ್ಣು, ನೀರು ಹಾಕಿ ಬ್ಲೆಂಡ್ ಮಾಡಿ ನಂತರ ಜೇನು ಸೇರಿಸಿ ಮಿಕ್ಸ್ ಮಾಡಿ.



Click it and Unblock the Notifications
