Latest Updates
-
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು!
ಟೊಮೆಟೊ ಕುರ್ಮಾ ರೆಸಿಪಿ: ಬ್ರೇಕ್ಫಾಸ್ಟ್ಗೂ ಸೈ, ಲಂಚ್ಗೂ ಸೈ
ಟೊಮೆಟೊ ಕುರ್ಮಾ ತುಂಬಾ ಸರಳವಾದ ರೆಸಿಪಿಯಾಗಿದ್ದು ರುಚಿ ಮಾತ್ರ ಸೂಪರ್ ಆಗಿರುತ್ತದೆ. ಬೆಳಗ್ಗೆ ಚಪಾತಿ, ರೊಟ್ಟಿ, ದೋಸೆ ಈ ಗಗೆಯ ತಿಂಡಿ ಮಾಡಿದಾಗ ಇದನ್ನು ನೆಚ್ಚಿಕೊಮಡು ತಿನ್ನಲು ರುಚಿಯಾಗಿರುತ್ತದೆ, ಅನ್ನಕ್ಕೂ ಸೈ.
ಆಫೀಸ್ಗೆ ಹೋಗುವವರು ಈ ಕುರ್ಮಾ ರೆಸಿಪಿ ಟ್ರೈ ಮಾಡಿದರೆ ನೀವು ಲಂಚ್ಗೂ ಇದನ್ನು ತಗೊಂಡು ಹೋಗಬಹುದು, ಬನ್ನಿ ಟೊಮೆಟೊ ಕುರ್ಮಾ ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಗ್ರಿ
1/4 ಕಪ್ ತೆಂಗಿನತುರಿ
1 ಚಮಚ ಹುರಿಗಡಲೆ (ರೋಸ್ಟ್ ಮಾಡಿದ್ದು)
5 ಗೋಡಂಬಿ (ಅರ್ಧ ಭಾಗದ ಗೋಡಂಬಿಯಾದರೆ 10 ಗೋಡಂಬಿ)
1/2 ಚಮಚ ಸೋಂಪು
1 ಚಮಚ ಕೊತ್ತಂಬರಿ ಬೀಜ
2 ಹಸಿ ಮೆಣಸು
1/2 ಕಪ್ ನೀರು
ಇತರ ಸಾಮಗ್ರಿ
2 ಚಮಚ ಎಣ್ಣೆ
1 ಚಮಚ ಸಾಸಿವೆ
1/2 ಚಮಚ ಉದ್ದಿನ ಬೇಳೆ
1/2 ಇಂಚಿನಷ್ಟು ಚಕ್ಕೆ
ಸ್ವಲ್ಪ ಕರಿಬೇವು
1 ಈರುಳ್ಳಿ
3 ಟೊಮೆಟೊ
1/2 ಚಮಚ ಅರಿಶಿಣ ಪುಡಿ
1/2 ಚಮಚ ಕಾಶ್ಮೀರಿ ಕೆಂಪು ಮೆಣಸಿನ ಪುಡಿ
ರುಚಿಗೆ ತಕ್ಕ ಉಪ್ಪು
1/2 ಚಮಚ ಸಕ್ಕರೆ
ಸ್ವಲ್ಪ ಕೊತ್ತಂಬರಿ ಸೊಪ್ಪು
ಮಾಡುವ ವಿಧಾನ:
* ಮೊದಲಿಗೆ ಮಸಾಲೆಯನ್ನು ರೆಡಿ ಮಾಡಿ.
* ನಂತರ ಪ್ಯಾನ್ ಬಿಸಿ ಮಾಡಿ ಒಂದು ಚಮಚ ಎಣ್ಣೆ ಹಾಕಿ ಎಣ್ಣೆ ಬಿಸಿಯಾದಾಗ ಸಾಸಿವೆ
ಹಾಕಿ, ನಂತರ 1/2 ಚಮಚ ಉದ್ದಿನ ಬೇಳೆ, 1/2 ಇಂಚು ಚಕ್ಕೆ, ಸ್ವಲ್ಪ ಕರಿಬೇವು
ಹಾಕಿ
* ನಂತರ ಚಿಕ್ಕದಾಗಿ ಕತ್ತರಿಸಿದ ಈರುಳ್ಳಿ ಹಾಕಿ
ನಂತರ ಟೊಮೆಟೊ ಹಾಕಿ ಮೆತ್ತಗಾಗುವವರೆಗೆ ಸೌಟ್ನಿಂದ ಆಡಿಸಿ
ನಂತರ 1/2 ಚಮಚ ಅರಿಶಿಣ ಪುಡಿ, 1/2 ಚಮಚ ಖಾರದ ಪುಡಿ, 1/2 ಚಮಚ ಸಕ್ಕರೆ ಮತ್ತು
ರುಚಿಗೆ ತಕ್ಕ ಉಪ್ಪು ಸೇರಿಸಿ.
ಆ ಮಸಾಲೆಯ ಮೇಲೆ ಎಣ್ಣೆ ತೇಲುವಂತಿರಬೇಕು
ನಂತರ ಪೇಸ್ಟ್ ಮಾಡಿದ ಮಸಾಲೆ ಹಾಕಿ 1 ಕಪ್ ನೀರು ಸೇರಿಸಿ.
ಸಾರು ಎಷ್ಟು ಮಂದ ಬೇಕೋ ಅಷ್ಟು ನೀರು ಸೇರಿಸಿ
ಈಗ ಕಡಿಮೆ ಉರಿಯಲ್ಲಿ 10-15 ನಿಮಿಷಿ ಕುದಿಸಿ
ನಂತರ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ



Click it and Unblock the Notifications
