Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಹುಣಸೆ ಹಣ್ಣಿನ ಗೊಜ್ಜು ರೆಸಿಪಿ
ಹುಣಸೆ ಗೊಜ್ಜು ಕರ್ನಾಟಕ ಶೈಲಿಯ ವಿಶೇಷವಾದ ಪಾಕವಿಧಾನವಾಗಿದೆ. ಹುಣಸೆ ಹಣ್ಣಿನ ರಸ, ಬೆಲ್ಲ ಮತ್ತು ಖಾರದಿಂದ ಮಿಶ್ರಿತ ಗೊಳ್ಳುವ ಹುಣಸೆ ಗೊಜ್ಜು ಸವಿಯಲು ಹೆಚ್ಚು ಖುಷಿಯನ್ನು ನೀಡುತ್ತದೆ. ರುಚಿಕರವಾದ ಮೇಲೊಗರ ಅಥವಾ ವಿಶೇಷ ಭಕ್ಷ್ಯ ಎಂದು ಕರೆಯಲ್ಪಡುವ ಈ ಗೊಜ್ಜನ್ನು ಪೊಂಗಲ್ ಹಾಗೂ ಬಿಸಿ ಅನ್ನದೊಂದಿಗೆ ಸವಿಯಬಹುದು.
ಈ ಪಾಕವಿಧಾನದಲ್ಲಿ ಸೂಕ್ತ ಪ್ರಮಾಣದ ಖಾರ, ಹುಳಿ, ಸಿಹಿ ಸಂಯೋಜಿಸಲಾಗಿರುವುದರಿಂದ ನಾಲಿಗೆಗೆ ಹೆಚ್ಚು ಆಹ್ಲಾದವನ್ನು ನೀಡುತ್ತದೆ. ಅಲ್ಲದೆ ಮತ್ತೆ ಮತ್ತೆ ಬೇಕೆನಿಸುವಂತೆ ಮಾಡುತ್ತದೆ. ಸಾಮಾನ್ಯ ದಿನಗಳಲ್ಲಿ ಹಾಗೂ ವಿಶೇಷ ಸಂದರ್ಭಗಳಲ್ಲೂ ಈ ಪಾಕವಿಧಾನವನ್ನು ಅನುಸರಿಸಬಹುದು. ನಿಮಗೂ ಈ ರುಚಿಕರವಾದ ಭಕ್ಷ್ಯವನ್ನು ಮಾಡಬೇಕೆನ್ನುವ ಮನಸ್ಸಾದರೆ, ಈ ಕೆಳಗೆ ನೀಡಿರುವ ವೀಡಿಯೋ ಹಾಗೂ ಹಂತ ಹಂತವಾದ ಚಿತ್ರವಿವರಣೆಯ ಪಾಕವಿಧಾನದ ಮೊರೆ ಹೋಗಿ.

Recipe By: ಸುಮಾ ಜಯಂತ್
Recipe Type: ವಿಶೇಷ ಭಕ್ಷ್ಯ
Serves: 4 ಮಂದಿಗೆ
-
ಹುಣಸೆ ಹಣ್ಣು- ಒಂದು ನಿಂಬೆ ಹಣ್ಣಿನ ಗಾತ್ರದ್ದು.
ನೀರು- 1,1/2 ಕಪ್
ಎಣ್ಣೆ -1, 1/2 ಟೀ ಚಮಚ
ಸಾಸಿವೆ -1 ಟೀ ಚಮಚ
ಜೀರಿಗೆ -1 ಟೀ ಚಮಚ
ಹೆಚ್ಚಿಕೊಂಡ ಹಸಿ ಮೆಣಸಿನ ಕಾಯಿ- 1/4 ಕಪ್.
ಕರಿ ಬೇವಿನ ಎಲೆ - 10-15
ಇಂಗು -1/4 ಟೀ ಚಮಚ
ಬೆಲ್ಲ -1/2 ಕಪ್
ರುಚಿಗೆ ತಕ್ಕಷ್ಟು ಉಪ್ಪು
ತೆಂಗಿನ ತುರಿ- 1/4 ಕಪ್
ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪು -1,1/2 ಟೇಬಲ್ ಚಮಚ
-
1. ಹುಣಸೆ ಹಣ್ಣನ್ನು ಒಂದು ಬೌಲ್ಗೆ ಹಾಕಿ.
2. ಅರ್ಧ ಕಪ್ ನೀರನ್ನು ಸೇರಿಸಿ.
3. ಅದರ ರಸ ತೆಗೆಯಲು ಚೆನ್ನಾಗಿ ಕಿವುಚಿ.
4. 15 ನಿಮಿಷಗಳ ಕಾಲ ನೆನೆಯಲು ಬಿಡಿ.
5. ಒಂದು ಕಪ್ನಲ್ಲಿ ರಸವನ್ನು ಹಿಂಡಿ ತೆಗೆಯಿರಿ.
6. ಒಂದು ಪಾತ್ರೆಯಲ್ಲಿ ಎಣ್ಣೆಯನ್ನು ಹಾಕಿ ಬಿಸಿ ಮಾಡಿ.
7. ಸಾಸಿವೆಯನ್ನು ಹಾಕಿ, ಸಿಡಿಯುವ ತನಕ ಹುರಿಯಿರಿ.
8. ಜೀರಿಗೆಯನ್ನು ಸೇರಿಸಿ ಹುರಿಯಿರಿ.
9. ಹೆಚ್ಚಿಕೊಂಡ ಹಸಿ ಮೆಣಸು ಮತ್ತು ಕರಿಬೇವಿನ ಎಲೆಯನ್ನು ಸೇರಿಸಿ.
10. ಇಂಗು ಮತ್ತು ಹುಣಸೆ ರಸವನ್ನು ಸೇರಿಸಿ.
11. ಒಂದು ಕಪ್ ನೀರನ್ನು ಸೇರಿ, ಚೆನ್ನಾಗಿ ತಿರುವಿ.
12. ಸಾಮಾನ್ಯ ಉರಿಯಲ್ಲಿ 5 ನಿಮಿಷಗಳ ಕಾಲ ಬೇಯಲು ಬಿಡಿ.
13. ಬೆಲ್ಲವನ್ನು ಸೇರಿಸಿ ಚೆನ್ನಾಗಿ ಮಿಶ್ರಗೊಳಿಸಿ.
14. ನಂತರ ತೆಂಗಿನ ತುರಿ ಮತ್ತು ಉಪ್ಪನ್ನು ಬೆರೆಸಿ.
15. ಚೆನ್ನಾಗಿ ತಿರುವಿ, ಮಧ್ಯಮ ಉರಿಯಲ್ಲಿ 20 ನಿಮಿಷಗಳ ಕಾಲ ಬೇಯಲು ಬಿಡಿ.
16. ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪಿನಿಂದ ಅಲಂಕಾರ ಮಾಡಿ.
17. ಒಂದು ಬೌಲ್ಗೆ ವರ್ಗಾಯಿಸಿ, ಬಿಸಿ ಇರುವಾಗಲೇ ಸವಿಯಲು ನೀಡಿ.
- 1. ಹುಣಸೆ ಹಣ್ಣನ್ನು ಬಳಸುವ ಬದಲು ಮಾರುಕಟ್ಟೆಯಲ್ಲಿ ಸಿಗುವ ಹುಣಸೆ ಪೇಸ್ಟ್ಅನ್ನು ಸಹ ಬಳಸಬಹುದು.
- 2. ನೀವು ಬಿಸಿ ನೀರನ್ನು ಬಳಸಿ ಹುಣಸೆ ಹಣ್ಣನ್ನು ಕಿವುಚಿ ಕೊಂಡರೆ, ನೆನೆಸಿಟ್ಟುಕೊಳ್ಳುವ ಅಗತ್ಯವಿರುವುದಿಲ್ಲ.
- ಸರ್ವಿಂಗ್ ಸೈಜ್ - 2 ಟೇಬಲ್ ಚಮಚ
- ಕ್ಯಾಲೋರಿ - 120 ಕ್ಯಾಲ್
- ಫ್ಯಾಟ್ - 1.6 ಗ್ರಾಂ.
- ಪ್ರೋಟೀನ್ - 5.1 ಗ್ರಾಂ.
- ಕಾರ್ಬೋಹೈಡ್ರೇಟ್ - 31 ಗ್ರಾಂ.
- ಸಕ್ಕರೆ - 19 ಗ್ರಾಂ.
- ಫೈಬರ್ - 1 ಗ್ರಾಂ.
ಸ್ಟೆಪ್ ಬೈ ಸ್ಟೆಪ್ ಟಿಪ್ಸ್
1. ಹುಣಸೆ ಹಣ್ಣನ್ನು ಒಂದು ಬೌಲ್ಗೆ ಹಾಕಿ.

2. ಅರ್ಧ ಕಪ್ ನೀರನ್ನು ಸೇರಿಸಿ.

3. ಅದರ ರಸ ತೆಗೆಯಲು ಚೆನ್ನಾಗಿ ಕಿವುಚಿ.

4. 15 ನಿಮಿಷಗಳ ಕಾಲ ನೆನೆಯಲು ಬಿಡಿ.

5. ಒಂದು ಕಪ್ನಲ್ಲಿ ರಸವನ್ನು ಹಿಂಡಿ ತೆಗೆಯಿರಿ.

6. ಒಂದು ಪಾತ್ರೆಯಲ್ಲಿ ಎಣ್ಣೆಯನ್ನು ಹಾಕಿ ಬಿಸಿ ಮಾಡಿ.

7. ಸಾಸಿವೆಯನ್ನು ಹಾಕಿ, ಸಿಡಿಯುವ ತನಕ ಹುರಿಯಿರಿ.


8. ಜೀರಿಗೆಯನ್ನು ಸೇರಿಸಿ ಹುರಿಯಿರಿ.

9. ಹೆಚ್ಚಿಕೊಂಡ ಹಸಿ ಮೆಣಸು ಮತ್ತು ಕರಿಬೇವಿನ ಎಲೆಯನ್ನು ಸೇರಿಸಿ.


10. ಇಂಗು ಮತ್ತು ಹುಣಸೆ ರಸವನ್ನು ಸೇರಿಸಿ.


11. ಒಂದು ಕಪ್ ನೀರನ್ನು ಸೇರಿ, ಚೆನ್ನಾಗಿ ತಿರುವಿ.


12. ಸಾಮಾನ್ಯ ಉರಿಯಲ್ಲಿ 5 ನಿಮಿಷಗಳ ಕಾಲ ಬೇಯಲು ಬಿಡಿ.

13. ಬೆಲ್ಲವನ್ನು ಸೇರಿಸಿ ಚೆನ್ನಾಗಿ ಮಿಶ್ರಗೊಳಿಸಿ.

14. ನಂತರ ತೆಂಗಿನ ತುರಿ ಮತ್ತು ಉಪ್ಪನ್ನು ಬೆರೆಸಿ.


15. ಚೆನ್ನಾಗಿ ತಿರುವಿ, ಮಧ್ಯಮ ಉರಿಯಲ್ಲಿ 20 ನಿಮಿಷಗಳ ಕಾಲ ಬೇಯಲು ಬಿಡಿ.


16. ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪಿನಿಂದ ಅಲಂಕಾರ ಮಾಡಿ.

17. ಒಂದು ಬೌಲ್ಗೆ ವರ್ಗಾಯಿಸಿ, ಬಿಸಿ ಇರುವಾಗಲೇ ಸವಿಯಲು ನೀಡಿ.




Click it and Unblock the Notifications