Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಮಟನ್ ಮಾಂಸ ಖರೀದಿಸುವಾಗ ಅದು ಫ್ರೆಷ್ ಆಗಿದೆಯೇ ಎಂದು ತಿಳಿಯುವುದು ಹೇಗೆ?
ಬೆಂಗಳೂರಿನಲ್ಲಿ ಮಟನ್ ಮಾಂಸ ಸುತ್ತ ಹಲವರಿಗೆ ಅನುಮಾನ ಉಂಟಾಗಿದೆ, ಇಷ್ಟು ದಿನ ನಾವು ಮಟನ್ ಎಂದು ಸವಿದಿದ್ದು ಮಟನ್ ತಾನೆ ಎಂದೆಲ್ಲಾ ಡೌಟು ಶುರುವಾಗಿದೆ, ಹೌದು ನೆನ್ನೆಯಿಂದ ನಡೆಯುತ್ತಿರುವ ಸಂಗತಿಗಳನ್ನು ನೋಡುವಾಗ ಯಾರಿಗಾದರೂ ಈ ರೀತಿಯ ಡೌಟು ಬರುವುದು ಸಹಜ.

ರಾಜಾಸ್ಥಾನದಿಂದ ಬೆಂಗಳೂರಿಗೆ ಬರುವ ಕುರಿಮಾಂಸದ ಜೊತೆಗೆ ನಾಯಿ ಮಾಂಸ ಕೂಡ ಮಿಕ್ಸ್ ಮಾಡಿ ತಂದು ಮಾರಾಟ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿ ಬರುತ್ತಿದೆ. ಜೈಪುರದಿಂದ ಬಂದ ಮಾಂಸದ ಬಾಕ್ಸ್ ಅನ್ನು ಓಪನ್ ಮಾಡಬೇಕೆಂದು ಬೆಂಗಳೂರಿನ ಮಟನ್ ಮಾರಾಟ ಮಾಡುತ್ತಿರುವ ವ್ಯಾಪಾರಿಗಳು ಪಟ್ಟು ಹಿಡಿದರೂ ಆ ಬಾಕ್ಸ್ ಓಪನ್ ಮಾಡಲು ಒಪ್ಪದಿರುವುದು ಹಲವು ಅನುಮಾನಗಳನ್ನುಂಟು ಮಾಡಿದೆ. ಆಹಾರ ಸುರಕ್ಷಿತಾ ಅಧಿಕಾರಿಗಳು ಮಾಂಸದ ಮಾದರಿ ಸಂಗ್ರಹಿಸಿದ್ದಾರೆ.
ನಾಯಿ ಮಾಂಸವಿರಬಹುದು ಎಂಬ ಅನುಮಾನಕ್ಕೆ ಕಾರಣವೇನು?
ಆ ಮಾಂಸದ ಬಾಕ್ಸ್ ಓಪನ್ ಮಾಡಿದಾಗ ಚರ್ಮ ಸುಲಿದ ಕುರಿ ಎಂದು ಹೇಳಲಾಗುತ್ತಿರುವ
ಪ್ರಾಣಿಯ ದೇಹದಲ್ಲಿ ಉದ್ದನೆಯ ಬಾಲವಿತ್ತು, ಆಡು, ಕುರಿಗಳಿಗೆ ಅಷ್ಟೊಂದು ದೊಡ್ಡ
ಬಾಲವಿರುವುದಿಲ್ಲ, ಅದಕ್ಕೆ ಈ ಸಂಶಯ ಉಂಟಾಗಿದೆ.
ರಾಜಾಸ್ಥಾನದಿಂದ ಬರುವ ಮಟನ್ ಸುರಕ್ಷಿತವಲ್ಲ ಎಂದು
ಹೇಳಲಾಗುತ್ತಿದೆ,
ರಾಜಾಸ್ಥಾನದಿಂದ ಮಟನ್ ಇಲ್ಲಿಗೆ ಬರಲು 65-70 ಗಂಟೆ ಬೇಕಾಗುತ್ತದೆ, ಆದರೆ ಕುರಿ,
ಆಡು ಕತ್ತರಿಸಿದ ಬಳಿಕ 15-17 ಗಂಟೆಗಳ ಒಳಗೆ ಮಾತ್ರ ಆ ಮಾಂಸ ತಿನ್ನಲು ಯೋಗ್ಯ
ಎಂದು ಹೇಳಲಾಗುತ್ತದೆ. ಈ ಕುರಿ, ಆಡು ಮಾಂಸ ಫ್ರೆಷ್ ಎಂದು ತಿಳಿಯುವುದು ಹೇಗೆ
ಎಂದು ನೋಡೋಣ:
ಬಣ್ಣ
ಮಟನ್ ಫ್ರೆಷ್ ಆಗಿದ್ದರೆ ಅದರ ಬಣ್ಣ ನೋಡಿ ತಿಳಿಯಬಹುದು. ಮಾಂಸ ಕೆಂಪಗೆ ಇದ್ದರೆ
ಅದು ತಾಜಾ ಮಾಂಸವೆಂದು ಹೇಳಲಾಗುವುದು, ಆದರೆ ಮಾಂಸದ ಕೆಲ ಭಾಗದಲ್ಲಿ ಸ್ವಲ್ಪ ನೀಲಿ
ಬಣ್ಣ ಕಂಡು ಬಂದರೆ ಅದು ತಾಜಾವಲ್ಲ ಎಂದು ಹೇಳಲು ಸಾಧ್ಯವಿಲ್ಲ, ಏಕೆಂದರೆ
ವಾತಾವರಣದಲ್ಲಿನ ಆಮ್ಲಜನಕ ಮಾಂಸಕ್ಕೆ ತಗುಲಿದಾಗ ಬಣ್ಣ ಬದಲಾಗುವುದು ಸಹಜ.
ಮಾಂಸ ಗಟ್ಟಿಯಾಗಿರುತ್ತದೆ
ಮಾಂಸ ನೋಡುವಾಗಲೇ ಅದರ Texture ನೋಡಿ ತಿಳಿಯಬಹುದು, ಮಾಂಸದ ತುಂಡುಗಳನ್ನು
ನೊಡುವಾಗ ಅದರ ಮಾಂಸ ಸ್ವಲ್ಪ ಸಡಿಲ ರೀತಿ ಕಂಡು ಬಂದರೆ ಆ ಮಾಂಸ ತಾಜಾವಲ್ಲ
ಎಂದರ್ಥ.
ವಾಸನೆ
ನೀವು ವಾಸನೆ ಗ್ರಹಿಸಿ ಕೂಡ ಖರೀದಿಸಬಹುದು, ತಾಜಾ ಮಾಂಸಕ್ಕೆ ಯಾವುದೇ ವಾಸನೆ
ಇರಲ್ಲ, ಅದರಿಂದ ದುರ್ನಾತ ಬಿರುತ್ತಿದೆ ಎಂದಾದರೆ ಅದು ತಾಜಾ ಮಾಂಸವಲ್ಲ
ಎಂದರ್ಥ.
ಮಟನ್ ಜೊತೆ ಬೀಫ್ ಮಿಕ್ಸ್ ಮಾಡಲಾಗಿದೆ ಎಂಬುವುದು ಈ ಹಿಂದೆ ಕೂಡ
ಕೆಲ ರೆಸ್ಟೋರೆಂಟ್ನಲ್ಲಿ ಪತ್ತೆಯಾಗಿತ್ತು
ಗ್ರಾಹಕರು ನಮ್ಮನ್ನು ನಂಬಿ ಬರುವಾಗ ಅವರ ನಂಬಿಕೆಗೆ ಪೆಟ್ಟಾಗದಂಥ ಹಾಗೂ
ಅತ್ಯುತ್ತಮ ಗುಣಮಟ್ಟದ ಆಹಾರ ನೀಡುವುದು ರೆಸ್ಟೋರೆಂಟ್, ಹೋಟೆಲ್ಗಳ
ಕರ್ತವ್ಯವಾಗಿದೆ.
ಮಟನ್ ಎಂದು ಖರೀದಿಸಿದಾಗ ಬೀಫ್ ನೀಡಿದರೆ ಎಂಬ ಸಂಶಯ ನಿಮಗೆ ಇದ್ದರೆ
ಬೀಫ್-ಮಟನ್ ಬಗ್ಗೆ ತಿಳಿಯಬಹುದು ಎಂದು ನೋಡೋಣ ಬನ್ನಿ.
ಮಟನ್ Vs ಬೀಫ್
ವೈಟ್ ಲೈನಿಂಗ್
ಮಟನ್-ಬೀಫ್ ಬಗ್ಗೆ ಕೆಲವರಿಗೆ ಗೊತ್ತಿರುತ್ತದೆ, ಇನ್ನು ಕೆಲವರಿಗೆ ಮಟನ್ ಅಂತ
ಬೀಫ್ ನೀಡಿದರೆ ಗೊತ್ತಾಗುವುದಿಲ್ಲ. ಬೀಫ್ ಮಾಂಸದಲ್ಲಿ ವೈಟ್ ಲೈನಿಂಗ್
ಇರುತ್ತದೆ, ಆದರೆ ಅದು ಮಟನ್ನಲ್ಲಿ ಇರುವುದಿಲ್ಲ. ಹೀಗಾಗಿ ಈ ವಿಷಯ ತಿಳಿದರೆ
ಭಯವಿಲ್ಲದೆ ತಿನ್ನಬಹುದು.
ತೂಕ ಒಂದೇ ಅದರೂ ಮಟನ್ ಮಾಂಸ ಕಡಿಮೆ ಇರುತ್ತದೆ
ಬೀಫ್ ಒಂದು ಕೆಜಿ, ಮಟನ್ ಒಂದು ಕೆಜಿ ತೂಗಿದರೆ ಬೀಫ್ ಮಾಂಸ ಹೆಚ್ಚಾಗಿ
ಕಾಣುತ್ತದೆ, ಅದೇ ಮಟನ್ ಮಾಂಸ ಕಡಿಮೆ ಇರುತ್ತದೆ, ಮಟನ್ ಸ್ವಲ್ಪ ಹಾಕಿದರೂ
ಹೆಚ್ಚು ತೂಗುತ್ತದೆ.
ವಾಸನೆ
ನೀವು ಮಟನ್ ತುಂಡು ಕೆಲವು ಗಂಟೆಗಳ ಕಾಲ ಇಟ್ಟರೆ ಅದರಿಂದ ಅ ಮಟನ್ ವಾಸನೆ
ಇರುತ್ತದೆ ಅಲ್ವಾ ಅದು ಬಿರುತ್ತದೆ, ಆದರೆ ಬೀಫ್ ಮಾಂಸ ಅ ರೀತಿಯ ವಾಸನೆ
ಬೀರುವುದಿಲ್ಲ.
ಬೀಫ್ ಹೆಚ್ಚು ಅಗೆಯಬೇಕು: ಮಟನ್ ಆದರೆ ಸುಲಭವಾಗಿ ತಿನ್ನಬಹುದು, ಅದೇ ಬೀಫ್ ಆದರೆ ಸ್ವಲ್ಪ ಹೆಚ್ಚು ಜಗಿಯಬೇಕು.



Click it and Unblock the Notifications
