Latest Updates
-
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್
ಮನೆಯಲ್ಲೇ ಸುಲಭವಾಗಿ ಮಾಡಿ ವೆಜ್ ಲಾಲಿಪಾಪ್..! ಮಕ್ಕಳಂತು ಇಷ್ಟಪಟ್ಟು ಸವಿಯೋದು ಖಚಿತ!
ಸ್ನ್ಯಾಕ್ಸ್ ಸಮಯಕ್ಕೆ ನೀವು ಹಲವು ರೀತಿಯ ತಿಂಡಿಗಳ ಸವಿಯಲು ಮುಂದಾಗುತ್ತೀರಿ. ಅದ್ರಲ್ಲೂ ವಿಶೇಷ ರುಚಿಯಲ್ಲಿ ಸವಿಯುವ ಹಾಗೆ ಮನೆ ಮಂದಿ ಎಲ್ಲರು ಕುಳಿತು ಸವಿಯುವಂತಹ ಹಲವು ಸ್ನ್ಯಾಕ್ಸ್ ಮಾಡಿರಬಹುದು. ಹಾಗೆ ಸುಲಭವಾಗಿ ಮಾಡುವಂತಹ ಸ್ನ್ಯಾಕ್ಸ್ಗಳು ಅಂದ್ರೆ ಎಲ್ಲರು ಒಮ್ಮೆ ಮಾಡಿ ಸವಿಯಲು ಮುಂದಾಗುತ್ತೀರಿ.
ಆದ್ರೆ ನಾವಿಂದು ಹೋಟೆಲ್, ರೆಸ್ಟೋರೆಂಟ್ಗಳಲ್ಲಿ ನೀಡುವಂತಹ ಹಾಗೆ ರಸ್ತೆ ಬದಿ ನೀವು ಕೂಡ ಸವಿದಿರುವಂತಹ ವೆಜ್ ಲಾಲಿಪಾಪ್ ಮಾಡುವ ಕುರಿತು ತಿಳಿದುಕೊಳ್ಳೋಣ. ಅದ್ರಲ್ಲೂ ಸುಲಭವಾಗಿ ಹೂಕೋಸನ್ನು ಬಳಸಿ ಮಾಡುವ ಲಾಲಿಪಾಪ್ ಅನ್ನು ನೀವು ಒಮ್ಮೆ ಸವಿದರೆ ಸಂಜೆ ಸಮಯದಲ್ಲಿ ಹಾಗೆ ಊಟದೊಂದಿಗೆ ನಿತ್ಯ ಇದನ್ನೇ ಮಾಡಿ ಸವಿಯಲು ಇಷ್ಟಪಡುತ್ತೀರಿ.

ಹೂಕೋಸಿನಿಂದ ಮಾಡುವ ಹಲವು ರೀತಿಯ ಖಾದ್ಯಗಳ ಪೈಕಿ ಈ ವೆಜ್ ಲಾಲಿಪಾಪ್ ಕೂಡ ಒಂದು. ಟೊಮೆಟೋ ಸಾಸ್ ಜೊತೆಗೆ ಸವಿಯುತ್ತಿದ್ದರೆ ಬಾಯಲ್ಲಿ ನೀರು ಬರುವುದು ಖಚಿತ. ಮನೆಯಲ್ಲಿ ಮಕ್ಕಳಿದ್ದರಂತು ಈ ಸ್ನ್ಯಾಕ್ಸ್ ಅದ್ಭುತವಾಗಿರಲಿದೆ. ಇದನ್ನು ಫ್ರೀ ಟೈಮ್ನಲ್ಲಿ ಮಾಡಿ ಮುಗಿಸಬಹುದು. ಹಾಗಾದ್ರೆ ಈ ವೆಜ್ ಲಾಲಿಪಾಪ್ ಮಾಡುವ ಕುರಿತು ತಿಳಿಯೋಣ.
ವೆಜ್ ಲಾಲಿಪಾಪ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ವೆಜ್ ಲಾಲಿಪಾಪ್ ಮಾಡಲು ಅಗತ್ಯವಿರುವ ವಸ್ತುಗಳು
- ಹೂಕೋಸು
- ಮೈದಾ ಹಿಟ್ಟು
- ಅಕ್ಕಿ ಹಿಟ್ಟು
- ಕಾರ್ನ್ ಫ್ಲೋರ್
- ಕಾಳು ಮೆಣಸಿನ ಪುಡಿ
- ಗರಂ ಮಸಾಲ ಪುಡಿ
- ಶುಂಠಿ ಬೆಳ್ಳುಳ್ಳಿ ಪೇಸ್ಟ್
- ಉಪ್ಪು
- ಎಣ್ಣೆ
- ಕಲರ್ ಪುಡಿ
ವೆಜ್ ಲಾಲಿಪಾಪ್ ಮಾಡುವ ವಿಧಾನವೇನು?
ಮೊದಲು ಹೂಕೋಸನ್ನು ದಂಟು ಇಟ್ಟುಕೊಂಡು ಕತ್ತರಿಸಿಕೊಳ್ಳಿ. ಈಗ ಒಂದು ಬೌಲ್ನಲ್ಲಿ ಬಿಸಿ ನೀರು ತೆಗೆದುಕೊಂಡು ಅದಕ್ಕೆ ಸ್ವಲ್ಪ ಉಪ್ಪು ಹಾಕಿ ಹೆಚ್ಚಿಕೊಂಡಿರುವ ಹೂಕೋಸನ್ನು ಅದಕ್ಕೆ ಹಾಕಿ ಸ್ವಲ್ಪ ತೊಳೆದುಕೊಳ್ಳಬೇಕು. ನಿಧಾನವಾಗಿ ನೆನೆಸಿಕೊಳ್ಳತ್ತಾ ತೊಳೆದುಕೊಳ್ಳಿ. ಹಾಗೆ ನೀರಿನಲ್ಲಿ ನೆನೆಸಿ 5 ನಿಮಿಷ ಬಿಡಿ.
ಈಗ ಒಂದು ಪಾತ್ರೆ ತೆಗೆದುಕೊಂಡು ಅದಕ್ಕೆ ಹೂಕೋಸಿನ ಪೇಸ್ಟ್ ಹಾಕಿಕೊಳ್ಳಿ. ಒಂದು ಮುಷ್ಠಿ ಅಷ್ಟು ಹೂಕೋಸನ್ನು ಬಿಡಿಸಿ ಅದನ್ನು ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ಇದನ್ನು ಪಾತ್ರೆಗೆ ಹಾಕಿ ಅದಕ್ಕೆ ಖಾರದ ಪುಡಿ, ಕಾಳು ಮೆಣಸಿನ ಪುಡಿ, ಗರಂ ಮಸಾಲ ಪುಡಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ನಿಂಬೆ ರಸ, 3 ಸ್ಪೂನ್ ಮೈದಾ ಹಿಟ್ಟು, 2 ಸ್ಪೂನ್ ಅಕ್ಕಿ ಹಿಟ್ಟು, 1 ಸ್ಪೂನ್ ಕಾರ್ನ್ ಫ್ಲೋರ್, ರುಚಿಗೆ ತಕ್ಕಷ್ಟು ಉಪ್ಪು ಹಾಗೆ ಸ್ವಲ್ಪ ಸ್ವಲ್ಪವೇ ನೀರು ಹಾಕಿಕೊಳ್ಳುತ್ತಾ ಕಲಸಿಕೊಳ್ಳಬೇಕು.
ಈಗ ನೀರಿನಲ್ಲಿರುವ ಹೂಕೋಸನ್ನು ಒಂದೊಂದಾಗಿ ಈ ಹಿಟ್ಟಿಗೆ ಹಾಕಿಕೊಳ್ಳುತ್ತಾ ಚೆನ್ನಾಗಿ ಹಿಟ್ಟು ಹಿಡಿಯುವಂತೆ ಕಲಸಿಕೊಳ್ಳಿ. ಹಾಗೆ ಹಿಟ್ಟು ಹಿಡಿಯಲು ಕೆಲ ಸಮಯ ಹಾಗೆಯೇ ಬಿಡಿ. ಇದು ಮಸಾಲೆಗಳು ಹಿಡಿಯಲು ಮಾಡಬೇಕು.
ಈಗ ಮತ್ತೊಂದು ಪಾತ್ರೆಗೆ 2 ಸ್ಪೂನ್ ಮೈದಾ, 1 ಸ್ಪೂನ್ ಕಾರ್ನ್ ಫ್ಲೋರ್, ಖಾರದ ಪುಡಿ, ಕಲರ್ ಪುಡಿ, ಉಪ್ಪು ಹಾಕಿ ನೀರು ಹಾಕಿಕೊಳ್ಳುತ್ತಾ ದಪ್ಪವಾದ ಹಿಟ್ಟನ್ನು ರೆಡಿ ಮಾಡಿ. ಇದು ದಪ್ಪವಾಗಿರಲಿ. ಈಗ ಒಲೆ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿ ಎಣ್ಣೆ ಬಿಸಿಯಾದಾಗ ಈ ಹಿಟ್ಟಿಗೆ ಮಸಾಲೆ ಹಿಡಿದಿರುವ ಹೂಕೋಸುಗಳನ್ನು ಅದ್ದಿಕೊಂಡು ಒಂದೊಂದಾಗಿ ಎಣ್ಣೆಯಲ್ಲಿ ಇಳಿಬಿಡಬೇಕು.
ಹೂಕೋಸು ಒಳಗೆ ಹಸಿ ಇರದಂತೆ ಚೆನ್ನಾಗಿ ಕರಿದುಕೊಳ್ಳಬೇಕು. ನಂತರ ಪ್ಲೇಟ್ನಲ್ಲಿ ಟೊಮೆಟೋ ಸಾಸ್ ಹಾಕಿ ಸವಿಯಲು ನೀಡಿದರೆ ನಿಮ್ಮ ಮುಂದೆ ರುಚಿ ರುಚಿಯ ಈ ಲಾಲಿಪಾಪ್ ರೆಡಿಯಾಗುತ್ತೆ.



Click it and Unblock the Notifications
