Latest Updates
-
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ?
ಅಕ್ಕಿ ಹಿಟ್ಟಿನ ಹಪ್ಪಳ, ಅವಲಕ್ಕಿ ಸಂಡಿಗೆ ಮಾಡುವುದು ಹೇಗೆ?
Recipes
oi-Reena TK
Posted By: Reena TK
ಉರಿಬಿಸಿಲಿನ ಈ ಸಮಯ ಹಪ್ಪಳ-ಸಂಡಿಗೆ ಮಾಡಿಡಲು ಸೂಪರ್, ಈಗ ಮಾಡಿಟ್ಟರೆ ನೀವು ವರ್ಷದವರೆಗೆ ಇಟ್ಟು ಬಳಸಬಹುದು, ಅಲ್ಲದೆ ನೀವು ಬಗೆಬಗೆಯ ಹಪ್ಪಳ-ಸಂಡಿಗೆ ಮಾಡಿಡಬಹುದು, ಇಲ್ಲಿ ಅಕ್ಕಿಯ ಹಪ್ಪಳ, ಅವಲಕ್ಕಿ ಸಂಡಿಗೆ ರೆಸಿಪಿ ನೀಡಿದ್ದೇವೆ ನೋಡಿ:

ಬೇಕಾಗುವ ಸಾಮಗ್ರಿ
1 ಕಪ್ ಅಕ್ಕಿ ಹಿಟ್ಟು
1/2 ಚಮಚ ಜೀರಿಗೆ
1/2 ಚಮಚ ಎಳ್ಳು
ಚಿಟಿಕೆಯಷ್ಟು ಇಂಗು
1/2 ಚಮಚ ಉಪ್ಪು
2 ಕಪ್ ನೀರು
ಮಾಡುವ ವಿಧಾನ
- ಮೊದಲಿಗೆ ನೀವು ಸ್ವಲ್ಪ ದೊಡ್ಡ ಬೌಲ್ ತೆಗೆದುಕೊಳ್ಳಿ
- ಅದರಲ್ಲಿ 1/2 ಚಮಚ ಜೀರಿಗೆ, 1/2 ಚಮಚ ಎಳ್ಳು, ಚಿಟಿಕೆಯಷ್ಟು ಇಂಗು, 1/2 ಚಮಚ ಉಪ್ಪು ಸೇರಿಸಿ
- ನಂತರ 2 ಕಪ್ ನೀರು ಸೇರಿಸಿ ಚೆನ್ನಾಗಿ ಕಲೆಸಿ, ಗಂಟು ಕಟ್ಟಬಾರದು.
- ನಂತರ 15 ನಿಮಿಷ ಬಿಡಿ, ಅಕ್ಕಿ ಹಿಟ್ಟು ನೀರನ್ನು ಚೆನ್ನಾಗಿ ಹೀರಿಕೊಳ್ಳುತ್ತದೆ.
- ನಂತರ ಪುನಃ ಚೆನ್ನಾಗಿ ಮಿಕ್ಸ್ ಮಾಡಿ, ಯಾವುದೇ ಗಂಟುಗಳಿರಬರದು
- ಈಗ ನೀವು ಚಿಕ್ಕ ಚಿಕ್ಕ ತಟ್ಟೆ ಅಥವಾ ಪ್ಲೇಟ್ ತೆಗೆದುಕೊಳ್ಳಿ
- ಅದರ ಹೊರಬದಿಗೆ ಎಣ್ಣೆ ಸವರಿ ಅದರಲ್ಲಿ ಸ್ವಲ್ಪ ಹಿಟ್ಟು ಹಾಕಿ ಹರಡಿ, ತುಂಬಾ ತೆಳ್ಳನೆ ಹರಡಬೇಕು.
- ಈಗ ಈ ತಟ್ಟೆಗಳನ್ನು ಬಿಸಿಲಿನಲ್ಲಿಡಿ
- ಈ ತಟ್ಟೆಗಳನ್ನು 3-4 ದಿನ ಬಿಸಿಲಿನಲ್ಲಿಟ್ಟರೆ ಹಪ್ಪಳ ಚೆನ್ನಾಗಿ ಒಣಗಿ ಪ್ಲೇಟ್ನಿಂದ ಬೇರ್ಪಡುತ್ತದೆ.
- ನಂತರ ಬಟ್ಟೆ ಹರಡಿ ಮತ್ತೂ ಒಂದು ದಿನ ಹಪ್ಪಳವನ್ನು ಬಿಸಿಲಿನಲ್ಲಿ ಹರಡಿ ಒಣಗಿಸಿ
- ಈಗ ಈ ಹಪ್ಪಳವನ್ನು ಡಬ್ಬದಲ್ಲಿ ಹಾಕಿಟ್ಟರೆ ಮುಂದಿನ ವರ್ಷದ ಬೇಸಿಗೆಯವರೆಗೆ ಬಳಸಬಹುದು.
- ನಿಮಗೆ ಬೇಕಾದಾಗ ಎಣ್ಣೆಯಲ್ಲಿ ಕರಿದು ಸವಿಯಿರಿ.
ಈಗ ಅವಲಕ್ಕಿ ಸಂಡಿಗೆ ಮಾಡುವುದು ಹೇಗೆ ಎಂದು ನೋಡೋಣ:
ಬೇಕಾಗುವ ಸಾಮಗ್ರಿಗಳು
3 ಕಪ್ ಅವಲಕ್ಕಿ
ಖಾರದ ಪುಡಿ 1/2 ಚಮಚ
1/2 ಚಮಚ ಓಂ ಕಾಳು
1/4 ಚಮಚ ಬೇಕಿಂಗ್ ಸೋಡಾ
ರುಚಿಗೆ ತಕ್ಕ ಉಪ್ಪು
ಮಾಡುವ ವಿಧಾನ:
- ಸ್ವಲ್ಪ ದೊಡ್ಡ ಪಾತ್ರೆಗೆ 3 ಕಪ್ ಅವಲಕ್ಕಿ ಸೇರಿಸಿ
- ಅದು ನೆನೆಯುವಷ್ಟು ನೀರು ಹಾಕಿ 10 ನಿಮಿಷ ಬಿಸಿ
- ಈಗ ನೀರು ಸೋಸಿ
- ಈಗ ನೆನೆಸಿರುವ ಅವಲಕ್ಕಿಗೆ ಮೆಣಸಿನ ಪುಡಿ, ಅಜ್ವೈನ್, ಅಡುಗೆ ಸೋಡಾ, ರುಚಿಗೆ ತಕ್ಕ ಉಪ್ಪು ಸೇರಿಸಿ ಮಿಕ್ಸ್ ಮಾಡಿ
- ನಂತರ ಚಿಕ್ಕ-ಚಿಕ್ಕ ಉಂಡೆ ಕಟ್ಟಿ ತೆಳುವಾಗಿ ತಟ್ಟಿ ಪ್ಲೇಟ್ನಲ್ಲಿ ಹಾಕಿ 4-5 ದಿನ ಬಿಸಿಲಿನಲ್ಲಿ ಒಣಗಿಸಿ, ಇಷ್ಟು ಮಾಡಿದರೆ ಅವಲಕ್ಕಿ ಸಂಡಿಗೆ ರೆಡಿ.
Comments
[ of 5 - Users]
Story first published: Sunday, March 23, 2025, 23:04 [IST]
Other articles published on Mar 23, 2025



Click it and Unblock the Notifications
