Latest Updates
-
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್!
ಬಾಯಲ್ಲಿ ನೀರು ತರಿಸುವ ಮದುವೆ ಮನೆ ಪಲಾವ್! ಮಾಡಿ ನೋಡಿ!
ಮದುವೆ ಮನೆಗಳಲ್ಲಿ ಮಾಡುವ ಅಡುಗೆ ಅಂದರೆ ಎಲ್ಲರ ಬಾಯಲ್ಲೂ ನೀರು ಬರುತ್ತೆ. ಅದ್ರಲ್ಲೂ ಎಲ್ಲರಿಗೂ ಇಷ್ವವಾಗುವಂತಹ ಖಾದ್ಯಗಳ ಮಾಡಿ ಸವಿಯಲು ನೀಡುವುದು ನೋಡಬಹುದು. ಹಾಗೆ ವಿಭಿನ್ನ ಶೈಲಿಯ ಅಡುಗೆಗಳು ಖಾದ್ಯಗಳು ಬಾಯಿ ರುಚಿ ಹೆಚ್ಚಿಸಲಿವೆ. ನೀವು ಒಮ್ಮೆ ಸವಿದರೆ ಪದೇ ಪದೇ ಸವಿಯಲು ಮುಂದಾಗುವಂತಹ ರುಚಿಯಲ್ಲಿ ಮಾಡುವುದು ನೋಡಬಹುದು.
ಹಾಗೆ ಮದುವೆ ಮನೆಯ ರುಚಿ ರುಚಿಯ ಖಾದ್ಯಗಳ ಪೈಕಿ ಊಟಕ್ಕೆ ಮಾಡುವ ಪಲಾವ್ ಎಲ್ಲರಿಗೂ ಇಷ್ಟವಾಗುತ್ತೆ. ಮದುವೆ ಮನೆಯ ಪಲಾವ್ ಅಂದ್ರೆ ಎಲ್ಲರ ಬಾಯಲ್ಲೂ ನೀರು ಬರುವುದು ಸಹಜ. ಹಾಗೆ ಇದೆ ರುಚಿಯಲ್ಲಿ ಮನೆಯಲ್ಲೂ ಮಾಡಿ ಸವಿಯುವುದು ನೋಡಬಹುದು. ಮನೆಯಲ್ಲಿ ಹೇಗೆ ಪಲಾವ್ ಮಾಡುವುದು ಸಾಮಾನ್ಯ. ಆದ್ರೆ ಸ್ಪೆಷಲ್ ಆಗಿ ಹಲವು ವಸ್ತುಗಳ ಹಾಕಿ ಮದುವೆ ಮನೆಯಲ್ಲಿ ಮಾತ್ರ ಸವಿಯಲು ಸಿಗುವಂತಹ ಪಲಾವ್ ಕುರಿತಾಗಿ ನಾವಿಂದು ತಿಳಿಯೋಣ.

ಮದುವೆ ಮನೆಯಲ್ಲಿ ಮಾಡುವ ರುಚಿ ರುಚಿಯ ಪಲಾವ್ ಮಾಡುವುದು ಹೇಗೆ? ಮನೆಯಲ್ಲಿ ಈ ಪಲಾವ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮದುವೆ ಮನೆಯ ಪಲಾವ್ ಮಾಡಲು ಬೇಕಾಗುವ ವಸ್ತಗಳು?
- ಅಕ್ಕಿ
- ಹಸಿ ಮೆಣಸಿನ ಕಾಯಿ
- ಪುದೀನಾ ಎಲೆ
- ಬೆಳ್ಳುಳ್ಳಿ ಎಸಳು
- ಶುಂಠಿ
- ಜೀರಿಗೆ
- ಎಣ್ಣೆ
- ಗೋಡಂಬಿ
- ಪಲಾವ್ ಎಲೆ
- ಲವಂಗ
- ಏಲಕ್ಕಿ
- ಕಲ್ಲು ಹೂವು
- ನಕ್ಷತ್ರ ಮೊಗ್ಗು
- ದಾಲ್ಚಿನ್ನಿ
- ಕಸೂರಿ ಮೇಥಿ
- ಈರುಳ್ಳಿ
- ಸಬ್ಬಸಿಗೆ ಸೊಪ್ಪು
- ಅರಿಶಿನ ಪುಡಿ
- ಧನಿಯಾ ಪುಡಿ
- ಆಲೂಗಡ್ಡೆ
- ಕ್ಯಾಪ್ಸಿಕಂ
- ಕ್ಯಾರೆಟ್
- ಬೀನ್ಸ್
- ಹೂಕೋಸು
- ಟೊಮೆಟೊ
- ಬಟಾಣಿ
- ಒಣ ತೆಂಗಿನಕಾಯಿ
- ನಿಂಬೆ ರಸ
- ತುಪ್ಪ
- ಕೊತ್ತಂಬರಿ ಸೊಪ್ಪು
ಮದುವೆ ಮನೆಯ ಪಲಾವ್ ಮಾಡುವುದು ಹೇಗೆ?
ಪಲಾವ್ ಮಾಡುವ ಮುನ್ನ ನಿಮಗೆ ಎಷ್ಟು ಬೇಕೋ ಅಷ್ಟು ಅಳತೆಯಷ್ಟು ಅಕ್ಕಿಯನ್ನು ನೆನೆಸಿಟ್ಟುಕೊಳ್ಳಿ. ಮಿಕ್ಸಿ ಜಾರ್ ತೆಗೆದುಕೊಂಡು ಹಸಿ ಮೆಣಸು, ಜಿರಿಗೆ, ಪುದಿನ ಎಲೆ, ಬೆಳ್ಳುಳ್ಳಿ, ಶುಂಠಿ ಹಾಕಿ ನೀರು ಹಾಕೆ ತರಿ ತರಿಯಾಗಿ ರುಬ್ಬಿಕೊಳ್ಳಿ. ಈಗ ಬಾಣಲೆಯನ್ನು ಇಟ್ಟು ಅದಕ್ಕೆ ಎಣ್ಣೆ ಹಾಕಿ ಬಳಿಕ ಗೋಡಂಬಿ ಹಾಕಿ ಚೆನ್ನಾಗಿ ಹುರಿದುಕೊಳ್ಳಿ.
ನಂತರ ಈ ಎಣ್ಣೆಗೆ ಪಾವ್ ಎಲೆ ಚಕ್ರಮೊಗ್ಗು, ಚಕ್ಕೆ, ಕಸೂರಿ ಮೇಥಿ, ಲವಂಗ, ಏಲಕ್ಕಿ ಹಾಕಿಕೊಂಡು ನಂತರ ಒಂದು ಈರುಳ್ಳಿ ಕೂಡ ಹಾಕಿಕೊಳ್ಳಿ. ಚೆನ್ನಾಗಿ ಹುರಿದುಕೊಳ್ಳಿ. 2 ನಿಮಿಷದ ಬಳಿಕ ಕತ್ತರಿಸಿಕೊಂಡ ಸಬ್ಬಸ್ಸಿಗೆ ಸೊಪ್ಪ ಕೂಡ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. ಈಗ ಮಿಕ್ಸಿಯಲ್ಲಿ ರುಬ್ಬಿಕೊಂಡಿದ್ದ ಮಸಾಲೆಯನ್ನು ಇದಕ್ಕೆ ಹಾಕಿ.
ನಂತರ ಅರಶಿಣ ಪುಡಿ, ಧನಿಯಾ ಪುಡಿ ಹಾಕಿ ಮಿಕ್ಸ್ ಮಾಡಿ. ಹಾಗೆ ಬಳಿಕ ಕತ್ತರಿಸಿಕೊಂಡಿರುವ ಕ್ಯಾರೆಟ್, ಕ್ಯಾಪ್ಸಿಕಂ, ಬಟಾಣಿ, ಟೊಮೆಟೋ, ಬೀನ್ಸ್ ಎಲ್ಲವನ್ನು ಇದಕ್ಕೆ ಹಾಕಿಕೊಳ್ಳಿ. ಮೊದಲು ಟೊಮೆಟೋ ಹಾಕಿ 1 ನಿಮಿಷ ಬಿಟ್ಟು ಬಳಿಕ ಒಂದೊಂದೇ ತರಕಾರಿಯನ್ನು ಹಾಕಿಕೊಳ್ಳಿ. ಹಾಗೆ ಒಂದು ಕಪ್ ಮೊಸರು ಕೂಡ ಹಾಕಿಕೊಳ್ಳಿ.
ಬಳಿಕ ಒಣ ಕೊಬ್ಬರಿ ಹಾಕಿಕೊಂಡು ನಿಂಬೆ ಹುಳಿ ಹಿಂಡಿಕೊಳ್ಳಿ. ಹಾಗೆ 1 ಕಪ್ ನೀರು ಹಾಕಿ ಮಿಕ್ಸ್ ಮಾಡಿ ಕುದಿಬರಲು ಬಿಡಿ. ಗೋಡಂಬಿ ಕೂಡ ಹಾಕಿಕೊಳ್ಳಿ. ಅಕ್ಕಿ ತೆಗೆದುಕೊಂಡು ಕಪ್ನಲ್ಲಿ ಅಳೆಯ ಪ್ರಮಾಣದಲ್ಲಿ ಹಾಕಿ. ನಂತರ ಮುಚ್ಚಳ ಮುಚ್ಚಿ ಕುದಿಬರಲು ಬಿಡಿ. ಕುದಿಬರಲು ಆರಂಭಿಸಿದಾಗ ನೆನೆಸಿಟ್ಟ ಅಕ್ಕಿಯನ್ನು ಇದಕ್ಕೆ ಹಾಕಿ ಮಿಕ್ಸ್ ಮಾಡಿ ಮತ್ತೆ ಮುಚ್ಚಳ ಮುಚ್ಚಿ ಕುದಿಬರಲು ಬಿಡಿ. 5ರಿಂದ 6 ನಿಮಿಷ ಬೇಯಿಸಿಕೊಂಡು ಒಮ್ಮೆ ಪರೀಕ್ಷಿಸಿ. ಮತ್ತೆ 2 ನಿಮಿಷ ಹಾಗೆಯೇ ಬಿಡಿ. ಸಂಪೂರ್ಣ ನೀರು ಆವಿಯಾಗಿ ಹುಡಿ ಹುಡಿಯಾದ ಬಳಿಕ ಈಗ ತುಪ್ಪ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿಕೊಂಡರೆ ನಿಮ್ಮ ಮುಂದೆ ಮದುವೆ ಮನೆ ರುಚಿಯ ಪಲಾವ್ ಸಿದ್ದವಾಗುತ್ತೆ.



Click it and Unblock the Notifications
