Latest Updates
-
ದೀಪಾವಳಿ ಸಂಭ್ರಮಕ್ಕೆ ಮೆಗಾ ಬ್ಲಾಕ್ ಅಡ್ಡಿ: ಮುಂಬೈ ರೈಲು ಪ್ರಯಾಣಿಕರೇ ಎಚ್ಚರ, ಪ್ಲಾನ್ ಬದಲಾಯಿಸಿ! -
ದೀಪಾವಳಿ ಸಿಹಿ ತಿಂಡಿಗಳಲ್ಲಿ ಕಲಬೆರಕೆ? 30 ಸೆಕೆಂಡ್ಗಳಲ್ಲಿ ಪರೀಕ್ಷಿಸಿ ನಿಮ್ಮ ಕುಟುಂಬದ ಆರೋಗ್ಯ ಕಾಪಾಡಿ! -
ಬಿಗ್ ಬಾಸ್ ಕನ್ನಡ 13: ಈ ವಾರ ಎಲಿಮಿನೇಷನ್ ಇಲ್ಲವೇ? ಭಾವುಕ ಪತ್ರಗಳೇ ಬದಲಾಯಿಸಿದ ಆಟದ ಸಮೀಕರಣ! -
ದೆಹಲಿ ವಾಯುಮಾಲಿನ್ಯದ ಭೀತಿ: ಮನೆಯಲ್ಲೇ 12 ನಿಮಿಷದ ಸರಳ ವರ್ಕೌಟ್ ಮೂಲಕ ಆರೋಗ್ಯ ಕಾಪಾಡಿಕೊಳ್ಳಿ -
ವಾಟ್ಸಾಪ್ನಲ್ಲಿ ದೀಪಾವಳಿ ಬೋನಸ್ ಲಿಂಕ್ ಬಂದಿದೆಯೇ? ಮೋಸ ಹೋಗುವ ಮುನ್ನ ಈ 30 ಸೆಕೆಂಡ್ ಕೆಲಸ ಮಾಡಿ! -
ದೆಹಲಿ ಮಾಲಿನ್ಯದ ಭೀತಿ: ₹150 ಬಜೆಟ್ನಲ್ಲಿ ನಿಮ್ಮ ಆರೋಗ್ಯ ರಕ್ಷಿಸುವ ಆಂಟಿ-ಸ್ಮಾಗ್ ಡಯಟ್ ಪ್ಲಾನ್ ಇಲ್ಲಿದೆ! -
ದೀಪಾವಳಿ 2026: ಬೆಂಗಳೂರು, ದೆಹಲಿ, ಮುಂಬೈನಲ್ಲಿ ಪಟಾಕಿ ಸಿಡಿಸಲು ಹೊಸ ನಿಯಮಗಳು, ಸಮಯದ ಮಿತಿ! -
ದಕ್ಷಿಣ ಭಾರತದಲ್ಲಿ ಮಳೆ ಅಲರ್ಟ್: ಮನೆಯಲ್ಲೇ ಫಿಟ್ ಆಗಿರಲು ಈ 10 ನಿಮಿಷದ ವರ್ಕೌಟ್ ಟ್ರೈ ಮಾಡಿ! -
ದೀಪಾವಳಿ ಹಬ್ಬದ ಡ್ರಾಮಾ ತಪ್ಪಿಸಿ: ದಂಪತಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಪ್ಲಾನ್ ಮತ್ತು ಮೆಸೇಜ್ ಟಿಪ್ಸ್ -
ದೀಪಾವಳಿ ಪಾರ್ಟಿ ಜೋರಾಗಿದೆಯಾ? ₹30ರೊಳಗೆ ಸಿಗುವ 12 ಆರೋಗ್ಯಕರ ಹೈ-ಪ್ರೋಟೀನ್ ಸ್ನ್ಯಾಕ್ಸ್ ಇಲ್ಲಿದೆ!
ಅನ್ನ ಒಂದಕ್ಕೊಂದು ಅಂಟದೆ ಉದುರು-ಉದುರಾಗಿ ಬರಲು ಟಿಪ್ಸ್
ಅನ್ನ, ಚಿತ್ರಾನ್ನ, ಪುಳಿಯೊಗರೆ, ಫ್ರೈಡ್ ರೈಸ್, ಬಿರಿಯಾನಿ ಹೀಗೆ ಯಾವುದೇ ಅನ್ನದ ಆಹಾರವಾಗಿರಲಿ ಅದು ಮುದ್ದೆ-ಮುದ್ದೆಯಾಗಿದ್ದಾರೆ ನೋಡುವುದಕ್ಕೂ ಚೆನ್ನಾಗಿರಲ್ಲ ರುಚಿಯೂ ಇಷ್ಟವಾಗಲ್ಲ.
ಬಿರಿಯಾನಿ, ಚಿತ್ರಾನ್ನ , ಫ್ರೈಡ್ ರೈಸ್ ಈ ಬಗೆಯ ಆಹಾರಗಳಿಗೆ ಅನ್ನ ಉದುರು-ಉದುರಾಗಿರಬೇಕು, ಅಷ್ಟೇ ಏಕೆ ನಾವು ಅನ್ನ ಮಾಡುವಾಗಲೂ ಅಂಟು ಅಂಟಾಗಿ ಇದ್ದರೆ ಚೆನ್ನಾಗಿ, ಅನ್ನ ಬಿಡಿ ಬಿಡಿ ಮಾಡಲು ಇಲ್ಲಿದೆ ಟಿಪ್ಸ್:

ಟಿಪ್ಸ್ 1
ಅಕ್ಕಿಯನ್ನು ಚೆನ್ನಾಗಿ ತೊಳೆಯಿರಿ
ಅಕ್ಕಿಯನ್ನು ಒಂದು ನಿಮಿಷ ತೊಳೆಯಿರಿ, ಹೀಗೆ ತೊಳೆಯುವುದರಿಂದ ಅಕ್ಕಿ ಸಂಪೂರ್ಣ
ಒದ್ದೆಯಾಗುತ್ತದೆ.
ಅಕ್ಕಿಗೆ ನೀರು ಸರಿಯಾದ ಪ್ರಮಾಣದಲ್ಲಿ ಹಾಕಿ
ನೀವು 1 ಕಪ್ ಅಕ್ಕಿ ಹಾಕುವುದಾದರೆ 2 ಕಪ್ ನೀರು ಸೇರಿಸಿ. ನೀರು ಸ್ವಲ್ಪ
ಕಡಿಮೆಯಾದರೆ ಅನ್ನ ಅಂಟುತ್ತದೆ.
ನೀರು ಅತಿಯಾಗಿಯೂ ಇರಬಹುದು, ನೀರು ಅತಿಯಾದರೆ ಅನ್ನ ಅಂಟುವುದು.
ಅಲ್ಲದೆ ಅನ್ನ ಬೇಯಿಸುವಾಗ ಚಟಿಕೆಯಷ್ಟು ಉಪ್ಪು ಸೇರಿಸಿ, ಇದರಿಂದ ಅನ್ನ
ಅಂಟುವುದಿಲ್ಲ
ಕುಕ್ಕರ್ನ ಮುಚ್ಚಳ ಟೈಟ್ ಆಗಿರಬೇಕು
ಕುಕ್ಕರ್ನ ಮುಚ್ಚಳ ಟೈಟ್ ಆಗಿರಬೇಕು, ಅದರ ಗಾಳಿ ಹೊರಗಡೆ ಹೋಗುತ್ತಿದ್ದರೆ ಅನ್ನ ಅಂಟುವುದು. ಅಲ್ಲದೆ ಕುಕ್ಕರ್ನಲ್ಲಿ ಅನ್ನ ಮಾಡುವಾಗ ಕಡಿಮೆ ಉರಿಯಲ್ಲಿ ಬೇಯಿಸಿ.
ಮಡಿಕೆಯಲ್ಲಿ ಅನ್ನ ಮಾಡುವುದಾದರೆ
ಕೆಲವು ಕುಕ್ಕರ್ನಲ್ಲಿ ಅನ್ನ ಮಾಡುವುದಿಲ್ಲ, ಮಡಿಕೆಯಲ್ಲಿ ಮಾಡುತ್ತಾರೆ, ಹೀಗೆ
ಮಡಿಕೆ ಮಾಡುವಾಗ ರಂಧ್ರವಿರುವ ತಟ್ಟೆಯಿಂದ ಪಾತ್ರೆಯ ಮುಚ್ಚಿ ಬೇಯಿಸಬೇಕು. ನಂತರ
ನೀರನ್ನು ಬಸಿಯಬೇಕು, ಆವಾಗ ಅನ್ನ ಬಿಡಿ ಬಿಡಿಯಾಗಿರುತ್ತದೆ.
ಫ್ರೈಡ್ರೈಸ್, ಬಿರಿಯಾನಿಗೆ ಅನ್ನ ಮಾಡುವುದಾದರೆ ನೀವು ಅನ್ನ ಬೇಯಿಸುವಾಗ 2
ಹನಿ ಎಣ್ಣೆ ಹಾಕಿ ಬೇಯಿಸಿದರೆ ಅನ್ನ ಬಿಡಿ ಬಿಡಿಯಾಗಿರುತ್ತದೆ.
ಇನ್ನು ನೀವು ಕುಕ್ಕರ್ನಲ್ಲಿ ಅನ್ನ ಮಾಡುವಾಗ ಎಲ್ಲಾ ಅಕ್ಕಿಯನ್ನು ಒಂದೇ ರೀತಿ
ಬೇಯಿಸಲು ಸಾಧ್ಯವಿಲ್ಲ, ಕೆಲವೊಂದು ಅಕ್ಕಿಗೆ ಒಂದು ವಿಶಲ್ಗೆ ಅನ್ನ ರೆಡಿ, ಇನ್ನು
ಕೆಲವೊಂದು ಅಕ್ಕಿಗೆ 2 ವಿಶಲ್ ಬೇಕು, ಈ ಹದ ತಿಳಿದಿದ್ದರೆ ಅನ್ನ ಬಿಡಿ ಬಿಡಿಯಾಗಿ
ಬರುತ್ತದೆ.



Click it and Unblock the Notifications
