Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಸಾಮಾನ್ಯ ಮೊಸರಲ್ಲ, ಗಟ್ಟಿ ಮೊಸರು ಮಾಡುವುದು ಹೇಗೆ? ಸಿಹಿ ಮೊಸರು ಕೂಡ ಮಾಡಬಹುದು
ಮೊದಲೆಲ್ಲಾ ಮೊಸರು ಯಾರೂ ದುಡ್ಡು ಕೊಟ್ಟು ಖರೀದಿ ಮಾಡುತ್ತಿರಲಿಲ್ಲ, ಮನೆ ಮನೆಗಳಲ್ಲಿ ತಯಾರಿಸುತ್ತಿದ್ದರು, ಈಗ ಮೊಸರು, ಮಜ್ಜಿಗೆ, ಮಸಾಲೆ ಮಜ್ಜಿಗೆ ಎಲ್ಲವನ್ನೂ ಅಂಗಡಿಯಿಂದ ಖರೀದಿಸುತ್ತೇವೆ. ಮೊಸರಿನಲ್ಲಿ ಗಟ್ಟಿ ಮೊಸರು ಸಿಗುತ್ತದೆ, ಇದನ್ನು ತಿನ್ನಲು ಮಕ್ಕಳಂತೂ ತುಂಬಾನೇ ಇಷ್ಟಪಡುತ್ತಾರೆ. ಅದಕ್ಕೆ ಸ್ವಲ್ಪ ಸಕ್ಕರೆ ಹಾಕಿ ತಿಂದರೆ ರುಚಿ ಸೂಪರ್ ಆಗಿರುತ್ತದೆ.
ಇನ್ನು ಹಾಲಿಗೆ ಸ್ವಲ್ಪ ಮೊಸರು ಹೆಪ್ಪು ಹಾಕಿದರೆ ಮೊಸರು ಆಗುತ್ತದೆ, ಅದರೆ ಗಟ್ಟಿ ಮೊಸರು ಮಾಡುವುದು ಹೇಗೆ ಎಂದು ಗೊತ್ತಿರುವುದಿಲ್ಲ. ಗಟಟ್ಟಿ ಮೊಸರು ಮಾಡುವುದು ಹೇಗೆ ಎಂದು ನೋಡೋಣ ಬನ್ನಿ:

- ಮಣ್ಣಿನ ಮಡಿಕೆ ಚೆನ್ನಾಗಿ ತೊಳೆದು ಒರೆಸಬೇಕು, ನಂತರ ಅದಕ್ಕೆ ಗಟ್ಟಿ ಹಾಲು ಹಾಕು ಕುದಿಸಸಬೇಕು.
- ಕಡಿಮೆ ಉರಿಯಲ್ಲಿ ಕುದಿಸಿದಾಗ ಅದರ ಮೇಲ್ಭಾಗ ಕೆನೆ ಉಂಟಾಗುವುದು, ಕೆನೆ ಬೇಡ ಎಂದಾದರೆ ಕುದಿಯುತ್ತಿರುವ ಹಾಲಿಗೆ ಸೌಟ್ ಹಾಕಿ ಅಗಾಗ ಆಡಿಸುತ್ತಾ ಇರಿ.
- ನೀವು ಕಡಿಮೆ ಉರಿಯಲ್ಲಿ 10-15 ಕುದಿಸಬೇಕು.
- ನಂತರ ಉರಿಯಿಂದ ಇಳಿಸಿ ಬಿಸಿ ಕಡಿಮೆಯಾಗಲು ಸ್ವಲ್ಪ ಹೊತ್ತು ಇಡಬೇಕು, ಬಿಸಿ ತುಂಬಾ ಕಡಿಮೆಯಾಗಬಾರದು, ಉಗುರು ಬೆಚ್ಚಗಿನ ಬಿಸಿ ಇರಲೇಬೇಕು.
- ನಂತರ ಒಂದು ಚಮಚ ಮೊಸರು ಹಾಕಿ ಹಾಲಿನಲ್ಲಿ ಚೆನ್ನಾಗಿ ಮಿಕ್ಸ್ ಮಾಡಬೇಕು.
- ನಂತರ ಅದನ್ನು ಮತ್ತೊಂದು ಮಣ್ಣಿನ ಮಡಿಕೆಗೆ ಹಾಕಿ.
- ಅದನ್ನು ಒಂದು ತಟ್ಟೆ ಅಥವಾ ಅಲ್ಯುಮಿನಿಯಂ ಫಾಯಿಲ್ ಇಟ್ಟು ಮುಚ್ಚಿ 6-10 ಗಂಟೆ ಹಾಗೇ ಬಿಡಿ. ಮೊಸರಿಕೆ ಇಟ್ಟ ಮೊಡಿಕೆಯನ್ನು ಅಲ್ಲಾಡಿಸಬೇಡಿ. ನಂತರ ರೆಡಿಯಾದ ಮೊಸರನ್ನು ಚಿಕ್ಕ ಚಿಕ್ಕ ಡಬ್ಬದಲ್ಲಿ ಹಾಕಿ ಫ್ರಿಡ್ಜ್ನಲ್ಲಿ ಇಟ್ಟುಬಿಡಿ.
ತುಂಬಾ ಹೊತ್ತು ಇಡಬೇಡಿ ಮೊಸರು ಹುಳಿಯಾಗುತ್ತದೆ. ಇಷ್ಟು ಮಾಡಿದರೆ ಗಟ್ಟಿ ಮೊಸರು ರೆಡಿಯಾಗುತ್ತದೆ.
ಗಟ್ಟಿ ಮೊಸರಿಗೆ ಸ್ವಲ್ಪ ಸಕ್ಕರೆ ಹಾಕಿ ತಿಂದರೆ ಜೀರ್ಣಕ್ರಿಯೆಗೂ ತುಂಬಾನೇ ಒಳ್ಳೆಯದು.
ಯಾವ ಬಗೆಯ ಹಾಲು ಬಳಸುವುದು ಒಳ್ಳೆಯದು?
ಮೊಸರು ಮಾಡುವಾಗ ನೀವು ಕೊಬ್ಬಿನಂಶವಿರುವ ಹಾಲು ಬಳಸಿ, ಹಸುವಿನ, ಎಮ್ಮೆಯ ಹಾಲು ಕೂಡ ಬಳಸಬಹುದು.
ಇನ್ನು ಸಿಹಿ ಮೊಸರು ಮಾಡುವುದು ಹೇಗೆ?
ಒಂದು ಲೀಟರ್ ಹಾಲು
1/2 ಕಪ ಸಕ್ಕರೆ
1/4 ಕಪ್ಗಿಂತಲೂ ಸ್ವಲ್ಪ ಅಧಿಕ ಮೊಸರು
ಸಿಹಿ ಮೊಸರು ಮಾಡುವುದು ಹೆಗೆ?
ಹಾಲನ್ನು ಕಡಿಮೆ ಉರಿಯಲ್ಲಿ ಕಾಯಿಸಿ, ಹಾಲು ಕಡಿಮೆ ಉರಿಯಲ್ಲಿ ಕಾಯಿಸಿದಾಗ
ಹಾಲು ಮತ್ತಷ್ಟು ಮಂದವಾಗುತ್ತದೆ.
ನಂತರ ಅಕ್ಕರೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ
ನಂತರ ಉರಿಯಿಂದ ಇಳಿಸಿ ಇಡಿ
ಬಳಿಕ ಹಾಲಿನ ಉಷ್ಣಾಂಶ ಕಡಿಮೆಯಾದಾಗ ಅದಕ್ಕೆ ಮೊಸರು ಹಾಕಿ ಚೆನ್ನಾಗಿ ಮಿಕ್ಸ್
ಮಾಡಿ
ಒಂದು ಮಣ್ಣಿನ ಮಡಿಕೆಯಲ್ಲಿ ಹಾಕಿಡಿ
5-6 ಗಂಟೆ ಇಟ್ಟರೆ ಸಿಹಿ ಮೊಸರು ರೆಡಿ, ಇದನ್ನು ಕೂಡ ಫ್ರಿಡ್ಜ್ನಲ್ಲಿಟ್ಟು
ವಾರದವರೆಗೆ ಬಳಸಬಹುದು.



Click it and Unblock the Notifications
