Latest Updates
-
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ?
ಗೋಧಿಯಿಂದ ಮಾಡುವ ಸಿಹಿ ಬೋಂಡಾ, ತಿನ್ನಲು ಸೂಪರ್ ಆಗಿರುತ್ತೆ
Recipes
oi-Reena TK
Posted By: Reena TK
ಕೆಲವೊಮ್ಮೆ ಏನೋ ಸಿಹಿ ತಿನ್ನಬೇಕೆನಿಸುತ್ತದೆ ಅಂಥ ಸಂದರ್ಭದಲ್ಲಿ ನೀವು ಈ ರೆಸಿಪಿ ಟ್ರೈ ಮಾಡಬಹುದು,ಇದು ತುಂಬಾ ಸುಲಭದ ರೆಸಿಪಿಯಾಗಿದೆ. ಟೀ ಜೊತೆ ಸವಿಯಲು ಸೂಪರ್ ಆಗಿರುತ್ತದೆ. ಇನ್ನು ಚಿಕ್ಕ ಟ್ರಾವೆಲ್ ಮಾಡುವಾಗ ಇದನ್ನು ಮಾಡಿ ಕೊಂಡೊಯ್ಯಬಹುದು, ಒಂದೆರಡು ದಿನ ಇಟ್ಟು ಕೂಡ ಬಳಸಬಹುದು. ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಗ್ರಿ
ಗೋಧಿ ಹಿಟ್ಟು ಒಂದೂವರೆ ಕಪ್
ಬೆಲ್ಲ ಅರ್ಧಕಪ್
ಕಲೆಸಲು ನೀರು
1/4 ಚಮಚ ಅಡುಗೆ ಸೋಡಾ
1/2 ಚಮಚ ಸೋಂಪು
2 ಏಲಕ್ಕಿ
1 ಕಪ್ ಎಣ್ಣೆ
ತೆಂಗಿನಕಾಯಿ ಹೋಳು 1/4 ಚಮಚ
ಮಾಡುವ ವಿಧಾನ
- ಒಂದು ಕಪ್ ನೀರನ್ನು ಪಾತ್ರೆಗೆ ಹಾಕಿ ಕಾಯಿಸಿ
- ನಂತರ ಬೆಲ್ಲ ಹಾಕಿ ಕರಗಿಸಿ
- ಬೆಲ್ಲದ ಪಾಕ ರೆಡಿಯಾದ ಮೇಲೆ ನೀವು ಉರಿಯಿಂದ ಇಳಿಸಿ ಇಡಿ, ನಂತರ ಪಾಕ ತಣ್ಣಗಾದ ಮೇಲೆ ಗೋಧಿ ಹಿಟ್ಟಿಗೆ ಹಾಕಿ ಕಲೆಸಿ
- ಸೋಡಾ ಸೇರಿಸಿ
- ಹಿಟ್ಟು ತುಂಬಾ ನೀರು-ನೀರಾಗಿರಬಹುದು, ಗಟ್ಟಿಯಾಗಿಯೂ ಇರಬಾರದು, ಹಿಟ್ಟಿಗೆ ಸೋಂಪು, ಏಲಕ್ಕಿ ಪುಡಿ, ತೆಂಗಿನ ಕಾಯಿ ಹೋಳು ಅಥವಾ ತೆಂಗಿನ ತುರಿ ಸೇರಿಸಿ ಮಿಕ್ಸ್ ಮಾಡಿ
- ಪ್ಯಾನ್‌ಗೆ ಎಣ್ಣೆ ಹಾಕಿ ಕುದಿಸಿ
- ಎಣ್ಣೆ ಕಾದಾಗ ಹಿಟ್ಟು ಹಾಕಿ, ಹಿಟ್ಟು ಕಂದು ಬಣ್ಣಕ್ಕೆ ಬರುವಾಗ ತೆಗೆಯಿರಿ. ಇಷ್ಟು ಮಾಡಿದರೆ ಸಿಹಿ ಬೋಂಡಾ ರೆಡಿ.
- ಸಿಹಿ ಇಷ್ಟವಿಲ್ಲ ಗೋಧಿಯಿಂದ ಖಾರ ಬೋಂಡಾ ಮಾಡಬೇಕೆಂದು
ಬಯಸುವುದಾದರೆ
ಒಂದು ಕಪ್ ಗೋಧಿ ಹಿಟ್ಟು
ಒಂದು ಚಿಕ್ಕ ಈರುಳ್ಳಿ
ತುರಿದ ಶುಂಠಿ 1 ಚಮಚ
ಹಸಿ ಮೆಣಸು 1-2
ಸ್ವಲ್ಪ ಕೊತ್ತಂಬರಿ ಸೊಪ್ಪು
ಸ್ವಲ್ಪ ಕರಿಬೇವು
ರುಚಿಗೆ ತಕ್ಕ ಉಪ್ಪು
1/2 ಚಮಚ ಸಕ್ಕರೆ
1/4 ಚಮಚ ಅಡುಗೆ ಸೋಡಾ
1/2 ಕಪ್ ಅಕ್ಕಿ ಹಿಟ್ಟು
1 ಕಪ್ ಎಣ್ಣೆ
ಮಾಡುವ ವಿಧಾನ
ಒಂದು ಬೌಲ್‌ನಲ್ಲಿ ಅಕ್ಕಿ ಹಿಟ್ಟು, ಗೋಧಿ ಹಿಟ್ಟು ಹಾಕಿ, ಉಳಿದ ಸಾಮಗ್ರಿ ಹಾಕಿ
ನೀರು ಹಾಕಿ ಮಿಕ್ಸ್ ಮಾಡಿ,
ಎಣ್ಣೆ ಕಾಯಿಸಲು ಇಡಿ, ಕಾದ ಎಣ್ಣೆಗೆ ಹಿಟ್ಟು ಹಾಕಿ ಕಂದು ಬಣ್ಣ ಬರುವಾಗ
ತೆಗೆಯಿರಿ.
ರೆಡಿಯಾದ ಬೋಂಡಾವನ್ನು ಟೀ ಜೊತೆ ಸವಿಯಿರಿ.
Comments
[ of 5 - Users]



Click it and Unblock the Notifications
