Latest Updates
-
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ!
ಥಟ್ ಅಂತ ಮಾಡಬಹುದು ಸೋರೆಕಾಯಿ ಇಡ್ಲಿ..! ಹೇಗೆ ಗೊತ್ತಾ?
ಬೆಳಗ್ಗೆ ತಿಂಡಿ ಮಾಡುವುದು ದೊಡ್ಡ ಪ್ರಶ್ನೆಯಾಗಿರಬಹುದು. ಏನು ಮಾಡಬೇಕು? ಹೊಸ ತಿಂಡಿ ಯಾವುದನ್ನ ಪ್ರಯೋಗ ಮಾಡಬೇಕು? ಗಡಿಬಿಡಿಯಲ್ಲಿ ಇದ್ದಾಗ ಏನು ಮಾಡಬೇಕು ಎಂಬುದೇ ದೊಡ್ಡ ಪ್ರಶ್ನೆ. ಹೀಗಾಗಿ ಗೃಹಿಣಿಯರಿಗೆ ಒತ್ತಡದಲ್ಲಿದ್ದಾಗಲು ಏನಾದರು ಒಂದು ತಿಂಡಿ ಮಾಡುವುದು ಅನಿವಾರ್ಯ. ಅವರು ರುಚಿಯ ಬಗ್ಗೆ ಆಗ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ, ಒಟ್ಟಿನಲ್ಲಿ ಏನಾದರು ತಿಂಡಿ ರೆಡಿಯಾದರೆ ಸಾಕಾಗುತ್ತದೆ.
ಇನ್ನು ಹೊಸ ತಿಂಡಿ ಯಾವುದಾದರು ಮಾಡಬೇಕು ಅಂದ್ರೆ ಈ ಸೋರೆಕಾಯಿ ಇಡ್ಲಿ ಮಾಡಿ ನೋಡಿ. ಇದೇನು ಸೋರೆಕಾಯಿ ಇಡ್ಲಿ? ಕೇವಲ 5 ನಿಮಿಷದಲ್ಲಿಯೇ ಈ ಸೋರೆಕಾಯಿ ಇಡ್ಲಿ ಮಾಡಬಹುದು. ಇದರ ರುಚಿ ನೋಡಿದರೆ ನೀವು ಮತ್ತೆಂದು ಗಡಿಬಿಡಿಯಲ್ಲಿ ಬೇರೆ ತಿಂಡಿ ಮಾಡುವುದಿಲ್ಲ. ಸೋರೆಕಾಯಿ ಇಡ್ಲಿ ಎಂದ ಮಾತ್ರಕ್ಕೆ ಇದನ್ನು ಸ್ಟೀಮ್‌ನಲ್ಲಿ ಬೇಯಿಸುವ ಅಗತ್ಯವಿಲ್ಲ. ಹಾಗಾದ್ರೆ ಇಡ್ಲಿ ಮಾಡೋದು ಹೇಗೆ?

ಹಾಗಾದ್ರೆ ಈ ಸೋರೆಕಾಯಿ ಇಡ್ಲಿ ಮಾಡುವುದು ಹೇಗೆ? ಸೋರೆಕಾಯಿ ಇಡ್ಲಿ ಮಾಡಲು ಬೇಕಾಗುವ ಪದಾರ್ಥಗಳೇನು? ಸೋರೆಕಾಯಿ ಇಡ್ಲಿ ಮಾಡಲು ಹಿಟ್ಟು ಹೇಗೆ ರೆಡಿ ಮಾಡಿಕೊಳ್ಳಬೇಕು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಸೋರೆಕಾಯಿ ಇಡ್ಲಿಗೆ ಬೇಕಾಗುವ ಪದಾರ್ಥಗಳು
- ರವೆ- 1 ಗ್ಲಾಸ್
- ಕಡ್ಲೆ ಹಿಟ್ಟು
- ಮೊಸರು ಅರ್ಧ ಗ್ಲಾಸ್
- ಉಪ್ಪು
- ತುರಿದ ಸೋರೆಕಾಯಿ
- ತುರಿದ ಕ್ಯಾರೆಟ್
- ಈರುಳ್ಳಿ
- ಪಾಲಕ್ ಸೊಪ್ಪು
- ಹಸಿ ಮೆಣಸು -2
ಸೋರೆಕಾಯಿ ಇಡ್ಲಿ ಮಾಡುವ ವಿಧಾನ
ಸೋರೆಕಾಯಿ ಇಡ್ಲಿ ಮಾಡಲು ಮೊದಲಿಗೆ ಒಂದು ಬೌಲ್ ತೆಗೆದುಕೊಂಡು ರವೆ, ಅರ್ಧ ಗ್ಲಾಸ್ ಕಡ್ಲೆ ಹಿಟ್ಟು, ಮೊಸರು, ಉಪ್ಪು ಹಾಕಿ ಮಿಕ್ಸ್ ಮಾಡಿ. ಈಗ ಸ್ವಲ್ಪ ಸ್ವಲ್ಪವೇ ನೀರು ಹಾಕಿಕೊಳ್ಳತ್ತಾ ಮಿಕ್ಸ್ ಮಾಡಿ. ಹಿಟ್ಟು ಸ್ವಲ್ಪ ದಪ್ಪವಾಗಿರಬೇಕು. ನಂತರ ಇದಕ್ಕೆ ತುರಿದುಕೊಂಡಿರುವ ಸೋರೆಕಾಯಿ, ಹಸಿ ಮೆಣಸು, ಈರುಳ್ಳಿ, ಕ್ಯಾರೆಟ್, ಪಾಲಕ್ ಸೊಪ್ಪು, ಅರಶಿನ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
ಈ ಹಿಟ್ಟು ಗಟ್ಟಿಯಾಗಿರಬೇಕು. ವಡ ಮಾಡಲು ಇಡುವ ಹಿಟ್ಟಿನಂತೆಯೇ ಈ ಹಿಟ್ಟನ್ನು ಸಹ ರೆಡಿ ಮಾಡಿಕೊಳ್ಳಿ. ನಂತರ ಈ ಹಿಟ್ಟನ್ನು ಮುಚ್ಚಿ 10 ನಿಮಿಷ ಹಾಗೆಯೇ ಇಡಿ. ಬಳಿಕ ಒಲೆ ಮೇಲೆ ಚಿಕ್ಕ ಬಾಣಲೆ ಪಾತ್ರೆ ಇಟ್ಟು ನೀರು ಹಾಕಿಕೊಳ್ಳಿ. ಬಳಿಕ ಇದಕ್ಕೆ ಹಿಟ್ಟನ್ನು ಹಾಕಿಕೊಳ್ಳಿ. ತಟ್ಟೆ ಇಡ್ಲಿಯಂತೆ ಹೆಚ್ಚು ಪ್ರಮಾಣದ ಹಿಟ್ಟನ್ನು ಹಾಕಿ. ಒಂದು ಇಡ್ಲಿ ಒಬ್ಬರು ತಿನ್ನಲು ಬರುವಂತೆ ಗಾತ್ರ ಮಾಡಿಕೊಳ್ಳಿ. ಇಲ್ಲವೆ ಒಬ್ಬರು ಎರಡು ಇಡ್ಲಿ ಸವಿಯುವಷ್ಟು ದೊಡ್ಡದಾಗಿರಲಿ.
ಇದನ್ನು ಎರಡೂ ಕಡೆಗಳಲ್ಲಿ ತಲಾ 5ರಿಂದ 6 ನಿಮಿಷ ಬೇಯಿಸಿ. ಅದು ಕರಿದ ಬಳಿಕ ಬಣ್ಣ ಸ್ವಲ್ಪ ಕಂದು ಬಣ್ಣಕ್ಕೆ ತಿರುಗಿದಾಗ ಗರಿ ಗರಿಯ ಶಬ್ದ ಬಂದರೆ ಬೆಂದಿದೆ ಎಂದರ್ಥ. ಇದನ್ನು ಚಟ್ನಿ, ಸಾಂಬಾರ್ ಜೊತೆ ಸವಿಯಲು ಬಹಳ ರುಚಿಯಾಗಿರುತ್ತದೆ. ನೀವು ಸಹ ಒಮ್ಮೆ ಮನೆಯಲ್ಲಿ ಈ ತಿಂಡಿಯನ್ನು ಟ್ರೈ ಮಾಡಿ ನೋಡಿ.



Click it and Unblock the Notifications